ಬಾನದಾರಿಯಲ್ಲಿ ಸೂರ್ಯ... ಹಾಡು ಹೇಳಿ ಸೀತಮ್ಮನನ್ನು ಮಲಗಿಸಿದ ಸಿಹಿ: ಸೋ ಕ್ಯೂಟ್ ಎಂದ ಫ್ಯಾನ್ಸ್
ಬಾನದಾರಿಯಲ್ಲಿ ಸೂರ್ಯ... ಹಾಡು ಹೇಳುತ್ತಾ ಸೀತಮ್ಮನನ್ನು ಮಲಗಿಸಿದ್ದಾಳೆ ಸಿಹಿ. ವಿಡಿಯೋ ನೋಡಿ ಕಮೆಂಟಿಗರು ಏನೆಲ್ಲಾ ಹೇಳಿದ್ರು ನೋಡಿ...
ಸೀತಮ್ಮಾ ಎಂದಾಕ್ಷಣ ಎಲ್ಲರ ಕಣ್ಣಮುಂದೆ ಬರುವುದು ಸೀತಾರಾಮ ಸೀರಿಯಲ್ ಸಿಹಿ. ಅಮ್ಮನನ್ನು ಸೀತಮ್ಮಾ ಎಂದು ಮುದ್ದುಮುದ್ದಾಗಿ ಕರೆಯುತ್ತಲೇ ಎಲ್ಲರ ಮನೆ ಗೆದ್ದಿದ್ದಾಳೆ ಈ ಕಂದ. ಐದು ವರ್ಷವಿರುವಾಗಲೇ ವಯಸ್ಸಿಗೂ ಮೀರಿದ ನಟನೆಯ ಮೂಲಕ ಲಕ್ಷಾಂತರ ಅಭಿಮಾನಗಳ ಮನದಲ್ಲಿ ನೆಲೆಸಿರುವ ನೇಪಾಳಿಯ ಈ ಪುಟಾಣಿ ಇದೀಗ ಸೀತಮ್ಮನನ್ನು ಬಾನದಾರಿಯಲ್ಲಿ ಸೂರ್ಯ ಜಾರಿ ಹೋದ ಹಾಡಿನ ಮೂಲಕ ಮಲಗಿಸುತ್ತಿರುವ ರೀಲ್ಸ್ ಮಾಡಿದ್ದಾಳೆ. ಇದು ರೀಲ್ಸ್ ಆದರೂ ನೈಜತೆ ತುಂಬಿರುವಂತೆ ನಟಿಸುವ ಸಿಹಿಯನ್ನು ನೋಡಿ ಎಲ್ಲರೂ ಸೋ ಸ್ವೀಟ್ ಎನ್ನುತ್ತಿದ್ದಾರೆ. ನಿಜವಾಗಿಯೂ ಅಮ್ಮ-ಮಗಳಂತೆಯೇ ಇದ್ದೀರಿ ಎಂದು ಹಲವರು ಹೇಳಿದರೆ, ಇಂಥ ಮಗಳನ್ನು ಪಡೆದ ಅಮ್ಮ ನಿಜಕ್ಕೂ ಧನ್ಯ ಎನ್ನುತ್ತಿದ್ದಾರೆ ಇನ್ನು ಕೆಲವರು.
ಅಷ್ಟಕ್ಕೂ ಇದೀಗ ಸೀತಾ-ರಾಮ ಸೀರಿಯಲ್ನಲ್ಲಿ ಸೀತೆ ಮತ್ತು ರಾಮನ ನಡುವೆ ಸಿಹಿಯೇ ಸೇತುವೆಯಾಗಿದ್ದಾಳೆ. ತನ್ನ ಪ್ರೀತಿಯನ್ನು ಇನ್ನೂ ಹೇಳಿಕೊಳ್ಳಲಾಗದೇ ರಾಮ್ ಚಡಪಡಿಸುತ್ತಿದ್ದರೆ, ಸೀತಾಳಿಗೆ ಇದರ ಅರಿವೇ ಇಲ್ಲ. ಆಕೆ ರಾಮ್ ಕೇವಲ ತನ್ನ ಬೆಸ್ಟ್ ಫ್ರೆಂಡ್ ಅಂದಷ್ಟೇ ಅಂದುಕೊಂಡಿದ್ದಾಳೆ. ಶ್ರೀಮಂತನಾದರೂ ಇಷ್ಟು ದಿನ ತನ್ನದೇ ಕಚೇರಿಯಲ್ಲಿ ನೌಕರನಂತೆ ದುಡಿಯುತ್ತಿದ್ದಾಗ ಆತನನ್ನು ಫ್ರೆಂಡ್ ಮಾಡಿಕೊಂಡಿದ್ದ ಸೀತಾಳಿಗೆ ನಿಜ ವಿಷಯ ಗೊತ್ತಾಗಿ ಸಿಟ್ಟು ನೆತ್ತಿಗೇರಿತ್ತು. ತನ್ನ ಕಂಪೆನಿಯ ಯಜಮಾನನ ಜೊತೆ ತನ್ನಂಥ ಸಾಮಾನ್ಯ ವರ್ಗದವಳು ಫ್ರೆಂಡ್ ಆಗಲು ಸಾಧ್ಯವೇ ಇಲ್ಲ ಎಂದು ಮಾತು ಬಿಟ್ಟಿದ್ದಳು. ಇವರಿಬ್ಬರ ನಡುವೆ ಸಿಹಿ ಸೇತುವೆಯಾಗಿ ಕೊನೆಗೂ ಸೀತಾಳ ಕೋಪ ಕರಗಿದೆ.
ರಿಯಲ್ ಲೈಫ್ನಲ್ಲೂ ನೋವುಂಡ ಸೀತಾರಾಮ ಸಿಹಿಯ ವಿಶೇಷ ವಿಡಿಯೋ ರಿಲೀಸ್
ಅದೇ ಇನ್ನೊಂದೆಡೆ, ವಿಲನ್ ರುದ್ರಪ್ರತಾಪನನ್ನು ರಾಮ್ನ ಚಿಕ್ಕಮ್ಮ ಜೈಲಿನಿಂದ ಬಿಡಿಸಿದ್ದಾಳೆ. ಸೀತಾಳಿಗೆ ಪ್ರೀತಿ ವಿಷಯ ತಿಳಿಸಲು ರಾಮ್ ಅಜ್ಜ ಒಂದು ವಾರದ ಗಡುವು ನೀಡಿದ್ದಾನೆ. ಸೀತಾಳ ಮನೆಗೆ ಹೋಗಿ ಪಾಲಕರ ಬಳಿ ಮಾತನಾಡುವುದಾಗಿ ರಾಮ್ ಹೇಳಿದ್ದಾನೆ. ಆದರೆ ರುದ್ರಪ್ರತಾಪ್ ಸೀತಾ ಮತ್ತು ರಾಮ್ ಒಟ್ಟಿಗೇ ಇರುವ ಫೋಟೋ ನೋಡಿ ಕೆಂಡಾಮಂಡಲ ಆಗಿದ್ದಾನೆ. ಇಬ್ಬರನ್ನೂ ಬೇರೆ ಬೇರೆ ಮಾಡುವ ಪ್ಲ್ಯಾನ್ ಮಾಡಿದ್ದಾನೆ. ಮುಂದೇನಾಗುತ್ತದೋ ಕಾದು ನೋಡಬೇಕಿದೆ. ಸೀರಿಯಲ್ ಏನೇ ಇರಲಿ... ಪುಟಾಣಿ ಸಿಹಿ ಮಾತ್ರ ಎಲ್ಲರ ಮನಸ್ಸನ್ನು ಗೆಲ್ಲುತ್ತಿದ್ದಾಳೆ, ಕದಿಯುತ್ತಿದ್ದಾಳೆ.
ಅಂದಹಾಗೆ, ಸಿಹಿಯ ನಿಜವಾದ ಹೆಸರು ರೀತು ಸಿಂಗ್. ಈಕೆ ನೇಪಾಳದವಳು. ನೇಪಾಳ ಮೂಲದ ರಿತು, ತಾಯಿ ಜೊತೆಗೆ ಬೆಂಗಳೂರಿನಲ್ಲಿ ನೆಲೆಸಿದ್ದಾಳೆ. ಸೀತಾರಾಮ ಸೀರಿಯಲ್ಗೂ ಸಿಹಿ ಬಾಳಿಗೂ ಸಾಮ್ಯತೆ ಇದೆ. ಹೌದು. ಸೀತಾರಾಮ ಸೀರಿಯಲ್ ರೀತಿಯಲ್ಲಿಯೇ ಈಕೆಯ ನಿಜ ಜೀವನದ ಕೂಡ ಇದೆ. ಸೀತಾರಾಮ ಸೀರಿಯಲ್ನಲ್ಲಿ ಈಕೆಗೆ ಅಪ್ಪ ಇಲ್ಲ. ಅಮ್ಮನೇ ಸರ್ವಸ್ವ. ಅದೇ ರೀತಿ ರಿತು ರಿಯಲ್ ಲೈಫ್ ಸ್ಟೋರಿ ಕೂಡ. ಇದರ ಬಗ್ಗೆ ಖುದ್ದು ಅವರ ಅಮ್ಮನೇ ಹೇಳಿಕೊಂಡಿದ್ದರು. ಅದೇನೆಂದರೆ, ರಿತು ರಿಯಲ್ ಅಪ್ಪ ದೂರ ಆಗಿದ್ದಾರೆ. ಈಕೆಯ ರಿಯಲ್ ಲೈಫ್ನಲ್ಲಿಯೂ ಅಮ್ಮನೇ ಎಲ್ಲಾ. ಪತಿಯಿಂದ ದೂರವಾಗಿರುವ ರಿತು ಅಪ್ಪ, ಒಬ್ಬಂಟಿಯಾಗಿ ಮಗಳನ್ನು ಸಾಕುತ್ತಿದ್ದಾಳೆ. ರಿಯಾಲಿಟಿ ಷೋನಲ್ಲಿ ಈ ಬಗ್ಗೆ ರವಿಚಂದ್ರನ್ ಕೂಡ ಮಾತನಾಡಿದ್ದರು. ಹೋದವರು ಹೋಗಲಿ ಬಿಟ್ಟೋದವನು ಬಿಟ್ಟೋದ. ಗಂಡ ಇಲ್ಲ ಅಂತ ಅಳಬಾರದು. ಗಂಡ ಬಿಟ್ಟು ಹೋಗಿದ್ದಕ್ಕೆ ಇವತ್ತು ನಿಮ್ಮ ಮಗು ಇಷ್ಟೊಂದು ಪ್ರತಿಭಾವಂತೆ ಆಗಿರೋದು. ರಿತು ತುಂಬ ಪ್ರೌಢಿಮೆ ಇರುವ ಗೊಂಬೆ. ಯಾರೇ ಚಾಕಲೇಟ್ ಕೊಟ್ರೂ, ಎಷ್ಟೇ ಒತ್ತಾಯ ಮಾಡಿದ್ರೂ ಅವಳು ಚಾಕೋಲೇಟ್ ತಿನ್ನಲ್ಲ. ತುಂಬ ಒತ್ತಾಯ ಮಾಡಿದ್ರೆ ಮೊದಲು ನಮಗೆ ಚಾಕೋಲೇಟ್ ತಿನಿಸಿ ಆಮೇಲೆ ಅವಳು ತಿಂತಾಳೆ ಎಂದು ರವಿಚಂದ್ರನ್ ಹೇಳಿದ್ದರು.
ಹೆಂಡ್ತಿಯನ್ನು ಖುರ್ಚಿ ಮೇಲೆ ಕುಳ್ಳರಿಸುವಷ್ಟರಲ್ಲಿ ಈ ಗಂಡಂದಿರು ಸುಸ್ತೋ ಸುಸ್ತು! ಪತ್ನಿ ಅಂದ್ರೆ ಸುಮ್ನೆನಾ?