Asianet Suvarna News Asianet Suvarna News

ಇವತ್ತು ನಾನು ಈ ಮನೆಯಿಂದ ಹೋಗುತ್ತಿದ್ದೇನೆ, ಮುಂದೆ ನಿನ್ನನ್ನೇ ಕಳುಹಿಸುತ್ತೇನೆ; ಶಪಥ ಮಾಡಿದ ಶ್ರೇಷ್ಠಾ

ಕುಸುಮಾ ಏನೂ ಮಾತನಾಡುತ್ತಿಲ್ಲ. ಆದರೆ, ಶ್ರೇಷ್ಠಾ ವರಸೆ ನೋಡಿ ಕೋಪಗೊಂಡಿದ್ದಾಳೆ ಎಂಬುದು ಅವಳ ವರಸೆಯಲ್ಲೇ ತಿಳಿಯುತ್ತಿದೆ. ಆದರೆ ಭಾಗ್ಯಾ ಮನದಲ್ಲೇನಿದೆ ಎಂಬುದು ಹೊರಬಿದ್ದಿರಲಿಲ್ಲ. ಅಷ್ಟರಲ್ಲೇ ಅಲ್ಲಿಗೆ ಬಂದ ಭಾಗ್ಯಾ 'ಇರಿ, ನಾನು ಹೋಗಿ ತಾಂಡವ್‌ ಅವರನ್ನು ಕರೆದುಕೊಂಡು ಬರ್ತೀನಿ, ಮಾತನಾಡಿಕೊಂಡು ಹೋಗಿ ಎಂದು ತನ್ನ ಎಂದಿನ ಒಳ್ಳೆಯತನ ತೋರಿಸುತ್ತಾಳೆ.

Shresta gets angry on Bhagya at Bhagyalakshmi serial in Colors Kannada srb
Author
First Published Nov 8, 2023, 3:08 PM IST

ಕಲರ್ಸ್ ಕನ್ನಡದಲ್ಲಿ ಮೂಡಿಬರುತ್ತಿರುವ 'ಭಾಗ್ಯಲಕ್ಷ್ಮೀ' ಸೀರಿಯಲ್ ತೀವ್ರ ಕುತೂಹಲ ಕೆರಳಿಸುತ್ತಿದೆ. ಆತ್ಮಹತ್ಯೆ ನಾಟಕವಾಡಿ ತಾಂಡವ್ ಮನೆ ಸೇರಿಕೊಂಡಿದ್ದ ಶ್ರೇಷ್ಠಾಳನ್ನು ಮನೆಯ ಯಜಮಾನ್ತಿ ಕುಸುಮಾ ಕಷ್ಟಪಟ್ಟು ಹೊರಹಾಕಿದ್ದಾರೆ. ಆದರೆ, ತನ್ನ ಅತ್ತೆಯ ಮಗ ರಾಘು ಜತೆ ಮತ್ತೆ ತಾಂಡವ್‌ ಮನೆಗೆ ಬಂದಿದ್ದಾಳೆ ಶ್ರೇಷ್ಠಾ. ಭಾಗ್ಯಾ ಅಮ್ಮ 'ಮತ್ತೆ ಯಾಕೆ ಬಂದೆ ನೀನು' ಎಂದು ಶ್ರೇಷ್ಠಾಳನ್ನು ಕೇಳುತ್ತಾಳೆ. ಅದಕ್ಕೇನೂ ಶಾಕ್ ಆಗದೇ ನೇರವಾಗಿಯೇ ಉತ್ತರ ಕೊಡುತ್ತಾಳೆ. 

'ನಾನು ತಾಂಡವ್ ನೋಡಿ ಮಾತನಾಡಿಕೊಂಡು ಹೋಗಲು ಬಂದಿದ್ದೇನೆ' ಎಂದು ಹೇಳುತ್ತಾಳೆ. ಅದಕ್ಕೆ ಶ್ರೇಷ್ಠಾ ಅಮ್ಮ 'ಏಯ್, ಅವನ ಹತ್ರ ಏನೇ ನಿಂದು ಮಾತು? ಈ ಮನೆಯ ಯಜಮಾಂತಿಯೇ ಹೋಗು ಮನೆ ಬಿಟ್ಟು ಹೋಗು ಅಂತ ಹೇಳಿ ಆಗಿದೆ. ಇನ್ನು ತಾಂಡವ್ ಹತ್ರ ನೀನು ಮಾತಾಡೋದೇನಿದೆ?"' ಎಂದು ಜಬರ್‌ದಸ್ತಿ ಮಾಡ್ತಾಳೆ. ಆದರೆ, ಶ್ರೇಷ್ಠಾ ಮನದಲ್ಲಿ ಬೆಟ್ಟದಷ್ಟು ಕೋಪ ಇದ್ದರೂ ಹೊರಗೆ ತೋರಿಸಿಕೊಳ್ಳದೇ, ತನ್ನ ನಿರ್ಧಾರಕ್ಕೇ ಗಟ್ಟಿಯಾಗಿ ಅಂಟಿಕೊಂಡಿದ್ದಾಳೆ. 

ಕುಸುಮಾ ಏನೂ ಮಾತನಾಡುತ್ತಿಲ್ಲ. ಆದರೆ, ಶ್ರೇಷ್ಠಾ ವರಸೆ ನೋಡಿ ಕೋಪಗೊಂಡಿದ್ದಾಳೆ ಎಂಬುದು ಅವಳ ವರಸೆಯಲ್ಲೇ ತಿಳಿಯುತ್ತಿದೆ. ಆದರೆ ಭಾಗ್ಯಾ ಮನದಲ್ಲೇನಿದೆ ಎಂಬುದು ಹೊರಬಿದ್ದಿರಲಿಲ್ಲ. ಅಷ್ಟರಲ್ಲೇ ಅಲ್ಲಿಗೆ ಬಂದ ಭಾಗ್ಯಾ 'ಇರಿ, ನಾನು ಹೋಗಿ ತಾಂಡವ್‌ ಅವರನ್ನು ಕರೆದುಕೊಂಡು ಬರ್ತೀನಿ, ಮಾತನಾಡಿಕೊಂಡು ಹೋಗಿ ಎಂದು ತನ್ನ ಎಂದಿನ ಒಳ್ಳೆಯತನ ತೋರಿಸುತ್ತಾಳೆ. ಆದರೆ, ತಾಂಡವ್ ರೂಮಿನಲ್ಲಿ ಬಾಗಿಲು ಹಾಕಿಕೊಂಡು ಆಫೀಸ್ ಕಾಲ್ ಅಟೆಂಡ್ ಮಾಡುತ್ತಿದ್ದು, ಫುಲ್ ಆತಂಕದಲ್ಲಿದ್ದಾನೆ. 

ತಲೆ ತಗ್ಗಿಸಿದ ಕಾರ್ತಿಕ್; ಗೇಮ್ ನೆಪದಲ್ಲಿ ವೈಯಕ್ತಿಕ ತೇಜೋವಧೆಗೆ ಇಳಿದರಾ ವಿನಯ್ ಅಂಡ್ ಟೀಮ್?

ಭಾಗ್ಯಾ ತಾಂಡವ್ ರೂಮಿನ ಹೊರಗೆ ನಿಂತು 'ನಿಮ್ಮ ಜತೆ ಶ್ರೇಷ್ಠಾ ಅತ್ತೆ ಮಗ ಮಾತನಾಡ್ಬೇಕಂತೆ, ಬರ್ತೀರಾ' ಎಂದು ಕೇಳಲು ಕೋಪದಿಂದ ತಾಂಡವ್ 'ಯಾರದೋ ಜತೆ ಮಾತನಾಡೋದು ನನಗೇನಿದೆ' ಎಂದು ರೇಗುತ್ತಾನೆ. ಆತನ ಮಾತನ್ನು ಕೇಳಿಸಿಕೊಂಡ ರಘು ಕೂಲಾಗಿ 'ಇರ್ಲಿ, ನಾವಿನ್ನು ಹೊರಡ್ತೀವಿ' ಎಂದು ಶ್ರೇಷ್ಠಾಳನ್ನು ಕೂಡ ಕರೆದುಕೊಂಡು ಹೊರಡುತ್ತಾನೆ. ಆದರೆ, ಶ್ರೇಷ್ಠಾ ಮನಸ್ಸಿನಲ್ಲೇ ಕೋಪದಿಂದ 'ಭಾಗ್ಯಾ, ಇವತ್ತು ಈ ಮನೆಯಿಂದ ನಾನು ಹೋಗುತ್ತಿರುವೆ, ಆದರೆ, ಮುಂದೆ ನಿನ್ನನ್ನೇ ಈ ಮನೆಯಿಂದ ಕಳಿಸುತ್ತೇನೆ' ಎಂದು ಪ್ರತಿಜ್ಞೆ ಮಾಡಿ ಹೊರಡುತ್ತಾಳೆ. ಮುಂದೇನಾಗಲಿದೆ ಎಂಬುದನ್ನು ಸಂಚಿಕೆ ನೋಡಿ ತಿಳಿಯಬೇಕು. 

ಯಾವೊಳು ಬಕೆಟ್ ಹಿಡಿಯೋದು, ಅಲ್ಲಿ ಕೂತಿದಾನಲ್ಲಾ ಅವ್ನು ಬಕೆಟ್ ಹಿಡಿಯೋದು; ಸುನಾಮಿಯಾದ ನಮ್ರತಾ!

Follow Us:
Download App:
  • android
  • ios