ಹೆಂಡ್ತಿಯನ್ನು ಖುರ್ಚಿ ಮೇಲೆ ಕುಳ್ಳರಿಸುವಷ್ಟರಲ್ಲಿ ಈ ಗಂಡಂದಿರು ಸುಸ್ತೋ ಸುಸ್ತು! ಪತ್ನಿ ಅಂದ್ರೆ ಸುಮ್ನೆನಾ?
ಪ್ರೇಮ ಸಂಗಮ ರಿಯಾಲಿಟಿ ಷೋನಲ್ಲಿ ಸ್ಪರ್ಧಿಗಳು ತಂತಮ್ಮ ಹೆಂಡ್ತಿಯನ್ನು ಎತ್ತಿಕೊಂಡು ಜೋಡಿಸಿಟ್ಟ ಖುರ್ಚಿ ಮೇಲೆ ಕುಳ್ಳರಿಸೋ ಟಾಸ್ಕ್ ತೆಗೆದುಕೊಂಡಿದ್ದಾರೆ. ಹೇಗಿದೆ ನೋಡಿ ಅವರ ಕಸರತ್ತು!
ಖುರ್ಚಿ ಮೇಲೆ ಖುರ್ಚಿ ಹಾಕಿ ಹೆಂಡ್ತಿಯನ್ನು ಅದರ ಮೇಲೆ ಕುಳ್ಳರಿಸಲು ಹೇಳಿದ್ರೆ ಹೇಗಿರತ್ತೆ? ಹಲವು ಗಂಡಸರಿಗೆ ಹೆಂಡ್ತಿಯನ್ನು ಎತ್ತಿಕೊಳ್ಳೋದೇ ಕಷ್ಟ, ಇನ್ನು ಎತ್ತರದ ಖುರ್ಚಿ ಮೇಲೆ ಕುಳಿಸು ಎಂದ್ರೆ ಅದು ಸಾಧ್ಯನಾ? ಇನ್ನು ಕೆಲವು ಗಂಡಂದಿರು ಬಳುಕು ಬಳ್ಳಿಯಂತೆ ಇರುವ ತಮ್ಮ ಪತ್ನಿಯನ್ನು ಸುಲಭದಲ್ಲೇನೋ ಎತ್ತಿಬಿಡಬಹುದು. ಒಂದಿಷ್ಟು ಎತ್ತರದ ಖುಚಿಯಲ್ಲಿಯೂ ಕುಳ್ಳರಿಸಬಹುದು. ಆದರೆ ಆ ಖುರ್ಚಿಯ ಸಂಖ್ಯೆ ಏರುತ್ತಾ ಹೋದ್ರೆ ಹೇಗಿರಬೇಡ... ನೋಡುಗರಿಗೆ ಖುಷಿಯೋ ಖುಷಿ, ಈ ಗಂಡ-ಹೆಂಡ್ತಿಯರ ಪಾಡು ಮಾತ್ರ ಯಾರಿಗೂ ಬೇಡ ಅಲ್ವಾ? ಬೆಕ್ಕಿಗೆ ಚೆಲ್ಲಾಟ, ಇಲಿಗೆ ಪ್ರಾಣ ಸಂಕಟ ಎನ್ನೋ ಸ್ಥಿತಿ..
ಹೌದು. ಇಂಥದ್ದೊಂದು ನಕ್ಕು ನಗಿಸುವ ಪ್ರೊಮೋ ಒಂದನ್ನು ಕಲರ್ಸ್ ಕನ್ನಡ ವಾಹಿನಿ ಶೇರ್ ಮಾಡಿದೆ. ಪ್ರೇಮ ಸಂಗಮ ರಿಯಾಲಿಟಿ ಷೋನಲ್ಲಿ ಗಂಡನಿಗೆ ಹೆಂಡ್ತಿಯ ಚಾಲೆಂಜ್ ನೀಡಲಾಗಿದೆ. ಇದರಲ್ಲಿ ಪತಿ ತಮ್ಮ ಪತ್ನಿಯನ್ನು ಎತ್ತಿಕೊಂಡು ಒಂದರ ಮೇಲೊಂದರಂತೆ ಕುಳ್ಳರಿಸಬೇಕು. ಸ್ಪರ್ಧೆಯಲ್ಲಿ ವಿನ್ ಆಗಬೇಕು ಎಂದರೆ ಈ ಸರ್ಕಸ್ ಮಾಡ್ಲೇ ಬೇಕು. ಹಾಗಿದ್ದರೆ ಗಂಡಂದಿರು ಹೇಗೆಲ್ಲಾ ಕಷ್ಟಪಟ್ಟರು ಎನ್ನೋದನ್ನು ಪ್ರೊಮೋದಲ್ಲಿ ನೋಡಿ.
ಈ ಎಲ್ಲ ಪತಿ-ಪತ್ನಿಯ ನಡುವೆ ಗಮನ ಸೆಳೆಯೋ ಜೋಡಿ ಜೋಡಿ ನಂಬರ್ 1 ರಿಯಾಲಿಟಿ ಷೋನಲ್ಲಿ ಮೊದಲ ಬಹುಮಾನ ಗಳಿಸಿರೋ ಶಶಿ ಹಾಗೂ ಲಾವಣ್ಯ ಜೋಡಿ. ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರ ಆಗ್ತಿರೋ ಶ್ರೀರಸ್ತು ಶುಭಮಸ್ತು ಸೀರಿಯಲ್‌ನಲ್ಲಿ ಪೂರ್ಣಿ ಪಾತ್ರಧಾರಿಯ ನಟನೆ ಹಾಗೂ ಪಾತ್ರ ಎಲ್ಲರಿಗೂ ಅಚ್ಚುಮೆಚ್ಚು. ಹೊಸದಾಗಿ ಮದುವೆಯಾಗಿ ಬಂದ ಅತ್ತೆ ತುಳಸಿಗೆ ಪೂರ್ಣಿ ತೋರುವ ಪ್ರೀತಿಗೆ ಪ್ರೇಕ್ಷಕರು ತಲೆದೂಗಿದ್ದಾರೆ. ಇದ್ದರೆ ಇಂಥ ಸೊಸೆ ಇರಬೇಕು ಎನ್ನುತ್ತಿದ್ದಾರೆ. ಸದಾ ಗಂಭೀರವಾಗಿ, ಗಂಟು ಮುಖ ಮಾಡಿಕೊಂಡಿರುವ ಪತಿ ಅವಿಯನ್ನೂ ಬದಲಿಸಿ, ಆತನಲ್ಲಿ ಪ್ರೇಮದ ಧಾರೆಯನ್ನೇ ಸುರಿಸಿದ್ದಾಳೆ ಪೂರ್ಣಿ. ಅಂದಹಾಗೆ ಪೂರ್ಣಿಯ ನಿಜವಾದ ಹೆಸರು ಲಾವಣ್ಯ. ಇವರ ರಿಯಲ್ ಪತಿಯ ಹೆಸರು ಶಶಿ. ಶಶಿ ಹಾಗೂ ಲಾವಣ್ಯ ಅವರದ್ದು ಲವ್ ಕಮ್ ಅರೇಂಜ್ಡ್ ಮ್ಯಾರೇಜ್. ಇವರು ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರ ಆಗ್ತಿರೋ ಜೋಡಿ ನಂಬರ್ 1 ಕಾರ್ಯಕ್ರಮದಲ್ಲಿ ಕಾಣಿಸಿಕೊಂಡು ಅದನ್ನು ವಿನ್ ಕೂಡ ಆಗಿದ್ದಾರೆ.
ಮೊದಲಿನಿಂದಲೂ ಶಶಿ ಮತ್ತು ಲಾವಣ್ಯ ಜೋಡಿ ನಂಬರ್ 1 ವೇದಿಕೆಯಲ್ಲಿ ಪ್ರೇಕ್ಷಕರ ಮನ ಗೆದ್ದಿತ್ತು. ಈಗಲೂ ಅವರು ಪ್ರೇಮ ಸಂಗಮದಲ್ಲಿ ನೃತ್ಯದ ಮೂಲಕ ವೇದಿಕೆ ಮೇಲೆ ಪ್ರೇಮದ ಕಿಚ್ಚು ಹೊತ್ತಿಸಿದ್ದಾರೆ. ಇದರ ಪ್ರೊಮೋ ಅನ್ನು ವಾಹಿನಿ ಸೋಷಿಯಲ್ ಮೀಡಿಯಾದಲ್ಲಿ ಹರಿಬಿಟ್ಟಿದೆ. ನಂತರ ಶಶಿ ಮತ್ತು ಲಾವಣ್ಯ ಜೊತೆಗೆ ಉಳಿದ ಸ್ಪರ್ಧಿಗಳಿಗೆ ಖುರ್ಚಿಯ ಸ್ಪರ್ಧೆ ನಡೆಸಲಾಗಿದೆ. ಭಾನುವಾರ ಮಧ್ಯಾಹ್ನ 4.30ಕ್ಕೆ ಜೀ ಕನ್ನಡ ವಾಹಿನಿಯಲ್ಲಿ ಇದು ಪ್ರಸಾರ ಆಗಲಿದೆ.
ಪ್ರೇಮಿಗಳ ದಿನದಂದು ರಾಮ್‌ನಿಗೆ ಸೀತಾ ಪ್ರಪೋಸ್: ಅರೆರೆ... ಪ್ರಾರ್ಥನಾ ಕಥೆ ಏನು ಕೇಳಿದ ಫ್ಯಾನ್ಸ್!