ಅಭಿಷೇಕ್ ಅಂಬರೀಶ್‌ಗೆ ವಾರ್ಮ್‌ ವೆಲ್‌ಕಮ್‌!

ಜೂನಿಯರ್‌ ರೆಬೆಲ್‌ಸ್ಟಾರ್‌ ಅಭಿಷೇಕ್‌ ಅಂಬರೀಷ್‌ ಅಭಿನಯದ ‘ಅಮರ್‌’ ಚಿತ್ರದ ‘ಟ್ರೇಲರ್‌’ ಹೊರಬಂದಿದೆ. ಶುಕ್ರವಾರ ಬೆಳಗ್ಗೆ ಅತ್ತ ಚಿತ್ರಮಂದಿರಗಳಲ್ಲಿ ದರ್ಶನ್‌ ಅಭಿನಯದ ‘ಯಜಮಾನ’ ಚಿತ್ರದ ಜೊತೆಗೆ ಟ್ರೈಲರ್‌ ಪ್ರದರ್ಶನವಾದ ಬೆನ್ನಲ್ಲೇ ‘ಅಮರ್‌’ ಚಿತ್ರ ತಂಡ ಆನ್‌ಲೈನ್‌ನಲ್ಲೂ ಟ್ರೇಲರ್‌ ಬಿಡುಗಡೆ ಮಾಡಿತ್ತು. ಅದು ಸೋಷಲ್‌ ಮೀಡಿಯಾಕ್ಕೆ ಬಂದ ಕೆಲವೇ ಗಂಟೆಗಳಲ್ಲಿ ವೈರಲ್‌ ಆಗಿದ್ದು, ಟ್ರೆಂಡಿಂಗ್‌ನಲ್ಲಿದೆ. ಲಕ್ಷಗಟ್ಟಳೆ ಮಂದಿ ಈ ಟ್ರೇಲರ್‌ ನೋಡಿದ್ದಾರೆ.

‘ಆರು ಗಂಟೆ ಬದುಕಿರು, ಆರು ವಾರ ಬದುಕಿರು, ಆರು ವರ್ಷನೇ ಬದುಕಿರು, ನನ್ನ ಲೈಫ್‌ನಲ್ಲಿ ನೀನೋಬ್ಬಳೆ...’ ಎನ್ನುವ ಸೆಂಟಿಮೆಂಟ್‌ ಡೈಲಾಗ್‌ ಮೂಲಕ ಅಭಿಷೇಕ್‌ ಅಂಬರೀಷ್‌ ಪಕ್ಕಾ ಲವರ್‌ಬಾಯ್‌ ಆಗಿ ತೆರೆಮೇಲೆ ಕಾಣಿಸಿಕೊಳ್ಳುವುದು ಗ್ಯಾರಂಟಿ ಆಗಿದೆ. ಚಿತ್ರದ ಶೀರ್ಷಿಕೆಗೆ ತಕ್ಕಂತೆ ಅಮರ ಪ್ರೀತಿಯ ಕತೆಯಿದೆ. ಸದ್ಯಕ್ಕೆ ಅದು ಈ ಟ್ರೇಲರ್‌ನಲ್ಲಿ ರಿವೀಲ್‌ ಆಗಿದೆ. ಹಾಗೊಂದು ಪ್ರೀತಿಯ ಕತೆಗೆ ಸೆಂಟಿಮೆಂಟ್‌ ಡೈಲಾಗ್‌ ಪೊಣಿಸಿಕೊಂಡು ಜಾದು ಮಾಡಲು ಹೊರಟಿದ್ದಾರೆ ನಿರ್ದೇಶಕ ನಾಗಶೇಖರ್‌. ನಾಯಕ ನಟ ಅಭಿಷೇಕ್‌ ಅಂಬರೀಷ್‌ ಹಾಗೂ ನಾಯಕಿ ತನ್ಯಾಹೋಪ್‌ ನಡುವಿನ ಪ್ರೀತಿಯ ಸನ್ನಿವೇಶಗಳು, ಆ ಸನ್ನಿವೇಶಗಳು ಕಣ್ಮನ ಸೆಳೆಯುವಂತೆ ಮಾಡಿದ ವಿದೇಶದ ಸುಂದರ ತಾಣಗಳು ಟ್ರೇಲರ್‌ನ ಹೈಲೈಟ್ಸ್‌.

ರೆಬೆಲ್ ಬಾಯ್ ಟೂ ಲವರ್ ಬಾಯ್ 'ಅಮರ್' ಟ್ರೈಲರ್!