Asianet Suvarna News Asianet Suvarna News

ಐದು ವರ್ಷ ಹಿರಿಯ ಬಾರ್​ ಡ್ಯಾನ್ಸರ್​, ನೈಟ್​ ಗರ್ಲ್​ ಜೊತೆ ಆರ್ಯನ್​ ಡೇಟಿಂಗ್​? ಈಕೆ ಬಾಲಿವುಡ್​ ಹಾಟ್​ ನಟಿ!

ತಮಗಿಂತ ಐದು ವರ್ಷ ಹಿರಿಯ ಬಾರ್​ ಡ್ಯಾನ್ಸರ್​, ನೈಟ್​ ಗರ್ಲ್​ ಹಾಗೂ ಬಾಲಿವುಡ್​ ಬೆಡಗಿ ಜೊತೆ ಶಾರುಖ್​ ಖಾನ್​ ಪುತ್ರ ಆರ್ಯನ್ ಖಾನ್​​ ಡೇಟಿಂಗ್ ಮಾಡುತ್ತಿದ್ದಾರಾ​? ಏನಿದು ವಿಷ್ಯ?
 

Shah Rukh Khans Son Aryan Khan Is Dating Five Year Older Nora Fatehi Fans Speculate suc
Author
First Published Jan 11, 2024, 2:14 PM IST

 2021ರಲ್ಲಿ ಶಾರುಖ್​ ಖಾನ್​ ಪುತ್ರ ಆರ್ಯನ್​ ಖಾನ್​ ಡ್ರಗ್ಸ್​ ಕೇಸ್​ನಲ್ಲಿ ಸಿಲುಕಿರುವುದು ಎಲ್ಲರಿಗೂ ತಿಳಿದೇ ಇದೆ.   ಕ್ರೂಸ್ ಡ್ರಗ್ಸ್ ಪ್ರಕರಣ (Cruise Drugs Case) ಎಂದು ಇದು ಫೇಮಸ್​ ಆಗಿತ್ತು. ಶಾರುಖ್​ ಪುತ್ರ ಆರ್ಯನ್​ ಸೇರಿದಂತೆ ದೊಡ್ಡ ದೊಡ್ಡ ಸೆಲೆಬ್ರಿಟಿಗಳು, ಅವರ ಮಕ್ಕಳು ಈ ಕೇಸ್​ನಲ್ಲಿ ಸಿಲುಕಿದ್ದರಿಂದ ಇದು ಭಾರಿ ಸದ್ದು ಮಾಡಿತ್ತು.  ಈ ಘಟನೆಯಿಂದ ಶಾರುಖ್​ ಖಾನ್​ ಜರ್ಜರಿತರಾಗಿದ್ದೂ ಸುಳ್ಳಲ್ಲ. ಇಂದಿಗೂ ಇದರ ಕುರಿತು ಚರ್ಚೆಯಾಗುತ್ತಲೇ ಇದೆ. 2021 ಅಕ್ಟೋಬರ್ 2 ರಂದು, ಕ್ರೂಸ್ ಶಿಪ್ ಮೇಲೆ ಎನ್ ಸಿಬಿ ದಾಳಿ ನಡೆಸಿತ್ತು. ಇದರಲ್ಲಿ ಡ್ರಗ್ಸ್​ ಪತ್ತೆ ಇದರಲ್ಲಿ ಆರ್ಯನ್ ಖಾನ್ ಸೇರಿದಂತೆ ಒಟ್ಟು 19 ಮಂದಿಯನ್ನು ಬಂಧಿಸಲಾಗಿತ್ತು.  ಮುಂಬೈನ ಸಮುದ್ರ ತೀರದ ಐಷಾರಾಮಿ ಹಡಗಿನಲ್ಲಿ ಡ್ರಗ್ ಪಾರ್ಟಿ ಮಾಡುತ್ತಿದ್ದಾರೆ ಎಂಬ ಆರೋಪದ ಮೇಲೆ ಈ ಕಾರ್ಯಾಚರಣೆ ನಡೆದಿತ್ತು. ನಂತರ ಆರ್ಯನ್​ ಸೇರಿದಂತೆ ಕೆಲವರನ್ನು ಬಂಧಿಸಲಾಗಿತ್ತು. 28 ದಿನಗಳವರೆಗೆ ಜೈಲಿನಲ್ಲಿದ್ದ ಆರ್ಯನ್​ ಅವರಿಗೆ ನಂತರ ನಡೆದ ನಾಟಕೀಯ ಬೆಳವಣಿಗೆಯಲ್ಲಿ ಕೊನೆಗೆ ಕೋರ್ಟ್​ ಕ್ಲೀನ್​ ಚಿಟ್​ ನೀಡಿತ್ತು.

ಇದೀಗ ಈ ವಿಷಯ ಅಲ್ಲಿಗೇ ತಣ್ಣಗಾಗಿದೆ. ಸದ್ಯ ಆರ್ಯನ್​ ಖಾನ್​ ಡೇಟಿಂಗ್​ ವಿಷಯ ಸಕತ್​ ಸದ್ದು ಮಾಡುತ್ತಿದೆ. 59 ವರ್ಷದ ಅಪ್ಪ ಶಾರುಖ್​ ಖಾನ್​ ಅವರ ಹಿಂದೆಯೇ ಇಂದಿಗೂ ಹಲವು ತರುಣಿಯರು ಬೀಳುವುದು ಇದೇ ಅಂದ ಮೇಲೆ, ಇನ್ನು ಅವರ ಮಗ, 26 ವರ್ಷದ ಆರ್ಯನ್​ ಬಗ್ಗೆ ಕೇಳಬೇಕೆ? ಹೇಳಿ ಕೇಳಿ ಸ್ಟಾರ್​ ಕಿಡ್​. ಅದರಲ್ಲಿಯೂ ಶಾರುಖ್​ ಪುತ್ರ ಬೇರೆ. ಈ ಚಿಕ್ಕ ವಯಸ್ಸಿನಲ್ಲಿಯೇ ಆರ್ಯನ್​ ಖಾನ್​ ಹೆಸರು ಬಹಳ ನಟಿಯರ ಜೊತೆ ಕೇಳಿ ಬಂದಿದ್ದಿದೆ.
ಕಿತ್ತಾಟ, ಬೀದಿ ರಂಪಾಟ, ಬಡಿದಾಟ, ಕೋರ್ಟ್​ನಲ್ಲಿ ಕಾದಾಟ... ಮತ್ತೆ ಒಂದಾದ ಬಿಗ್​ಬಾಸ್​ ಆಲಿಯಾ-ಸಿದ್ದಿಕಿ!

ಪಾಕಿಸ್ತಾನಿ ನಟಿ ಸಾದಿಯಾ ಖಾನ್ ಸೇರಿದಂತೆ ಹಲವರ ಜೊತೆ ಆರ್ಯನ್​ ಖಾನ್​ ಡೇಟಿಂಗ್ ವಿಷಯ ಸಕತ್​ ಸದ್ದು ಮಾಡುತ್ತಲೇ ಇದೆ. ಇದೀಗ ಕುತೂಹಲದ ಬೆಳವಣಿಗೆಯೊಂದರಲ್ಲಿ ಆರ್ಯನ್​ ಖಾನ್​ ತಮಗಿಂತ ಐದು ವರ್ಷ ದೊಡ್ಡವರಾಗಿರುವ ಬಾರ್​ ಡ್ಯಾನ್ಸರ್​ ಹಾಗೂ ಬಾಲಿವುಡ್​ನ ಹಾಟೆಸ್ಟ್​ ತಾರೆ ಎಂದೇ ಫೇಮಸ್​ ಆಗಿರೋ ನೋರಾ ಫತೇಲಿ ಜೊತೆ ಡೇಟಿಂಗ್​ ಮಾಡುತ್ತಿದ್ದಾರೆ ಎನ್ನುವ ವಿಷ್ಯ ವೈರಲ್​ ಆಗುತ್ತಿದೆ. ಅಷ್ಟಕ್ಕೂ ಕಳೆದ ಕೆಲವು ತಿಂಗಳುಗಳಿಂದ ಇವರಿಬ್ಬರ ಬಗ್ಗೆ ಸಕತ್​ ಚರ್ಚೆಯಾಗುತ್ತಲೇ ಇದೆ. ಇದೀಗ ವಿಷಯ ಮತ್ತೆ ಮುನ್ನೆಲೆಗೆ ಬಂದಿದೆ. ಕೆಲವು ತಿಂಗಳ ಹಿಂದೆ ಇವರಿಬ್ಬರೂ ಒಂದೇ ಜಾಗದಲ್ಲಿ, ಒಟ್ಟಿಗೇ ಇದ್ದ ಫೋಟೋ ವೈರಲ್​ ಆಗಿ ಹಲ್​ಚಲ್​ ಸೃಷ್ಟಿಸಿತ್ತು. ಇವರಿಬ್ಬರ ಫೋಟೋವನ್ನು  ಪ್ರತ್ಯೇಕವಾಗಿ ಶೇರ್​ ಮಾಡಲಾಗಿದ್ದರೂ,  ಎರಡು ಫೋಟೋಗಳು ಒಂದೇ ಕಡೆಯದ್ದು ಎಂದು ನೆಟ್ಟಿಗರು ಪತ್ತೆ ಮಾಡಿದ್ದರು. ಇದಕ್ಕೂ ಮೊದಲು ನೋರಾ ಹೆಸರು ನಿರ್ಮಾಪಕ ಕರಣ್​ ಜೋಹರ್​ ಜೊತೆ ಕೇಳಿ ಬಂದಿತ್ತು. ಇದಾದ ಬಳಿಕ ಆರ್ಯನ್​ ಖಾನ್​  ಜೊತೆ ಥಳಕು ಹಾಕಿಕೊಂಡಿದೆ. 

ಅಂದಹಾಗೆ, ನೋರಾ ಫತೇಲಿ ಕುರಿತು ಹೇಳುವುದಾದರೆ, ಬಾಲಿವುಡ್‌ನಲ್ಲಿ ಇತ್ತೀಚೆಗೆ ಭಾರಿ ಸದ್ದು ಮಾಡುತ್ತಿದ್ದಾರೆ.ಇವರು  ಮೂಲತಃ ಕೆನಡಾದವರು. ಹಿಂದಿ ಚಿತ್ರರಂಗದಲ್ಲಿ ಸಿಕ್ಕಾಪಟ್ಟೆ ಬೇಡಿಕೆ ಸೃಷ್ಟಿಸಿಕೊಂಡಿದ್ದಾರೆ. ಅವರು ನರ್ತಿಸಿದ ಹಾಡುಗಳು ಯೂಟ್ಯೂಬ್‌ನಲ್ಲಿ ಕೋಟ್ಯಂತರ ಬಾರಿ ವೀಕ್ಷಣೆ ಕಾಣುತ್ತವೆ. ಹಿಂದಿ ಮಾತ್ರವಲ್ಲದೆ ದಕ್ಷಿಣ ಭಾರತದ ಚಿತ್ರರಂಗದಲ್ಲೂ ನೋರಾ ನಟಿಸಿದ್ದಾರೆ.  ಬಾಹುಬಲಿ ಸಿನಿಮಾದ 'ಮನೋಹರಿ..' ಹಾಡಿನ ಮೂಲಕ ನೋರಾಗೆ   ದೊಡ್ಡ ಬ್ರೇಕ್‌ ಸಿಕ್ಕಿತ್ತು. 

ಪತ್ರಕರ್ತ ಮತ್ತು ಸಿನಿಮಾ ವಿಮರ್ಶಕ ಅನ್ನೋ ಟೈಟಲ್‌ ಜತೆಗೆ ಹಿಂದಿ ಸಿನಿಮಾಗಳ ವಿದೇಶಿ ಸೆನ್ಸಾರ್‌ ಬೋರ್ಡ್‌ನ ಸದಸ್ಯನಾಗಿಯೂ ಕಾರ್ಯ ನಿರ್ವಹಿಸುತ್ತಿರೋ  ಉಮೈರ್ ಸಂಧು ಈ ಹಿಂದೆ ನೋರಾ ಬಗ್ಗೆ ಅತ್ಯಂತ ಕೆಟ್ಟದಾಗಿ ಕಮೆಂಟ್​ ಮಾಡಿದ್ದರು.  ಐಟಂ ಡ್ಯಾನ್ಸರ್‌ ಕೂಡ ಆಗಿರುವ ನೋರಾ ಫತೇಹಿ ಬಗ್ಗೆ ಉಮೈರ್‌ ಎಕ್ಸ್​ ಖಾತೆಯಲ್ಲಿ ಬರೆದುಕೊಂಡಿದ್ದರು. ಅಷ್ಟಕ್ಕೂ ಅವರು ಹೇಳಿದ್ದೇನೆಂದರೆ,  ಇತ್ತೀಚಿನ ದಿನಗಳಲ್ಲಿ ಭಾರತದಲ್ಲಿ ಅತ್ಯಂತ ದುಬಾರಿ ನೈಟ್‌ ಗರ್ಲ್‌ ಯಾರೆಂದರೆ ಅದು ನೋರಾ ಫತೇಹಿ. ಪ್ರತಿಯೊಬ್ಬ ನಟ, ರಾಜಕಾರಣಿ, ಉದ್ಯಮಿಗಳು ಅದರಲ್ಲೂ ಅಂಬಾನಿ ಸಹ ಈಕೆ ಜತೆ ಮಲಗಲು ಇಷ್ಟಪಡುತ್ತಾರೆ ಎಂದು ಬರೆದುಕೊಂಡಿದ್ದರು.  ಅದಕ್ಕೆ ಪರ- ವಿರೋಧ ನಿಲುವು ವ್ಯಕ್ತವಾಗಿತ್ತು. ಅಂದಹಾಗೆ ನೋರಾ ಅವರಿಗೆ ಈಗ 31 ವಯಸ್ಸು, ಆರ್ಯನ್​ ಖಾನ್​ಗೆ 25 ವರ್ಷ ವಯಸ್ಸು. ಇವರೇ ಒಮ್ಮೆ ತಾವು ಹುಕ್ಕಾ ಬಾರ್​ನಲ್ಲಿ ಡ್ಯಾನ್ಸ್​ ಮಾಡುತ್ತಿರುವುದಾಗಿ ಹೇಳಿಕೊಂಡಿದ್ದರು. 

ಎಫ್​ಐಆರ್​ ಬೆನ್ನಲ್ಲೇ ಎಚ್ಚೆತ್ತುಕೊಂಡ ಅನ್ನಪೂರ್ಣಿ! ಕ್ಷಮೆ ಕೋರುವ ಜೊತೆಗೆ ಸ್ಟ್ರೀಮಿಂಗ್​ ಕೂಡ ರದ್ದು

Follow Us:
Download App:
  • android
  • ios