Asianet Suvarna News Asianet Suvarna News

10 ಸೆಂ.ಮೀ. ಗಡ್ಡೆ: ಆಸ್ಪತ್ರೆಯಿಂದಲೇ ವಾಯ್ಸ್​ ಮೆಸೇಜ್​ ಮಾಡಿ ಬಿಕ್ಕಿ ಬಿಕ್ಕಿ ಅತ್ತ ರಾಖಿ ಸಾವಂತ್​!

ರಾಖಿ ಸಾವಂತ್​ ಗರ್ಭಕೋಶದಲ್ಲಿ 10 ಸೆಂಟಿ ಮೀಟರ್​ ಗಡ್ಡೆ ಪತ್ತೆಯಾಗಿದ್ದು, ಶನಿವಾರ ಆಪರೇಷನ್​ ಮೂಲಕ ತೆಗೆಯಲಾಗುತ್ತಿದೆ. ರಾಖಿ ಈ ಕುರಿತು ವಾಯ್ಸ್​ ಮೆಸೇಜ್​ ಮಾಡಿ ಹೇಳಿದ್ದೇನು?
 

Rakhi Sawant cry trough audio message about removing of tumour  on saturday suc
Author
First Published May 17, 2024, 5:47 PM IST

ನಟಿ ರಾಖಿ ಸಾವಂತ್​ ಸದ್ಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಅವರ ಗರ್ಭಕೋಶದಲ್ಲಿ 10 ಸೆಂ.ಮೀ ಉದ್ದದ ಗಡ್ಡೆ ಪತ್ತೆಯಾಗಿದೆ. ಈ ಬಗ್ಗೆ ನಿನ್ನೆಯಷ್ಟೇ ಮಾಜಿ ಪತಿ ರಿತೇಶ್ ರಾಜ್ ಸಿಂಗ್ ಹೇಳಿದ್ದರು. ಇನ್ನೂ ಆಸ್ಪತ್ರೆಯಲ್ಲಿಯೇ ನಟಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ನಡುವೆಯೇ ರಾಖಿ ಸಾವಂತ್​ ಆಸ್ಪತ್ರೆಯಿಂದ ವಾಯ್ಸ್​ ಮೆಸೇಜ್​ ಮಾಡಿದ್ದು, 10 ಸೆಂ.ಮೀ ಗಡ್ಡೆ ಹೊರಕ್ಕೆ ಬಂದೇ ಬರುತ್ತದೆ. ಅದರಲ್ಲಿ ನಾನು ಗೆಲುವು ಸಾಧಿಸಿಯೇ ತೀರುತ್ತೇನೆ ಎಂದಿದ್ದಾರೆ. ಚಿಕ್ಕಂದಿನಿಂದಲೂ ಹಲವಾರು ಸಮಸ್ಯೆಗಳನ್ನು ಎದುರಿಸಿ ಜಯಶೀಲಳಾಗಿ ಬಂದವಳು ನಾನು. ಎಲ್ಲವನ್ನೂ ಸಹಿಸಿಕೊಳ್ಳುವ ಶಕ್ತಿ ನನ್ನಲ್ಲಿ ಇದೆ. ಇಲ್ಲಿಯ ವೈದ್ಯರು ನನ್ನ ನೆರವಿಗೆ ಇದ್ದಾರೆ. ನಾನು ಗೆದ್ದೇ ಗೆಲ್ಲುತ್ತೇನೆ. ನನ್ನ ದಿವಂಗತ ತಾಯಿ ನನ್ನ ಜೊತೆ ಇದ್ದಾರೆ ಎಂದು ರಾಖಿ ಬಿಕ್ಕಿ ಬಿಕ್ಕಿ ಅತ್ತಿದ್ದಾರೆ. ಬರುವ ಶನಿವಾರ ಚಿಕಿತ್ಸೆ ಮೂಲಕ ಗಡ್ಡೆಯನ್ನು ತೆಗೆಯಲಾಗುತ್ತಿದೆ ಎಂದೂ ಹೇಳಿದ್ದಾರೆ. 

ಅದೇ ಇನ್ನೊಂದೆಡೆ ಇವರ ಇನ್ನೋರ್ವ ಮಾಜಿ ಪತಿ ಆದಿಲ್​ ಖಾನ್​ ದುರ್ರಾನಿ ವಿಡಿಯೋ ಒಂದನ್ನು ಮಾಡಿದ್ದು, ರಾಖಿ ನಾಟಕ ಮಾಡುತ್ತಿದ್ದಾಳೆ. ಅವಳು ಸುಪ್ರೀಂಕೋರ್ಟ್​ ಆದೇಶದ ಮೇರೆಗೆ ಸರೆಂಡರ್​ ಆಗಬೇಕಿದೆ. ಜೈಲು ಶಿಕ್ಷೆಯಿಂದ ತಪ್ಪಿಸಿಕೊಳ್ಳಲು ಈ ರೀತಿಯ ನಾಟಕವಾಡುತ್ತಿದ್ದಾಳೆ ಎಂದಿದ್ದಾರೆ. ಅದೇ ಇನ್ನೊಂದೆಡೆ ಮೊದಲ ಪತಿ  ರಿತೇಶ್ ರಾಜ್ ಸಿಂಗ್ ಜನರಲ್ಲಿ ಮನವಿ ಮಾಡಿಕೊಂಡಿದ್ದಾರೆ. ರಾಖಿ ಸಾವಂತ್​ ಆಸ್ಪತ್ರೆಗೆ ದಾಖಲಾಗಿದ್ದಾಳೆ. ದಯವಿಟ್ಟು ಡ್ರಾಮಾ ಅನ್ಬೇಡಿ. ರಾಖಿ ಸಾವಂತ್​ ಏನೇ ಮಾಡಿದ್ರೂ ಡ್ರಾಮಾ ಅಂತೀರಾ. ಆದರೆ ಈ ಸಲ ಅದು ನಾಟಕವಲ್ಲ. ಸೋಷಿಯಲ್​ ಮೀಡಿಯಾದಲ್ಲಿ ರಾಖಿ ಸಾವಂತ್​ ಆಸ್ಪತ್ರೆಗೆ ಸೇರಿರೋ ಕುರಿತು ಹಲವಾರು ಮಂದಿ ವ್ಯತಿರಿಕ್ತ ಟೀಕೆ ಮಾಡಿದ್ದೀರಿ. ದಯವಿಟ್ಟು ಹಾಗೆ ಮಾಡಬೇಡಿ. ಆಕೆಯ ಸ್ಥಿತಿ ಗಂಭೀರವಾಗಿದೆ. ಇದು ಸುಳ್ಳಲ್ಲ ಎಂದಿದ್ದರು. 

ಶಾರುಖ್​ ಖಾನ್​ ಸಾಯಲ್ಲ... ನಾವು ಮಾತ್ರ ಸಾಯ್ತೇವಾ ಎಂದ ಮಕ್ಕಳು! ಶಾಕಿಂಗ್​ ವಿಡಿಯೋ ವೈರಲ್​

ಅಂದಹಾಗೆ, ರೀತೇಶ್​ ಹೇಳೀರುವ ಪ್ರಕಾರ  ರಾಖಿಯ ಗರ್ಭಕೋಶದಲ್ಲಿ ಗಡ್ಡೆ ಪತ್ತೆಯಾಗಿದೆ. ಅವರ ಸ್ಥಿತಿ ಸ್ವಲ್ಪ ಗಂಭೀರವಾಗಿದೆ ಎಂದಿದ್ದರು.  ರಾಖಿಯವರ  ಆರೋಗ್ಯದ ಬಗ್ಗೆ ಅಪ್‌ಡೇಟ್ ನೀಡಿರುವ ರಿತೇಶ್​,  ಎದೆ ಮತ್ತು ಹೊಟ್ಟೆ ನೋವಿನಿಂದಾಗಿ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು.  ಹಲವಾರು ಪರೀಕ್ಷೆಗಳನ್ನು ನಡೆಸಿದ ನಂತರ ವೈದ್ಯರು ರಾಖಿಯ ಗರ್ಭಾಶಯದಲ್ಲಿ ಗಡ್ಡೆಯನ್ನು ಪತ್ತೆ ಮಾಡಿದ್ದಾರೆ. ಇದು ಕ್ಯಾನ್ಸರ್ ಇರಬಹುದೆಂಬ ಶಂಕೆಗಳಿವೆ, ಆದರೆ ದೃಢೀಕರಿಸಲು ಹೆಚ್ಚಿನ ಪರೀಕ್ಷೆಯ ಫಲಿತಾಂಶಗಳು ಕಾಯುತ್ತಿವೆ. ರಾಖಿ ಶೀಘ್ರ ಗುಣಮುಖರಾಗಲಿ ಎಂದು ಎಲ್ಲರೂ ಪ್ರಾರ್ಥಿಸುವಂತೆ ರಿತೇಶ್ ಕೋರಿದ್ದರು.


 ವೈದ್ಯರು ಅವಳನ್ನು ನೋಡಿಕೊಳ್ಳುತ್ತಿದ್ದಾರೆ.   ಆಕೆಯ ಗರ್ಭಾಶಯದಲ್ಲಿ ಗಡ್ಡೆಯನ್ನು ಕಂಡುಹಿಡಿದಿದ್ದಾರೆ. ಅವಳಿಗೂ ಹೊಟ್ಟೆ ನೋವು ಇತ್ತು. ಇದು ಕ್ಯಾನ್ಸರ್ ಇರಬಹುದು ಎಂದು ವೈದ್ಯರು ಶಂಕಿಸಿದ್ದಾರೆ. ಪರೀಕ್ಷೆಗಳು ನಡೆಯುತ್ತಿವೆ. ವೈದ್ಯರು ಶಸ್ತ್ರಚಿಕಿತ್ಸೆಯನ್ನು ಪ್ರಸ್ತಾಪಿಸಿದ್ದಾರೆ. ಆದರೆ ಇದು ಕ್ಯಾನ್ಸರ್ ಆಗಿದೆಯೇ ಅಥವಾ ಇಲ್ಲವೇ ಎಂಬುದನ್ನು ಅವರು ಮೊದಲು ಪರೀಕ್ಷಿಸಲು ಬಯಸುತ್ತಾರೆ ಎಂದು ರಿತೇಶ್​ ಹೇಳಿದ್ದರು. 

ಹಾಟ್​ ಬೆಡಗಿ ಆಕಾಂಕ್ಷಾಗೆ ಹುಡುಗರೇ ಸಿಕ್ತಿಲ್ವಂತೆ! ಇದೊಂದು ಕ್ವಾಲಿಟಿ ಇದ್ರೆ ಸಾಕು... ಬನ್ನಿ ಅಂತಿದ್ದಾರೆ!

 

Latest Videos
Follow Us:
Download App:
  • android
  • ios