Asianet Suvarna News Asianet Suvarna News

ದರ್ಶನ್​ ಅಭಿಮಾನಿಗಳಿಂದ ಬ್ಯಾಡ್​ ಕಮೆಂಟ್ಸ್ ಟಾರ್ಚರ್: ಗುರು ನಾನ್‌ ಇನ್ನೂ ಚಿಕ್ಕವಳು ಎಂದ ಸೋನು ಗೌಡ!

ದರ್ಶನ್ ಅಭಿಮಾನಿಗಳಿಂದ ಕಿರುಕುಳದ ಆರೋಪ ಮಾಡಿರುವ ಸೋನು ಶ್ರೀನಿವಾಸ್ ಗೌಡ ಅವರು ಸೋಷಿಯಲ್ ಮೀಡಿಯಾದಲ್ಲಿ ವಿಡಿಯೋವೊಂದನ್ನು ಹಂಚಿಕೊಂಡಿದ್ದಾರೆ. 

Socal Media Celebrity Sonu Srinivas Gowda Said Darshan Fans Making Bad Comments On Her Profile gvd
Author
First Published Jun 28, 2024, 4:42 PM IST

ರೇಣುಕಾಸ್ವಾಮಿ ಕೊಲೆ ಕೇಸ್‌ನಲ್ಲಿ ನಟ ದರ್ಶನ್ ಜೈಲಿನಲ್ಲಿದ್ದಾರೆ. ದರ್ಶನ್ ನ್ಯಾಯಾಂಗ ಬಂಧನದಲ್ಲಿರುವಾಗ ಹೊರಗಡೆ ಸಾಕಷ್ಟು ಚರ್ಚೆಗಳಾಗುತ್ತಿದೆ. ದರ್ಶನ್ ಅಭಿಮಾನಿಗಳು ತಮ್ಮ ಬಾಸ್ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ಸಖತ್ ಬ್ಯಾಟಿಂಗ್ ಮಾಡುತ್ತಿದ್ದಾರೆ. ದರ್ಶನ್ ಅಭಿಮಾನಿಗಳ ಕಮೆಂಟ್ಸ್‌ಗೆ ರೀಲ್ಸ್ ಸ್ಟಾರ್, ಬಿಗ್‌ಬಾಸ್ ಸ್ಪರ್ಧಿ ಸೋನು ಶ್ರೀನಿವಾಸ್ ಗೌಡ ಅವರು ರೋಸಿ ಹೋಗಿ ವಿಡಿಯೋ ಮಾಡಿದ್ದಾರೆ. ದರ್ಶನ್ ಅಭಿಮಾನಿಗಳಿಂದ ಕಿರುಕುಳದ ಆರೋಪ ಮಾಡಿರುವ ಸೋನು ಶ್ರೀನಿವಾಸ್ ಗೌಡ ಅವರು ಸೋಷಿಯಲ್ ಮೀಡಿಯಾದಲ್ಲಿ ವಿಡಿಯೋವೊಂದನ್ನು ಹಂಚಿಕೊಂಡಿದ್ದಾರೆ. 

ದರ್ಶನ್ ಪರವಾಗಿ ನಾನು ಮಾತನಾಡಿಲ್ಲ ಎಂದು ಕೆಟ್ಟ, ಕೆಟ್ಟದಾಗಿ ಕಮೆಂಟ್ಸ್ ಮಾಡುತ್ತಿದ್ದಾರೆ. ಈ ಕುರಿತು ಸೋನುಗೌಡ ಅವರು ತಮ್ಮ ಬೇಸರ ಹೊರ ಹಾಕಿದ್ದಾರೆ. ದರ್ಶನ್ ಅಭಿಮಾನಿಗಳು ನನಗೆ ತುಂಬಾ ಬ್ಯಾಡ್ ಕಮೆಂಟ್ಸ್ ಮಾಡುತ್ತಿದ್ದಾರೆ. ಇನ್ಸ್‌ಸ್ಟಾಗ್ರಾಂ, ಯೂಟ್ಯೂಬ್‌ ಎಲ್ಲಿ ನೋಡಿದ್ರೂ ಕೆಟ್ಟ, ಕೆಟ್ಟ ಕಮೆಂಟ್ಸ್‌ಗಳೇ ಕಾಣುತ್ತಿವೆ. ನಿಮ್ಮ ಡಿ ಬಾಸ್ ಬಗ್ಗೆ ನಾನು ಏನು ಮಾತಾಡಿಲ್ಲ ಎಂದು ಸೋನು ಶ್ರೀನಿವಾಸ ಗೌಡ ಸ್ಪಷ್ಟಪಡಿಸಿದ್ದಾರೆ. ನಾವಿನ್ನು ಚಿಕ್ಕವರು ದರ್ಶನ್ ಸಾರ್ ಅವರ ಬಗ್ಗೆ ಮಾತಾಡುವಷ್ಟು ಇನ್ನೂ ಬೆಳೆದಿಲ್ಲ. ನಾವು ಒಂದು ಸಲ ಅವರಿಗೆ ಫ್ಯಾನ್ ಆದ್ರೆ ಸಾಯೋವರಿಗೂ ಅವರ ಫ್ಯಾನ್ ಆಗಿರುತ್ತೇವೆ. 

ವರ್ಕೌಟ್ ಡಿಟೇಲ್ಸ್‌ ಕೊಡಿ... ಜಿಮ್‌ನಲ್ಲಿ ಬೆವರಿಳಿಸಿ ಸ್ಲಿಮ್ ಆದ ಸೋನು ಗೌಡಗೆ ಸ್ಪೆಷಲ್‌ ರಿಕ್ವೆಸ್ಟ್‌..!

ಆದರೆ ತಪ್ಪು ಯಾರೇ ಮಾಡಿದ್ರೂ ಕಾನೂನಿನ ಪ್ರಕಾರ ಶಿಕ್ಷೆ ಆಗೇ ಆಗುತ್ತೆ. ನ್ಯಾಯಾಲಯ ತೀರ್ಪು ಕೊಡುವವರಿಗೂ ಕಾಯ್ತಾ ಇರಬೇಕು. ನನಗೆ ಯಾವುದೇ ಬ್ಯಾಡ್ ಕಮೆಂಟ್ ಮಾಡಬೇಡಿ. ಆ ಎರಡು ಕುಟುಂಬಕ್ಕೆ ದೇವರು ಸ್ಟ್ರಾಂಗ್ ಆಗಿ ಇರಲಿ ಅಂತ ಬೇಡಿಕೊಳ್ತೀನಿ. ನಮ್ಮ ಬಾಸ್ ಆದಷ್ಟು ಬೇಗ ವಾಪಸ್ ಬರ್ಲಿ. ಅವರು ಎಷ್ಟೇ ಪ್ರಾಣಿಗಳು, ಕಷ್ಟದಲ್ಲಿರುವವರಿಗೆ ಸಹಾಯ ಮಾಡಿದ್ದಾರೆ. ಅವರು ಇಂತಹ ಕೆಲಸ ಮಾಡೋಕೆ ಸಾಧ್ಯವಿಲ್ಲ ಅಂತ ನಾನು ನಂಬಿದ್ದೇನೆ. ಅದು ಹಾಗೇ ಆಗಲಿ. ದಯವಿಟ್ಟು ಬ್ಯಾಡ್ ಕಮೆಂಟ್ಸ್ ಮಾಡಬೇಡಿ ಎಂದು ಸೋನುಗೌಡ ತಮ್ಮ ಅಳಲು ತೋಡಿಕೊಂಡಿದ್ದಾರೆ.

'ಹಾಗೆ ಸುಮ್ಮನೆ' ಹೊಸ ಲುಕ್‌ ಎಂದ ಸೋನು ಗೌಡ: ಏನಮ್ಮಾ ಸೀರೆನಾ ಪ್ಯಾಂಟ್ ಮಾಡ್ಕೋಂಡಿದ್ಯಾ ಅನ್ನೋದಾ!

ಇತ್ತೀಚೆಗೆ ಅಕ್ರಮವಾಗಿ ಮಗುವೊಂದನ್ನು ದತ್ತು ಪಡೆದ ವಿಚಾರವಾಗಿ 11 ದಿನಗಳ ಕಾಲ ನಟಿ ಸೋನು ಬಂಧನದಲ್ಲಿದ್ದರು. ಆ ನಂತರ ಬಿಡುಗಡೆಯಾದರು. ಹಿಂದೊಮ್ಮೆ ಸೋನು ಅವರ ವಿಡಿಯೊ ಒಂದು ಲೀಕ್ ಆಗಿದ್ದೇ ಸೋನು ಗೌಡ ಪದೇ ಪದೇ ಟ್ರೋಲ್‌ ಆಗಲು ಕಾರಣ. ಸೋನು ಗೌಡ ತಮ್ಮ ನೋವನ್ನು ಈ ಹಿಂದೆ ವಿಡಿಯೊ ಮೂಲಕ ಹಂಚಿಕೊಂಡಿದ್ದರು. ಸೋನು ಗಳಗಳನೇ ಅತ್ತಿದ್ದರು. ಇದರ ಬೆನ್ನಲ್ಲೇ ಮಾಲ್ಡೀವ್ಸ್‌ ಪ್ರವಾಸಕ್ಕೆ ಹೋದರು. ಅಲ್ಲಿನ ಬೀಚ್‌ನಲ್ಲಿ ಬಿಂದಾಸ್‌ ಆಗಿ ಎಂಜಾಯ್‌ ಮಾಡುತ್ತಿರುವ ಚಿತ್ರಗಳನ್ನು ಸ್ವತಃ ಸೋನು ಗೌಡ ಹಂಚಿಕೊಂಡಿದ್ದರು. ಒಳ ಉಡುಪು ತೊಟ್ಟು, ಹಾಟ್‌ ಆಗಿ ಪೋಸ್ ನೀಡಿದ್ದ ಬೆನ್ನಲ್ಲೇ ಇದೀಗ ಬಿಕಿನಿ ವಿಡಿಯೊ ಶೇರ್‌ ಮಾಡಿಕೊಂಡಿದ್ದರು.

Latest Videos
Follow Us:
Download App:
  • android
  • ios