ಡಾ.ವಿಠಲ್ ರಾವ್, ಫೇಮಸ್ ಇನ್ ಸರ್ಜರಿ ಆ್ಯಂಡ್ ಭರ್ಜರಿ ಎನ್ನುತ್ತಾ ವೀಕ್ಷಕರನ್ನು ನಗೆಗಡಲಲ್ಲಿ ತೇಲಿಸುತ್ತಿದ್ದ ಸಿಲ್ಲಿ ಲಲ್ಲಿ ಧಾರಾವಾಹಿ ಮತ್ತೆ ಪ್ರಸಾರವಾಗಲಿದೆ. ಆ ಮೂಲಕ ಏನೋ ಆತಂಕದಲ್ಲಿರುವ ಜನರಿಗೆ ತುಸು ನಗೆ ಔಷಧ ಸಿಗುವಂತಾಗುವುದಂತೂ ಗ್ಯಾರಂಟಿ.
ಈಗಾಗಲೇ ದೂರದರ್ಶನದಲ್ಲಿ ರಾಮಾಯಣ ಮತ್ತು ಮಹಾಭಾರತ ಮರುಪ್ರಸಾರವಾಗುತ್ತಿದ್ದು ನೋಡುಗರಿಂದ ಭರ್ಜರಿ ರೆಸ್ಪಾನ್ಸ್ ದೊರಕಿದೆ . ಇದೀಗ ಇತರೆ ಚಾನೆಲ್ ಗಳೂ ಕೂಡ ಇದನ್ನೇ ಅನುಸರಿಸುತ್ತಿವೆ . ಅದರ ಮೊದಲ ಹೆಜ್ಜೆಯಾಗಿ ಸಿಲ್ಲಿಲಲ್ಲಿಯು ಮರುಪ್ರಸಾರವಾಗುತ್ತಿರುವುದು ಜನರಿಗೆ ಹೆಚ್ಚು ಸಂತಸವನ್ನುಂಟುಮಾಡಿದೆ .
ಶಾರುಖ್ ಮಕ್ಕಳಿಗೆ ಟೀಚರ್ ಅಂತೆ ಸಿಲ್ಲಿ ಲಲ್ಲಿ ಈ ನಟಿ
ಸಿಲ್ಲಿಲಲ್ಲಿಯ ಮರುಪ್ರಸಾರದ ವಿಷ್ಯವನ್ನು ಡಾಕ್ಟರ್ ವಿಠಲ್ ರಾವ್ ಖ್ಯಾತಿಯ ರವಿಶಂಕರ್ ಗೌಡ ಅವರು ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಖುಷಿಯಿಂದ ಶೇರ್ ಮಾಡಿಕೊಂಡಿದ್ದಾರೆ . ರವಿಶಂಕರ್ ಗೌಡ ಅವ್ರಿಗೆ ಈ ಧಾರಾವಾಹಿ ಮತ್ತು ಆ ಪಾತ್ರ ಸಾಕಷ್ಟು ಜನಪ್ರಿಯತೆ ತಂದುಕೊಟ್ಟಿದೆ ಎನ್ನುವುದು ಮತ್ತೊಂದು ವಿಶೇಷ .
ಕಲರ್ಸ್ ಕನ್ನಡದಲ್ಲಿ ಸೂಪರ್ ಹಿಟ್ ಧಾರಾವಾಹಿ
