ಕೊನೆಗೂ ಬಾಯ್‌ಫ್ರೆಂಡ್ ಫೋಟೋ ರಿವೀಲ್ ಮಾಡಿದ ಕಿಪಿ ಕೀರ್ತಿ; ಫ್ಯಾಮಿಲಿ ಸಪೋರ್ಟ್ ಇಲ್ಲ ಎಂದು ಬೇಸರ
ಫ್ಯಾಮಿಲಿ ಎದುರಾಕಿಕೊಂಡು ಪ್ರೀತಿಸುತ್ತಿರುವ ಕಿಪಿ ಕೀರ್ತಿ. ಬಾಯ್‌ಫ್ರೆಂಡ್ ಫೋಟೋ ನಿಜ ಆದರೆ ದಯವಿಟ್ಟು ಟ್ರೋಲ್ ಮಾಡಬೇಡಿ ಎಂದ ಹುಡುಗಿ.

ಸೋಷಿಯಲ್ ಮೀಡಿಯಾದಲ್ಲಿ 'ಹಾಯ್ ಜನರೇ' ಎಂದು ವಿಡಿಯೋ ಮಾಡುವ ಕಿಪಿ ಕೀರ್ತಿ ಅತಿ ಹೆಚ್ಚು ಟ್ರೋಲ್ ಎದುರಿಸಿದ ಹುಡುಗಿ. ಒಂದು ನಿಮಿಷ ವಿಡಿಯೋ ಮಾಡಲಿ ಒಂದು ಗಂಟೆ ವಿಡಿಯೋ ಮಾಡಲು ಪಕ್ಕಾ ಟ್ರೋಲ್ ಆಗುತ್ತಾರೆ. ಆದರೆ ಕಿಪಿ ಕೀರ್ತಿ ಬ್ಯೂಟಿ ಮತ್ತು ಬುದ್ಧಿ ಬಗ್ಗೆ ಕೆಟ್ಟ ಕಾಮೆಂಟ್ ಮಾಡುತ್ತಿದ್ದವರಿಗೆ ಈಗ ಬಾಯಿ ಮುಚ್ಚಿದ್ದಂತೆ ಆಗಿದೆ ಏಕೆಂದರೆ ಬಾಯ್‌ಫ್ರೆಂಡ್ ಮುಖ ರಿವೀಲ್ ಮಾಡಿದ್ದಾರೆ. ಸುಮಾರು ಒಂದು ವರ್ಷದಿಂದ ಕಿಪಿ ಕೀರ್ತಿ ಮತ್ತು ಬಾಯ್‌ಫ್ರೆಂಡ್ ಡೇಟಿಂಗ್ ಮಾಡುತ್ತಿದ್ದಾರೆ ಆದರೆ ಎಲ್ಲಿಯೂ ರಿವೀಲ್ ಮಾಡಿರಲಿಲ್ಲ. ತಮ್ಮ ಪ್ರೀತಿ ಫ್ಯಾಮಿಲಿ ಸಪೋರ್ಟ್ ಇಲ್ಲ ಎಂದು ಬೇಸರ ಮಾಡಿಕೊಂಡಿದ್ದಾರೆ.
'ನಾವು ಬೇಕು ಎಂದು ಫೋಟೋ ವೈರಲ್ ಮಾಡಿಲ್ಲ..ನಾವು ಹಾಕಿದ ಫೋಟೋ ಟ್ರೋಲಿಗರಿಂದ ವೈರಲ್ ಆಗಿದ್ದು. ಅವರು ಹಾಕಿದ್ದ ಫೋಟೋವನ್ನು ರೀ-ಶೇರ್ ಮಾಡಿದ್ದು. ಕಡಿಮೆ ಫಾಲೋವರ್ಸ್ ಇರೋದು ಯಾರು ನೋಡಲ್ಲ ಅಂದುಕೊಂಡ್ವಿ ಆದರೆ ವೈರಲ್ ಮಾಡಿದ್ರು. ಒಬ್ಬರು ಡಿಲೀಟ್ ಮಾಡ್ಬೋದು ಆದರೆ ಎಲ್ಲಾ ಕಡೆ ಡಿಲೀಟ್ ಮಾಡಲು ಆಗಲ್ಲ. ಇಬ್ಬರು ಫ್ಯಾಮಿಲಿಯಲ್ಲಿ ತುಂಬಾ ಸಮಸ್ಯೆ ಆಯ್ತು ಆದರೂ ಒಪ್ಪಿಸಿಕೊಂಡು ನಡೆಸುತ್ತಿದ್ದೀವಿ. ನನಗೆ ಏನೂ ಇಲ್ಲದ ಸಮಯದಲ್ಲಿ ಅವರು ಸಿಕ್ಕಿದ್ದು. ಒಮ್ಮೆ ನಾನು ಟ್ರೋಲ್ ಆದಾಗ ವಿಡಿಯೋ ಮಾಡಿ ತಂದೆ ಇಲ್ಲ ಎಂದು ಕಣ್ಣೀರಿಟ್ಟಿದ್ದೆ ಅದನ್ನು ನೋಡಿ ಅವರು ನನಗೆ ಮೆಸೇಜ್ ಮಾಡಿದ್ದರು. ಮನೆಯಲ್ಲಿ ಬೈದರು ಅದಿಕ್ಕೆ ಡಿಲೀಟ್ ಮಾಡಿದ್ದೆ' ಎಂದು ಖಾಸಗಿ ಟಿವಿ ಸಂದರ್ಶನದಲ್ಲಿ ಕೀರ್ತಿ ಮಾತನಾಡಿದ್ದಾರೆ.
ರಚಿತಾ ರಾಮ್ ಸಿನಿಮಾದಲ್ಲಿ ರಾಗಿಣಿ ದ್ವಿವೇದಿಯ 20 ನಿಮಿಷದ ಸೀನ್ ಡಿಲೀಟ್ ?; ತುಪ್ಪದ ಬೆಡಗಿ ಗರಂ
'ಕಿಪ್ಪಿ ನಿನಗೆ ಯಾರು ಇಲ್ಲ ಅಂದುಕೊಳ್ಳಬೇಡ ನಿನಗೆ ನಾನು ಸಪೋರ್ಟ್ ಆಗಿ ನಿಲ್ಲುತ್ತೀನಿ ಎಂದು ಕಾಮೆಂಟ್ ಮಾಡಿದೆ. ಕಳೆದ ಏಪ್ರಿಲ್‌ನಿಂದ ನನ್ನ ಜೊತೆಗಿದ್ದಾರೆ..ಸುಮಾರು ಒಂದು ವರ್ಷದಿಂದ ನನ್ನ ಜೊತೆಯಲ್ಲಿ ಇದ್ದಾರೆ. ಹೆಸರು ಮಾಡುವುದಕ್ಕೆ ನನ್ನ ಜೊತೆ ಬಂದಿದ್ದಾನೆ ಎಂದು ಕೆಟ್ಟ ಕಾಮೆಂಟ್ ಮಾಡುತ್ತಿದ್ದಾರೆ. ಜೀವ ಪೂರ್ತಿ ನಾವು ಚೆನ್ನಾಗಿ ಇರೋಣ ಎಂದು ಬಂದಿದ್ದಾನೆ. ನಮ್ಮಿಬ್ಬರ ನಡುವೆ ತುಂಬಾ ಜಗಳ ಬರುತ್ತಲೇ ಇರುತ್ತದೆ ಏಕೆಂದರೆ ನಾನು ತಲೆ ಕೆಟ್ಟು ಏನ್ ಏನೋ ಮಾತನಾಡುತ್ತೀನಿ ಆದರೂ ನನ್ನ ಜೊತೆಯಲಿ ಇದೆ. ಫ್ಯಾಮಿಲಿಯಲ್ಲಿ ವಿರೋಧ ಇದ್ದರೂ ನನ್ನ ಜೊತೆಯಲಿ ಇದ್ದಾರೆ. ನನ್ನ ತಾಯಿಗೂ ಹುಡುಗ ಕಂಡ್ರೆ ಇಷ್ಟ ಆಗುವುದಿಲ್ಲ. ಆದರೂ ದೇವರ ಮೇಲೆ ನಂಬಿಕೆ ಇಟ್ಟು ಜೀವನ ಮಾಡುತ್ತಿದ್ದೀವಿ. ದಯವಿಟ್ಟು ನಮ್ಮ ಪಾಡಿಗೆ ನಾವು ಇರಲು ಬಿಡಿ' ಎಂದು ಕಿಪಿ ಕೀರ್ತಿ ಹೇಳಿದ್ದಾರೆ.
ಒಂದು ಗಂಡು ಮಗು ಬೇಕು ಕಣೋ ನಮ್ಮ ಲೆಗೆಸಿ ಮುಂದುವರೆಸಲು; ರಾಮ್ ಚರಣ್‌ಗೆ ಡಿಮ್ಯಾಂಡ್ ಮಾಡಿದ ಚಿರಂಜೀವಿ