ಅಪ್ಪುಗೂ ನೃತ್ಯ ಸಂಯೋಜಿಸಿದ್ದ ಶ್ರೀರಸ್ತು ಶುಭಮಸ್ತು ದೀಪಿಕಾ: ಪೂರ್ಣಿಗೆ ಡ್ಯಾನ್ಸ್ ಹೇಳಿಕೊಡ್ತಿರೋ ವಿಡಿಯೋ ವೈರಲ್
ಶ್ರೀರಸ್ತು ಶುಭಮಸ್ತು ಸೀರಿಯಲ್ ವಿಲನ್ ದೀಪಿಕಾ ಅವರು ರಿಯಲ್ ಲೈಫ್ನಲ್ಲಿ ಕೊರಿಯೋಗ್ರಫರ್. ಪುನೀತ್ ರಾಜ್ಕುಮಾರ್ ಸೇರಿದಂತೆ ಹಲವರಿಗೆ ನೃತ್ಯ ಸಂಯೋಜನೆ ಮಾಡಿರೋ ಇವರ ವಿಡಿಯೋ ವೈರಲ್
ದೀಪಿಕಾ ಎಂದಾಕ್ಷಣ ಸೀರಿಯಲ್ ಪ್ರೇಮಿಗಳ ಕಣ್ಣ ಮುಂದೆ ಬರುವುದು ಶ್ರೀರಸ್ತು ಶುಭಮಸ್ತು ಸೀರಿಯಲ್ ವಿಲನ್. ವಿಲನ್ ಅತ್ತೆಯ ಜೊತೆ ಸೇರಿ ಈ ವಿಲನ್ ಸೊಸೆ, ಮನೆ ಮಂದಿಗೆ ಕೊಡುತ್ತಿರುವ ತೊಂದರೆ ಅಷ್ಟಿಷ್ಟಲ್ಲ. ಎಲ್ಲರ ಎದುರೂ ಒಳ್ಳೆಯ ರೀತಿಯ ಸೋಗು ಹಾಕಿಕೊಂಡು ಇನ್ನೋರ್ವ ಸೊಸೆ ಪೂರ್ಣಿಗೂ ಕಷ್ಟ ಕೊಡುತ್ತಿದ್ದಾರೆ. ಈಗ ಅಪ್ಪನ ಜೊತೆ ಸೇರಿ ಅನಾಥೆ ಪೂರ್ಣಿಯೇ ತಾವು ಹಿಂದೊಮ್ಮೆ ತ್ಯಜಿಸಿದ ಮಗಳು ಎಂದು ನಾಟಕವಾಡುತ್ತಿದ್ದಾರೆ. ಬಿಟ್ಟುಬಂದ ಮಗಳನ್ನು ಹುಡುಕಿದರೆ ಮಾತ್ರ ಆಸ್ತಿ ಸೇರುತ್ತದೆ ಎಂದು ವಕೀಲರು ಹೇಳಿದ್ದರಿಂದ ಪೂರ್ಣಿಯನ್ನು ಮಗಳು ಎಂದು ಹೇಳಿದ್ದಾನೆ ದೀಪಿಕಾ ತಂದೆ. ತಾಯಿ ಇದನ್ನು ನಿಜ ಎಂದು ನಂಬಿದ್ದಾಳೆ. ಪೂರ್ಣಿಯೇ ನಿಜವಾದ ಮಗಳು ಹೌದೋ, ಅಲ್ಲವೋ ಎನ್ನುವುದು ಮುಂದಿನ ಪ್ರಶ್ನೆ. ಸದ್ಯ ಆಸ್ತಿಯನ್ನು ತಮ್ಮ ಹೆಸರಿಗೆ ಬರೆಸಿಕೊಳ್ಳಲು ಪೂರ್ಣಿಯನ್ನು ತನ್ನ ಅಕ್ಕ ಎಂದೇ ಸಂಬೋಧಿಸುತ್ತಿದ್ದಾಳೆ. ಒಟ್ಟಿನಲ್ಲಿ, ಈಕೆ ರೀಲ್ನಲ್ಲಿ ವಿಲನ್.
ಆದರೆ ರಿಯಲ್ ಲೈಫ್ನಲ್ಲಿ ದೀಪಿಕಾ, ಕೊರಿಯೋಗ್ರಫರ್. ಇವರ ನಿಜವಾದ ಹೆಸರು ದರ್ಶಿನಿ. ಇವರು ನಟಿಯಾಗೋ ಮೊದಲು ಮಾಡೆಲ್ (Model), ಜೊತೆಗೆ ಕೊರಿಯೋಗ್ರಾಫರ್ ಆಗಿ ಗುರುತಿಸಿಕೊಂಡವರು. ನಟ ಪ್ರಭುದೇವ, ಜಾನಿ ಮಾಸ್ಟರ್ ಮೊದಲಾದ ಜನಪ್ರಿಯ ಕೊರಿಯೋಗ್ರಫರ್ ಜೊತೆ ಅಸಿಸ್ಟಂಟ್ ಕೊರಿಯೋಗ್ರಫರ್ ಆಗಿ ಇವರು ಕೆಲಸ ಮಾಡಿದ್ದಾರೆ. ದರ್ಶಿನಿ ಶರಣ್ ನಟನೆಯ ಛೂ ಮಂತರ್ ಹಾಡಿಗೆ ಕೊರಿಯೋಗ್ರಫಿ ಮಾಡುವ ಮೂಲಕ ಅಸಿಸ್ಟೆಂಟ್ ಕೊರಿಯೋಗ್ರಫರ್ ಆಗಿ ಭಡ್ತಿ ಪಡೆದರು. ಈ ಡ್ಯಾನ್ಸ್ ಬೀಟ್ (Dence Beat) ಸಖತ್ ಸದ್ದು ಮಾಡಿತ್ತು. ಇದೀಗ ಕನ್ನಡದ ಉಪಾಧ್ಯಕ್ಷ ಸಿನಿಮಾದಲ್ಲೂ ಕೊರಿಯೋಗ್ರಫರ್ ಆಗಿ ಕೆಲಸ ಮಾಡಿದ್ದಾರೆ. ಉಪಾಧ್ಯಕ್ಷ ಸಿನಿಮಾದ ಹಾಡುಗಳಿಗೆ ಚಿಕ್ಕಣ್ಣ ಮತ್ತು ಮಲೈಕಾ ವಸುಪಾಲ್ ಗೆ ಸಖತ್ತಾಗಿ ಡ್ಯಾನ್ಸ್ ಹೇಳಿಕೊಡುವ ಮೂಲಕ ಜನಪ್ರಿಯತೆ ಪಡೆದಿದ್ದಾರೆ.
ಹಾಟ್ ಬೆಡಗಿ ಆಕಾಂಕ್ಷಾಗೆ ಹುಡುಗರೇ ಸಿಕ್ತಿಲ್ವಂತೆ! ಇದೊಂದು ಕ್ವಾಲಿಟಿ ಇದ್ರೆ ಸಾಕು... ಬನ್ನಿ ಅಂತಿದ್ದಾರೆ!
ಇವರು ಈಗ ಪೂರ್ಣಿಗೆ ಡ್ಯಾನ್ಸ್ ಹೇಳಿಕೊಡುತ್ತಿರುವ ವಿಡಿಯೋ ವೈರಲ್ ಆಗಿದೆ. ಇದರಲ್ಲಿ ಪೂರ್ಣಿಗೆ ಇವರು ಟ್ರೇನಪ್ ಮಾಡುವುದನ್ನು ನೋಡಬಹುದು. ಇನ್ನು ದರ್ಶಿನಿ ಕುರಿತು ಹೇಳುವುದಾದರೆ, ಇವರು ಓಪನ್ ದ ಬಾಟಲ್ ಹಾಡಿಗೆ ಪುನೀತ್ ರಾಜ್ ಕುಮಾರ್ ಗೆ ಜಾನಿ ಮಾಸ್ಟರ್ ಗೆ ಅಸಿಸ್ಟಂಟ್ ಕೊರಿಯೋಗ್ರಫಿ ಮಾಡಿದ್ದರು. ನನ್ನ ಕೊರಿಯೋಗ್ರಫಿ ಮೇಲೆ ನನಗಿಂತ ಹೆಚ್ಚಿನ ನಂಬಿಕೆ ಇಟ್ಟಿದ್ದ ಪುನೀತ್ ರಾಜ್ ಕುಮಾರ್ (Punith Rajkumar) ಅವರ ಆಶೀರ್ವಾದದಿಂದಲೇ ನಾನು ಇವತ್ತು ಈ ಹಂತಕ್ಕೆ ಬಂದಿದ್ದೇನೆ ಎಂದು ಹೇಳ್ತಾರೆ.
ಅಪ್ಪನ ಕನಸಿನಂತೆ ಡ್ಯಾನ್ಸರ್ (dancer) ಆಗಿ ಕರಿಯರ್ ಆರಂಭಿಸಿದ ದರ್ಶಿನಿ, ಮೊದಲಿಗೆ ತಮಿಳು ಮತ್ತು ತೆಲುಗು ರಿಯಾಲಿಟಿ ಶೋಗಳಲ್ಲಿ ಬಾಲ್ಯದಲ್ಲಿಯೇ ಭಾಗವಹಿಸಿದ್ದರು. ಕನ್ನಡದಲ್ಲಿ ನಟಿಯಾಗೋ ಮುನ್ನವೇ ಅವರು ತೆಲುಗು, ತಮಿಳು ಇಂಡಸ್ಟ್ರಿಯಲ್ಲಿ ಗುರುತಿಸಿಕೊಂಡರು. ಇದೀಗ ಕನ್ನಡ, ತೆಲುಗಿನ ಸೂಪರ್ ಸ್ಟಾರ್ ನಾಯಕರಿಗೆ ಅಂದರೆ ಪುನೀತ್ ರಾಜ್ ಕುಮಾರ್, ಯಶ್, ಸುದೀಪ್, ಶರಣ್, ಅಲ್ಲು ಅರ್ಜುನ್, ವಿಜಯ್ ದೇವರಕೊಂಡ, ನಾನಿಯಂತಹ ಮಹಾನ್ ನಟರಿಗೆ ಕೊರಿಯೋಗ್ರಫಿ ಮಾಡಿದ್ದಾರೆ. ತಮಿಳಿನಲ್ಲಿ ಜಾನಿ ಮಾಸ್ಟರ್ (Jani Master) ಅವರಿಗೆ ಅಸಿಸ್ಟಂಟ್ ಆಗಿ ಪ್ರಭುದೇವ (Prabhudeva) ಅವರಿಗೆ ಕೊರಿಯೋಗ್ರಫಿ ಮಾಡಿದ ದರ್ಶಿನಿ ಡೆಲ್ಟಾ ನಾಗರಾಜ್, ಸದ್ಯ ಕನ್ನಡದ ಮೊದಲ ಡ್ಯಾನ್ಸ್ ಕೊರಿಯೋಗ್ರಫರ್ ಆಗಿ ಮೊದಲ ಹೆಜ್ಜೆ ಇಟ್ಟಿದ್ದಾರೆ.
10 ಸೆಂ.ಮೀ. ಗಡ್ಡೆ: ಆಸ್ಪತ್ರೆಯಿಂದಲೇ ವಾಯ್ಸ್ ಮೆಸೇಜ್ ಮಾಡಿ ಬಿಕ್ಕಿ ಬಿಕ್ಕಿ ಅತ್ತ ರಾಖಿ ಸಾವಂತ್!