Shrirasthu Shubhamasthu Kannada Serial: ʼಶ್ರೀರಸ್ತು ಶುಭಮಸ್ತುʼ ಧಾರಾವಾಹಿಯಲ್ಲಿ ತುಳಸಿ ಅಂತ್ಯಸಂಸ್ಕಾರಕ್ಕೆ ಎಲ್ಲ ಸಿದ್ಧತೆ ಆಗಿದೆ. ಹೀಗಿರುವಾಗ ಒಂದು ಪವಾಡ ನಡೆದಿದೆ. 

ಖಾಸಗಿ ವಾಹಿನಿಯಲ್ಲಿ ಪ್ರಸಾರ ಆಗುತ್ತಲಿರುವ ʼಶ್ರೀರಸ್ತು ಶುಭಮಸ್ತುʼ ಧಾರಾವಾಹಿಯಲ್ಲಿ ತುಳಸಿ ಬದುಕಿದ್ದಾಳೆ. ಹೌದು, ಇನ್ನೇನು ತುಳಸಿಯನ್ನು ಅಂತ್ಯಸಂಸ್ಕಾರಕ್ಕೆ ಕರೆದುಕೊಂಡು ಹೋಗಬೇಕು ಎಂದು ಆಂಬುಲೆನ್ಸ್‌ನಲ್ಲಿ ಕರೆದುಕೊಂಡು ಹೋಗುತ್ತಿದ್ದರು. ಆ ವೇಳೆ ಪವಾಡಸದೃಶ್ಯವಾಗಿ ತುಳಸಿ ಬದುಕಿದ್ದಾಳೆ. 

ತುಳಸಿ ಬಿಟ್ಟು ಹೋಗಲ್ಲ ಅಂತ ನಂಬಿ ಕೂತಿದ್ದ ಮಾಧವ್!‌ 
ಒಂದು ಕೈಯಲ್ಲಿ ಈಗ ತಾನೇ ಹುಟ್ಟಿದ ಮಗಳು, ಇನ್ನೊಂದು ಕಡೆ ಹೆಣವಾಗಿ ಮಲಗಿರುವ ತುಳಸಿ. “ತುಳಸಿ ನನಗೆ ಮಾತು ಕೊಟ್ಟಿದ್ದಾಳೆ, ಅವಳು ನನ್ನ ಬಿಟ್ಟು ಹೋಗೋದಿಲ್ಲ” ಎಂದು ಮಾಧವ್‌ ನಂಬಿಕೊಂಡು ಕೂತಿದ್ದನು. ಇನ್ನೊಂದು ಕಡೆ ಮನೆಗೆ ಮಗು ಬಂದಿರೋದಿಕ್ಕೆ ಖುಷಿಪಡಲೋ ಅಥವಾ ತುಳಸಿ ಇಲ್ಲ ಅಂತ ದುಃಖಪಡಲೋ ಎಂದು ಎಲ್ಲರೂ ಅಳುತ್ತಲಿದ್ದರು. ನಮಗೆ ಮತ್ತೆ ತಾಯಿ ಇಲ್ಲ ಎಂದು ಅವಿನಾಶ್‌, ಅಭಿ ಅಳುತ್ತಲಿದ್ದರು.

Shrirasthu Shubhamasthu Serial: ಮಾಧವನ ಪತ್ನಿ ತುಳಸಿ ಪ್ರಾಣಪಕ್ಷಿ ಹಾರೋಯ್ತ! ಸುಧಾರಾಣಿ ಪಾತ್ರ ಮುಗೀತಾ?

ಶಾರ್ವರಿಗೆ ಶಾಕ್‌ ಕಾದಿದೆ! 
ಅಪ್ಪ ಮೊದಲೇ ಹೋದರು. ಈಗ ತಾಯಿಯೂ ಇಲ್ಲ ಅಂತ ಸಿರಿ, ಸಮರ್ಥ ಕಣ್ಣೀರು ಹಾಕುತ್ತಿದ್ದರು. ಒಟ್ಟಿನಲ್ಲಿ ಎಲ್ಲರೂ ದುಖಪಡುತ್ತಿರುವಾಗಲೇ ಒಂದು ಪವಾಡ ನಡೆದಿದೆ. ತುಳಸಿ ಕತೆಯೂ ಮುಗೀತು ಅಂತ ಶಾರ್ವರಿ ತೇಲಾಡುತ್ತಿದ್ದಳು. ಅವಳಿಗೂ ಈಗ ಶಾಕ್‌ ಕಾದಿದೆ.

ಅಂತ್ಯಸಂಸ್ಕಾರಕ್ಕೆ ಹೋದವ್ರು ಬದುಕಿದ್ರು..! 
ಆಂಬುಲೆನ್ಸ್‌ನಲ್ಲಿ ಮಲಗಿದ್ದ ತುಳಸಿಗೆ ಎಚ್ಚರ ಆಗಿದೆ. ತುಳಸಿ ಕೈ ಬೆರಳು ಅಲ್ಲಾಡಿದ್ದನ್ನು ಸಮರ್ಥ್‌ ನೋಡಿದ್ದಾನೆ, ಆ ನಂತರ ತುಳಸಿ ಕಣ್ಣು ಬಿಟ್ಟಿದ್ದಾಳೆ. ತುಳಸಿ ಬದುಕಿದ್ದಾಳೆ, ಉಸಿರಾಡುತ್ತಿದ್ದಾಳೆ ಅಂತ ಶಾರ್ವರಿ ಬಿಟ್ಟು ಎಲ್ಲರೂ ಖುಷಿಯಾಗಿದ್ದಾರೆ. ಈಗಾಗಲೇ ಸಾಕಷ್ಟು ಧಾರಾವಾಹಿಯಲ್ಲಿ ಅಂತ್ಯಸಂಸ್ಕಾರಕ್ಕೆಂದು ಹೆಣವನ್ನು ತೆಗೆದುಕೊಂಡು ಹೋದರೂ ಕೂಡ, ಅಲ್ಲಿ ಬದುಕಿದ ಸಾಕಷ್ಟು ಉದಾಹರಣೆಗಳು ಇವೆ. 

ಹಲವು ವರ್ಷಗಳ ನಂತ್ರ ಕನ್ನಡ ಕಿರುತೆರೆಯಲ್ಲಿ ಬದುಕುಳಿದ ಏಕೈಕ ಮಗು ಇದು ಮಾತ್ರ!

ಅವಿನಾಶ್-ಪೂರ್ಣಿ ಕೈಗೆ ಮಗು! 
ಈ ಧಾರಾವಾಹಿಯಲ್ಲಿ ಕೂಡ ಕೆಲವರು ತುಳಸಿ ಸಾಯುತ್ತಾಳೆ, ಸೀರಿಯಲ್‌ ಮುಗಿಯುತ್ತದೆ ಎಂದು ಭಾವಿಸಿದ್ದರು. ಇನ್ನೂ ಕೆಲವರು ತುಳಸಿ ಸಾಯೋದಿಲ್ಲ, ಮತ್ತೆ ಬದುಕಿ ಬರುತ್ತಳೆ ಎಂದು ಭಾವಿಸಿದ್ದರು. ಕೊನೆಗೂ ತುಳಸಿ ಬದುಕಿದ್ದಾಳೆ. ಈ ಬಾರಿ ಕೂಡ ಧರ್ಮ ಗೆದ್ದಿದೆ. ಸಾಕಷ್ಟು ಬಾರಿ ತುಳಸಿಯನ್ನು ಕೊಲ್ಲಬೇಕು ಅಂತ ಶಾರ್ವರಿ ಪ್ಲ್ಯಾನ್‌ ಮಾಡಿದ್ದಳು. ಈ ಬಾರಿಯೂ ಅವಳ ಪ್ಲ್ಯಾನ್‌ ವರ್ಕ್‌ ಆಗಲೇ ಇಲ್ಲ. ಮಕ್ಕಳಿಲ್ಲದ ಮಗ-ಸೊಸೆಗೆ ಆ ಪುಟ್ಟ ಕಂದಮ್ಮಳನ್ನು ಕೊಡಬೇಕು ಅಂತ ತುಳಸಿ ಅಂದುಕೊಂಡಿದ್ದಳು. ಅವಳ ಆಸೆ ಈಡೇರುವ ಸಮಯ ಬಂದಿದೆ. 

Kannada Tv Serial TRP: 'ಅಣ್ಣಯ್ಯ', 'ಲಕ್ಷ್ಮೀ ನಿವಾಸ' ಬದಿಗೊತ್ತಿ NO 1 ಸ್ಥಾನ ಪಡೆದ ಹೊಸ ಸೀರಿಯಲ್‌ ಯಾವುದು?

ಕಥೆ ಏನು?
ಈಗಾಗಲೇ ಮದುವೆಯಾಗಿ ಸಂಗಾತಿಗಳನ್ನು ಕಳೆದುಕೊಂಡ ತುಳಸಿ, ಮಾಧವ್‌ ಬೇರೆ ಬೇರೆಯಾಗಿ ಬದುಕುತ್ತಿರುತ್ತಾರೆ. ಮಕ್ಕಳು ಮದುವೆಯಾದ ನಂತರದಲ್ಲಿ ತುಳಸಿ, ಮಾಧವ್‌ ಪ್ರೀತಿಸುತ್ತಾರೆ, ಮದುವೆ ಆಗ್ತಾರೆ. ಆರಂಭದಲ್ಲಿ ಈ ಮದುವೆಯನ್ನು ಮಕ್ಕಳು ಒಪ್ಪೋದಿಲ್ಲ. ಆಮೇಲೆ ಎಲ್ಲರೂ ಈ ಮದುವೆಯನ್ನು ಒಪ್ಪುತ್ತಾರೆ. ಆದರೆ ಶಾರ್ವರಿ ಈ ಮನೆಗೆ ಮುಳ್ಳಾಗಿರುತ್ತಾಳೆ. ಶಾರ್ವರಿ ವಿರುದ್ಧ ತುಳಸಿ ಹೇಗೆ ಹೋರಾಡುತ್ತಾಳೆ ಎನ್ನೋದು ಈ ಧಾರಾವಾಹಿ ಕಥೆ. 

ಪಾತ್ರಧಾರಿಗಳು
ತುಳಸಿ ಪಾತ್ರದಲ್ಲಿ ಸುಧಾರಾಣಿ, ಮಾಧವ್‌ ಪಾತ್ರದಲ್ಲಿ ಅಜಿತ್‌ ಹಂದೆ, ಪೂರ್ಣಿಮಾ ಪಾತ್ರದಲ್ಲಿ ಲಾವಣ್ಯಾ ಭಾರದ್ವಾಜ್‌, ಶಾರ್ವರಿ ಪಾತ್ರದಲ್ಲಿ ಸಪ್ನಾ ದೀಕ್ಷಿತ್‌ ಅವರು ನಟಿಸುತ್ತಿದ್ದಾರೆ.