ಯಾರಿಗೂ ಬೇಡ ಶ್ರೇಷ್ಠಾ ಸ್ಥಿತಿ! ಕುಸುಮಾ ಮೇಲೆ ಮುಗಿಬಿದ್ದ ವೀಕ್ಷಕರು

ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗ್ತಿರುವ ಭಾಗ್ಯಲಕ್ಷ್ಮಿ ಸೀರಿಯಲ್ ನಲ್ಲಿ ತಾಂಡವ್ ಪ್ರೇಯಸಿ ಶ್ರೇಷ್ಠಾ ಪರದಾಡ್ತಿದ್ದಾಳೆ. ಅಡುಗೆ, ಮನೆ ಕೆಲಸ ಅಂತ ಸುಸ್ತಾಗಿದ್ದಾಳೆ. ಆದ್ರೆ ಕುಸುಮಾ ವರ್ತನೆಯನ್ನೂ ವೀಕ್ಷಕರು ಸಹಿಸ್ತಿಲ್ಲ. 
 

Shrestha faces difficulties in Colors Kannada's Bhagyalakshmi serial roo

ತಾಂಡವ್ (Tandav) ಬೇಕೇ ಬೇಕು ಅಂತ ಹಠ ಮಾಡಿ, ಆತ್ಮಹತ್ಯೆ ಬೆದರಿಕೆ ಹಾಕಿ ಶ್ರೇಷ್ಠಾ, ಭಾಗ್ಯ ಮನೆ ಪ್ರವೇಶ ಏನೋ ಮಾಡಿದಾಳೆ. ಆದ್ರೆ ಸೊಸೆ ಸೊಸೆ ಅಂತ ಕುಸುಮಾ, ಶ್ರೇಷ್ಠಾಗೆ ನೀಡ್ತಿರುವ ಟಾರ್ಚರ್ ಮಾತ್ರ ಮಜಾ ನೀಡ್ತಿದೆ. ಮುಳ್ಳನ್ನು ಮುಳ್ಳಿನಿಂದ್ಲೇ ತೆಗೆಯಬೇಕು ಎನ್ನುವ ರೂಲ್ಸ್ ಫಾಲೋ ಮಾಡ್ತಿದ್ದಾಳೆ ಕುಸುಮ. ಭಾಗ್ಯ ಕೂಡ ಇದಕ್ಕೆ ಬೆಂಬಲ ನೀಡಿದ್ದು, ತಾಂಡವ್ ಮನೆಯಲ್ಲಿ ಮೆರೆಯುವ ಕನಸು ಕಂಡು ಬಂದಿದ್ದ ಶ್ರೇಷ್ಠಾ ಕಥೆ ಈಗ ಯಾರಿಗೂ ಬೇಡ ಎನ್ನುವಂತಾಗಿದೆ.

ಬೆಳಿಗ್ಗೆ ಬೇಗ ಏಳ್ಬೇಕು, ಮನೆ ಕೆಲಸವನ್ನೆಲ್ಲ ಒಂದಾದ್ಮೇಲೆ ಒಂದರಂತೆ ಮಾಡ್ಬೇಕು. ಅಡುಗೆ ಬರದ ಶ್ರೇಷ್ಠಾ ಈಗ ಪರದಾಡ್ತಿದ್ದಾಳೆ. ಅತ್ತ ಆಫೀಸ್ ಕೆಲಸ ಇತ್ತ ಮನೆ ಕೆಲಸ ಎಲ್ಲವನ್ನೂ ನಿಭಾಯಿಸಲಾಗದೆ ಒದ್ದಾಡ್ತಿದ್ದಾಳೆ. ಮನೆಯವರಿಗೆಲ್ಲ ಕಾಫಿ ನೀಡಿ, ಉಸ್ಸಪ್ಪ ಅಂತ ಸೋಫಾ ಮೇಲೆ ಬಂದು ಕುಳಿತುಕೊಂಡಿದ್ದ ಶ್ರೇಷ್ಠಾ ನೋಡಿ ಕುಸುಮಾ ಕೂಗಿಕೊಳ್ತಾಳೆ. ಯಾಕೆ ಇಲ್ಲಿಗೆ ಬಂದು ಕುಳಿತಿದ್ದೀಯಾ ಅಂತ ಕುಸುಮಾ ಕೇಳ್ತಿದ್ದಂತೆ ಬೆಚ್ಚಿ ಬಿದ್ದು, ಎದ್ದು ನಿಲ್ಲುವ ಶ್ರೇಷ್ಠಾ, ಕೆಲಸ ಮಾಡಿ ಸುಸ್ತಾಯ್ತು, ರೆಸ್ಟ್ ಮಾಡ್ತಿದ್ದೇನೆ ಎನ್ನುತ್ತಾಳೆ. ಕೆಲಸ ಮುಗೀತಾ? ಈ ಗ್ಲಾಸ್ ವಾಶ್ ಮಾಡಿ, ತಿಂಡಿ ಶುರು ಮಾಡ್ಕೋ ಎನ್ನುವ ಕುಸುಮ ಆರ್ಡರ್ ಕೇಳಿ ಶ್ರೇಷ್ಠಾ ದಂಗಾಗಿದ್ದಾಳೆ. 

ಹುಡುಗಿ ಡುಮ್ಮಿ ಬೇಡ ಅನ್ನೋ ನೀವು, ಮದ್ವೆಯಾದ್ಮೇಲೆ ಹೆಂಡ್ತಿ ಊದಿಕೊಂಡ್ರೆ ಬಿಟ್ಟು

ಮನೆ ಕೆಲಸವನ್ನು ಕೀಳಾಗಿ ನೋಡ್ತಿದ್ದ ಶ್ರೇಷ್ಠಾ, ಇದೇ ವಿಷ್ಯವನ್ನು ಇಟ್ಕೊಂಡು ಅನೇಕ ಬಾರಿ ಭಾಗ್ಯಳನ್ನು ಹೀಯಾಳಿಸಿದ್ದಾಳೆ. ಅವಳಿಗೆ ಏನೂ ಬರೋದಿಲ್ಲ ಅಂತ ತಾಂಡವ್ ಮುಂದೆ ಭಾಗ್ಯಗೆ ಅವಮಾನ ಮಾಡಿದ್ದಾಳೆ. ಆದ್ರೀಗ ಮನೆ ಕೆಲಸ ಅಂದ್ರೆ ಏನು ಎಂಬುದು ಶ್ರೇಷ್ಠಾ ಅರಿವಿಗೆ ಬರ್ತಿದೆ.

ಕಲರ್ಸ್ ಕನ್ನಡ ಚಾನೆಲ್ (Colors Kannada channel) ನಲ್ಲಿ ಪ್ರಸಾರವಾಗುವ ಭಾಗ್ಯಲಕ್ಷ್ಮಿ ಸೀರಿಯಲ್ (Bhagyalakshmi serial) ನಲ್ಲಿ ಹೆಣ್ಣಿನ ಕಷ್ಟ, ಸಾಧನೆಗಳನ್ನು ವಿವರವಾಗಿ ತೋರಿಸಲಾಗ್ತಿದೆ. ಗಂಡ ಬೇರೆ ಹುಡುಗಿ ಜೊತೆ ಸಂಬಂಧ ಇಟ್ಕೊಂಡಿದ್ದಾನೆ ಎಂಬುದು ಗೊತ್ತಾಗ್ತಿದ್ದಂತೆ ಕುಗ್ಗಿದ್ರೂ ಮತ್ತೆ ಎದ್ದು ನಿಂತ ಭಾಗ್ಯ, ಎಲ್ಲವನ್ನು ಎದುರಿಸ್ತಿದ್ದಾಳೆ. ಒಂದ್ಕಡೆ ನಿರ್ಲಕ್ಷ್ಯ ಮಾಡ್ತಿರುವ ಗಂಡ, ಮನೆ ಸಾಲ ಇನ್ನೊಂದು ಕಡೆ ಮನೆಗೆ ಬಂದಿರುವ ಗಂಡನ ಪ್ರೇಯಸಿ ಶ್ರೇಷ್ಠಾ ಮಧ್ಯೆ ತನ್ನ ಮಕ್ಕಳು ಹಾಗೂ ಅತ್ತೆ ಮಾವನಿಗಾಗಿ ಭಾಗ್ಯ ಮುನ್ನುಗ್ಗುತ್ತಿದ್ದಾಳೆ. ಎಷ್ಟೇ ಕಷ್ಟಗಳು ಎದುರಾದ್ರೂ ಭಾಗ್ಯ ಸೋಲೊಪ್ಪಿಕೊಳ್ಳಲು ಸಿದ್ಧವಿಲ್ಲ. ಆಕೆಯ ಈ ಕೆಲಸ ವೀಕ್ಷಕರಿಗೆ ಸ್ಪೂರ್ತಿ ನೀಡಿದೆ.

ಬಿಗ್ ಬಾಸ್ ಮನೆಯಿಂದ ಐಶ್ವರ್ಯಾ ಸಿಂಧೋಗಿ ಎಲಿಮಿನೇಷನ್ ಹಿಂದೆ ಬೇರೆಯದ್ದೇ ಉದ್ದೇಶವಿದೆ?

ಕಲರ್ಸ್ ಕನ್ನಡ ಇನ್ಸ್ಟಾ ಖಾತೆಯಲ್ಲಿ ಇಂದಿನ ಪ್ರೋಮೋ ಬಿಡುಗಡೆ ಮಾಡಿದೆ. ಇದ್ರಲ್ಲಿ, ಕುಸುಮಾ, ಶ್ರೇಷ್ಠಾಳನ್ನು ಬೆಂಡೆತ್ತುತ್ತಿದ್ದಾಳೆ. ಇದನ್ನು ನೋಡಿದ ವೀಕ್ಷಕರು ಖುಷಿಯಾಗಿದ್ದಾರೆ. ನಿಂಗಿದು ಬೇಕಿತ್ತ ಶ್ರೇಷ್ಠಾ, ಸುಮ್ನೆ ಮನೆಗೆ ವಾಪಸ್ ಹೋಗು ಅಂತ ಸಲಹೆ ನೀಡ್ತಿದ್ದಾರೆ. ಸುಮ್ನೆ ನಾನು ಸೊಸೆ ಅಂತ ಬೀಗೋದಲ್ಲ, ಭಾಗ್ಯಾ ಸ್ಥಾನಕ್ಕೆ ಬರೋದು ಸುಲಭವೂ ಅಲ್ಲ. ಅಡುಗೆ ಮಾಡ್ದೆ, ಸ್ವಿಗ್ಗಿ, ಜೋಮಾಟೋದಲ್ಲಿ ಫುಡ್ ಆರ್ಡರ್ ಮಾಡುವಷ್ಟು ಮನೆ ಕೆಲಸ ಸುಲಭವಲ್ಲ, ಆಫೀಸ್ ನೋಡ್ಕೊಂಡಂತೆ ಮನೆ ನೋಡಿಕೊಳ್ಳೋಕೆ ಸಾಧ್ಯವಿಲ್ಲ ಎಂದು ವೀಕ್ಷಕರು ಬರೆದಿದ್ದಾರೆ. ಮತ್ತೆ ಕೆಲವರಿಗೆ ಕುಸುಮಾ ವರ್ತನೆ ಇಷ್ಟವಾಗಿಲ್ಲ. ಕುಸುಮಾ, ಭಾಗ್ಯಾಳನ್ನು ಕೂಡ ಸೊಸೆ ತರ ನೋಡಿರಲಿಲ್ಲ. ಆಕೆಗೆ ಸೊಸೆ ಬೇಡ, ಮನೆ ಕೆಲಸ ಮಾಡುವವರು ಬೇಕು. ಈಗ ಶ್ರೇಷ್ಠಾಗೂ ಅದನ್ನೇ ಮಾಡ್ತಿದ್ದಾಳೆ. ಇನ್ನೆರಡು ದಿನದಲ್ಲಿ ಅಡುಗೆ ಕಲಿತು ಶ್ರೇಷ್ಠಾ ನಿಮ್ಮನ್ನು ಆಳ್ತಾಳೆ ನೋಡಿ ಎಂದು ವೀಕ್ಷಕರು ಕಮೆಂಟ್ ಮಾಡಿದ್ದಾರೆ. 
 

Latest Videos
Follow Us:
Download App:
  • android
  • ios