ಸ್ಟಾರ್‌ ಸುವರ್ಣದಲ್ಲಿ ಹೊಸ ಶೋ ಅರ್ಧಾಂಗಿ!

  • ಸ್ಟಾರ್‌ ಸುವರ್ಣದಲ್ಲಿ ಹೊಸ ಷೋ ಅರ್ಧಾಂಗಿ
  • ಮೇ 23 ರಿಂದ ಸಂಜೆ 7ಕ್ಕೆ ಪ್ರಸಾರ
Star Suvarna channel begins telecast of new daily soap ardhangini vcs

ಪತ್ನಿಯೇ ಗಂಡನನ್ನು ತಾಯಿಯಂತೆ ಕಾಯುವ ಕಥೆಯುಳ್ಳ ಹೊಸ ಧಾರಾವಾಹಿ ‘ಅರ್ಧಾಂಗಿ’. ಮೇ 23 ರಿಂದ ಸೋಮವಾರದಿಂದ ಶನಿವಾರ ರಾತ್ರಿ 7ಕ್ಕೆ ಪ್ರಸಾರವಾಗಲಿದೆ. ನಟಿ ಪ್ರಿಯಾಂಕಾ ಉಪೇಂದ್ರ ಇದಕ್ಕೆ ರಾಯಭಾರಿಯಾಗಿದ್ದಾರೆ. ನಾಯಕ ದಿಗಂತ್‌ ಆಕ್ಸಿಡೆಂಟ್‌ನಲ್ಲಿ ತಲೆಗೆ ಪೆಟ್ಟು ಬಿದ್ದು 8 ವರ್ಷದ ಮಗುವಿನಂತಾಗಿರುತ್ತಾನೆ. ಆತನನ್ನು ಮದುವೆಯಾಗುವ ಅದಿತಿ ಆತನಿಗೆ ಆಸರೆಯಾಗಿ ಧೈರ್ಯತುಂಬುವ ಹಿನ್ನೆಲೆ ಧಾರಾವಾಹಿಗಿದೆ. ಬೆಂಗಳೂರಿನ ಮಲ್ಲೇಶ್ವರದ ‘ಅರುಣ ಚೇತನ’ ವಿಶೇಷ ಮಕ್ಕಳ ಶಾಲೆಯಲ್ಲಿ ಸುದ್ದಿಗೋಷ್ಠಿ ನಡೆಸಲಾಗಿತ್ತು. ಈ ವೇಳೆ ಮಾತನಾಡಿದ ಪ್ರಿಯಾಂಕಾ ಉಪೇಂದ್ರ, ‘ನಾನು ಬೆಂಗಾಲಿಯಲ್ಲಿ ಅಗ್ನಿಪರೀಕ್ಷಾ ಎಂಬ ಸಿನಿಮಾದಲ್ಲಿ ನಟಿಸಿದ್ದೆ. ಅದರ ಕತೆಗೂ ಈ ಸೀರಿಯಲ್‌ ಕತೆಗೂ ಸಾಮ್ಯವಿದೆ. ಇಂಥಾ ಪಾತ್ರ ಮಾಡೋದು ಚಾಲೆಂಜಿಂಗ್‌. ಅರುಣ ಚೇತನ ಸಂಸ್ಥೆಗೆ ನಮ್ಮ ¶ೌಂಡೇಶನ್‌ನಿಂದ ನೆರವಾಗುತ್ತೇವೆ’ ಎಂದರು.

ಧಾರಾವಾಹಿ ನಿರ್ದೇಶಕ ಎಮ್‌ ಕುಮಾರ್‌, ‘ಹೆಣ್ಣುಮಕ್ಕಳಿಗೆ ಇಷ್ಟವಾಗೋ ಸೀರಿಯಲ್‌, ಗ್ಲಿಸರಿನ್‌ ಸೀನ್‌ಗಳು ಹೆಚ್ಚಿವೆ’ ಎಂದರು. ನಿರ್ಮಾಪಕ ಶ್ರೀನಾಥ್‌ ರಘರಾಮ್‌ ಈ ಸೀರಿಯಲ್‌ ಹುಟ್ಟಿಕೊಂಡ ಕತೆ ಹೇಳಿದರು. ನಟ ಪೃಥ್ವಿ ಶೆಟ್ಟಿ, ‘ನನ್ನ ಸ್ವಭಾವಕ್ಕೆ ವಿರುದ್ಧವಾಗಿರುವ ಪಾತ್ರ ಮಾಡೋದು ಸಖತ್‌ ಚಾಲೆಂಜಿಂಗ್‌’ ಎಂದರು.

ಬೆಟ್ಟದ ಹೂ ಸೀರಿಯಲ್‌: ಮತ್ತೆ ರಾಹುಲ್ ಕೈಲಿ ತಾಳಿ ಕಟ್ಟಿಸ್ಕೊಳ್ಳೋ ಹೂವಿ, ಯಾಕ್ಹೀಗೆ?

ನಾಯಕಿ ಅಂಜನಾ ದೇಶಪಾಂಡೆ, ‘ಪ್ರೌಢವಾಗಿರುವ ಈ ಪಾತ್ರಕ್ಕೆ ನ್ಯಾಯ ಒದಗಿಸಿದ್ದೇನೆ’ ಎಂದು ಅನುಭವ ಹಂಚಿಕೊಂಡರು.

ಪ್ರಸಾರ ನಿಲ್ಲಿಸುತ್ತಿದೆ ಸ್ಟಾರ್ ಸುವರ್ಣ ವಾಹಿನಿಯ ಮತ್ತೊಂದು ಧಾರಾವಾಹಿ

ಇತ್ತೀಚಿನ ದಿನಗಳಲ್ಲಿ ಅದರಲ್ಲೂ ಸ್ಟಾರ್ ಸುವರ್ಣ(Star Suvarna) ವಾಹಿನಿಯಲ್ಲಿ ಪಯಣ ಮುಗಿಸಿದ ಧಾರಾವಾಹಿಗಳ ಸಂಖ್ಯೆ ಹೆಚ್ಚಿಸಿದೆ. ಅದರಲ್ಲಿ ಇಂತಿ ನಿಮ್ಮ ಆಶಾ, ಮತ್ತೆ ವಸಂತ, ಜೀವ ಹೂವಾಗಿದೆ ಮತ್ತು ರಾಧೆ ಶ್ಯಾಮ ಹೀಗೆ ಮುಂತಾದ ಧಾರಾವಾಹಿಗಳು ತನ್ನ ಪ್ರಸಾರ ನಿಲ್ಲಿಸುವ ಮೂಲಕ ಪ್ರೇಕ್ಷಕರಿಗೆ ಶಾಕ್ ನೀಡಿವೆ. ಇದೀಗ ಮತ್ತೊಂದು ಧಾರಾವಾಹಿ ಪ್ರಸಾರ ನಿಲ್ಲಿಸುತ್ತಿದೆ. ಸಂಘರ್ಷ ಧಾರಾವಾಹಿ. ಸಧ್ಯದಲ್ಲೇ ಸಂಘರ್ಷ ಧಾರಾವಾಹಿ ತನ್ನ ಪಯಣ ಮುಗಿಸುತ್ತಿದೆ ಎನ್ನುವ ಮಾಹಿತಿ ತಿಳಿದುಬಂದಿದೆ.

ಸ್ಟಾರ್‌ ಸುವರ್ಣದಲ್ಲಿ ರಾಜಿ...ಪ್ರೀತಿಗೆ ಇವಳೇ ಆಸ್ತಿ

ಆದರೆ ಈ ಬಗ್ಗೆ ಧಾರಾವಾಹಿ ತಂಡದಿಂದ ಯಾವುದೇ ಮಾಹಿತಿ ಬಹಿರಂಗವಾಗಿಲ್ಲ. ಸದ್ಯ ಸಂಘರ್ಷ ಧಾರಾವಾಹಿ ಇನ್ನು ಪ್ರಸಾರವಾಗುತ್ತಿದೆ. ಅಲ್ಲದೇ ಚಿತ್ರೀಕರಣ ಸಹ ನಡೆಯುತ್ತಿದೆ. ಪ್ರಸಾರ ನಿಲ್ಲಿಸುವ ಬಗ್ಗೆ ಯಾವುದೇ ಮಾಹಿತಿ ತಿಳಿಸಿಲ್ಲ. ಇತ್ತೀಚಿಗಷ್ಟೆ ಸಂಘರ್ಷ ಧಾರಾವಾಹಿ 500 ಸಂಚಿಕೆಗಳನ್ನು ಪೂರೈಸಿದೆ. ಇದರ ಯಶಸ್ಸನ್ನು ಇತ್ತೀಚಿಗಷ್ಟೆ ಧಾರಾವಾಹಿ ತಂಡ ಆಚರಣೆ ಮಾಡಿತ್ತು. ನಿರ್ಮಾಪಕಿ ಶ್ರುತಿ ನಾಯ್ಡು ಅವರು ಗ್ರ್ಯಾಂಡ್ ಪಾರ್ಟಿಯನ್ನು ಆಯೋಜಿಸಿದ್ದು ಇಡೀ ಸಂಘರ್ಷ ತಂಡ ಭಾಗಿಯಾಗಿತ್ತು. ದೊಡ್ಡ ಕೇಕ್ ಕತ್ತರಿಸಿ ಸಂಭ್ರಮ ಆಚರಣೆ ಮಾಡಿದ್ದರು. ಅದ್ದೂರಿಯಾಗಿ ಆಚರಣೆ ಮಾಡಿದ್ದು ಡಾನ್ಸ್ ಮಾಡಿ ಕುಣಿದು ಕುಪ್ಪಳಿಸಿದ್ದರು.

 

 
 
 
 
 
 
 
 
 
 
 
 
 
 
 

A post shared by Star Suvarna (@starsuvarna)

Latest Videos
Follow Us:
Download App:
  • android
  • ios