ಸ್ನೇಹಿತ್ ಗೌಡ ಬಿಗ್ ಬಾಸ್ ಮನೆಗೆ ಕಾಲಿಟ್ಟು, ಮನೆ ಒಳಕ್ಕೆ ನಿಧಾನವಾಗಿ ನಡೆದುಕೊಂಡು ಹೋಗುತ್ತ ಎಲ್ಲವನ್ನೂ ಸೂಕ್ಷ್ಮವಾಗಿ ಗಮನಿಸಿಕೊಂಡಿದ್ದಾರೆ. ಅಷ್ಟರಲ್ಲಿ ಮೊದಲ ಸ್ಪರ್ಧಿಯಾಗಿ ಕಾಲಿಟ್ಟಿರುವ ನಮೃತಾ ಗೌಡ ಅವರನ್ನು ನೋಡಿದ್ದಾರೆ. 

ಬಿಗ್ ಬಾಸ್ ಕನ್ನಡ ಸೀಸನ್ 10-ನ ಎರಡನೇ ಸ್ಪರ್ಧಿಯಾಗಿ ಸ್ನೇಹಿತ್ ಗೌಡ ಕಾಲಿಟ್ಟಿದ್ದಾರೆ. 'ನಮ್ಮನೆ ಯುವರಾಣೀ ' ಸೀರಿಯಲ್ ಖ್ಯಾತಿಯ ನಟ. ಜತೆಗೆ, 2016ರಲ್ಲಿ 'ಚಿರವಾದ ನೆನಪು' ಚಿತ್ರದ ಮೂಲಕ ಸ್ಯಾಂಡಲ್‌ವುಡ್ ನಟ ಕೂಡ ಆಗಿದ್ದಾರೆ. . ಇದೀಗ ಬಿಗ್ ಬಾಸ್ ಮನೆಗೆ ಕಾಲಿಟ್ಟಿರುವ ನಟ ಸ್ನೇಹಿತ್ ಗೌಡ, ಯಾವ ರೀತಿಯಲ್ಲಿ ಬಿಗ್ ಬಾಸ್‌ ವೀಕ್ಷಕರನ್ನು ರಂಜಿಸಲಿದ್ದಾರೆ, ಹೇಗೆ ಗೇಮ್ ಆಡಲಿದ್ದಾರೆ ಎಂಬುದನ್ನು ಕಾದು ನೋಡಬೇಕು. 

ಸ್ನೇಹಿತ್ ಗೌಡ ಬಿಗ್ ಬಾಸ್ ಮನೆಗೆ ಕಾಲಿಟ್ಟು, ಮನೆ ಒಳಕ್ಕೆ ನಿಧಾನವಾಗಿ ನಡೆದುಕೊಂಡು ಹೋಗುತ್ತ ಎಲ್ಲವನ್ನೂ ಸೂಕ್ಷ್ಮವಾಗಿ ಗಮನಿಸಿಕೊಂಡಿದ್ದಾರೆ. ಅಷ್ಟರಲ್ಲಿ ಮೊದಲ ಸ್ಪರ್ಧಿಯಾಗಿ ಕಾಲಿಟ್ಟಿರುವ ನಮೃತಾ ಗೌಡ ಅವರನ್ನು ನೋಡಿದ್ದಾರೆ. ತಕ್ಷಣ, ಅವರಿಬ್ಬರೂ ಪರಸ್ಪರ ಹಗ್ ಮಾಡಿಕೊಂಡಿದ್ದಾರೆ. ಅವರಿಬ್ಬರೂ ಮಾತನಾಡಿಕೊಳ್ಳುತ್ತ, ಬಿಗ್ ಬಾಸ್ ಮನೆಯೊಳಕ್ಕೆ ಹೋಗಿ ಇಡೀ ಮನೆಯನ್ನು ನೋಡಲಿದ್ದಾರೆ ಎಂಬುದು ಸಹಜವಾಗಿ ಅರ್ಥ ಮಾಡಿಕೊಳ್ಳಬಹುದಾದ ಸಂಗತಿ. 

ಬಿಗ್ ಬಾಸ್ ಕನ್ನಡದ 9 ಸೀಸನ್ ಈಗಾಗಲೇ ಮುಗಿದಿದ್ದು, ಇದೀಗ 10ನೇ ಸೀಸನ್ ಪ್ರಾರಂಭವಾಗಿದೆ. ಈ ಮೊದಲಿನ ಎಲ್ಲಾ ಶೋಗಳನ್ನು ಹೋಸ್ಟ್ ಮಾಡಿರುವ ಸ್ಯಾಂಡಲ್‌ವುಡ್ ನಟ ಕಿಚ್ಚ ಸುದೀಪ್ ಈ ಸೀಸನ್‌ ಕೂಡ ನಡೆಸಿಕೊಡುತ್ತಿದ್ದಾರೆ. ಈ ಮೂಲಕ ಎಲ್ಲಾ ಭಾಷೆಗಳು ಸೇರಿದಂತೆ ನಟ ಸುದೀಪ್ ಮಾತ್ರ ಎಲ್ಲಾ ಬಿಗ್ ಬಾಸ್ ಸೀಸನ್‌ಗಳನ್ನು ಹೊಟ್ಸ್ ಮಾಡುವ ಮೂಲಕ ಹೊಸ ದಾಖಲೆ ನಿರ್ಮಿಸಿದ್ದಾರೆ. ಬಿಗ್ ಬಾಸ್ ಕನ್ನಡ ಸೀಸನ್ 10, ಕಲರ್ಸ್ ಕನ್ನಡದಲ್ಲಿ ಪ್ರತಿ ದಿನ ರಾತ್ರಿ 9.30 ರಿಂದ ಹಾಗೂ ಶನಿವಾರ ಮತ್ತು ಭಾನುವಾರ ರಾತ್ರಿ 9.00 ರಿಂದ ಪ್ರಸಾರವಾಗಲಿದೆ.