ಬಿಗ್ ಬಾಸ್ ಸೀಸನ್ 8ಕ್ಕೆ ಚಾಲನೆ ಸಿಕ್ಕಿದೆ. 17 ಸ್ಪರ್ಧಿಗಳು ತಮ್ಮ ಅದೃಷ್ಟ ಪರೀಕ್ಷೆ ಮಾಡಿಸಿಕೊಳ್ಳಲು ತುದಿಗಾಲಲ್ಲಿ ನಿಂತಿದ್ದಾರೆ. ಅವರೆಲ್ಲ ಈಗಾಗಲೇ ಹೋಮ್ ಕ್ವಾರಂಟೇನ್, ಹೊಟೇಲ್ ಕ್ವಾರೆಂಟೇನ್ ಮುಗಿಸಿ ಕೊರೋನಾ ಟೆಸ್ಟ್ ಮಾಡಿಸಿಕೊಂಡು ಮನೆಯೊಳಗೆ ಎಂಟ್ರಿ ಕೊಟ್ಟಿದ್ದಾರೆ. ಬಿಗ್ ಬಾಸ್ ಶುರುವಾಗುವಾಗ, ಮನೆಯೊಳಗೆ ಎಂಟ್ರಿ ಕೊಡುವಾಗ ಎಲ್ಲರೂ ತಾವೇ ಗೆಲ್ಲಬೇಕು ಅನ್ನೋ ಪಾಸಿಟಿವ್ ಮೂಡ್‌ನಲ್ಲಿರುತ್ತಾರೆ. ಆದರೆ ಮನೆಯೊಳಗೆ ಹೋದ ಮೇಲೆ ಅವರು ಡಿಫರೆಂಟ್ ಆಗಿ ಆಟ ಆಡಲೇಬೇಕು. ಚಾನೆಲ್‌ನ ಟಿಆರ್‌ಪಿ ಹೆಚ್ಚಿಸಬೇಕು.

ಬಿಗ್‌ಬಾಸ್ ಮನೆಗೆ ಎಂಟ್ರಿ ಕೊಟ್ಟ 17 ಸ್ಪರ್ಧಿಗಳು ಇವರು

ನೋಡುವ ವೀಕ್ಷಕರಲ್ಲಿ ಕೆಲವರು ಖುಷಿ ಹೆಚ್ಚಿಸಿದರೆ ಕೆಲವರು ಸಿಟ್ಟು ತರಿಸಬೇಕು. ನವರಸಗಳೆಲ್ಲ ಅಲ್ಲಿರಬೇಕು. ಇಬ್ಬರಲ್ಲಿ ಒಂದೇ ಥರ  ಆ್ಯಟಿಡ್ಯೂಡ್ ಕಾಣಿಸಿದರೆ ಅವರನ್ನು ಬಿಗ್ ಬಾಸ್ ನಿರ್ದಾಕ್ಷಿಣ್ಯವಾಗಿ ಕಿತ್ತೆಸೆಯುತ್ತಾರೆ. ಸೋ, ಬಿಗ್ ಬಾಸ್ ಸ್ಪರ್ಧಿಗಳು ಟಾಸ್ಕ್ ಅನ್ನು ಚೆನ್ನಾಗಿ ಅಟೆಂಡ್ ಮಾಡೋ ಜೊತೆಗೆ ತಾವು ಹೇಗೆ ಉಳಿದವರಿಗಿಂತ ಭಿನ್ನ ಅನ್ನೋದನ್ನೂ ತೋರಿಸಿಕೊಳ್ಳಬೇಕಾದದ್ದು ಬಹಳ ಮುಖ್ಯ. ಇಷ್ಟೆಲ್ಲ ಇದ್ದರೂ ಆ ದೊಡ್ಡ ಮನೆಯೊಳಗಿನ ಏಕತಾನತೆ, ಆ ಒತ್ತಡದಲ್ಲಿ ಹದಿನೇಳು ಮನಸ್ಥಿತಿಗಳ ವರ್ತನೆ ಹೇಗಿರುತ್ತೆ ಅನ್ನೋದು ಬರೀ ಎಂಟರ್ ಟೈನ್ ಮಾತ್ರ ಅಲ್ಲ, ಮನಃಶಾಸ್ತ್ರೀಯ ಅಧ್ಯಯನವೂ ಹೌದು.

ಸುದೀಪ್ ಲೆಕ್ಕಾಚಾರವನ್ನೇ ತಲೆಕೆಳಗಾಗಿಸಿದ ಬಿಗ್ ಬಾಸ್‌ ಸ್ಪರ್ಧಿ! ...

 ಆದರೆ ಪ್ರತೀ ಬಿಗ್ ಬಾಸ್ ಸೀಸನ್‌ನಲ್ಲೂ ಕೆಲವು ಸ್ಪರ್ಧಿಗಳು ತಮ್ಮನ್ನು ಬಿಗ್ ಬಾಸ್ ನಲ್ಲಿ ಕೆಟ್ಟದಾಗಿ ತೋರಿಸಲಾಗಿದೆ. ಇದರಿಂದ ತಮ್ಮ ಬದುಕೇ ಹಾಳಾಗಿ ಹೋಗಿದೆ ಅಂತಾರೆ. ಸೀಸನ್ 6 ನಲ್ಲಿ ಅಕ್ಷತಾ ಪಾಂಡವಪುರ ಹೀಗೆ ಆರೋಪ ಮಾಡಿದ್ದರು. ಈ ಬಗ್ಗೆ ಪೊಲೀಸರಿಗೆ ದೂರು ನೀಡ್ತಿರೋದಾಗಿಯೂ ಹೇಳಿದ್ದರು. ಬಿಗ್‌ಬಾಸ್ ಶೋ ನಲ್ಲಿ ಅವರನ್ನು ಇನ್ನೊಬ್ಬ ಸ್ಪರ್ಧಿಯ ಜೊತೆಗೆ ಫ್ಲರ್ಟ್ ಮಾಡೋ ತರ ಬಿಂಬಿಸಲಾಗಿತ್ತು. ಬಿಗ್ ಬಾಸ್ ಗೆ ಹೋಗುವ ಹೊತ್ತಿಗಾಗಲೇ ಅವರು ವಿವಾಹವಾಗಿದ್ದರು. ರಂಗ ನಿರ್ದೇಶಕ ಪ್ರಸನ್ನ ಅವರ ಜೊತೆಗೆ ಅಕ್ಷತಾ ವಿವಾಹವಾಗಿತ್ತು. ಆದರೆ ಬಿಗ್ ಬಾಸ್ ಶೋನಲ್ಲಿ ಅವರ ಈ ವರ್ತನೆ ತೀವ್ರ ಖಂಡನೆಗೆ ಗುರಿಯಾಗಿತ್ತು. ಮನೆಯಿಂದ ಆಚೆ ಬಂದ ಮೇಲೂ ಬಹಳ ಕಾಲ ಸೋಷಿಯಲ್ ಮೀಡಿಯಾಗಳಲ್ಲೆಲ್ಲ ಈಕೆಯ ಬಗ್ಗೆ ಕೆಟ್ಟ ಮಾತುಗಳು ಕೇಳಿಬರುತ್ತಿದ್ದವು. ಆದರೆ ಅದೃಷ್ಟವಶಾತ್ ಅವರ ಪತಿ ಪ್ರಸನ್ನ ಬಿಗ್ ಬಾಸ್ ಗೇಮ್ ಅನ್ನು ಗೇಮ್ ಥರವೇ ಸ್ವೀಕರಿಸಿದ ಕಾರಣ, ಪತ್ನಿಯ ಬಗ್ಗೆ ಕಿಂಚಿತ್ ಅನುಮಾನವನ್ನೂ ಪಡದ ಕಾರಣ ಅವರ ದಾಂಪತ್ಯ ಬದುಕಿನಲ್ಲಿ ಬಿರುಕು ಕಾಣಿಸಲಿಲ್ಲ. ಆದರೆ ಈ ಕಾರಣಕ್ಕೆ ಬಹಳ ಕಾಲ ಅಕ್ಷತಾ ಡಿಪ್ರೆಶನ್‌ಗೆ ಒಳಗಾಗಿದ್ದರು. ಕಳೆದ ಬಾರಿ ಚೈತ್ರಾ ಕೋಟೂರ್ ಮೇಲೂ ಕೆಟ್ಟ ಕಮೆಂಟ್ ಗಳ ಸುರಿಮಳೆಯಾಗಿತ್ತು. 

ರಾಜಕಾರಣಿ ಇದ್ದಾರೆ ಈ ಸಲ, ಕುತೂಹಲ ಇದೆ; ಬಿಗ್‌ ಬಾಸ್‌ ಸುದೀಪ್‌ ಮಾತುಕತೆ! ...

ಬಿಗ್‌ಬಾಸ್‌ಗೆ ಹೋದ ಮೇಲೆ ಸ್ಪರ್ಧಿಯ ಬದುಕು ಹಾಳಾಗಿ ಹೋಗುತ್ತೆ ಅನ್ನೋದನ್ನು ಕಲರ್ಸ್ ಕನ್ನಡ ಮುಖ್ಯಸ್ಥ ಪರಮೇಶ್ವರ ಗುಂಡ್ಕಲ್ ಒಪ್ಪೋದಿಲ್ಲ. ಬದಲಿಗೆ ಬಿಗ್‌ಬಾಸ್‌ಗೆ ಹೋದ ಮೇಲೆ ಸ್ಪರ್ಧಿಗಳ ಇಮೇಜೇ ಬದಲಾಗುತ್ತೆ. ಅವರು ಹೆಚ್ಚೆಚ್ಚು ಗುರುತಿಸಿಕೊಳ್ಳೋ ಹಾಗಾಗುತ್ತೆ, ಅವರಿಗೆ ಅವಕಾಶಗಳು ಹೆಚ್ಚುತ್ತವೆ. ಅವರ ವ್ಯಾಲ್ಯೂ ಸಹ ಹೆಚ್ಚಾಗುತ್ತೆ ಅನ್ನೋದು ಅವರ ಅಭಿಪ್ರಾಯ. ಈವರೆಗೆ ಬಿಗ್ ಬಾಸ್‌ ಮನೆಗೆ ಬಂದಾಗ ಅಷ್ಟೇನೂ ಫೇಮ್ ಇಲ್ಲದ ಸ್ಪರ್ಧಿಗಳು ಮನೆಯಿಂದಾಚೆ ಬಂದ ಮೇಲೆ ಜನರಿಂದ ಗುರುತಿಸಲ್ಪಡುವುದನ್ನು ಅವರು ಗಮನಿಸಿದ್ದಾರಂತೆ. 

ಈ ಮಾತಲ್ಲಿ ಸತ್ಯ ಇಲ್ಲ ಅನ್ನೋದು ಕಷ್ಟ. ಏಕೆಂದರೆ ಒಳ್ಳೆ ಹುಡುಗ ಪ್ರಥಮ್ ನಂಥವರು ಬಿಗ್‌ಬಾಸ್‌ ಮನೆಗೆ ಹೋದ ಮೇಲೆ ಹೆಚ್ಚೆಚ್ಚು ಗುರುತಿಸಿಕೊಂಡಿದ್ದಾರೆ. ಶೈನ್‌ ಶೆಟ್ಟಿಗೂ ಸಾಕಷ್ಟು ಅವಕಾಶಗಳು ಬಂದಿವೆ. ಕೆಲವರಿಗೆ ನೆಗೆಟಿವ್‌ ಒಪೀನಿಯನ್ ಬಂದರೂ ಅವರು ಚರ್ಚೆಯಲ್ಲಂತೂ ಇದ್ದೇ ಇದ್ದಾರೆ.

ಬಿಗ್‌ಬಾಸ್‌ ಹೆಸರನ್ನಂತೂ ತಂದುಕೊಟ್ಟೇ ಕೊಡುತ್ತೆ ಅನ್ನೋದರಲ್ಲಿ ಎರಡು ಮಾತಿಲ್ಲ.  

ಬಿಗ್ ಬಾಸ್‌ 8 ರಿಯಾಲಿಟಿ ಶೋ ಕೌಂಟ್‌ಡೌನ್ ಶುರು; ಇಂಟ್ರೆಸ್ಟಿಂಗ್ ವಿಚಾರ ರಿವೀಲ್!