Asianet Suvarna News Asianet Suvarna News

ಬೆಸ್ಟ್ ಗರ್ಲ್ ಫ್ರೆಂಡ್‌ ಆಗೋದು ಹೇಗೆ?: ತಿಂಗಳ ಕಡೇಲಿ ಬಾಯ್ ಫ್ರೆಂಡ್‌‌ನ ವಿಚಾರಿಸೋದು ಹೇಗೆ ಹೇಳ್ತಾರೆ ಕೇಳಿ!

ಸೋಷಿಯಲ್ ಮೀಡಿಯಾದಲ್ಲಿ ಲಕ್ಷಾಂತರ ಫಾಲೋವರ್ಸ್ ಹೊಂದಿರೋ ಸುಮಾ ಶಾಂತಪ್ಪ ಬೆಸ್ಟ್ ಗರ್ಲ್ ಫ್ರೆಂಡ್‌ ಆಗೋದಕ್ಕೆ ಸೂಪರಾಗಿರೋ ಟಿಪ್ಸ್ ಕೊಟ್ಟಿದ್ದಾರೆ ನೋಡಿ.

 

social media sensation Suma Shantappa tips to become good girl friend bni
Author
First Published Dec 19, 2023, 4:03 PM IST

ಸೋಷಿಯಲ್ ಮೀಡಿಯಾ ಇಂದು ಲಾಭದಾಯಕ ಉದ್ಯಮ. ಇದರಲ್ಲಿ ಕಂಟೆಂಟ್ ಕ್ರಿಯೇಟರ್‌ಗಳಾಗಿ ಅನೇಕ ಮಂದಿ ಫೇಮಸ್ ಆಗ್ತಾ ಇರ್ತಾರೆ. ಅವರಲ್ಲೊಬ್ಬರು ಸುಮಾ ಶಾಂತಪ್ಪ. ಓದಿದ್ದು ಎಂಜಿನಿಯರಿಂಗ್ ಆಗಿದ್ರೂ ಕಂಟೆಂಟ್ ಕ್ರಿಯೇಟರ್‌ ಆಗಿ ಬೆಳೆಯೋದ್ರಲ್ಲಿ ಆಸಕ್ತಿ ಇದ್ದ ಕಾರಣ ಈ ಫೀಲ್ಡ್‌ನಲ್ಲಿ ಮುಂದುವರಿದಿದ್ದಾರೆ. ಮೂಲತಃ ಮೈಸೂರಿನವರಾದ ಈಕೆ ಇನ್‌ಸ್ಟಾಗ್ರಾಂನಲ್ಲಿ ಅನೇಕ ವೀಡಿಯೋಗಳನ್ನು ಪೋಸ್ಟ್ ಮಾಡ್ತಾ ಇರುತ್ತಾರೆ. ಇವರದ್ದೇ ಯುನೀಕ್ ಸ್ಟೈಲಿನಲ್ಲಿರೋ ವೀಡಿಯೋಗಳಲ್ಲಿ ಈ ಕಾಲಕ್ಕೆ ಬೇಕಾದ ಅನೇಕ ಸಲಹೆ, ಟಿಪ್ಸ್ ನೀಡ್ತಾ ಇರುತ್ತಾರೆ. ಸಮಸ್ಯೆ ಏನಿದೆ ಅಂತ ನೋಡಿ ಅದಕ್ಕೆ ತಕ್ಕಂಥಾ ಪ್ರತಿಕ್ರಿಯೆ ನೀಡ್ತಾರೆ.

ಎಸ್ಪೆಶಲೀ ಹುಡುಗರ ನೋವಿಗೆ ದನಿಯಾಗೋದು ಬಹಳ ಜನರಿಗೆ ಇಷ್ಟವಾದ ಹಾಗಿದೆ. ಒಂದು ವೀಡಿಯೋದಲ್ಲಿ ಅವರು ಹಳ್ಳಿ ಹುಡುಗರನ್ನು ಯಾಕೆ ಹುಡುಗೀರು, ಆಕೆಯ ಮನೆಯವರು ರಿಜೆಕ್ಟ್ ಮಾಡ್ತಾರೆ ಅನ್ನೋದನ್ನು ತನ್ನದೇ ರೀತಿ ವಿಶ್ಲೇಷಿಸಿದ್ದಾರೆ. ಈಕೆಯ ಅಭಿಪ್ರಾಯದಂತೆ ಮೊದಲು ಹಳ್ಳಿ ಹುಡುಗರನ್ನು ರೈತರ ಮನೆ ಹುಡುಗಿಯರು ಮದುವೆ ಆಗಬೇಕಂತೆ. ರೈತರು ತಮ್ಮ ಮನೆ ಹೆಣ್ಣು ಮಕ್ಕಳನ್ನು ರೈತ ಹುಡುಗರಿಗೇ ಮದುವೆ ಮಾಡಿದರೆ ಈ ಸಮಸ್ಯೆಗೆ ಸ್ವಲ್ಪವಾದರೂ ಪರಿಹಾರ ಸಿಗಬಹುದು ಅಂದಿದ್ದಾರೆ. ಇನ್ನೊಂದು ಕಡೆ ಹುಡುಗಿಯರು ಅಂದರೆ ಅವರು ಓದದಿದ್ದರೂ, ಚೆನ್ನಾಗಿ ಓದಿಯೂ ಕೆಲಸಕ್ಕೆ ಹೋಗದಿದ್ದರೂ ತಲೆ ಕೆಡಿಸಿಕೊಳ್ಳದ ಸಮಾಜ ಹುಡುಗರು ಕೆಲಸಕ್ಕೆ ಹೋಗದಿದ್ದರೆ, ಅವರಿಗೆ ಉದ್ಯೋಗ ಸಿಗದಿದ್ದರೆ ಅಪರಾಧಿಗಳ ಥರ ನೋಡುತ್ತಾರೆ. ಇದು ಸರಿಯಲ್ಲ ಅನ್ನೋ ಮಾತನ್ನೂ ಹೇಳಿದ್ದಾರೆ.

ಹಾಸಿಗೆ ಹಿಡಿದ 'ಕೆಚ್ಚೆದೆಯ ಕನ್ನಡತಿ ಅಕ್ಕ ಅನು' : ಈಗ್ಲಾದ್ರೂ ನಿಮ್ಮ ಶಾಲೆ ಕೆಲಸ ನೀವೇ ಮಾಡ್ಕೊಳ್ಳಿ!

ಆಗಲೇ ಹೇಳಿದ ಹಾಗೆ ಹುಡುಗರ ನೋವಿಗೆ ಮಿಡಿಯೋ ಈ ಹುಡುಗಿ ಬೆಸ್ಟ್ ಗರ್ಲ್ ಫ್ರೆಂಡ್ (girl friend) ಆಗೋದು ಹೇಗೆ ಅನ್ನೋದಕ್ಕೂ ಒಂದಿಷ್ಟು ಟಿಪ್ಸ್ ಕೊಟ್ಟಿದ್ದಾರೆ. ಅದರ ಪ್ರಕಾರ ಹುಡುಗರ ಸ್ವಾತಂತ್ರ್ಯಕ್ಕೆ (freedome) ಹುಡುಗೀರು ಅಡ್ಡಿ ಆಗಬಾರದು ಅನ್ನೋದು ಮೊದಲನೇ ಪಾಯಿಂಟು. ಹುಡುಗರು ಎಣ್ಣೆ ಹೊಡೆಯೋದಕ್ಕೆ, ಧಮ್ ಹೊಡೆಯೋದಕ್ಕೆ ದಯವಿಟ್ಟು ಅಬ್ಜೆಕ್ಟ್ ಮಾಡಬೇಡಿ. ಅವರು ಹಾಗೆ ಕುಡಿದಾಗ ಹಗುರಾಗ್ತಾರೆ. ಅವರದನ್ನು ಇಷ್ಟ ಪಡುತ್ತಾರೆ. ಹುಡುಗರ ಈ ಸ್ವಾತಂತ್ರ್ಯಕ್ಕೆ ಯಾಕೆ ಅಡ್ಡಿ ಮಾಡ್ತೀರ ಅಂತಲೂ ಪ್ರಶ್ನೆ ಮಾಡ್ತಾರೆ. ಹುಡುಗರು ಔಟಿಂಗ್ ಹೋಗ್ತಾರೆ ಅಂದರೂ ಅದಕ್ಕೆ ತಡೆ ಹಾಕಬೇಡಿ. ಅವರ ಪಾಡಿಗೆ ಅವರು ಹೋಗಿ ಬರಲಿ ಬಿಡಿ. ಅದರಲ್ಲಿ ಅವರಿಗೆ ಖುಷಿ ಸಿಗುತ್ತೆ. ಅವರು ಜಂಜಡಗಳನ್ನೆಲ್ಲ ಕಳೆದು ಹಗುರಾಗುತ್ತಾರೆ. ಹೀಗಿರುವಾಗ ಅವರ ಖುಷಿಗೆ ಯಾಕೆ ಅಡ್ಡಿ ಮಾಡಬೇಕು ಅನ್ನೋದು ಇವರು ಹೇಳೋ ಮತ್ತೊಂದು ಟಿಪ್ಸ್ (tips).

 

ಕೊನೇದಾಗಿ ಹೇಳೋ ಮಾತು ಮಾತ್ರ ಖಂಡಿತಾ ಎಲ್ಲ ಹೆಣ್ಮಕ್ಕಳೂ ಪಾಲಿಸಬೇಕಾದ್ದೆ. ತಿಂಗಳ ಕೊನೆಯಲ್ಲಿ ಹುಡುಗರ ಕೈಯಲ್ಲಿ ಸಾಮಾನ್ಯವಾಗಿ ದುಡ್ಡಿರೋದಿಲ್ಲ. ಆಗ ನಿನ್ ಹತ್ರ ದುಡ್ಡಿದೆಯಾ ಇಲ್ವಾ, ಬೇಕಾಗಿತ್ತಾ ಅಂತ ವಿಚಾರಿಸೋದು ನಿಜವಾದ ಹ್ಯುಮಾನಿಟಿ (humanity) . ತಿಂಗಳ ಕೊನೆಯಲ್ಲಿ ಅದು ತೆಕ್ಕೊಡು, ಇದು ಕೊಡಿಸು ಅಂತ ಕೇಳೋ ಬದಲು ನಿನ್ನ ಬಳಿ ಹಣ ಇದೆಯಾ? ಬೇಕಾಗಿತ್ತಾ ಅಂತ ವಿಚಾರಿಸೋದು ಬೆಸ್ಟ್ ಗರ್ಲ್ ಫ್ರೆಂಡ್‌ಗಿರೋ ಮುಖ್ಯ ಲಕ್ಷಣ ಅನ್ನೋದು ಈಕೆ ಮಾತು. ಇದನ್ನು ನಾಲ್ಕು ಲಕ್ಷಕ್ಕೂ ಅಧಿಕ ಮಂದಿ ನೋಡಿದ್ದಾರೆ. ಮೂವತ್ತ ನಾಲ್ಕು ಸಾವಿರಕ್ಕೂ ಹೆಚ್ಚು ಮಂದಿ ಮೆಚ್ಚಿಕೊಂಡಿದ್ದಾರೆ. ಈ ಪೋಸ್ಟನ್ನು ಹತ್ತು ಸಾವಿರಕ್ಕೂ ಹೆಚ್ಚು ಜನ ಶೇರ್ (share) ಮಾಡಿದ್ದಾರೆ. ಅಲ್ಲಿಗೆ ನಿಜವಾದ ಪ್ರಾಬ್ಲೆಮ್ ಇರೋದೆಲ್ಲ ಅನ್ನೋದು ಈಗ ನಿಮಗೆ ಅರ್ಥ ಆಗಿರಬಹುದು.

ಮತ್ತೊಬ್ಬಳೊಂದಿಗೆ ಚಕ್ಕಂದ ಆಡುತ್ತಿದ್ದಾನೆ ರಾಮಾಚಾರಿ; ಚಾರು ಮೊಬೈಲಿಗೆ ಬಂತು ವಿಡಿಯೋ!

Follow Us:
Download App:
  • android
  • ios