ಒಂದು ಕಡೆ ತಾಳಿ, ಇನ್ನೊಂದು ಕಡೆ ವಿಷದ ಬಾಟ್ಲಿ ಇಟ್ಟು ಕಾಯ್ತಾ ಇದ್ದಾಳೆ ಶ್ರೇಷ್ಠಾ! ಮುಂದೇನು?
ಮದುವೆ ದಿನ ತಾಂಡವ್ ಬರದ್ದನ್ನು ನೋಡಿ ರೊಚ್ಚಿಗೆದ್ದಿರೋ ಶ್ರೇಷ್ಠಾ ಒಂದು ಕಡೆ ತಾಳಿ, ಇನ್ನೊಂದು ಕಡೆ ವಿಷದ ಬಾಟ್ಲಿ ಇಟ್ಟು ಕಾಯ್ತಾ ಇದ್ದಾಳೆ. ಇದನ್ನು ನೋಡಿ ತಾಂಡವ್ಗೆ ಶಾಕ್ ಆಗಿದೆ. ಮುಂದೇನು?
ತಾಂಡವ್ ಸ್ಥಿತಿ ಸದ್ಯ ಯಾವ ಲವರ್ಗೂ ಬೇಡವಾಗಿದೆ. ಅತ್ತ ಹುಲಿ, ಇತ್ತ ದರಿ ಎನ್ನುವ ಸ್ಥಿತಿ ಅವನದ್ದು. ಆ ಕಡೆ ಭಾವಿ ಪತ್ನಿ ಶ್ರೇಷ್ಠಾ ಮದುವಣಗಿತ್ತಿಯಂತೆ ಶೃಂಗಾರ ಮಾಡಿಕೊಂಡು ಮದುವೆಯಾಗಿ ಕಾತ್ತಿದ್ದರೆ, ಇತ್ತ ತನ್ನ ಕೋಣೆಯೊಳಕ್ಕೆ ಲಾಕ್ ಆಗಿದ್ದಾನೆ ತಾಂಡವ್. ಅದೇ ಇನ್ನೊಂದೆಡೆ, ಈ ಮದುವೆ ಆಗಲು ಯಾವುದೇ ಕಾರಣಕ್ಕೂ ಕೊಡಲ್ಲ ಎಂದು ಪಟ್ಟು ಹಿಡಿದಿರೋ ಭಾಗ್ಯ! ಶ್ರೇಷ್ಠಾ ಮದ್ವೆಯಾಗ್ತಿರೋದು ತನ್ನ ಗಂಡನನ್ನೇ ಎಂದು ತಿಳಿಯದಿದ್ದರೂ ಎರಡು ಮಕ್ಕಳ ತಂದೆಯನ್ನು ಮದ್ವೆಯಾಗ್ತಿರೋ ವಿಷಯ ಗೊತ್ತಿದ್ದರಿಂದ ಇಂಥ ಅನಾಚಾರಕ್ಕೆ ತಾನು ಆಸ್ಪದ ಕೊಡುವುದಿಲ್ಲ ಎಂದು ಭಾಗ್ಯ ಮತ್ತು ಅತ್ತೆ ಕುಸುಮಾ ಪಟ್ಟುಹಿಡಿದಿದ್ದಾರೆ. ರೌದ್ರಾವತಾರ ತಾಳಿರುವ ಶ್ರೇಷ್ಠಾ ಜಿದ್ದಿಗೆ ಬಿದ್ದಿದ್ದು, ಮದುವೆ ಹೇಗೆ ಮಾಡಲು ಕೊಡುವುದಿಲ್ಲ ನೋಡೋಣ ಎಂದು ಕಾಯುತ್ತಿದ್ದಾಳೆ. ಆದರೆ ತಾಂಡವ್ ಲಾಕ್ ಆಗಿದ್ದಾನೆ.
ಎಷ್ಟು ಹೊತ್ತಾದರೂ ತಾಂಡವ್ ಬಾರದ್ದನ್ನು ನೋಡಿ ಶ್ರೇಷ್ಠಾ ತಾಂಡವ್ಗೆ ವಿಡಿಯೋ ಕಾಲ್ ಮಾಡಿದ್ದಾಳೆ. ಇಬ್ಬರ ಕಿತ್ತಾಟ ನಡೆದಿದೆ. ಅಪ್ಪ-ಅಮ್ಮನ ವಿರುದ್ಧ ಹೋದ ಶ್ರೇಷ್ಠಾಳಿಗೆ ಸಿಕ್ಕಾಪಟ್ಟೆ ಬೈದಿದ್ದಾನೆ ತಾಂಡವ್. ಇದನ್ನು ಕೇಳಿ ಮೊದಲದೇ ಉರಿದು ಹೋಗಿರೋ ಶ್ರೇಷ್ಠಾಳಿಗೆ ಇನ್ನಷ್ಟು ಕೋಪ ಬಂದಿದೆ. ನಂತರ ಅದೇ ಕಾರಣಕ್ಕೆ ತನ್ನನ್ನು ಮನೆಯಲ್ಲಿ ಲಾಕ್ ಮಾಡಿಟ್ಟಿರುವುದಾಗಿ ಹಾಗೂ ಮಕ್ಕಳನ್ನು ಕಾವಲು ನೇಮಿಸಿರುವುದಾಗಿ ತಾಂಡವ್ ಶ್ರೇಷ್ಠಾಳಿಗೆ ಹೇಳಿದ್ದಾನೆ. ಇದನ್ನು ಕೇಳಿ ಮತ್ತಷ್ಟು ಬೆಂಕಿ ಹೊತ್ತಿಕೊಂಡಿದೆ ಶ್ರೇಷ್ಠಾಳಿಗೆ. ಅದೇನು ಮಾಡುತ್ತೀಯೋ ಗೊತ್ತಿಲ್ಲ. ಎಲ್ಲಾ ನಿನ್ನ ಕೈಯಲ್ಲಿದೆ ಎನ್ನುತ್ತಲೇ ಧಮ್ಕಿ ಹಾಕಿದ್ದಾಳೆ.
30 ವರ್ಷಗಳ ಬಳಿಕ 'ಓಂ' ಚಿತ್ರ ಮರು ಸೃಷ್ಟಿ: ಡಾನ್ಸ್ ವೇದಿಕೆಯಲ್ಲಿ ಶಿವಣ್ಣ-ಪ್ರೇಮಾ ಬ್ಲಾಕ್ಬಸ್ಟರ್ ಪರ್ಫಾಮೆನ್ಸ್!
ಒಂದು ಕಡೆ ತಾಳಿ, ಇನ್ನೊಂದು ಕಡೆ ವಿಷದ ಬಾಟಲಿ ಇಟ್ಟುಕೊಂಡಿರುವುದನ್ನು ತೋರಿಸಿರೋ ಶ್ರೇಷ್ಠಾ ಎಲ್ಲವೂ ನಿನ್ನ ಕೈಯಲ್ಲಿಯೇ ಇದೆ ಎಂದಿದ್ದಾರೆ. ಇದನ್ನು ನೋಡಿ ತಾಂಡವ್ ಅಕ್ಷರಶಃ ಬೆವರಿ ಹೋಗಿದ್ದಾನೆ. ಏನು ಮಾಡಬೇಕು ಎನ್ನುವುದು ತಿಳಿಯದೇ ಕಂಗಾಲಾಗಿ ಹೋಗಿದ್ದಾನೆ. ಇನ್ನೊಂದೆಡೆ ತಾಂಡವ್ ಬದಲು ಭಾಗ್ಯ ಮತ್ತು ಕುಸುಮಾ ಮದುವೆಯ ಸ್ಪಾಟ್ ತಲುಪಿದ್ದಾರೆ. ಅಲ್ಲಿ ಶ್ರೇಷ್ಠಾಳಿಗೆ ಮತ್ತಷ್ಟು ಅವಮಾನ ಮಾಡಿದ್ದಾಳೆ ಭಾಗ್ಯ. ತಾಂಡವ್ನನ್ನು ಕೂಡಿ ಹಾಕಿರುವ ವಿಚಾರ ಆಗ ಶ್ರೇಷ್ಠಾಳಿಗೆ ಗೊತ್ತಿಲ್ಲದಿದ್ದ ಕಾರಣ, ನಿನ್ನ ಗಂಡನನ್ನೇ ಮದುವೆಯಾಗಿ ಹೇಗೆ ಶಾಕ್ ಕೊಡ್ತೇನೆ ನೋಡು ಎಂದು ಮನಸ್ಸಿನಲ್ಲಿಯೇ ಅಂದುಕೊಂಡಿದ್ದಾಳೆ. ಯಾವ ಕಾರಣಕ್ಕೂ ಈ ಮದುವೆಯನ್ನು ಆಗಲು ನಾನು ಕೊಡಲ್ಲ ಎಂದು ಭಾಗ್ಯ ಹೇಳಿದ್ದಾಳೆ. ಆದರೆ ಇದೀಗ ತಾಂಡವ್ ಲಾಕ್ ಆಗಿರೋ ಕಾರಣ, ಅತ್ತ ಶ್ರೇಷ್ಠಾ, ಇತ್ತ ತಾಂಡವ್ ಇಬ್ಬರ ಸ್ಥಿತಿಯೂ ಅಯೋಮಯವಾಗಿದೆ.
ಇದರ ಪ್ರೊಮೋ ಬಿಡುಗಡೆಯಾಗುತ್ತಿದ್ದಂತೆಯೇ, ಶ್ರೇಷ್ಠಾಳ ಮೇಲೆ ಕಿಡಿ ಕಾರುತ್ತಿರೋ ನೆಟ್ಟಿಗರು, ಶ್ರೇಷ್ಠಾ ಸಾಯಬೇಕು ಎನ್ನುತ್ತಿದ್ದಾರೆ. ವಿಷ ಕುಡಿದು ಸಾಯಿ, ಬೇಕಿದ್ದರೆ ತಾಂಡವ್ ಹೆಸರು ಬರೆದಿಟ್ಟು ಸಾಯಿ. ಆಗಲಾದರೂ ತಾಂಡವ್ಗೂ ಶಿಕ್ಷೆಯಾಗುತ್ತದೆ, ನಿನಗೂ ಮುಕ್ತಿ ಸಿಗುತ್ತದೆ ಎನ್ನುತ್ತಿದ್ದಾರೆ. ಮತ್ತೆ ಕೆಲವರು ಪ್ರೀತಿ ನಿಜವೇ ಆಗಿದ್ದರೆ ಕಿಟಕಿಯಿಂದ ಹಾರಿ ಹೋಗು ಎಂದು ತಾಂಡವ್ಗೆ ಸಲಹೆ ಕೊಡುತ್ತಿದ್ದಾರೆ. ಇಷ್ಟಾದರೂ ಮದುವೆಯಾಗ್ತಿರೋದು ತಾಂಡವ್ನನ್ನೇ ಎಂಬ ಸತ್ಯ ಭಾಗ್ಯಳಿಗಾಗಲೀ, ಅಮ್ಮ ಕುಸುಮಂಗೆ ಆಗಲೀ ತಿಳಿಯದೇ ಇರುವುದಕ್ಕೆ ನೆಟ್ಟಿಗರು ಅಯ್ಯೋ ಎನ್ನುತ್ತಿದ್ದರೆ, ಎಲ್ಲಾ ವಿಷಯ ಗೊತ್ತಿರೋ ಪೂಜಾ ಇನ್ನೂ ಸೈಲೆಂಟ್ ಆಗಿರೋದಕ್ಕೆ ಅವಳ ವಿರುದ್ಧವೇ ಕಿಡಿ ಕಾರುತ್ತಿದ್ದಾರೆ. ಒಟ್ಟಿನಲ್ಲಿ ಈ ಸೀರಿಯಲ್ ಈಗ ಕುತೂಹಲದ ಹಂತ ತಲುಪಿದ್ದು, ಮುಂದೇನು ಎನ್ನುವುದನ್ನು ಕಾದು ನೋಡಬೇಕಿದೆ.
ನಾಲ್ವರಿಗೆ ಬೆಳಕು ನೀಡಿದ ಪುನೀತ್ ರಾಜ್: ಅಂದು ನಡೆದ ಘಟನೆ ವಿವರಿಸಿದ ಡಾ.ರೋಹಿತ್ ಶೆಟ್ಟಿ