Shrirasthu Shubhamasthu Serial Climax Episode: ‘ಶ್ರೀರಸ್ತು ಶುಭಮಸ್ತು’ ಧಾರಾವಾಹಿಯು ಅಂತಿಮ ಸಂಚಿಕೆಯನ್ನು ಪ್ರಸಾರ ಮಾಡಿ ತನ್ನ ಕಥೆಗೆ ಅಂತ್ಯ ಹೇಳಲಿದೆ. ಈಗ ಕ್ಲೈಮ್ಯಾಕ್ಸ್‌ ಎಪಿಸೋಡ್‌ ನೋಡಿ ವೀಕ್ಷಕರಿಗೆ ಬೇಸರ ಶುರುವಾಗಿದೆ. 

ಕಳೆದ ಮೂರು ವರ್ಷಗಳಿಂದ ಪ್ರಸಾರ ಆಗುತ್ತಲಿರುವ ‘ಶ್ರೀರಸ್ತು ಶುಭಮಸ್ತು’ ಧಾರಾವಾಹಿಯು ( Shrirasthu Shubhamasthu Serial ) ಕೊನೆಯ ಹಂತ ತಲುಪಿದೆ. ಶಾರ್ವರಿ ಅಂತ್ಯದೊಂದಿಗೆ, ಮಾಧವ್‌ ತನ್ನ ಮನೆ ಸೇರಬೇಕಿದೆ. ಆದರೆ ಇಲ್ಲೇ ಆಗಿರೋದೇ ಬೇರೆ.

ಶಾರ್ವರಿಯ ಗುರಿ ಏನು?

ಒಂದಾನೊಂದು ಕಾಲದಲ್ಲಿ ಶಾರ್ವರಿಯ ಅಕ್ಕ ಮಾಧವ್‌ನನ್ನು ಇಷ್ಟಪಟ್ಟಿದ್ದಳು. ಆದರೆ ಮಾಧವ್‌ ಬೇರೆ ಹುಡುಗಿಯನ್ನು ಮದುವೆ ಆಗಿದ್ದನು. ಈಗ ಮಾಧವ್‌ನನ್ನು ಕಿಡ್ನ್ಯಾಪ್‌ ಮಾಡಿ ಅವನ ಜೊತೆ ತನ್ನ ಅಕ್ಕ ರಾಧಾಳ ಮದುವೆ ಮಾಡಲು ಶಾರ್ವರಿ ರೆಡಿ ಆಗಿದ್ದಾಳೆ. ಈ ಮದುವೆ ಇಷ್ಟ ಅಂತ ಇಲ್ಲ ಶಾರ್ವರಿಗೆ ಎಷ್ಟೇ ಬಾರಿ ರಾಧಾ ಹೇಳಿದರೂ ಕೂಡ, ಅವಳು ಮಾತ್ರ ಕೇಳುತ್ತಿಲ್ಲ. ಮಾಧವನ ಕುಟುಂಬವನ್ನು ಸರ್ವನಾಶ ಮಾಡೋದೇ ಶಾರ್ವರಿಯ ಗುರಿ.

ಮೀರಾ ಕಂಡರೆ ಶಾರ್ವರಿಗೆ ತುಂಬ ಇಷ್ಟ

ಇನ್ನೇನು ಮದುವೆ ಮಂಟಪಕ್ಕೆ ಶಾರ್ವರಿ, ರಾಧಾ ಬಂದಿದ್ದರು. ಅಲ್ಲಿಗೆ ಈಗ ಇಡೀ ಮಾಧವನ ಕುಟುಂಬ ಕೂಡ ಬಂದಿದೆ. ಈಗ ಅವಳು ಹೇಗೆ ಮದುವೆ ಮಾಡಿಸ್ತಾಳೆ ಎಂದು ಕಾದು ನೋಡಬೇಕಿದೆ. ಕೆಲವು ದಿನಗಳ ಹಿಂದೆ ಪೂರ್ಣಿ-ಅವಿನಾಶ್‌ ಮಗಳು ಮೀರಾಳನ್ನು ಶಾರ್ವರಿ ಕಿಡ್ನ್ಯಾಪ್‌ ಮಾಡಿದ್ದಳು. ಆಗ ಅವಳು ಮೀರಾಳ ಜೊತೆ ಒಂದಷ್ಟು ಸಮಯವನ್ನು ಕಳೆದಿದ್ದಳು. ಕೆಲವು ಬಾರಿ ನನ್ನನ್ನು ಮೀರಾ ಕಾಪಾಡಿದ್ದಳು ಅಂತ ಶಾರ್ವರಿ ಅಂದುಕೊಂಡಿದ್ದಳು. ಮೀರಾ ಕಂಡರೆ ಶಾರ್ವರಿಗೆ ಒಂಥರ ಅಟ್ಯಾಚ್‌ಮೆಂಟ್.‌

ಕೊನೆಗೂ ಬದಲಾದ ಶಾರ್ವರಿ

ಈಗ ಮೀರಾ-ಮಾಧವ್‌ ಮದುವೆ ಆಗಿಲ್ಲ ಅಂದ್ರೆ ಸಂಧ್ಯಾಳನ್ನು ಕೊಲ್ತೀನಿ ಅಂತ ಅವಳ ಕುತ್ತಿಗೆ ಮೇಲೆ ಚಾಕು ಇಟ್ಟಿದ್ದಳು. ಅದೇ ಸಮಯಕ್ಕೆ ಮೀರಾ ಬಂದಿದ್ದಾಳೆ. ಆಗ ಶಾರ್ವರಿಯು ಕೋಪ ಕರಗಿದೆ, ಅವಳೀಗ ಮೀರಾಳನ್ನು ಎತ್ತಿಕೊಳ್ಳಲು ಮುಂದಾಗಿದ್ದಾಳೆ. ರಾಧಾ ಎಷ್ಟೇ ಬುದ್ಧಿವಾದ ಹೇಳಿದ್ರೂ ಕೂಡ ಶಾರ್ವರಿ ಮಾತ್ರ ಕೇಳಲು ರೆಡಿ ಇರಲಿಲ್ಲ. ಕೊನೆಗೆ ಶಾರ್ವರಿ ಬದಲಾಗಿದ್ದಾಳೆ.

ಕ್ಷಮೆ ಕೇಳಿದ ಶಾರ್ವರಿ

“ಸಾಧ್ಯವಾದರೆ ನನ್ನನ್ನು ಕ್ಷಮಿಸಿ, ನನ್ನ ಕೆಟ್ಟ ಕೆಲಸಗಳನ್ನು ಕ್ಷಮಿಸಿ” ಎಂದು ಶಾರ್ವರಿಯು ಎಲ್ಲರ ಬಳಿ ಕ್ಷಮೆ ಕೇಳಿದ್ದಾಳೆ. ಅಂದಹಾಗೆ ರಾಧಾ ಕೂಡ ಮಾಧವ್‌ ಕುಟುಂಬದ ಜೊತೆ ಇರುತ್ತಾಳೆ. ಶಾರ್ವರಿಯನ್ನು ಪೊಲೀಸರು ಅರೆಸ್ಟ್‌ ಮಾಡುತ್ತಾರೆ ಎಂದು ಹೊಸ ಪ್ರೋಮೋದಲ್ಲಿ ತೋರಿಸಲಾಗಿದೆ. ಹೀಗೆ ಈ ಧಾರಾವಾಹಿಯು ಅಂತ್ಯ ಆಗಲಿದೆ.

ವೀಕ್ಷಕರ ಬೇಸರ

ಎಲ್ಲ ಸೀರಿಯಲ್‌ಗಳ ಬಾಳೇ ಇಷ್ಟು. ಆರಂಭದಿಂದ ಕೊನೆಯವರೆಗೂ ಮಾಡಿದ ಅಪರಾಧಗಳಿಗೆ ಸರಿಯಾದ ಶಿಕ್ಷೆ ಸಿಗೋದಿಲ್ಲ. ಕೊನೆಗೆ ಸಿಗೋದು ಒಂದೇ ಕ್ಷಮೆ ಅಥವಾ ಪೊಲೀಸ್ ಅವರು ಕರೆದುಕೊಂಡು ಹೋಗುವುದು. ಇದೇ ಆಯ್ತು. ಒಂದು ಪುಳಿಯೋಗರೆ ಸಲುವಾಗಿ ಇಷ್ಟೆಲ್ಲಾ ಫಜೀತಿ, ರಾದ್ಧಾಂತ ಎಂದು ವೀಕ್ಷಕರು ಸೋಶಿಯಲ್‌ ಮೀಡಿಯಾದಲ್ಲಿ ಕಾಮೆಂಟ್‌ ಮಾಡಿದ್ದಾರೆ.

ಈ ಧಾರಾವಾಹಿಯಲ್ಲಿ ಮಾಧವ್‌ ಒಬ್ಬರು ಮಾಡಿದ ಪುಳಿಯೋಗರೆ ತಿಂದಿರುತ್ತಾನೆ. ಅದನ್ನು ಮಾಡಿದವರು ಯಾರು ಎನ್ನೋದರಿಂದ ಸೀರಿಯಲ್‌ ಕಥೆ ಶುರುವಾಗುತ್ತದೆ. ಅದು ತುಳಸಿ ಎಂದು ಗೊತ್ತಾಗಿ ಹೀಗೆ ಕಥೆ ಸಾಗುತ್ತದೆ.

ಪಾತ್ರಧಾರಿಗಳು

ತುಳಸಿ- ಸುಧಾರಾಣಿ

ಮಾಧವ್-‌ಅಜಿತ್‌ ಹಂದೆ

ಶಾರ್ವರಿ- ಸಪ್ನಾ ದೀಕ್ಷಿತ್‌

ರಾಧಾ-ಅರ್ಚನಾ ಉಡುಪ