ಶೋಭಿತಾ ಶಿವಣ್ಣ ಮರಣೋತ್ತರ ಪರೀಕ್ಷೆ ಮುಕ್ತಾಯ, ವೈದ್ಯರು ಹೇಳಿದ್ದೇನು?

ಕನ್ನಡದ ನಟಿ ಶೋಭಿತಾ ಶಿವಣ್ಣ ಅವರ ಮರಣೋತ್ತರ ಪರೀಕ್ಷೆ ಮುಕ್ತಾಯವಾಗಿದ್ದು, ವರದಿಯಲ್ಲಿ ಆತ್ಮಹತ್ಯೆ ಎಂದು ಖಚಿತಪಡಿಸಲಾಗಿದೆ. ಹೈದರಾಬಾದ್‌ನಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದ ಶೋಭಿತಾ ಅವರ ಮೃತದೇಹವನ್ನು ಕುಟುಂಬಸ್ಥರಿಗೆ ಹಸ್ತಾಂತರಿಸಲಾಗಿದೆ.

Kannada Actress Shobitha Shivanna postmortem completed What Doctors say san

ಹೈದರಾಬಾದ್‌ (ಡಿ.2): ಕನ್ನಡದ ಸಿನಿಮಾ ಹಾಗೂ ಕಿರುತೆರೆ ನಟಿ ಶೋಭಿತಾ ಶಿವಣ್ಣ ಅವರ ಮೃತದೇಹದ ಮರಣೋತ್ತರ ಪರೀಕ್ಷೆ ಮುಕ್ತಾಯವಾಗಿದೆ. ಹೈದರಾಬಾದ್‌ನ ಓಸ್ಮಾನಿಯಾ ಆಸ್ಪತ್ರೆಯಲ್ಲಿ ವೈದ್ಯರು ಪೋಸ್ಟ್‌ಮಾರ್ಟಮ್‌ ಕೆಲಸ ನೆರವೇರಿದೆ. ಆ ಬಳಿಕ ಶೋಭಿತಾ ಶಿವಣ್ಣ ಮೃತದೇಹವನ್ನು ಕುಟುಂಬಸ್ತರಿಗೆ ಹಸ್ತಾಂತರ ಮಾಡಲಾಗಿದೆ. ಮೃತದೇಹವನ್ನು ಹಾಸನಕ್ಕೆ ತರುವ ಪ್ರಕ್ರಿಯೆ ಚಾಲ್ತಿಯಲ್ಲಿದ್ದು, ಹುಟ್ಟೂರಿನಲ್ಲಿಯೇ ಆಕೆಯ ಅಂತ್ಯಸಂಸ್ಕಾರ ನೆರವೇರಲಿದೆ. ಮರಣೋತ್ತರ ಪರೀಕ್ಷೆಯ ವರದಿಯಲ್ಲಿ ಶೋಭಿತಾ ಸಾವು ಆತ್ಮಹತ್ಯೆ ಎಂದೇ ವೈದ್ಯರು ಖಚಿತಪಡಿಸಿದ್ದಾರೆ. ಆಕೆಯ ದೇಹದ ಮೇಲೆ ಯಾವುದೇ ಗಾಯದ ಗುರುತುಗಳಿಲ್ಲ ಎಂದು ವೈದ್ಯರು ತಿಳಿಸಿದ್ದಾರೆ. ಇದೇ ವೇಳೆ ಅಂತ್ಯಸಂಸ್ಕಾರ ಆಕೆಯ ಹುಟ್ಟೂರಿನಲ್ಲಿಯೇ ನಡೆಯಲಿದೆ ಎಂದು ಕುಟುಂಬಸ್ಥರು ಸ್ಥಳೀಯ ಪೊಲೀಸರಿಗೆ ತಿಳಿಸಿದ್ದಾರೆ.

ಭಾನುವಾರ ಶೋಭಿತಾ ಶಿವಣ್ಣ ತನ್ನ ಮನೆಯಲ್ಲಿಯೇ ಆತ್ಮಹತ್ಯೆ ಮಾಡಿಕೊಂಡಿದ್ದರು. ಮನೆಯ ಕೋಣೆಯಲ್ಲಿನ ಸೀಲಿಂಗ್‌ ಫ್ಯಾನ್‌ಗೆ ನೇಣು ಬಿಗಿದುಕೊಂಡು ಸೂಸೈಡ್‌ ಮಾಡಿಕೊಂಡಿದ್ದರು. ಸಾಕಷ್ಟು ಸೀರಿಯಲ್‌ಗಳಲ್ಲಿ ನಟಿಸಿದ್ದ ಶೋಭಿತಾ ಶಿವಣ್ಣ, ಬ್ರಹ್ಮಗಂಟು ಸೀರಿಯಲ್‌ ಮೂಲಕ ಮನೆಮಾತಾಗಿದ್ದರು. ಒಂದೂವರೆ ವರ್ಷದ ಹಿಂದೆ ಸಾಫ್ಟ್‌ವೇರ್‌ ಇಂಜಿನಿಯರ್‌ ಆಗಿದ್ದ ಸುಧೀರ್‌ ರೆಡ್ಡಿಯನ್ನು ವಿವಾಹವಾದ ಬಳಿಕ ಹೈದರಾಬಾದ್‌ಗೆ ಶಿಫ್ಟ್‌ ಆಗಿದ್ದರು. ಮ್ಯಾಟ್ರಿಮೋನಿಯಲ್ಲಿ ಶೋಭಿತಾ ಅವರ ಪ್ರೊಫೈಲ್‌ ನೋಡಿದ್ದ ಸುಧೀರ್‌ ರೆಡ್ಡಿ, ಕುಟುಂಬದವರನ್ನು ಒಪ್ಪಿಸಿ ಶೋಭಿತಾರನ್ನು ಮದುವೆಯಾಗಿದ್ದರು.

ಹೈದರಾಬಾದ್‌ನ ಶ್ರೀರಾಮನಗರದ ಕಾಲೋನಿಯಲ್ಲಿ ಶೋಭಿತಾ ವಾಸವಾಗಿದ್ದರು. ಮದುವೆಯಾದ ಬಳಿಕ ಸೀರಿಯಲ್‌ ಹಾಗೂ ಸಿನಿಮಾಗಳಿಂದ ಅವರು ದೂರವೇ ಉಳಿದಿದ್ದರು. ಹೆಚ್ಚಾಗಿ ಯಾರಲ್ಲೂ ಮಾತನಾಡುತ್ತಿರಲಿಲ್ಲ. ಇದು ಆಕೆಯ ಖಿನ್ನತೆಗೆ ಕಾರಣವಾಗಿತ್ತು. ಇದರಿಂದಾಗಿ ಆಕೆ ಆತ್ಮಹತ್ಯೆಯ ನಿರ್ಧಾರ ಮಾಡಿರಬಹುದು ಎಂದು ಅಂದಾಜಿಸಲಾಗಿದೆ.

ಪೊಲೀಸರಿಗೆ ಸಿಕ್ತು ಶೋಭಿತಾ ಶಿವಣ್ಣ ಡೆತ್‌ ನೋಟ್‌, ಸ್ಫೋಟಕ ಮಾಹಿತಿ ಬಹಿರಂಗ..

ಇನ್ನು ಶೋಭಿತಾ ಶಿವಣ್ಣ ಅವರು ಬರೆದಿದ್ದಾರೆ ಎನ್ನಲಾದ ಸೂಸೈಡ್‌ ನೋಟ್‌ ಕೂಡ ಪತ್ತೆಯಾಗಿದೆ. ಇದನ್ನು ಗಚ್ಚಿಬೌಳಿ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಇದರಲ್ಲಿ ಕೇವಲ ಒಂದೇ ಒಂದು ಲೈನ್‌ಅನ್ನು ಅವರು ಬರೆದಿದ್ದಾರೆ. ಆಕೆಯ ಡೆತ್‌ ನೋಟ್‌ನಲ್ಲಿ 'ಇಫ್‌ ಯು ವಾಂಟ್‌ ಟು ಕಮಿಟ್‌ ಸೂಸೈಡ್‌, ಯು ಕ್ಯಾನ್‌ ಡು ಇಟ್‌' ಎಂದು ಇಂಗ್ಲೀಷ್‌ನಲ್ಲಿ ಬರೆಯಲಾಗಿದೆ. ಇದರರ್ಥ, ಆತ್ಮಹತ್ಯೆ ಮಾಡಿಕೊಳ್ಳಬೇಕು ಎಂದು ನೀನು ಬಯಸಿದ್ದಲ್ಲಿ, ನೀನು ಅದನ್ನು ಮಾಡಬಹುದು ಎನ್ನುವುದಾಗಿದೆ. ಯಾರಿಗಾಗಿ ಅವರು ಈ ಪತ್ರ ಬರೆದಿದ್ದರು ಎನ್ನುವುದು ಇನ್ನೂ ಗೊತ್ತಾಗಿಲ್ಲ. ಪೊಲೀಸರು ಈ ಬಗ್ಗೆಯೂ ತನಿಖೆ ಆರಂಭಿಸಿದ್ದಾರೆ. ಆಕೆಯ ಸಾವಿಗೆ ಖಿನ್ನತೆಯೇ ಪ್ರಮುಖ ಕಾರಣವಾಗಿರಬಹುದು ಎನ್ನಲಾಗಿದೆ.

ಶೋಭಿತಾ ಶಿವಣ್ಣ ಸಾವಿನ ಸುತ್ತ ಅನುಮಾನ, ಪತಿ ಫೋಟೋ ಇನ್‌ಸ್ಟಾದಿಂದ ಡಿಲೀಟ್ ಮಾಡಿದ್ದ ನಟಿ!

Latest Videos
Follow Us:
Download App:
  • android
  • ios