Asianet Suvarna News Asianet Suvarna News

ಗಟ್ಟಿಮೇಳ ಸೀರಿಯಲ್​ನ ಕೊನೆಯ ದಿನದ ಶೂಟಿಂಗ್​ ಹೇಗಿತ್ತು? ಸಂಪೂರ್ಣ ವಿಡಿಯೋ ಶೇರ್​ ಮಾಡಿದ ಅದಿತಿ!

ಗಟ್ಟಿಮೇಳ ಸೀರಿಯಲ್​ನ ಕೊನೆಯ ದಿನದ ಶೂಟಿಂಗ್​ ಹೇಗಿತ್ತು? ನಟ-ನಟಿಯರು ಹೇಗೆಲ್ಲಾ ರಿಯಾಕ್ಟ್​ ಮಾಡಿದರು? ಇದರ ಸಂಪೂರ್ಣ ವಿಡಿಯೋ ಶೇರ್​ ಮಾಡಿದ್ದಾರೆ ಅದಿತಿ.
 

Shooting of the last day of Gattimela serial shared by Aditi Priya Achar suc
Author
First Published Jan 13, 2024, 10:00 AM IST

ಇಂದು ಧಾರಾವಾಹಿಗಳು ಜನರಿಗೆ ಅಚ್ಚುಮೆಚ್ಚಾಗುವುದ ಜೊತೆಜೊತೆಗೇನೇ ಅದರಲ್ಲಿ ನಟಿಸುವ ಕಲಾವಿದರೂ ತಾವು ನಟಿಸುವ ಧಾರಾವಾಹಿಯಲ್ಲಿರುವ ನಟ-ನಟಿಯರ ಜೊತೆ ಬಾಂಧವ್ಯ ಹೊಂದುತ್ತಾರೆ. ಇಂದಿನ ಧಾರಾವಾಹಿಗಳು ಏನಿಲ್ಲವೆಂದರೂ 4-5 ವರ್ಷ ಓಡುತ್ತದೆ. ಈ ಸಂದರ್ಭದಲ್ಲಿ ಧಾರಾವಾಹಿ ಪಾತ್ರಧಾರಿಗಳು ಒಂದೇ ಮನೆಯವರು ಎನಿಸಿ ಅಷ್ಟು ಕ್ಲೋಸ್​ ಆಗುತ್ತಾರೆ, ಅವರಲ್ಲಿ ಒಂದೇ ಕುಟುಂಬ ಎನ್ನುವ ಭಾವನೆ ಬರುವುದು ಉಂಟು. ಆದ್ದರಿಂದ ಯಾವುದೇ ಸೀರಿಯಲ್​ ಮುಗಿಯುವ ಹಂತಕ್ಕೆ ಬಂದಾಗ ಎಲ್ಲಾ ಪಾತ್ರಧಾರಿಗಳಿಗೂ ನೋವಾಗುವುದು ಸಹಜವೇ. ಏನೋ ಕಳೆದುಕೊಂಡ ಅನುಭವ ಪಕ್ಕಾ  ಆಗುತ್ತದೆ. ಬಹಳ ವರ್ಷ ಒಟ್ಟಿಗೇ ಕಲಿತು ಕೊನೆಗೆ ಬೇರೆ ಬೇರೆಯಾಗುವಾಗ ಕ್ಲಾಸ್​ಮೇಟ್ಸ್​ ಅಥವಾ ಕಚೇರಿ ಸಹೋದ್ಯೋಗಿಗಳಲ್ಲಿ ಆಗುವ ನೋವಿನ ಭಾವನೆಯೇ ಇಲ್ಲೂ ಆಗುವುದು ಉಂಟು.

ಈಗ ಅಂಥದ್ದೇ ಒಂದು ವಿಡಿಯೋ ಶೇರ್​ ಮಾಡಿಕೊಂಡಿದ್ದಾರೆ ಗಟ್ಟಿಮೇಳದ ಸೀರಿಯಲ್​ ಅದಿತಿ.  ಐದು ವರ್ಷಗಳ ಕಾಲ 1245 ಸಂಚಿಕೆ ಪೂರ್ಣಗೊಳಿಸಿರುವ ಗಟ್ಟಿಮೇಳ ಸೀರಿಯಲ್​  ಜನವರಿ 5ರಂದು ಮಂಗಳ ಹಾಡಲಾಗಿದೆ. 2019ರ ಮಾರ್ಚ್​ 11ರಿಂದ ಶುರುವಾಗಿದ್ದ ಈ ಸೀರಿಯಲ್​ ಐದು ವರ್ಷಗಳವರೆಗೂ ಜನರನ್ನು ಹಿಡಿದಿಟ್ಟುಕೊಂಡಿರುವುದು ಸುಳ್ಳಲ್ಲ. ಕೆಲವೊಂದು ಪಾತ್ರಗಳಲ್ಲಿ ಬದಲಾವಣೆಯಾದರೂ ಮುಖ್ಯ ಪಾತ್ರಧಾರಿಗಳು ಅವರೇ ಕೊನೆಯವರೆಗೆ ಇದ್ದುದು ಈ ಸೀರಿಯಲ್​ನ ಇನ್ನೊಂದು ಹೈಲೈಟ್​ನಲ್ಲಿ ಒಂದು. ಕಳೆದ  ಜನವರಿ ತಿಂಗಳಲ್ಲಿ 1000 ಸಂಚಿಕೆ ಪೂರೈಸಿದ್ದ ಸೀರಿಯಲ್​ ಕೊನೆಗೂ 1244 ಸಂಚಿಕೆ ಪೂರೈಸಿ ಮುಕ್ತಾಯಗೊಂಡಿದೆ. 

ಸಕತ್​ ಸುದ್ದಿಯಲ್ಲಿರೋ ಲಕ್ಷದ್ವೀಪ ಹೇಗಿದೆ? ರೋಚಕ ಮಾಹಿತಿ ನೀಡುತ್ತಲೇ ಸಂಪೂರ್ಣ ದರ್ಶನ ಮಾಡಿಸಿದ ಡಾ.ಬ್ರೋ...

ಧಾರಾವಾಹಿಗಳಲ್ಲಿ ನಡೆಯುವ ಕಥೆ ಕೇವಲ ಕಥೆ ಮಾತ್ರ, ಅದರಲ್ಲಿ ನಟಿಸುವವರು ನಟರು ಮಾತ್ರ, ಅದೇನೂ ನಿಜ ಜೀವನದ ಕಥೆಯೂ ಅಲ್ಲ, ಪಾತ್ರಧಾರಿಗಳು ಮಾಡುತ್ತಿರುವುದು ನಟನೆ ಮಾತ್ರ ಎಂದು ಸೀರಿಯಲ್​ ಪ್ರಿಯರಿಗೆ ಸಂಪೂರ್ಣ ಅರಿವಿದ್ದರೂ, ಅಂದಿನಿಂದ ಇಂದಿನವರೆಗೂ  ಧಾರಾವಾಹಿಗಳು ಕೇವಲ ಮನರಂಜನೆಗೆ ಮಾತ್ರ ಸೀಮಿತವಾಗಿಲ್ಲ, ಇಲ್ಲಿ ಬರುವ ಪಾತ್ರಗಳಲ್ಲಿ ತಮ್ಮನ್ನೇ ತಾವು ನೋಡಿಕೊಂಡು, ಕೆಲವೊಮ್ಮೆ ಆ ಪಾತ್ರಗಳೇ ತಾವಾಗಿಬಿಡುವ ದೊಡ್ಡ ಪ್ರೇಕ್ಷಕ ವರ್ಗವೇ ಇದೆ. ಸೀರಿಯಲ್​ಗಳಲ್ಲಿ ಬರುವ ನಾಯಕರನ್ನು ಹೊರಗಡೆ ಕಂಡಾಗ ಹೊಗಳುವುದು, ವಿಲನ್​ ಪಾತ್ರಧಾರಿಗಳು ಬೇರೆ ಕಡೆ ಸಿಕ್ಕರೂ ತಿರಸ್ಕಾರದಿಂದ ನೋಡುವುದು... ಹೀಗೆ ಸೀರಿಯಲ್​ ಪಾತ್ರಗಳೆಲ್ಲವೂ ನಿಜ ಜೀವನದ ಪಾತ್ರಗಳಂತೆಯೇ ಅಂದುಕೊಂಡು ಅದನ್ನು ಆಸ್ವಾದಿಸುವ ಪ್ರೇಕ್ಷಕ ವರ್ಗ ಇರುವುದು ಸೀರಿಯಲ್​ಗಳ ಟಿಆರ್​ಪಿ ರೇಟ್​ ನೋಡಿದರೆ ತಿಳಿಯುತ್ತದೆ. ಅದೇ ರೀತಿ ಗಟ್ಟಿಮೇಳ ಕೂಡ ಪ್ರೇಕ್ಷಕರಿಗೆ ಅಚ್ಚುಮೆಚ್ಚೇ ಆಗಿತ್ತು.

ಹಾಗಿದ್ದರೆ ಈ ಸೀರಿಯಲ್​ನ ಕೊನೆಯ ದಿನಗಳ ಶೂಟಿಂಗ್​ ಹೇಗಿದ್ದವು? ಮೇಕಪ್​ ರಹಿತವಾಗಿ ಈ ನಟ- ನಟಿಯರು ಹೇಗೆ ಕಾಣಿಸಿಕೊಂಡಿದ್ದರು? ಕೊನೆಯ ದಿನ ಎಲ್ಲರೂ ಹೇಗೆ ಮಿಸ್​ ಮಾಡಿಕೊಂಡರು? ನಟ-ನಟಿಯರಂತೆಯೇ ತಾಂತ್ರಿಕ ವರ್ಗ ಕೂಡ ಸೀರಿಯಲ್​ ಸಕ್ಸಸ್​ಗೆ ಬಹುದೊಡ್ಡ ಕೊಡುಗೆ ನೀಡುತ್ತದೆ. ಅವರೂ ಹೇಗೆಲ್ಲಾ ರಿಯಾಕ್ಟ್​ ಮಾಡಿದರು ಎಂಬುದನ್ನು ಅದಿತಿ ಹಂಚಿಕೊಂಡಿದ್ದಾರೆ. ಅಂದಹಾಗೆ, ಅದಿತಿ ಪಾತ್ರಧಾರಿಯ ನಿಜವಾದ ಹೆಸರು ಪ್ರಿಯಾ ಜೆ.ಆಚಾರ್. ತಮ್ಮ ಯೂಟ್ಯೂಬ್​ ಚಾನೆಲ್​ನಲ್ಲಿ ಅವರು ಕೊನೆಯ ದಿನದ ಶೂಟಿಂಗ್​ ಬಗ್ಗೆ ಹೇಳಿದ್ದಾರೆ. 

ಐದು ವರ್ಷ ಹಿರಿಯ ಬಾರ್​ ಡ್ಯಾನ್ಸರ್​, ನೈಟ್​ ಗರ್ಲ್​ ಜೊತೆ ಆರ್ಯನ್​ ಡೇಟಿಂಗ್​? ಈಕೆ ಬಾಲಿವುಡ್​ ಹಾಟ್​ ನಟಿ!

Follow Us:
Download App:
  • android
  • ios