Asianet Suvarna News Asianet Suvarna News

ಗಟ್ಟಿಮೇಳ: ವೇದಾಂತ್ ಅಮ್ಮ ಇರೋ ಸಿಡಿ ಸಿಕ್ತು, ಆದ್ರೆ ಅಮ್ಮ ಸಿಕ್ತಾಳಾ?

ಗಟ್ಟಿಮೇಳ ಸೀರಿಯಲ್‌ನಲ್ಲಿ ಕತೆಗೆ ಹೊಸ ಟ್ವಿಸ್ಟ್ ಸಿಗುತ್ತಿದೆ. ತನ್ನ ನಿಜವಾದ ಅಮ್ಮ ಸುಹಾಸಿನಿ ಅಲ್ಲ ಅಂತ ಗೊತ್ತಾದ ಮೇಲೆ ನಿಜ ತಾಯಿಯ ಹುಡುಕಾಟ ಮಾಡಲು ಹೊರಟಿದ್ದ ಧ್ರುವನಿಗೆ ಸುಹಾಸಿನಿ ಆಕ್ಸಿಡೆಂಟ್ ಮಾಡಿಸಿದ್ದಾಳೆ. ಆದರೆ ವೇದಾಂತ್ ಸುಮ್ಮನುಳಿದರೂ ಆತನ ತಮ್ಮ ವಿಕ್ರಾಂತ ತಾಯಿಯ ಹುಡುಕಾಟ ನಡೆಸಿದ್ದ. ಇಲ್ಲೀವರೆಗೆ ಸಿಗದ ಫಲ ಈ ಸಿಗುವಂತೆ ಕಾಣುತ್ತಿದೆ. ತಮ್ಮ ತಾಯಿ ಇರುವ ಸಿಡಿ ವೇದಾಂತ್ ಗೆ ಸಿಕ್ಕಿದ್ದು ಅದರಲ್ಲಿ ನಿಜಕ್ಕೂ ಅವರ ತಾಯಿ ಇರ್ತಾಳಾ?

In Gattimela serial Vaidehi children finds CD Will they find their real Mother
Author
First Published Sep 19, 2022, 12:39 PM IST

ಗಟ್ಟಿಮೇಳ ಸೀರಿಯಲ್ ಜೀ ಕನ್ನಡ ವಾಹಿನಿಯಲ್ಲಿ ರಾತ್ರಿ ಎಂಟು ಗಂಟೆಗೆ ಪ್ರಸಾರವಾಗುತ್ತಿದೆ. ಟಿ ಆರ್‌ ಪಿ ಲಿಸ್ಟ್‌ನಲ್ಲೂ ಟಾಪ್‌ ಐದರೊಳಗೆ ಇರುವ ಈ ಸೀರಿಯಲ್‌ನಲ್ಲಿ ಇದೀಗ ಅಮ್ಮನ ಹುಡುಕಾಟದ ಕಥೆಯೇ ಮುಖ್ಯವಾಗಿದೆ. ವೇದಾಂತ್ ಅಮ್ಮನ ಹುಡುಕಾಟಕ್ಕೆ ದೊಡ್ಡ ಇತಿಹಾಸವೇ ಇದೆ. ತಮ್ಮನ್ನು ಈಗ ನೋಡಿಕೊಳ್ಳುತ್ತಿರುವ ತಾಯಿ ಸುಹಾಸಿನಿ ಸಾಕು ತಾಯಿಯಷ್ಟೇ, ಆಕೆ ನಿಜವಾದ ತಾಯಿ ಅಲ್ಲ ಅನ್ನೋದು ಮನೆಯ ಮಕ್ಕಳಿಗೆ ಗೊತ್ತಾಗಿದೆ. ಇ ಸಂಗತಿ ಮೊದಲು ತಿಳಿದದ್ದು ಧ್ರುವನಿಗೆ. ಆತ ತನ್ನ ತಾಯಿಯ ಪತ್ತೆಗೆ ಮುಂದಾಗ್ತಾನೆ. ಆದರೆ ಸುಹಾಸಿನಿ ಮಾಡಿರುವ ಪ್ಲಾನ್‌ನಿಂದ ಆತ ಅಪಘಾತಕ್ಕೊಳಗಾಗ್ತಾನೆ. ನೆನಪಿನ ಶಕ್ತಿಯನ್ನೇ ಕಳೆದುಕೊಂಡು ಯಾವ ಕೆಲಸವನ್ನೂ ಮಾಡಲಾಗದೇ ವೀಲ್‌ ಚೇರ್‌ನಲ್ಲೇ ಕಾಲ ಕಳೆಯುತ್ತಿದ್ದಾನೆ. ಆತನ ಬಳಿಕ ವಿಕ್ರಾಂತ್ ವಸಿಷ್ಠ ತಾಯಿಯ ಹುಡುಕಾಟ ನಡೆಸಿದ್ದಾನೆ. ಇದಕ್ಕೆ ವೇದಾಂತ್‌ನನ್ನೂ ಒಪ್ಪಿಸಿದ್ದಾನೆ. ಆರಂಭದಲ್ಲಿ ಈಗಿರುವ ಸುಹಾಸಿನಿ ಪ್ರೀತಿ ಎಲ್ಲಿ ಕಳೆದುಹೋಗುತ್ತೋ ಅನ್ನೋ ಭಯದಲ್ಲಿ ವೇದಾಂತ್ ಇದಕ್ಕೆ ಒಪ್ಪಿರಲಿಲ್ಲ. ಆದರೆ ಈಗ ಒಪ್ಪಿದ್ದಾನೆ. ತಾಯಿ ಇನ್ನೇನು ಸಿಗೋದ್ರಲ್ಲಿದ್ದಾಳೆ.

ಸುಹಾಸಿನಿಯದು ಯಾವತ್ತೂ ನಾಟಕವೇ. ಮಕ್ಕಳ ಮುಂದೆ ಒಳ್ಳೆವಳ ರೀತಿ ನಾಟಕ ಆಡುತ್ತಿದ್ದಾಳೆ. ಆದ್ರೆ ಆಸ್ತಿಗಾಗಿ ಮನೆಯವರಿಗೇನೇ ತೊಂದರೆ ಕೊಡುತ್ತಾಳೆ. ತನ್ನ ಸ್ವಂತ ಅಕ್ಕನನ್ನೇ ಸಾಯಿಸಲು ಪ್ರಯತ್ನಿಸಿ, ಅವರ ನಾಲ್ಕು ಜನ ಮಕ್ಕಳನ್ನು ಇವಳು ಸಾಕಿದ್ದಾಳೆ. ಎಲ್ಲ ಮಾಡಿರೋದು ದುಡ್ಡಿಗಾಗಿ. ಈ ವಿಷಯ ಗೊತ್ತಾದ ವೇದಾಂತ್ ತಮ್ಮ ಧ್ರುವನಿಗೆ ಅಪಘಾತ ಮಾಡಿಸಿ, ಮೂಲೆಯಲ್ಲಿ ಕೂರಿಸಿದ್ದಾಳೆ. ಆರಂಭದಲ್ಲಿ ಸುಹಾಸಿನಿ ದುಡ್ಡಿಗಾಗಿ ಈ ರೀತಿ ಮಾಡ್ತಾ ಇದ್ದಾಳೆ ಅನ್ನೋ ರೀತಿ ಕತೆ ಇತ್ತು. ಆದರೆ ಇದೀಗ ದುಡ್ಡಿನ ಜೊತೆಗೆ ಅವಳು ಒಬ್ಬ ವ್ಯಕ್ತಿ ಹೇಳಿದಂತೆ ಕೇಳುತ್ತಿದ್ದಾಳೆ. ಈ ವ್ಯಕ್ತಿ ಸುಹಾಸಿನಿ ಬಾಸ್. ಸುಹಾಸಿನಿ ತನ್ನ ಬಾಸ್ ಹೇಳಿದಂತೆ ಕೇಳುತ್ತಾಳೆ. ತಿಂಗಳಿಗೆ ಅವರಿಗೆ 25 ಲಕ್ಷ ಕೊಡುತ್ತಾಳೆ. ಎಲ್ಲರನ್ನೂ ಭಯ ಪಡಿಸೋ ಸುಹಾಸಿನಿ, ಇವರನ್ನು ಕಂಡ್ರೆ ಅವಳು ಭಯ ಪಡುತ್ತಾಳೆ.

Ramachari serial: ಪ್ರಪಾತದಲ್ಲಿ ರಾಮಾಚಾರಿ ಸಾಹಸ ಕಂಡು ಬಿದ್ದೂ ಬಿದ್ದೂ ನಗ್ತಿದ್ದಾರೆ ಜನ!

ಇನ್ನೊಂದೆಡೆ ತನ್ನ ಅಮ್ಮ ಬದುಕಿದ್ದಾರೆ ಎಂಬ ಅನುಮಾನ ವಿಕ್ಕಿಗೆ ಮೊದಲಿನಿಂದಲೂ ಇತ್ತು. ಮೊದಲು ಅವನೊಬ್ಬನೇ ಅಮ್ಮನನ್ನು ಹುಡುಕುತ್ತಿದ್ದ. ಆದ್ರೆ ಈ ಬಾರಿ ವೇದಾಂತ್ ಸಹ ಅಮ್ಮನನ್ನು ಹುಡುಕಲು ಓಕೆ ಎಂದಿದ್ದಾನೆ. ಅದಕ್ಕೆ ಡಿಟೆಕ್ಟಿವ್ (Detective) ಪ್ರಜ್ವಲ್ ಸಹಾಯದಿಂದ ವೈದೇಹಿ ಅಮ್ಮನ (Mother) ಸುಳಿವು ಪತ್ತೆ ಹಚ್ಚುತ್ತಿದ್ದಾರೆ. ವೇದಾಂತ್, ವಿಕ್ರಾಂತ್ ಹಾಗೂ ವೇದಾಂಗ್‌ಗೆ ಅಮ್ಮನ ಬಗ್ಗೆ ತಿಳಿದುಕೊಳ್ಳಲು ಸದ್ಯಕ್ಕೆ ಇರುವುದು ಒಂದೇ ಮಾರ್ಗ. ಅದು ತಮ್ಮ ಅಮ್ಮ ಇರುವ ಸಿ.ಡಿ ನೋಡುವುದು. ಆ ಸಿ.ಡಿ ಹಾಳಾಗಿದ್ದ ಕಾರಣ ಅಮ್ಮನ ಬಗ್ಗೆ ಗೊತ್ತಾಗಿರಲಿಲ್ಲ. ಈಗ ಆ ಸಿ.ಡಿ ಸಿಕ್ಕಿದೆ. ಅದನ್ನು ನೋಡಿ ಮನೆಯವರೆಲ್ಲಾ ಖುಷಿಯಾಗಿದ್ದಾರೆ. ತಮ್ಮ ಅಮ್ಮ ಸಿಕ್ಕಳು ಎಂದು ಸಂತೋಷದಿಂದ ಇದ್ದಾರೆ.

ಆದರೆ ವೇದಾಂತ್ ಅವರ ಅಮ್ಮ ವೈದೇಹಿ ಅವರ ಮನೆಯಲ್ಲೇ ವೈಜಯಂತಿ ಎಂದು ಹೇಳಿಕೊಂಡು, ಅವರ ಮನೆ ಕೆಲಸ ಮಾಡಿಕೊಂಡು ಇದ್ದಾರೆ. ಮನೆಯಲ್ಲೇ ಇರುವ ಅಮ್ಮನ ಬಗ್ಗೆ ತಿಳಿದುಕೊಳ್ಳಲು ಇವರು ಇಷ್ಟು ಕಷ್ಟ ಪಡುತ್ತಿದ್ದಾರೆ. ಈಗ ಸಿಡಿ ಏನೋ ಸಿಕ್ಕಿದೆ. ಆದರೆ ಆ ಸಿಡಿಯಲ್ಲಿ ಇರೋದು ವೈದೇಹಿಯೇ ಎಂದು ಗೊತ್ತಾಗಿಲ್ಲ.

21ನೇ ಮಯಸ್ಸಿಗೆ ಐಷಾರಾಮಿ ಕಾರು, ಬಂಗಲೆ; ಕನಸು ನನಸು ಮಾಡಿಕೊಂಡ ಕಿರುತೆರೆ ನಟಿಯ ಯಶಸ್ಸಿನ ಕಥೆ

ಇದರ ಹಿಂದೆ ಸುಹಾಸಿನಿ ಷಡ್ಯಂತ್ರ ಇರುವ ಹಾಗೆ ಕಾಣ್ತಿದೆ. ಆಕೆ ಇಷ್ಟು ತಣ್ಣಗೆ ಆಗಿದ್ದಾಳೆ ಎಂದರೆ ಒಂದೋ ಅವಳೂ ಆ ವಿಡಿಯೋದಲ್ಲಿರುವ (Video) ಚಿತ್ರವನ್ನು ಬದಲಾಯಿಸಿರಬಹುದು. ಇಲ್ಲ ಅಂದ್ರೆ ಮತ್ತೇನೋ ಪ್ಲಾನ್ ಮಾಡಿರಬಹುದು. ಆದರೂ ವೇದಾಂತ್ ಅವರಿಗೆ ವೈದೇಹಿ ತಮ್ಮ ನಿಜವಾದ ಅಮ್ಮ ಎಂದು ಗೊತ್ತಾಗುತ್ತಾ ಅನ್ನೋದು ಸದ್ಯದ ಕುತೂಹಲ.

Follow Us:
Download App:
  • android
  • ios