Asianet Suvarna News Asianet Suvarna News

ಮಾಜಿ ಸಚಿವೆ ಸ್ಮೃತಿ ಇರಾನಿ ಸೀರಿಯಲ್​ಗೆ ಕಮ್​ಬ್ಯಾಕ್​? 'ಅನುಪಮಾ'ದಲ್ಲಿ ನಟಿಸ್ತಾರಾ? ಅವರೇ ಹೇಳಿದ್ದೇನು ಕೇಳಿ....

ಸೀರಿಯಲ್​  ಮೂಲಕ ಫೇಮಸ್​ ಆಗಿ ರಾಜಕೀಯ ಪ್ರವೇಶ ಮಾಡಿರುವ ಮಾಜಿ ಸಚಿವೆ ಸ್ಮೃತಿ ಇರಾನಿ ಮತ್ತೆ ಸೀರಿಯಲ್​ಗೆ ಕಮ್​ಬ್ಯಾಕ್​ ಮಾಡ್ತಿದ್ದಾರಾ? ಅವರು ಹೇಳಿದ್ದೇನು? 
 

Smriti Irani stumbled upon the post and quick to quash the speculation about return to serial suc
Author
First Published Oct 18, 2024, 12:44 PM IST | Last Updated Oct 18, 2024, 12:44 PM IST

ರೂಪದರ್ಶಿಯಾಗಿ, ನಟಿಯಾಗಿ ಹಾಗೂ ನಿರೂಪಕಿಯಾಗಿ ನಂತರ ರಾಜಕೀಯಕ್ಕೆ ಪದಾರ್ಪಣೆ ಮಾಡಿದವರು ಸ್ಮೃತಿ ಇರಾನಿ. ಇವರು ನಟಿಯಾಗಿ,  ಮಾಡೆಲ್ ಆಗಿ ಮತ್ತು ದೂರದರ್ಶನ ನಿರ್ಮಾಪಕಿ ಆಗಿ 20 ವರ್ಷಗಳಿಗೂ ಅಧಿಕ ಕಾಲ ಕೆಲಸ ಮಾಡಿದ್ದಾರೆ.  ಯಾವ ಗಾಡ್ ಫಾದರ್ ಇಲ್ಲದೇ ರಾಜಕೀಯ ಹಿನ್ನಲೆಯೂ ಇಲ್ಲದೇ ಸ್ವಂತ ಪರಿಶ್ರಮದಿಂದ ರಾಜಕೀಯ ಜೀವನದಲ್ಲಿ ತಮ್ಮದೇ ಛಾಪು ಮೂಡಿಸಿರುವ ಸ್ಮೃತಿ ಇರಾನಿಗೆ ಕಳೆದ ಬಾರಿಯ ಲೋಕಸಭಾ ಚುನಾವಣೆಯ ಫಲಿತಾಂಶ ಶಾಕ್​  ಕೊಟ್ಟಿದೆ. ಅಮೇಥಿ ಲೋಕಸಭಾ ಕ್ಷೇತ್ರದಿಂದ ಸ್ಮೃತಿ ಪರಾಭವಗೊಂಡಿದ್ದಾರೆ. ಜವಳಿ ಖಾತೆ ಸಚಿವೆಯಾಗಿ ಬಳಿಕ ಮಹಿಳಾ  ಮತ್ತು ಮಕ್ಕಳ ಖಾತೆ ಸಚಿವೆಯಾಗಿದ್ದ ಸ್ಮೃತಿ ಅವರಿಗೆ ಈ ಚುನಾವಣೆಯಿಂದ ಮರ್ಮಾಘಾತವಾಗಿದ್ದಂತೂ ನಿಜ.  ರಾಜಕೀಯಕ್ಕೂ ಬರುವ ಮುನ್ನ ಕಿರುತೆರೆಯಲ್ಲಿ ಫೇಮಸ್​ ಎನ್ನುವುದು ಎಲ್ಲರಿಗೂ ತಿಳಿದದ್ದೇ.  

ಕ್ಯೂಂ ಕಿ ಸಾಸ್​ ಭೀ ಕಭೀ ಬಹೂ ಥಿ ಧಾರಾವಾಹಿಯಲ್ಲಿ ತುಳಸಿಯಾಗಿ ಅಭಿನಯಿಸಿ ಹಲವು ವರ್ಷ ಮನೆಮನೆಗಳಲ್ಲಿನ ಮನಗಳನ್ನು ಗೆದ್ದವರು. ಇರಾನಿ ಸೌಂದರ್ಯ ಸ್ಪರ್ಧೆಯ ಮಿಸ್ ಇಂಡಿಯಾ 1998 ರಲ್ಲಿ ಭಾಗವಹಿಸಿದವರಲ್ಲಿ ಒಬ್ಬರು. ಆಲ್ಬಂ, ಟಿವಿ ಸರಣಿ ನಟನೆಯನ್ನು ಪ್ರಾರಂಭಿಸಿದರು. ಜಿ ಟಿವಿಯಲ್ಲಿ ರಾಮಾಯಣದಲ್ಲಿ ಸೀತಾ ಎಂಬ ಮಹಾಕಾವ್ಯ ಪಾತ್ರವನ್ನು ನಿರ್ವಹಿಸಿದರು. ಆದರೆ, ಚುನಾವಣೆಯಲ್ಲಿ ಸೋತ ಬಳಿಕ ಮತ್ತೆ ಅವರು ಕಿರುತೆರೆಗೆ ಮರಳುತ್ತಿದ್ದಾರೆ ಎನ್ನುವ ಬಗ್ಗೆ ಸೋಷಿಯಲ್​ ಮೀಡಿಯಾದಲ್ಲಿ ಸಾಕಷ್ಟು ಮಾತುಗಳು ಕೇಳಿ ಬರುತ್ತಿವೆ. ರಾಜಕೀಯ ಪ್ರವೇಶ ಮಾಡಿದ ಬಳಿಕ ಬಣ್ಣದ ಲೋಕದಿಂದ ದೂರ ಉಳಿದಿರುವ ಸ್ಮೃತಿ ಅವರು, ಮತ್ತೆ  ‘ಅನುಪಮಾ’ ಸೀರಿಯಲ್​ನಲ್ಲಿ  ಅತಿಥಿ ಪಾತ್ರ ಮಾಡುವ ಮೂಲಕ  ಕಮ್​ಬ್ಯಾಕ್​ ಮಾಡುತ್ತಿದ್ದಾರೆ ಎನ್ನುವ ಸುದ್ದಿ ಸದ್ದು ಮಾಡುತ್ತಿದೆ. ಅಂದಹಾಗೆ ಅನುಪಮಾ ಸೀರಿಯಲ್​ 2020 ರಲ್ಲಿ ಆರಂಭವಾಗಿದ್ದು, TRPಯಲ್ಲಿ ಸದಾ ಅಗ್ರಸ್ಥಾನದಲ್ಲಿದೆ. ದ್ರೌಪದಿ ಪಾತ್ರಧಾರಿ ರೂಪಾಲಿ ಗಂಗೂಲಿ, ಸುಧಾಂಶು ಪಾಂಡೆ ಮತ್ತು ಗೌರವ್ ಖನ್ನಾ ಅವರು ಇದರಲ್ಲಿ ನಟಿಸುತ್ತಿದ್ದಾರೆ. 

ನಾನು ಸ್ಮೃತಿ ಇರಾನಿ... ವಯಸ್ಸು 21... ಎತ್ತರ 5.8 ಅಡಿ... ರಾಜಕೀಯ ಅಂದ್ರೆ ಎನ್ನುತ್ತಲೇ ಕ್ಯಾಟ್​ ವಾಕ್​: ವಿಡಿಯೋ ವೈರಲ್​

ಸೋಷಿಯಲ್​ ಮೀಡಿಯಾದಲ್ಲಿ ಈ ಬಗ್ಗೆ ಪರ-ವಿರೋಧ ನಿಲುವುಗಳೂ ವ್ಯಕ್ತವಾಗುತ್ತಿವೆ. ಇದರ ಮಧ್ಯೆಯೇ, ಖುದ್ದು  ಸ್ಮೃತಿ ಇರಾನಿ ಅವರೇ ಪ್ರತಿಕ್ರಿಯೆ ನೀಡಿದ್ದು, ಇದು ಕೇವಲ ಗಾಳಿ ಸುದ್ದಿ, ಇದರಲ್ಲಿ ಯಾವುದೇ ಸತ್ಯಾಂಸ ಇಲ್ಲ ಎಂದಿದ್ದಾರೆ.   ತಾವು ಯಾವುದೇ ಸೀರಿಯಲ್​ನಲ್ಲಿ ನಟಿಸುವುದಿಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ. ಅಷ್ಟಕ್ಕೂ ಈ ಗಾಳಿ ಸುದ್ದಿ ಹರಡಲು ಕಾರಣವಾಗಿದ್ದು,  ‘ಟೆಲಿ ಚಕ್ಕರ್’ ಎನ್ನುವ ಇನ್​ಸ್ಟಾಗ್ರಾಮ್​ ಖಾಎಯ ಮೂಲಕ. ಇದರಲ್ಲಿ ಸ್ಮೃತಿ ಇರಾನಿ ಅನುಪಮಾ ಸೀರಿಯಲ್​ನಲ್ಲಿ ಪಾತ್ರ ಮಾಡಲಿದ್ದಾರೆ ಎನ್ನಲಾಗಿತ್ತು.  ಅದರ ಬಗ್ಗೆ ಸಾಕಷ್ಟು ಮಂದಿ ತಮಗೆ ಕೇಳುತ್ತಿರುವುದಾಗಿ ಹೇಳಿರುವ ಅವರು, ಇದು ಸುಳ್ಳು ಸುದ್ದಿ ಎಂದಿದ್ದಾರೆ.  

ಅಂದಹಾಗೆ, ಸ್ಮೃತಿ ಇರಾನಿ ಅವರು,  1998ರಲ್ಲಿಯೇ ರಾಜಕೀಯ ಸೇರುವ ಆಸೆ ವ್ಯಕ್ತಪಡಿಸಿದ್ದರು. ಅವರ ಆಸೆ ಈಡೇರಿದ್ದು,  2003 ರಲ್ಲಿ. ಅವರು ಅಧಿಕೃತ ಬಿಜೆಪಿ ಸೇರಿದರು.   2010 ರಿಂದ 2013 ರವರೆಗೆ ಬಿಜೆಪಿ ಮಹಿಳಾ ಮೋರ್ಚಾದ  ರಾಷ್ಟ್ರೀಯ ಅಧ್ಯಕ್ಷರಾಗಿಯೂ ಕರ್ತವ್ಯ ನಿರ್ವಹಿಸಿದರು. ಬಳಿಕ  ಗುಜರಾತಿನಿಂದ ರಾಜ್ಯಸಭೆಗೆ ಆಯ್ಕೆಯಾದರು. 2011 ರಿಂದ 2019 ರವರೆಗೆ ಗುಜರಾತ್‌ನಿಂದಲೇ ರಾಜ್ಯಸಭೆಯಲ್ಲಿ ಸೇವೆ ಸಲ್ಲಿಸಿದ್ದಾರೆ ಇವರು.  2019 ರಿಂದ ಉತ್ತರ ಪ್ರದೇಶದ ಅಮೇಥಿ ಕ್ಷೇತ್ರದಿಂದ ಲೋಕಸಭೆಯ ಸದಸ್ಯರಾಗಿ ಆಯ್ಕೆಯಾದರು. ವೃತ್ತಿಪರ ಚಿತ್ರನಟಿಯಾಗಿ ನಂತರ ರಾಜಕಾರಣ ಪ್ರವೇಶ ಮಾಡಿ   ರಾಜಕಾರಣಿಯಾಗಿ ಯಶಸ್ಸು ಸಾಧಿಸಿದ್ದ ಇವರು ಬಿಜೆಪಿಯ  ವಿವಿಧ ಜವಾಬ್ದಾರಿಗಳನ್ನು ನಿಭಾಯಿಸಿದರು. ಮೊದಲ ರಾಜ್ಯಸಭೆ ಸದಸ್ಯರಾಗಿ, ಬಳಿಕ ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಅವರನ್ನು ಅಮೇಥಿಯಲ್ಲಿ ಸೋಲಿಸಿ ಲೋಕಸಭೆ ಪ್ರವೇಶಿದರು. ಇದೀಗ ಪರಾಭವಗೊಂಡಿದ್ದಾರೆ.  

ಇವ ಯಾವ ಸೀಮೆಯ ಗಂಡು... ಎಂದು ಭರ್ಜರಿ ಸ್ಟೆಪ್ ಹಾಕಿದ ಶ್ರೀರಸ್ತು ಶುಭಮಸ್ತು ಸೊಸೆಯಂದಿರು!
 

Latest Videos
Follow Us:
Download App:
  • android
  • ios