ಸಿಹಿ ಇಲ್ಲದ ಸೀತಾ -ರಾಮ ನೋಡೋದೆ ಕಷ್ಟ… Miss You ಸಿಹಿ ಪುಟ್ಟ ಎನ್ನುತ್ತಾ ಕಣ್ಣೀರಿಟ್ಟ ವೀಕ್ಷಕರು!
ಸೀತಾ ರಾಮ ಧಾರಾವಾಹಿಯಲ್ಲಿ ಸಿಹಿಯ ಪಾತ್ರ ಕೊನೆಗೂ ಅಂತ್ಯ ಕಂಡಿದ್ದು, ಕಳೆದೆರಡು ದಿನದಿಂದ ಸಿಹಿಯ ಅಂತಿಮ ಕ್ಷಣಗಳನ್ನು ನೋಡಿ ವೀಕ್ಷಕರು ಕಣ್ಣಿರಿಟ್ಟಿದ್ದಾರೆ.
ಜೀ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ಅತ್ಯಂತ ಜನಪ್ರಿಯ ಧಾರಾವಾಹಿ ಸೀತಾ ರಾಮ (Seetha Raama Serial). ಇವರಿಬ್ಬರು ಜೊತೆಯಾಗೋದಕ್ಕೆ ಕಾರಣವೇ ಸಿಹಿ. ಸಿಹಿಯ ಪಾತ್ರ ಎಷ್ಟೊಂದು ಅದ್ಭುತವಾಗಿತ್ತು ಅಂದ್ರೆ, ಹೆಚ್ಚಿನ ಜನ ಸೀರಿಯಲ್ ನೋಡುತ್ತಿದ್ದುದೇ ಸಿಹಿಯ ಕಾರಣಕ್ಕೆ. ಆಕೆಯ ನಟನೆ, ಮುದ್ದು ಮುದ್ದು ಮಾತು ಎಲ್ಲವೂ ಜನರ ಮನಸ್ಸು ಗೆದ್ದಿದ್ದಂತೂ ನಿಜಾ.
ಸದ್ಯ ಸೀತಾ ರಾಮ ಧಾರಾವಾಹಿಯಲ್ಲಿ ಮನಕಲುಕುವ ಘಟನೆ ನಡೆದಿದೆ. ಶ್ಯಾಮ್ ಮತ್ತು ಶಾಲಿನಿಯಿಂದ ಮಗುವನ್ನು ಪಡೆದು, ದತ್ತು ಸ್ವೀಕಾರ ಮಾಡಿದ್ದ ಸೀತಾ ರಾಮರ ಜೀವಕ್ಕೆ ಜೀವವಾಗಿದ್ದ ಸಿಹಿಯ ಅಂತ್ಯವಾಗಿದೆ. ಭಾರ್ಗವಿಯ ಮೋಸದಾಟಕ್ಕೆ ಪುಟ್ಟ ಮಗು ಸಿಹಿಯ ಕೊನೆಯಾಗಿದೆ. ಸಿಹಿಗೆ ಕಾರು ಗುದ್ದಿದ ಕಾರಣ ಮೇಲಕ್ಕೆ ಹಾರಿ ಬಿದ್ದ ಪುಟ್ಟ ಸಿಹಿಯ (Sihi Death)ಪ್ರಾಣಪಕ್ಷಿ ಆಗಲೇ ಹಾರಿ ಹೋಗಿದೆ. ಈ ಹೃದಯ ವಿದ್ರಾವಕ ಘಟನೆ ನೋಡಿ ವೀಕ್ಷಕರ ಮನಕಲುಕಿದೆ.
ಸಿಹಿಗಾಗಿಯೇ ಸೀರಿಯಲ್ ನೋಡುತ್ತಿದ್ದ ಅನೇಕರು, ಇದೀಗ ಸಿಹಿಯ ಸಾವಿನ ದೃಶ್ಯ ನೋಡಿ ಕಣ್ಣೀರಿಡುತ್ತಿದ್ದಾರೆ. ನೈಜತೆಗೆ ಹತ್ತಿರವಾಗಿದ್ದ ಕಥೆ ಎಂದು ಬಹಳ ಇಷ್ಟಪಟ್ಟು ನೋಡುತಿದ್ದ , ಜನಮನ ಮೆಚ್ಚಿದ ಧಾರಾವಾಹಿ ಅದ್ಯಾಕೋ ಎಲ್ಲೋ ಕಳೆದುಹೋಗುತ್ತಿದೆ. ಇದು ಸೀರಿಯಲ್ ಇರಬಹುದು. ಆದ್ರೂ ನಮ್ ಮನೆಯಲ್ಲೇ ಯಾರನ್ನೋ ಮಿಸ್ ಮಾಡ್ಕೋತೀರೋ ಫೀಲ್ ಆಗ್ತಿದೆ. ಮಿಸ್ ಯು ಸಿಹಿ ಎಂದು ಕಣ್ಣಿರಿಡುತ್ತಿದ್ದಾರೆ ವೀಕ್ಷಕರು.
ಮತ್ತೊಬ್ಬರು ಕಾಮೆಂಟ್ ಮಾಡಿ ಕಥೆ ಸಕ್ಸಸ್ ಆಯ್ತು ಅಂತ ನಿರ್ದೇಶಕರಿಗೆ ಒಳಗೊಳಗೇ ಖುಷಿ. ಕೆಲವು ತಾಯಂದಿರು ಮಕ್ಳು ಕಳ್ಕೊಂಡು ಆ ನೋವಲ್ಲಿ ಜೀವನ ಸಾಗಿಸುತ್ತಿರುತ್ತಾರೆ. ,ಅಂಥೋರಿಗೆಲ್ಲ ನೆನಪುಗಳು ಮರುಕಳಿಸುವಂತೆ ಮತ್ತೆ ನೋವು ಕೊಡೊ ದೃಶ್ಯ ಇದು. ಸ್ಟೋರಿ ಚೆನ್ನಾಗಿದೆ ಅಂತ ನೋಡೋರಿಗಿಂತ, ಸಿಹಿಯ ಅಗಲಿಕೆಯ ದೃಶ್ಯ ನೋಡಿ ಕಣ್ಣೀರಿಡುತ್ತಿರುವವರೇ ಹೆಚ್ಚು ಎಂದಿದ್ದಾರೆ.
ಇನ್ನೊಬ್ಬರು ಯಾಕೆ ಹೀಗೆ ಸಿಹಿ ವಿಡಿಯೋ ಹಾಕಿ ಅಳು ಬರೋಹಾಗೆ ಮಾಡ್ತಿದಿರ. ಮಿಸ್ ಯೂ ಸಿಹಿ ಪುಟ್ಟ. ಸಿಹಿ ಇಲ್ಲದ ಸೀತಾ ರಾಮ ಧಾರವಾಹಿ ಬೇಜಾರು. ಮದುವೆ ವೇಳೆ ಸೀತಾ ರಾಮ ತೆಗೆದುಕೊಂಡ ಎಂಟನೇ ವಚನಕ್ಕೆ ಬೆಲೆ ಇಲ್ಲದ ಹಾಗೆ ಮಾಡಿದರು ಜೀ ಕನ್ನಡ (Zee Kannada). ಪ್ಲೀಸ್ ಸಿಹಿ ಪುಟ್ಟನ ಮತ್ತೆ ಕರ್ಕೊ ಬನ್ನಿ ಪ್ಲೀಸ್, ದಯವಿಟ್ಟು ಮತ್ತೆ ಸಿಹಿ ಪುಟ್ಟ ಮತ್ತೆ ಬರಲಿ ಎನ್ನುತ್ತಿದ್ದಾರೆ.
ಅಷ್ಟೇ ಅಲ್ಲ ಸಿಹಿ ಇಲ್ಲದ ಸೀತಾ ರಾಮ ಧಾರಾವಾಹಿ ನಮಗೆ ಬೇಡ. ಮಿಸ್ ಯೂ ಸಿಹಿ ಪುಟ್ಟ. ಥೂ ಥರ ಯಾಕೆ ಮಾಡಿದ್ರು . ನಿಜವಾಗ್ಲೂ ಒಂದು ನೈಜ ಕಥೆ ತರ ಇತ್ತು. ಆ ಮಗು ಸಿಹಿ ನಿಜವಾಗ್ಲೂ ಸಿಹಿ ಅಷ್ಟೇ ಮುಗ್ಧ ಮನಸು . ಅಂತ ಮಗುವನ್ನ ಹೇಗೆ ಸತ್ತು ಹೋಗೋ ತರ ಮಾಡಿದ್ರು. ತುಂಬಾ ತುಂಬಾ ನೋವಾಗಿದೆ. ಈ ಥರ ಮಾಡ್ಬೇಡಿ ಸ್ನೇಹ ಪಾತ್ರ ಹೀಗೆ ಆಯ್ತು ಈಗ ಸಿಹಿ ಎಂದು ಬೇಜಾರು ಮಾಡಿಕೊಂಡಿದ್ದಾರೆ.
ಎಲ್ಲೂ ಹೋಗಲ್ಲ ನಾನು ಎಲ್ಲೂ ಹೋಗಲ್ಲ. ಇಂತಿ ನಿಮ್ಮ ಸಿಹಿ! ಅಂತ ಕ್ಯಾಪ್ಶನ್ ಕೊಟ್ಟು ಏನು ಪ್ರಯೋಜನ. ಸಿಹಿ ಮಾಡುತ್ತಿದ್ದ ಪಾತ್ರ ತುಂಬಾನೆ ಅದ್ಭುತವಾಗಿತ್ತು. ಪ್ರತಿಯೊಬ್ಬ ಪ್ರೇಕ್ಷಕರಿಗೂ ಸಿಹಿಯನ್ನು ಜೀವಂತವಾಗಿಯೇ ನೋಡಬೇಕಿತ್ತು. ಸಿಹಿ ಇಲ್ಲದೇ ಸೀರಿಯಲ್ ಖಾಲಿ ಖಾಲಿ. ಇದಕ್ಕಿಂತ ಸಿಹಿಯನ್ನು ಶ್ಯಾಮ್ ಜೊತೆ ಕಳುಹಿಸಿ ಕೊಡಬಹುದಿತ್ತಲ್ವಾ? ಎಂದು ಕೇಳಿಕೊಂಡಿದ್ದಾರೆ ವೀಕ್ಷಕರು.