ಬೆಂಗಳೂರು (ಮಾ. 02):  ಜನಪ್ರಿಯ ರಿಯಾಲಿಟಿ ಶೋ ಸರಿಗಮಪ ಕಾರ್ಯಕ್ರಮಕ್ಕೆ ತನ್ನದೇ ಆದ ಇತಿಹಾಸವಿದೆ. ೀ ವೇದಿಕೆಯಿಂದ ಅನೇಕ ಪ್ರತಿಭೆಗಳು ಹೊರ ಬಂದಿದೆ. ಸತತ 15 ಸೀಸನ್ ನ್ನು ಯಶಸ್ವಿಯಾಗಿ ಮುಗಿಸಿ 16 ನೇ ಸೀಸನ್ ಗೆ ಕಾಲಿಟ್ಟಿದೆ. 

'ಯಜಮಾನ'ನಿಗೆ ಸಿಂಪಲ್ ಸುನಿ ನೀಡಿದ ಸಂದೇಶವಿದು!

ಸರಿಗಮಪ ವೇದಿಕೆಯಲ್ಲಿ ಮತ್ತೆ ಮಕ್ಕಳ ಹಾಡಿನ ಕಲರವ ಶುರುವಾಗಲಿದೆ. ಈ ಬಾರಿ ವಿಶೇಷವೆಂದರೆ ಮರಿ ಕೋಗಿಲೆಗಳು ಹಾಡಲು ಬರಲಿದ್ದಾರೆ.  ಇಂದಿನಿಂದ ಮಾ. (02) ರಿಂದ ಪ್ರತಿ ಶನಿವಾರ, ಭಾನುವಾರ ರಾತ್ರಿ 8 ಗಂಟೆಗೆ ಪ್ರಸಾರವಾಗಲಿದೆ. ರಾಜ್ಯದ ಮೂವತ್ತು ಜಿಲ್ಲೆಗಳಿಂದ ಪುಟಾಣಿಗಳು ಆಗಮಿಸಿದ್ದಾರೆ. 

ಟ್ರೆಂಡಿಂಗ್‌ನಲ್ಲಿದೆ ಅಮರ್ ಚಿತ್ರದ ಟ್ರೇಲರ್!

 ಎಂದಿನಂತೆ ಮಹಾಗುರುಗಳಾಗಿ ಹಂಸಲೇಖ, ತೀರ್ಪುಗಾರರಾಗಿ ವಿಜಯ್ ಪ್ರಕಾಶ್, ರಾಜೇಶ್ ಕೃಷ್ಣನ್ ಹಾಗೂ ಅರ್ಜುನ್ ಜನ್ಯ ಇರಲಿದ್ದಾರೆ. ಅನುಶ್ರೀ ನಿರೂಪಣೆ ಮಾಡಲಿದ್ದಾರೆ.