ಬಿಗ್‌ಬಾಸ್ ಸೀಸನ್‌ 8 ಸಖತ್ ಫನ್ನಿಯಾಗಿ ಖುಷಿ ಖುಷಿಯಿಂದ ಆರಂಭವಾಗಿದೆ. ಆದರೆ ಇಲ್ಲೊಬ್ಬ ಗಾಬರಿ ಗೋಪಾಲಮ್ಮ ಇದ್ದಾರೆ. ಅವರ ಹೆಸರು ಶುಭಾ ಪೂಂಜಾ. ಕರಾವಳಿಯ ಬೆಡಗಿ. ಐ ಮೀನ್ ಮಂಗಳೂರಿನ ದುಂಡುಮಲ್ಲಿಗೆ.

ಕಂಟೆಸ್ಟೆಂಟ್ ನಂಬರ್ 2 ಆಗಿ ಆಗಮಿಸಿದ ಶುಭಾ ಪೂಂಜಾ ಅವರನ್ನು ವೇದಿಕೆಗೆ ಪರಿಚಯಿಸಿದ್ದು ಸ್ಯಾಂಡಲ್‌ವುಡ್ ನಟಿ ಅದಿತಿ ಪ್ರಭುದೇವ. ಸ್ಟೇಜ್ ಮೇಲೆ ನಿಂತ ಶುಭಾ ಪೂಂಜಾ ನೋಡಿದಾಗ ಪೂಂಜಾ ಬಹಳಷ್ಟು ಜನ ತಾವಿಷ್ಟು ದಿನ ಶುಭಾ  ಬಗ್ಗೆ ತಪ್ಪು ತಿಳಿದಿದ್ವಾ ಅನ್ನೋ ಅನುಮಾನಕ್ಕೆ ಬಿದ್ರು.

ಕಾರಣ ಸ್ಟೇಜ್‌ ಮೇಲೆ ಮುಗ್ಧ ಪೇಚಿನ ಹುಡುಗಿಯಾಗಿ ಶುಭಾ ಕಾಣಿಸಿಕೊಂಡಿದ್ದು. ಅಷ್ಟಕ್ಕೂ ಈ ಹಿಂದೆ ಅವರ ಬಗ್ಗೆ ಏನೆಲ್ಲ ಮಾತುಗಳು ಕೇಳಿ ಬಂದಿದ್ವು ಅನ್ನೋದನ್ನು ನೋಡೋಣ. 

ಬಿಗ್‌ಬಾಸ್‌ಗೆ ಹೋದೋರೆಲ್ಲ ಹೆಸರು ಕೆಡಿಸ್ಕೊಳ್ತಾರಾ? ಚಾನೆಲ್‌ನವ್ರು ಏನಂತಾರೆ? ...

ಶುಭ ಪೂಂಜಾ ಬಗ್ಗೆ, ಅವರಿಗೆ ದುನಿಯಾ ವಿಜಿ ಜೊತೆಗೆ ಸಂಬಂಧ ಇದೆ ಅನ್ನೋ ಬಗ್ಗೆ ಹಿಂದೆಲ್ಲ ಸಾಕಷ್ಟು ಮಾತುಕತೆಗಳಾಗಿದ್ದವು. ಅವರಿಬ್ಬರೂ ಮದುವೆ ಆಗಿದ್ದಾರೆ ಅನ್ನೋದಕ್ಕೆ ಸಾಕ್ಷಿಯೆಂಬಂತೆ ಕೆಲವು ಫೋಟೋಗಳು ಮಾಧ್ಯಮಗಳಲ್ಲಿಓಡಾಡಿಕೊಂಡಿದ್ದವು. ಇದಾಗಿ ಕೊಂಚಕಾಲ ಶುಭ ಅಷ್ಟೇನೂ ಸುದ್ದಿಯಲ್ಲಿರಲಿಲ್ಲ. ಆಮೇಲೆ ಅವರು ಮತ್ತೆ ಸುದ್ದಿಯಾದದ್ದು ಹಾಟ್ ಫೊಟೋ ಶೂಟ್ ಮೂಲಕ. ಬಹಳ ಪ್ರಚೋದನಕಾರಿ ಭಂಗಿಗಳಲ್ಲಿದ್ದ ಈ ಫೊಟೋಗಳು 'ಮೊಗ್ಗಿನ ಮನಸ್ಸು' ಹುಡುಗಿಯ ಇಮೇಜ್ ಅನ್ನು ಕೊಂಚ ಬದಲಿಸಿದ್ದವು.

ವರ್ಷದ ಕೆಳಗೆ ಅವರೊಬ್ಬ ಬ್ಯುಸಿನೆಸ್ ಮ್ಯಾನ್ ಜೊತೆಗೆ ಡೇಟಿಂಗ್ ಮಾಡ್ತಿರೋದು, ಲವ್ವಲ್ಲಿ ಬಿದ್ದಿರೋ ವಿಚಾರ ಬಯಲಾಯ್ತು. ಸ್ವಲ್ಪ ದಿನದಲ್ಲಿ ನಾವಿಬ್ರೂ ಮದುವೆ ಆಗ್ತೀವಿ ಅಂತ ಶುಭಾ ಹೇಳಿಕೊಂಡಿದ್ದರು. ಸೋ, ಆಯ್ತು ಇನ್ನೇನು ಶುಭ ಮದು ಮಗಳಾಗಿಯೇ ಸ್ಕ್ರೀನ್ ಮುಂದೆ ಬರ್ತಾರೆ ಅನ್ನೋ ಮಾತು ಕೇಳಿಬಂತು. ಅಷ್ಟರಲ್ಲೇ ಶುಭ ಬಿಗ್‌ಬಾಸ್ ಸ್ಟೇಜ್‌ಮೇಲೆ ಪ್ರತ್ಯಕ್ಷರಾಗಿದ್ದಾರೆ. ಅಲ್ಲಿ ಆಕೆಯ ಮತ್ತೊಂದು ಮುಖ ಅನಾವರಣವಾಗಿದೆ.

ಲಕ್ಷಣವಾಗಿ ಸೀರೆ ಉಟ್ಕೊಂಡು ಸ್ಟೇಜ್ ಹತ್ತಿದ ಶುಭಾ ನಗು ನಗುತ್ತಾ ಮಾತು ಶುರು ಮಾಡಿದರು. 'ಬಿಗ್‌ಬಾಸ್‌ನ ಏಳೂ ಸೀಸನ್‌ಗಳಿಗೆ ನಿಮ್ಮನ್ನು ಕರೆದಿದ್ರು. ನೀವು ಎಂಟನೇ ಸೀಸನ್ ಯಾಕೆ ಒಪ್ಕೊಂಡ್ರಿ?' ಅಂತ ಸುದೀಪ್ ಕೇಳಿದಾಗ ಶುಭಾ ಕೊಟ್ಟ ಉತ್ತರ ಜನ ಹೊಟ್ಟೆ ಹಣ್ಣಾಗುವಂತೆ ನಗೋ ಹಾಗೆ ಮಾಡಿತು. ಅವರು ಹೇಳಿದ್ದಿಷ್ಟು. 'ನಾನು ಈ ಸೀಸನ್ ಒಪ್ಕೊಳ್ಳೋದಕ್ಕೆ ನನ್ನ ಫಿಯಾನ್ಸಿನೇ ಕಾರಣ. ಇದು ನಾನು ಬಿಗ್‌ಬಾಸ್ ಮನೆ ಪ್ರವೇಶ ಮಾಡೋದಕ್ಕೆ ಬೆಸ್ಟ್ ಟೈಮ್ ಅಂತ ಅವ್ರು ಹೇಳಿದ್ರು. ಈ ಏಳೂ ಸೀಸನ್ ನಲ್ಲಿ ಕರೆದರೂ ನಾನು ಇಲ್ಲ ಅನ್ನೋದಕ್ಕೆ ಕಾರಣವಿದೆ. ನಾನು ಯಾವಾಗ್ಲೂ ಕಂಫರ್ಟ್ ಝೋನ್ ಬಿಟ್ಹೋಗಲ್ಲ.

ಸಣ್ಣಪುಟ್ಟದಕ್ಕೂ ಗಾಬರಿಯಾಗಿ ಪ್ರತಿಕ್ರಿಯಿಸ್ತೀನಿ. ಅದಕ್ಕೇ ಎಲ್ಲರೂ ನನ್ನ ಗಾಬರಿ ಗೋಪಾಲಮ್ಮ ಅಂತಾರೆ. ಈ ಸಲ ಮಾತ್ರ ನನ್ನ ಫಿಯಾನ್ಸಿ ನನ್ನ ಕರೆದು ಹೇಳಿದ್ರು, ಧೈರ್ಯವಾಗಿ ಹೋಗು, ಈ ಸಲ ಹೋಗದಿದ್ರೆ ಮತ್ಯಾವತ್ತೂ ಹೋಗಕ್ಕಾಲ್ಲ, ಮದುವೆ ಆದಮೇಲೆ ನಿನಗೆ ಹೋಗಬೇಕು ಅಂತ ಅನಿಸಿದರೂ ನಾನು ನಿನ್ನ ಕಳಿಸೋದಿಲ್ಲ ಅಂತ. ಸೋ ಅಧೈರ್ಯ ಆದರೂ ಗಟ್ಟಿ ಮನಸ್ಸು ಮಾಡಿ ಒಪ್ಪಿಕೊಂಡೆ' ಅಂದ್ರು ಶುಭಾ. 

ಬಿಗ್ ಬಾಸ್ ಸೀಸನ್ 8 : ಅಯ್ಯೋ ರಾಮ! ವೈಷ್ಣವಿ ಪೊರಕೇಲಿ ಹೊಡೆಸ್ಕೊಳ್ತಾರಾ! ...

ಅವರು ಸುದೀಪ್ ಗೆ ಕೇಳಿದ ಒಂದು ಪ್ರಶ್ನೆ ಮಾತ್ರ ಪ್ರೇಕ್ಷಕರನ್ನು ಬಿದ್ದು ಬಿದ್ದೂ ನಗೋ ಹಾಗೆ ಮಾಡಿತು. 'ಬಿಗ್ ಬಾಸ್ ಮನೇಲಿ ಎರಡೇ ಟಾಯ್ಲೆಟ್ ಇರೋದಂತೆ. ಅಷ್ಟೂ ಜನ ಬೆಳಗ್ಗೆ ಹೇಗೆ ಮ್ಯಾನೇಜ್ ಮಾಡೋದು?' ಅನ್ನೋ ಇನ್ನೋಸೆಂಟ್ ಪ್ರಶ್ನೆ ಅದು. ಇದಕ್ಕೆ ಸುದೀಪ್‌ಗೂ ನಗು ತಡೆಯೋದಕ್ಕಾಗಲಿಲ್ಲ.

'ಇಲ್ಲೀವರೆಗೆ ಇಷ್ಟು ಸೀಸನ್‌ಗಳಲ್ಲಿ ಯಾವೊಬ್ಬ ಸ್ಪರ್ಧಿಯೂ ಹೀಗೊಂದು ಪ್ರಶ್ನೆ ಕೇಳಲಿಲ್ಲ. ಅಷ್ಟೂ ಜನಕ್ಕೆ ಮ್ಯಾನೇಜ್ ಆಗಿದೆ ಅಂದರೆ ನಿಮಗೂ ಆಗ್ಬೇಕು' ಅಂದರು ಸುದೀಪ್. ಪೆಚ್ಚುಮೋರೆ ಹಾಕ್ಕೊಂಡು, 'ಸರಿ ಬೇಗ ಎದ್ದು ಹೋಗ್ತೀನಿ' ಅಂದ್ರು ಗಾಬರಿ ಗೋವಿಂದಮ್ಮ.
'ನೀವು ಸೆಟ್ ನಲ್ಲೂ ನಿದ್ದೆ ಮಾಡ್ತೀರಂತೆ?' ಅನ್ನೋದು ಸುದೀಪ್ ಮತ್ತೊಂದು ಕಿಲಾಡಿ ಪ್ರಶ್ನೆ. 'ಹೌದು, ನಂಗೆ ಎಂಟು ಗಂಟೆ ನಿದ್ದೆ ಬೇಕೇ ಬೇಕು.

BBK8: ಮೊದಲ ದಿನವೇ ದಿವ್ಯಾ ಸುರೇಶ್ ಪ್ರೀತಿಯ ಬಲೆಗೆ ಬಿದ್ದ ಲ್ಯಾಗ್ ಮಂಜು! ...

ಬೆಳಗ್ಗೆ ಬೇಗ ಏಳ್ಬೇಕು ಅಂದ್ರೆ ರಾತ್ರಿ ಏಳೂವರೆಗೆಲ್ಲ ಮಲ್ಕೊಳ್ತೀನಿ' ಅಂದರೆ ಶುಭಾ. ಇದಂತೂ ಸುದೀಪ್‌ಗೆ ಹಿಲೇರಿಯಸ್ ಅನಿಸಿರಬೇಕು. ಪೂಜಾ ಫಿಯಾನ್ಸಿ ಬಗ್ಗೆ ಕರಣೆಯಿಂದ ನೋಡಿದ್ರು. ಆಗ ಪಚಕ್ಕಂತ ಶುಭಾ ಹೇಳಿದ್ದು, 'ಅವ್ರು ಮಧ್ಯಾಹ್ನ ಸಿಗ್ತಾರಲ್ಲ. ಸೋ.. ಪರ್ವಾಗಿಲ್ಲ!' 
ಅಲ್ಲಿಗೆ ಶುಭಾ ಗಾಬರಿ ಗೋವಿಂದಮ್ಮ ಅನ್ನೋದು ಸ್ಟೇಜ್ ಮೇಲೂ ಸಾಬೀತಾಯ್ತು. ಅವರ ಫಿಯಾನ್ಸಿಗೆ ಸದ್ಯಕ್ಕೆ ಪೂಜಾ ಮೇಲೆ ಫುಲ್ ನಂಬಿಕೆ ಇದೆ. ಬಿಗ್ ಬಾಸ್ ಮನೇಲಿದ್ರೂ ಆಕೆ ತನ್ನನ್ನ ಬಿಟ್ಟು ಇನ್ನೊಬ್ಬರಿಗೆ ಕಣ್ಣು ಹಾಕಲ್ಲ ಅಂತ. ಯಾಕಂದ್ರೆ ಒಂದು ವರ್ಷ ಅವರ ಹಿಂದೆ ಬಿದ್ದು ಈಕೆಯೇ ಅವರನ್ನು ಪಟಾಯಿಸಿದ್ದಂತೆ. 

ಬಿಗ್‌ಬಾಸ್ ಮನೆಯೊಳಗೆ ಪರ್ವಾಗಿಲ್ಲ ಅನ್ನೋ ಥರ ಟಾಸ್ಕ್‌ಗಳಲ್ಲಿ ಶುಭಾ ತೊಡಗಿಸಿಕೊಂಡಿದ್ದಾರೆ. ಫಸ್ಟ್ ವೀಕ್‌ನಲ್ಲಂತೂ ಸೇಫ್ ಇದ್ದಾರೆ. ಮುಂದೆ ಈ ಗಾಬರಿ ಗೋಪಾಲಮ್ಮನ್ನ ಯಾರು ಕಾಯ್ತಾರೋ ನೋಡ್ಬೇಕು