ಹಾಸಿಗೆ ಹಿಡಿದ 'ಕೆಚ್ಚೆದೆಯ ಕನ್ನಡತಿ ಅಕ್ಕ ಅನು' : ಈಗ್ಲಾದ್ರೂ ನಿಮ್ಮ ಶಾಲೆ ಕೆಲಸ ನೀವೇ ಮಾಡ್ಕೊಳ್ಳಿ!
ಶಾಲೆ, ದೇವಾಲಯ, ಪಾರಂಪರಿಕ ಕಟ್ಟಡ ಸೇರಿ ಅನೇಕ ಸ್ಥಳಗಳನ್ನು ಸ್ವಚ್ಛಗೊಳಿಸಿ ಸುಂದರ ರೂಪ ಕೊಡುತ್ತಾ ಸೇವೆ ಮಾಡುತ್ತಿದ್ದ ಕೆಚ್ಚೆದೆಯ ಕನ್ನಡತಿ ಅಕ್ಕ ಅನು ಈಗ ಅನಾರೋಗ್ಯದಿಂದ ಬಳಲುತ್ತಿದ್ದಾರೆ.
ಬೆಂಗಳೂರು (ಡಿ.18): ರಾಜ್ಯದಲ್ಲಿ ಕೆಚ್ಚೆದೆಯ ಕನ್ನಡತಿ 'ಅಕ್ಕ ಅನು'ಳನ್ನು ನೀವು ಸಾಮಾಜಿಕ ಜಾಲತಾಣ ಅಥವಾ ನಿಮ್ಮ ಊರಿನ, ಪಕ್ಕದೂರಿನ ಶಾಲೆ, ದೇವಾಲಯ ಸೇರಿದಂತೆ ಇತರೆ ಪಾರಂಪರಿಕ ತಾಣಗಳ ಸ್ವಚ್ಛತೆ ಮತ್ತು ಪುನರುಜ್ಜೀವನ ಕೆಲಸಗಳಲ್ಲಿ ತೊಡಗಿರುವುದನ್ನು ನೋಡಿರುತ್ತೀರಿ. ಒಂದು ಹೆಣ್ಣು ಹುಡುಗಿ ಇಷ್ಟೊಂದು ಸಮಾಜ ಸೇವೆ ಮಾಡ್ತಿದ್ದಾಳೆ ಅಂತ ಎಲ್ಲರೂ ಮೆಚ್ಚುಗೆ ವ್ಯಕ್ತಪಡಿಸಿದರು. ಆದರೆ, ಯಾರ ಸಹಾಯ, ಮೆಚ್ಚಿಗೆ ಅಪೇಕ್ಷಿಸದೇ ಕೆಚ್ಚೆದೆಯ ಕನ್ನಡತಿಯಾಗಿ ಸೇವೆ ಸಲ್ಲಿಸಿದ ಅಕ್ಕ ಅನುಗೆ ಈಗ ಅನಾರೋಗ್ಯ ಕಾಣಿಸಿಕೊಂಡಿದೆ. ಜೊತೆಗೆ ತಮ್ಮ ವೈಯಕ್ತಿಕ ಕೆಲಸಗಳೂ ಹೆಚ್ಚಾಗಿದ್ದು, ಇನ್ನು ಮುಂದೆ ನಿಮ್ಮ ಶಾಲೆ ಅಥವಾ ಗ್ರಾಮಗಳ ಇತರೆ ಸಮಸ್ಯೆಗಳನ್ನು ನೀವು ನಮಗಾಗಿ ಕಾಯದೇ ನೀವೇ ಪರಿಹರಿಸಿಕೊಳ್ಳಿ ಎಂದು ಪೋಸ್ಟ್ ಮಾಡಿದ್ದಾರೆ.
ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಒಂದ ಪುಟದಷ್ಟು ವಿಚಾರಗಳನ್ನು ಬರೆದುಕೊಂಡು ಪೋಸ್ಟ್ ಮಾಡಿಕೊಂಡಿರುವ ಅಕ್ಕ ಅನು, 'ಒಂದೆರಡು ನಿಮಿಷ ಸಮಯ ಸಿಕ್ಕರೆ ವಿವರವಾಗಿ ತಿಳಿದುಕೊಳ್ಳಿ...
ನನಗೆ ಕೆಲವು ಆರೋಗ್ಯ ಸಮಸ್ಯೆಯಿಂದ ನಾವು ಕನ್ನಡ ಶಾಲೆ ಉಳಿಸಿ ಅಭಿಯಾನ ಹಾಗೂ ಸಾಮಾಜಿಕ ಕಾರ್ಯಗಳಿಂದ ದೂರ ಉಳಿಯಬೇಕಾಯಿತು. ಸುಮಾರು ಜನ ಶಿಕ್ಷಕರು,sdmc ಅಧ್ಯಕ್ಷರು,ಹಾಗೂ ವಿದ್ಯಾರ್ಥಿಗಳ ಜೊತೆಗೆ ಸಾಮಾಜಿಕ ಕಳಕಳಿ ಹೊಂದಿರುವವರು ನನಗೆ ಕರೆ ಮಾಡ್ತಾನೆ ಇದ್ದೀರಿ. ನಾನು ಎಲ್ಲರಿಗೂ ಕೆಲಸ ಬಿಟ್ಟಿದೀವಿ ಅನಾರೋಗ್ಯ ಅಂತ ಪ್ರತಿಯೊಬ್ಬರಿಗೂ ಹೇಳಲು ಕಷ್ಟವಾಗುತ್ತಿದೆ. ಆದ್ದರಿಂದಲೇ ಸಾಮಾಜಿಕ ಜಾಲತಾಣಗಳಲ್ಲಿ ಇದೊಂದು ವಿಷಯವನ್ನು ಹೇಳಲೇ ಬೇಕಾಯಿತು.
ಹಿರಿಯ ನಟಿ ಲೀಲಾವತಿ ಜೀವನದ ಗುಟ್ಟನ್ನು ಬಿಚ್ಚಿಟ್ಟ ಪುತ್ರ ವಿನೋದ್ ರಾಜ್!
ಮುಂದೊಂದು ದಿನ ನಮ್ಮ ಆರೋಗ್ಯ ಹಾಗೂ ನಮ್ಮ ಜೀವನ ಉತ್ತಮ ಮಟ್ಟದಲ್ಲಿ ಸಾಗಿದ್ರೆ ಖಂಡಿತ ನಾವೂ ಹಾಗೂ ನಮ್ಮ ತಂಡ ಮುಂದಿನ ಕೆಲವು ವರ್ಷಗಳಲ್ಲಿ ಎಲ್ಲವೂ ಸರಿಹೊಂದಿದರೆ ನೋಡೋಣ. ಆಗಂತ ನಿಮ್ಮ ಊರಿನ ಶಾಲೆಗಳಿಗೆ ನಾವೇ ಬರ್ತೀವಿ ಅಂತ ಭಾವಿಸಬೇಡಿ. ಯಾಕೆಂದ್ರೆ ಈಗಾಗಲೇ ನಮ್ಮ ಲಿಸ್ಟ್ ನಲ್ಲಿ 75ಕ್ಕೂ ಹೆಚ್ಚು ಶಾಲೆಗಳು ಪೆಂಡಿಂಗ್ ನಲ್ಲಿ ಇವೆ. ದಯವಿಟ್ಟು ನಿಮ್ಮ ಊರಿನ ಸಮಸ್ಯೆಗಳಿಗೆ ಕೆಲಸಗಳಿಗೆ ನಾವೇ ಬಂದು ಕೆಲಸ ಮಾಡಬೇಕು ಅಂತ ಏನಿಲ್ಲ.ನಿಮ್ಮ ಊರಿನ ಶಾಲೆಗಳ ಕೆಲ್ಸಗಳನ್ನ ನೀವೇ ಮುಗಿಸಿಕೊಂಡ್ರೆ ತುಂಬಾನೇ ಒಳ್ಳೇದು.
ಯಾಕೆಂದ್ರೆ ಸುಮಾರು ಜನ ನಾವು ಇಂದಲ್ಲ ನಾಳೆ ಬರ್ತಿವಿ ನಿಮ್ಮ ಊರಿಗೆ ಅಂತ ದಿನಗಳನ್ನ ಮುಂದೂಡುತ್ತಲೇ ಇದ್ದೀರಿ ಆದ್ರೆ ನಮ್ಮ ಸಮಸ್ಯೆಗಳಿಂದ ನಾವು ಯಾರಿಗೂ ಸ್ಪಂದಿಸಲು ಆಗುತ್ತಿಲ್ಲ ಕ್ಷಮಿಸಬೇಕು ನೀವೆಲ್ಲಾ ತೊಂದರೆ ಆದ್ರೆ ಈ ನಂಬರ್ ಆಫ್ ಮಾಡಿ ಅಂತ ಕೆಲವರು ಹೇಳ್ತ ಇದಿರಿ ಕೆಲವು ದಾಖಲಾತಿ ಗಳಿಗೆ ಇದೇ ನಂಬರ್ ಇರುವುದರಿಂದ ನಂಬರ್ ಚೇಂಜ್ ಮಾಡಲು ಆಗುತ್ತಿಲ್ಲ. ಕೆಲವು ಕಮಿಟ್ಮೆಂಟ್ ಹಾಗೂ ಮುಖ್ಯವಾದ ಆತ್ಮೀಯರ ಸಲುವಾಗಿ ಮೊಬೈಲ್ ನಂಬರ್ ನ ಚಾಲ್ತಿಯಲ್ಲಿ ಇಡಬೇಕಾಯಿತು.
ಬೆಳಗಾವಿ ಸಂತ್ರಸ್ಥೆ ಮಹಿಳೆ ಕೇಸ್ ವಿಚಾರಣೆಯಲ್ಲಿ ಮಾನವೀಯತೆ, ಸ್ತ್ರೀ ಗೌರವ ಎತ್ತಿಹಿಡಿದ ಹೈಕೋರ್ಟ್!
ನಿಮ್ಮಿಂದ ನಂಗೆ ಸಹಾಯವೇನೆಂದರೆ ನಿಮ್ಮ ಊರಿನ ಸಮಸ್ಯೆಗಳನ್ನ ನೀವೇ ಬಗೆಹರಿಸಿಕೊಂಡರೆ ತುಂಬಾ ಒಳ್ಳೇದು ಯಾಕೆಂದ್ರೆ ನಾನು ಈ ಕಾರ್ಯವನ್ನ ಏನೋ ದೊಡ್ಡ ಮಟ್ಟದಲ್ಲಿ ಕೆಲಸ ಮಾಡಿ ಹೆಸರು ಮಾಡಬೇಕು ಅನ್ನೋದು ಇದಿಲ್ಲ . ನನ್ನ ಜೀವನದಲ್ಲಿ ನಡೆದ ಒಂದಿಷ್ಟು ಘಟನೆಗಳಿಂದ ಪ್ರೇರಿತಳಾಗಿ ಒಂದು ಚಿಕ್ಕ ಬದಲಾವಣೆ ತರ್ಬೇಕು ಅಂದ್ರೆ ಶಿಕ್ಷಣ.ಹಾಗೂ ಆರೋಗ್ಯವಾಗಿ ಜನಗಳು ಬದುಕೋಕೆ ವೈಯಕ್ತಿಕ ಸ್ವಚ್ಛತೆಯಿಂದ ಹಾಗೂ ಪರಿಸರ ಸ್ವಚ್ಛತೆಯ ಅವಶ್ಯಕತೆ ನನ್ನ ಭಾರತದಲ್ಲಿ ಬಹಳ ಅವಶ್ಯಕತೆ ಇರುವುದರಿಂದ ಒಂದೆರಡು ಜನಗಳಿಗೆ ಆದ್ರೂ ನಮ್ಮ ಕಾರ್ಯಗಳು ತಿಳಿಲಿ ಅಂತ ಒಂದಿಷ್ಟು ಅಭಿಯಾನಗಳನ್ನ ಕೈಗೊಂಡೆ ಅಷ್ಟೇ....' ಎಂದು ಬರೆದುಕೊಂಡು ಪೋಸ್ಟ್ ಮಾಡಿದ್ದಾರೆ.