ಸಿಹಿ ಮತ್ತು ಶ್ರಾವಣಿ ಕಿಡ್‌ನ್ಯಾಪ್‌ ಆಗಿದ್ದು, ಅಪಹರಣಕಾರರ ಪೆದ್ದುತನಕ್ಕೆ  ನೆಟ್ಟಿಗರು ಕಾಲೆಳೆಯುತ್ತಿದ್ದಾರೆ. ಅಷ್ಟಕ್ಕೂ ಆಗಿದ್ದೇನು? 

ಸಿಹಿ ಕೊನೆಗೂ ಸೀತಾ ಮತ್ತು ರಾಮ್‌ ಕೈ ಸೇರಿದ್ದಾಳೆ. ಕಾನೂನು ಸಮರದಲ್ಲಿ ಸೀತಾ-ರಾಮ ಗೆದ್ದಿದ್ದಾರೆ. ಕಾನೂನಿನ ಮುಂದೆ ಮಾತೃವಾತ್ಸಲ್ಯಕ್ಕೆ ಜಯವಾಗಿದೆ. ಸೀತಾಳಿಂದ ಸಿಹಿಯನ್ನು ದೂರ ಮಾಡುವ ಶಾಲಿನಿ ನಾಟಕ ಕೊನೆಗೂ ಸೋತಿದೆ. ಅದೇ ಇನ್ನೊಂದೆಡೆ ಶ್ರಾವಣಿ ಕೂಡ ಸೀತಾ-ರಾಮ ಪರವಾಗಿ ಇದ್ದಳು. ಇತ್ತ ಶಾಲಿನಿಯನ್ನು ಮುಗಿಸಲು ಮನೆಯಲ್ಲಿ ವಿಜಯಾಂಬಿಕಾ ಪ್ಲ್ಯಾನ ಮಾಡುತ್ತಿದ್ರೆ, ಅತ್ತ ಸಿಹಿಯನ್ನು ಮುಗಿಸಲು ಸಂಚು ರೂಪಿಸ್ತಾ ಇದ್ದಾಳೆ ಭಾರ್ಗವಿ. ಸಿಹಿಯನ್ನು ದೂರ ಮಾಡಲು ಶಾಲಿನಿ ಜೊತೆ ಕೈಜೋಡಿಸಿ ಸಾಕಷ್ಟು ಕಿತಾಪತಿ ಮಾಡಿದ್ದಳು ಭಾರ್ಗವಿ. ಆದರೆ ಅದ್ಯಾವುದೂ ಯಶಸ್ವಿ ಆಗಲಿಲ್ಲ. ಕೋರ್‍ಟ್‌ನಲ್ಲಿಯೂ ಸೀತಾಳಿಗೇ ಜಯ ಆಗಿದ್ದನ್ನು ಸಹಿಸಲು ಭಾರ್ಗವಿಗೆ ಸಾಧ್ಯವಾಗ್ತಿಲ್ಲ. 

ಇದೀಗ ವಿಜಯಾಂಬಿಕಾ ಮತ್ತು ಭಾರ್ಗವಿ ಸೇರಿ ಸಿಹಿ ಮತ್ತು ಶ್ರಾವಣಿಯನ್ನು ಅಪಹರಣ ಮಾಡಿಸಿದ್ದಾರೆ. ಸಿಹಿಗೆ ಕಿಡ್ನಾಪ್‌ ಏನೂ ಹೊಸತು ಅಲ್ಲ. ಅವಳು ಇದಾಗಲೇ ಸಾಕಷ್ಟು ಬಾರಿ ಅಪಹರಣಕ್ಕೆ ಒಳಗಾಗಿದ್ದು, ವೀಕ್ಷಕರಿಗೂ ತಲೆಚಿಟ್ಟು ಹಿಡಿದು ಹೋಗಿದೆ. ಅತ್ತ ಶ್ರಾವಣಿ ಭಯದಿಂದ ನಲುಗುತ್ತಿದ್ದರೆ, ಸಿಹಿಯೇ ಅವಳಿಗೆ ಧೈರ್‍ಯ ಹೇಳುತ್ತಿದ್ದಾಳೆ. ನನ್ನ ಅಪ್ಪ-ಅಮ್ಮ ಬಂದು ಕರೆದುಕೊಂಡು ಹೋಗ್ತಾರೆ ಅನ್ನುತ್ತಿದ್ದಾಳೆ. ಕೊನೆಗೆ ಪ್ಲ್ಯಾನ್‌ ಮಾಡುವ ಸಿಹಿ ಹಸಿವೆ ಎಂದಿದ್ದಾಳೆ. ಅದಕ್ಕೆ ಅಪಹರಣಕಾರರು ಏನು ಬೇಕು ಎಂದಾಗ, ಆನ್‌ಲೈನ್‌ನಲ್ಲಿ ಆರ್ಡರ್‍‌ ಮಾಡಿದ್ರೆ ಬರುತ್ತೆ ಎಂದಿದ್ದಾರೆ. ಹೀಗೆ ಹೇಳ್ತಿದ್ದಂತೆಯೇ ಅಪಹರಣಕಾರರು ಫೋನ್ ಕೊಟ್ಟಿದ್ದಾರೆ.

ನನ್ನ ನಟನೆ ನೋಡ್ಲಿಲ್ಲ, ಟ್ಯಾಲೆಂಟ್‌ ನೋಡ್ಲಿಲ್ಲ ಎನ್ನುತ್ತಲೇ ಸಿನಿಮಾದಲ್ಲಿ ಅವಕಾಶ ಸಿಕ್ಕ ಬಗ್ಗೆ ಮಿಲನಾ ಓಪನ್‌ ಮಾತು!

ಆಗ ಶ್ರಾವಣಿ ಸುಬ್ರಹ್ಮಣ್ಯನಿಗೆ ಕರೆ ಮಾಡಿದ್ದಾಳೆ. ಯಾವುದೋ ನಂಬರ್‍‌ನಿಂದ ಕರೆ ಬಂದಿರುವುದನ್ನು ನೋಡಿ ಸುಬ್ಬು ವಾಪಸ್‌ ಮಾಡಿದಾಗ ರಿಸೀವ್‌ ಮಾಡಲಿಲ್ಲ. ಇದರಿಂದ ರಾಮ್ ಮತ್ತು ಸುಬ್ಬುಗೆ ಡೌಟ್‌ ಬಂದು ಇಬ್ಬರೂ ಸಿಹಿ ಮತ್ತು ಶ್ರಾವಣಿಯನ್ನುಹುಡುಕುವ ಪ್ರಯತ್ನದಲ್ಲಿದ್ದಾರೆ. ಸುಬ್ಬು ನವಾಬ್‌ನಂತೆ ವೇಷ ಧರಿಸಿದ್ರೆ, ರಾಮ್ ಬುರ್ಖಾ ಹಾಕಿದ್ದಾನೆ. ಇಬ್ಬರೂ ಹೊರಟಿದ್ದಾರೆ. ಇದೊಂದು ರೀತಿಯಲ್ಲಿ ಹಾಸ್ಯದ ಪ್ರಸಂಗ ಇದ್ದಂತಿದೆ ಎಂದು ನೆಟ್ಟಿಗರು ತಮಾಷೆ ಮಾಡುತ್ತಿದ್ದಾರೆ.

ಅಷ್ಟಕ್ಕೂ ಯಾವುದಾದರೂ ಅಪಹರಣಕಾರರು ಅಪಹರಣ ಮಾಡಿದವರಿಗೆ ಮೊಬೈಲ್‌ ಕೊಡ್ತಾರಾ? ಅಷ್ಟೂ ಗೊತ್ತಾಗಲ್ವಾ ಎಂದು ತಮಾಷೆ ಮಾಡ್ತಿರೋನೆಟ್ಟಿಗರು, ಇಷ್ಟೆಲ್ಲಾ ದುಡ್ಡು ಕೊಟ್ಟು ಇಂಥ ಪೆದ್ದು ಕಿಡ್ನಾಪರ್‍‌ಗಳನ್ನು ಇಟ್ಟುಕೊಳ್ತಾರೆ ಎಂದು ಪ್ರಶ್ನಿಸುತ್ತಿದ್ದಾರೆ. ಒಳ್ಳೆಯ ಸೀರಿಯಲ್‌ಗಳನ್ನು ರಬ್ಬರ್‍‌ನಂತೆ ಎಳೆಯುವ ಸಲುವಾಗಿ ಅನಗತ್ಯ ಇಂಥ ದೃಶ್ಯಗಳನ್ನು, ಹಾಸ್ಯಾಸ್ಪದ ಎನ್ನುವ ಪ್ರಸಂಗಗಳನ್ನು ತುರುಕುವುದು ಏಕೆ ಎಂದು ಪ್ರಶ್ನಿಸುತ್ತಿದ್ದಾರೆ. 

ಸಹಸ್ರಾರು ಕೋಟಿ ಒಡತಿ ಈ ಕೆಲಸದಾಕೆ! ಕಣ್ಣಲ್ಲೇ ಕೊಲ್ಲುವ ಮಲ್ಲಿಗಿಂದು ಹುಟ್ಟುಹಬ್ಬ: ನಟಿಯ ಇಂಟರೆಸ್ಟಿಂಗ್‌ ಸ್ಟೋರಿ ಕೇಳಿ...