ಅಮ್ಮ-ಮಗಳ ವಿಡಿಯೋ ವೈರಲ್, ಸುಧಾರಾಣಿ 'ಜಿಂಗಿ ಚಕ್ಕ' ಕಂಡು ಕರ್ನಾಟಕವೇ ಶಾಕ್!

ಸುಧಾರಾಣಿಯವರ ಡಾನ್ಸ್ ವಿಡಿಯೋ ಇದೀಗ ವೈರಲ್ ಅಗ್ತಿದೆ. ಅದೂ ಕೂಡ ಅವರೊಬ್ಬರದೇ ಅಲ್ಲ, ಜೊತೆಯಲ್ಲಿ ಅವರ ಮಗಳು ನಿಧಿ ಸಹ ಇದ್ದಾರೆ. ಹಾಗಿದ್ದರೆ ಏನಿದು ವಿಡಿಯೋ ರಹಸ್ಯ? ಇಲ್ಲಿದೆ ನೋಡಿ ಕಂಪ್ಲೀಟ್ ಸ್ಟೋರಿ. ಹೌದು, ನಟಿ ಸುಧಾರಾಣಿ ಹಾಗೂ ಮಗಳು ನಿಧಿ..

Actress Sudharani and daughter nidhi video virlas in Social Media


'ಮನೆ ಮಗಳು' ಕನ್ನಡದ ನಟಿ ಸುಧಾರಾಣಿ (Sudha Rani) ಇಡೀ ಕರುನಾಡಿಗೇ ಅಚ್ಚುಮೆಚ್ಚು. ಆನಂದ್ ಚಿತ್ರದ ಮೂಲಕ ನಟ ಶಿವರಾಜ್‌ಕುಮಾರ್ ಜೋಡಿಯಾಗಿ ಕನ್ನಡ ಚಿತ್ರರಂಗಕ್ಕೆ ನಾಯಕಿಯಾಗಿ ಕಾಲಿಟ್ಟು ಸ್ಟಾರ್ ನಟಿಯಾಗಿ ಮೆರೆದವರು ಸುಧಾರಾಣಿ. ನಾಯಕಿಯಾಗುವ ಮೊದಲು ಬಾಲನಟಿಯಾಗಿ ಸಹ ನಟಿಸಿ ನಟನೆಯೇ ನನ್ನ ಜೀವನ, ಜೀವಾಳ ಎಂದು ಸಾರಿದ್ದವರು ನಟಿ ಸುಧಾರಾಣಿ. ಇಂಥ ಸುಧಾರಾಣಿಯವರತ ವಿಡಿಯೋವೊಂದು ಇದೀಗ ಸೋಷಿಯಲ್ ಮೀಡಿಯಾದಲ್ಲಿ ಸಕತ್ ವೈರಲ್ ಆಗ್ತಿದೆ. ಅಮ್ಮ-ಮಗಳ 'ಜಿಂಗಿ ಚಕ್ಕ' ಕಂಡು ಇಡೀ ಕರ್ನಾಟಕ ಶಾಕ್ ಆಗಿದೆ. 

ನಟಿ ಸುಧಾರಾಣಿ ಒಳ್ಳೆಯ ಡಾನ್ಸರ್ ಕೂಡ ಹೌದು. ಹೀರೋ ಯಾರೇ ಆಗಿರಲಿ, ಅದರಲ್ಲಿ ನಟಿ ಸುಧಾರಾಣಿ ಅವರು ನಾಯಕನಟರಿಗೆ ಸರಿಸಮನಾಗಿಯೇ ಡಾನ್ಸ್ ಮಾಡುತ್ತಾರೆ. ಆನಂದ್, ಮನಮೆಚ್ಚಿದ ಹುಡುಗಿ ಚಿತ್ರಗಳಲ್ಲಿ 16-18 ವಯಸ್ಸಿನಲ್ಲಿದ್ದ ನಟಿ ಸುಧಾರಾಣಿ ತುಂಬಾ ಚೆನ್ನಾಗಿಯೇ ಡಾನ್ಸ್ ಮಾಡುತ್ತಿದ್ದರು. ಈಗಲೂ ಕೂಡ ಅವರ ಡಾನ್ಸ್ ಕ್ರೇಜ್ ಹಾಗೆಯೇ ಇದೆ. ಅಂಥ ಸುಧಾರಾಣಿಯವರ ಡಾನ್ಸ್ ವಿಡಿಯೋ ಇದೀಗ ವೈರಲ್ ಅಗ್ತಿದೆ. ಅದೂ ಕೂಡ ಅವರೊಬ್ಬರದೇ ಅಲ್ಲ, ಜೊತೆಯಲ್ಲಿ ಅವರ ಮಗಳು ನಿಧಿ (Nidhi) ಸಹ ಇದ್ದಾರೆ. 

ರಶ್ಮಿಕಾ ಮಂದಣ್ಣ ಈಗ 'ಮಹಾರಾಣಿ', ಮಲೆಯಾಳಂ ಮಾರ್ಕೋ, ಕನ್ನಡದ ಕಾಡುಮಳೆ ಸೌಂಡ್!

ಹಾಗಿದ್ದರೆ ಏನಿದು ವಿಡಿಯೋ ರಹಸ್ಯ? ಇಲ್ಲಿದೆ ನೋಡಿ ಕಂಪ್ಲೀಟ್ ಸ್ಟೋರಿ. ಹೌದು, ನಟಿ ಸುಧಾರಾಣಿ ಹಾಗೂ ಮಗಳು ನಿಧಿ ಇಬ್ಬರೂ ಕ್ಯಾಮೆರಾ ಮುಂದೆ 'ಜಿಂಗಿ ಚಕ್ಕ ಜಿಂಗಿ ಚಕ್ಕ...' ಎಂದು ಕುಣಿದಿದ್ದಾರೆ. ಅವರಿಬ್ಬರೂ ಎಷ್ಟು ಚೆನ್ನಾಗಿ ಕುಣಿದಿದ್ದಾರೆ ಎಂದರೆ ಈ ಇಬ್ಬರಲ್ಲಿ ಯಾರು ಚೆನ್ನಾಗಿ ಡಾನ್ಸ್ ಮಾಡಿದ್ದಾರೆ ಎಂದು ಹೇಳುವುದೇ ಕಷ್ಟ ಎಂಬಂತಾಗಿದೆ. ಆದರೂ ಕೂಡ ಕಾಮೆಂಟ್‌ ಸೆಕ್ಷನ್‌ನಲ್ಲಿ ನೋಡಿದರೆ ಯಂಗ್ ಆಗಿರೋ ಮಗಳಿಗಿಂತ ಮಧ್ಯವಯಸ್ಸು ದಾಟಿದ್ದರೂ ನಟಿ ಸುಧಾರಾಣಿಯೇ ಮಗಳಿಗಿಂತಲೂ ಚೆನ್ನಾಗಿ ಡಾನ್ಸ್ ಮಾಡುತ್ತಾರೆ ಎಂಬ ಅಭಿಪ್ರಾಯ ವ್ಯಕ್ತವಾಗಿದೆ. 

ಅದೇನ ಇರಲಿ, ನಟಿ ಸುಧಾರಾಣಿ ಹಾಗು ಮಗಳು ಹೀಗೇ ಆಗಾಗ ಯಾವುದಾದರೂ ಹಾಡಿಗೆ ಡಾನ್ಸ್ ಮಾಡಿ ಸೋಷಿಯಲ್ ಮೀಡಯಾ ತಮ್ಮ ಅಕೌಂಟ್‌ನಲ್ಲಿ ರೀಲ್ಸ್‌ ಪೋಸ್ಟ್ ಮಾಡುತ್ತಲೇ ಇರುತ್ತಾರೆ. ಈ ಪೋಸ್ಟ್ ವೈರಲ್ ಆಗುತ್ತಲೇ ಇರುತ್ತದೆ. ಆದರೆ, ಈ 'ಜಿಂಗಿ ಚಕ್ಕ' ಹಾಡು ಇನ್ನು ಸ್ವಲ್ಪ ಹೆಚ್ಚಾಗಿಯೆ ವೈರಲ್ ಆಗುತ್ತಿದೆ. ಅದಕ್ಕೆ ಕಾರಣ, ಅಂದು ಮನಮೆಚ್ಚಿದ ಹುಡುಗಿ ಚಿತ್ರ ಬಿಡುಗಡೆ ಆದಾಗ ಆ ಹಾಡು ಟ್ರೆಂಡ್ ಕ್ರಿಯೇಟ್ ಮಾಡಿತ್ತು. ಈಗಲೂ ಕೂಡ ಆ ಹಾಡನ್ನು ಕೇಳಿದರೆ ಇಷ್ಟವಾಗಲ್ಲ ಎನ್ನವವರು ಯಾರೂ ಇಲ್ಲ. ಹಾಗಿದೆ ಆ ಹಾಡು!

ಪ್ಲೀಸ್ ಯಾರಿಗೂ ಹೇಳ್ಬೇಡಿ ಆಯ್ತಾ, 90ರ ದಶಕದ ಹುಡುಗರ ಈ ಗುಟ್ಟು!

Latest Videos
Follow Us:
Download App:
  • android
  • ios