ಸಿಹಿ ಹೋದ್ಲು, ಸುಬ್ಬಿ ಬಂದ್ಲು ಢುಂ ಢುಂ ಢುಂ, ಜೆಸಿಬಿ ಏರಿದ ಸುಬ್ಬಿ ಕಂಡು ವೀಕ್ಷಕರು ಗರಂ

 ಸೀತಾರಾಮದಲ್ಲಿ ಸಿಹಿಯ ಮರಣ ಆಕೆಯ ಮನೆಯವರಿಗೆ ಮಾತ್ರವಲ್ಲ, ಈ ಸೀರಿಯಲ್ ವೀಕ್ಷಕರಿಗೂ ಅರಗಿಸಿಕೊಳ್ಳಲಾಗದ ತುತ್ತಾಗಿದೆ. ಆದರೆ ಎಲ್ಲರ ಚಿಂತೆ ದೂರ ಮಾಡಲು ಇದೀಗ ಸುಬ್ಬಿ ಎಂಟ್ರಿ ಕೊಟ್ಟಿದ್ದಾಳೆ. ಇವಳು ಜೆಸಿಬಿ ಏರಿದ್ದನ್ನು ಕಂಡು ವೀಕ್ಷಕರು ಗರಂ ಆಗಿರೋದ್ಯಾಕೆ?

seetharama serial subbi entry over hyped viewers get angry

ಸೀತಾರಾಮ ಸೀರಿಯಲ್‌ನಲ್ಲಿ ಸಿಹಿ ಆಕ್ಸಿಡೆಂಟ್‌ನಲ್ಲಿ ಕೊನೆಯುಸಿರೆಳೆದಿದ್ದಾಳೆ. ಆತ್ಮವಾಗಿ ತಾನು ಓಡಾಡಿಕೊಂಡಿದ್ದ ಜಾಗದಲ್ಲೆಲ್ಲ ಓಡಾಡ್ತಿದ್ದಾಳೆ. ಅಲ್ಲಿ ನಡೀತಿರೋದೆಲ್ಲ ಅವಳಿಗೆ ಗೊತ್ತಾಗ್ತಿದೆ. ಆದರೆ ಮನೆಯವರ ಪಾಲಿಗೆ ಅವಳು ತೀರಿಕೊಂಡಿದ್ದಾಳೆ. ಈ ನಡುವೆ ಸುಬ್ಬಿ ಅನ್ನೋ ಹುಡುಗಿ ಬಂದಿದ್ದಾಳೆ. ಇವಳು ಸಿಹಿಯದೇ ರೂಪ ಇರುವವಳು. ಅವಳ ಟ್ವಿನ್ ಸಿಸ್ಟರ್ ಆಗಿರೋ ಚಾನ್ಸಸ್ ಇದೆ. ಅವಳ ಕತೆ ಏನು ಅನ್ನೋದು ಇನ್ನು ಮೇಲಷ್ಟೇ ರಿವೀಲ್ ಆಗಬೇಕು. ಈ ನಡುವೆ ಫುಲ್‌ ಬಿಲ್ಡಪ್‌ನಲ್ಲಿ ಸುಬ್ಬಿ ಎಂಟ್ರಿ ಕೊಟ್ಟಿದ್ದಾಳೆ. ಜೆಸಿಬಿ ಏರಿ ಯಾವ ಹೀರೋಗೂ ಕಡಿಮೆ ಇಲ್ಲದ ಹಾಗೆ ಎಂಟ್ರಿ ಕೊಟ್ಟಿದ್ದಾಳೆ. ಇದಕ್ಕೆ ವೀಕ್ಷಕರಿಂದ ಏನೇನೆಲ್ಲ ಪ್ರತಿಕ್ರಿಯೆ ಬರ್ತಿದೆ.

ಆದರೆ ಈ ಪುಟಾಣಿ ಅಮ್ಮನ ಪ್ರೀತಿಗಾಗಿ ಹಂಬಲಿಸುತ್ತಿರೋದು ಮಾತ್ರ ಗೊತ್ತಾಗ್ತಿದೆ. ಏಕೆಂದರೆ ಈ ಹಿಂದೆ ಅವಳು ಸೀತಾರಾಮ ಹಾಗೂ ಶ್ರಾವಣಿ ಸುಬ್ರಹ್ಮಣ್ಯ ಎಪಿಸೋಡ್‌ಗಳ ಮಹಾ ಸಂಚಿಕೆಯಲ್ಲಿ ಕಾಣಿಸಿಕೊಂಡಿದ್ಲು. ಅದರಲ್ಲಿ ಅವಳೊಬ್ಬ ಬೀದಿ ಬದಿ ಸರ್ಕಸ್ ಮಾಡೋ ಅಲೆಮಾರಿಗಳ ಮಗಳು. ಜನರೆಲ್ಲ ಈ ಅಲೆಮಾರಿಗಳು ಎತ್ತರದಲ್ಲಿ ತಂತಿ ಮೇಲೆ ನಡೆಯೋದನ್ನ ನೋಡ್ತಿರುವಾಗ ಇವಳು ಮೆಲ್ಲ ಅಲ್ಲಿದ್ದವರ ಪರ್ಸ್ ಹಾರಿಸ್ತಾಳೆ. ಹಾಗೇ ಶ್ರಾವಣಿಯ ಪರ್ಸನ್ನೂ ಹಾರಿಸಿದ್ಲು. ಆಮೇಲೆ ಬಚ್ಚಿಟ್ಟುಕೊಂಡಿದ್ಲು. ಯಾವಾಗ ಪರ್ಸ್ ಹುಡುಕ್ತ ಶ್ರಾವಣಿ, ಅದರಲ್ಲಿ ನನ್ನ ಅಮ್ಮನ ಫೋಟೋ ಇತ್ತು ಅಂತ ಹಪಹಪಿಸೋದಕ್ಕೆ ಶುರು ಮಾಡಿದ್ಲೋ ಆಗ ಮೆತ್ತಗೆ ಬಂದು ಅವಳ ಕಾಲ ಬಳಿ ಪರ್ಸ್ ಹಾಕಿ ಹೋಗ್ತಾಳೆ. ಶ್ರಾವಣಿ ಇವಳನ್ನು ಹಿಂಬಾಲಿಸಿಕೊಂಡು ನೋಡಿದರೆ ಡಿಟ್ಟೋ ಸಿಹಿಯ ಪ್ರತಿರೂಪ.

ಸೀತಾರಾಮದಲ್ಲಿ ಸಿಹಿ ಪ್ರೇತ ಪ್ರೇಕ್ಷಕರಿಗೆ ಇಷ್ಟವಾಗದೇ ಹೋದ್ರೂ, ಭಾರ್ಗವಿ ಸಿಂಪಲ್ ಲುಕ್ ಲವ್ಲಿ ಅಂತಿದ್ದಾರೆ!

ಅವಳು ಸಿಹಿಯೇ ಅಂತ ಸುಬ್ಬು ಹತ್ರ ವಾದನೂ ಮಾಡಿದ್ಲು. ಆದರೆ ಸುಬ್ಬು ಅವಳನ್ನು ಕರೆದುಕೊಂಡು ಹೋಗಿಬಿಟ್ಟ. ಆಮೇಲೆ ಈ ಪ್ರಸ್ತಾಪ ಬರಲಿಲ್ಲ. ಯಾವಾಗ ಸಿಹಿ ಸತ್ತುಹೋದ ಎಪಿಸೋಡ್ ಬರೋದಕ್ಕೆ ಶುರುವಾಯ್ತೋ ಆಗ ಸುಬ್ಬಿ ಬಗೆಗಿನ ಪ್ರೋಮೋಗಳು ಬರಲಾರಂಭಿಸಿದವು. ಈಗ ಅಂತೂ ಸಿಹಿ ಸತ್ತಿದ್ದರೂ ಸುಬ್ಬಿ ಕಣ್ಣಿಗೆ ಕಾಣಿಸ್ತಿದ್ದಾಳೆ. ಸಿಹಿ ಈ ಜಗತ್ತಲ್ಲಿ ಕಾಣಿಸಿಕೊಳ್ತಿರೋದು ಸುಬ್ಬಿಗೆ ಮಾತ್ರ. ಸೀತಮ್ಮ, ರಾಮ್, ಮನೆಮಂದಿ ಯಾರಿಗೂ ಅವಳು ಕಾಣ್ತಿಲ್ಲ. ಅವಳಿಗೆ ಮಾತ್ರ ಎಲ್ಲರೂ ಕಾಣ್ತಿದ್ದಾರೆ. ಈ ನಡುವೆ ಸಿಹಿಗೆ ಭಾರ್ಗವಿ ಆಡಿದ ಮಾತುಗಳು ಗೊತ್ತಾಗಿದೆ. ರಾಮ್ ತಾಯಿಯನ್ನು ಕೊಂದಿದ್ದು ಭಾರ್ಗವಿ ಎಂಬ ಸತ್ಯವನ್ನು ಹೇಳಲು ಮುಂದಾಗಿದ್ದಾಳೆ. ಸಿಹಿ ಬದುಕಿದರೆ ತನಗೆ ಕಷ್ಟ ಎಂದು ತಿಳಿದಿರುವ ಭಾರ್ಗವಿ ಅವಳನ್ನು ಕೊಲ್ಲಲು ರುದ್ರಪ್ರತಾಪ್ ಸಹಾಯ ಪಡೆದಿದ್ದಾಳೆ. ಸಿಹಿಯನ್ನು ದತ್ತು ಪಡೆಯುವ ಮುನ್ನವೇ ಕೊಲ್ಲಿಸಲು ಪ್ಲಾನ್ ಮಾಡಿದ್ದಳು. ಆದರೆ, ಅದು ಸಾಧ್ಯವಾಗಲಿಲ್ಲ. ಸಿಹಿಯನ್ನು ರಾಮ್ ಮತ್ತು ಸೀತಾ ಸೇರಿ ಶ್ಯಾಮ್ ಹಾಗೂ ಶಾಲಿನಿ ದಂಪತಿಗಳಿಂದ ದತ್ತು ಪಡೆದು ಪತ್ರಗಳಿಗೆ ಸಹಿ ಹಾಕಿದ್ದಾಗಿದೆ.

ಸಿಹಿ ಕಾರಿನಲ್ಲಿ ಅಮ್ಮನೊಂದಿಗೆ ಹೋಗುವ ದಾರಿಯಲ್ಲೇ ಸತ್ಯ ಹೇಳಿದ್ದಾಳೆ. ವಾಣಿ ಅಜ್ಜಿಯನ್ನು ಕೊಂದಿದ್ದು, ಬಡ್ಡಿಬಂಗಾರಮ್ಮ ಆಂಟಿ ಎಂದು ಹೇಳಿದ್ದಾಳೆ. ಸೀತಾ ಈ ಮಾತನ್ನು ಕೇಳಿ ಶಾಕ್ ಆಗಿದ್ದಾಳೆ. ಅಲ್ಲದೇ, ಈ ಹಿಂದೆ ಭಾರ್ಗವಿ ರೂಮ್ ನಲ್ಲಿ ಸಿಹಿಯನ್ನು ಹುಟ್ಟಲಿಲ್ಲ ಅನಿಸುತ್ತೇನೆ ಎಂದು ಮಾತನಾಡಿದ ಮಾತು ನೆನಪಾಗಿದ್ದು, ಈ ವಿಚಾರವನ್ನು ಸೀತಾಳಿಗೆ ಸಿಹಿ ಹೇಳುತ್ತಾಳೆ. ಆಗ ಸೀತಾ ಈ ವಿಚಾರವನ್ನು ರಾಮ್ ಬಳಿ ಹೇಳೋಣ ಎಂದು ಕಾರಿನಿಂದ ಇಳಿಯುತ್ತಾಳೆ. ಅಷ್ಟರಲ್ಲಿ ರುದ್ರಪ್ರತಾಪ್ ಹುಡುಗರನ್ನು ಬಿಟ್ಟು ಸಿಹಿಗೆ ಅಪಘಾತವಾಗುವಂತೆ ಮಾಡುತ್ತಾನೆ. ಕಾರು ಡಿಕ್ಕಿ ಹೊಡೆದ ಕೂಡಲೇ ಸಿಹಿ ಸ್ಪಾಟ್ ನಲ್ಲೇ ಸಾವನ್ನಪ್ಪಿದ್ದಾಳೆ. ಆದರೆ, ಅವಳ ಆತ್ಮ ದೇಹದಿಂದ ಹೊರಗೆ ಬಂದಿದ್ದು, ತಾನು ಸತ್ತಿರುವ ಸತ್ಯ ಅವಳಿಗೆ ಅರ್ಥವಾಗಿಲ್ಲ.

ವೈಷ್ಣವಿ ಗೌಡ ಬಾಲಿವುಡ್‌ಗೆ ಎಂಟ್ರಿ? ತೂಕ ಇಳಿಸೋ ಟಿಪ್ಸ್‌ ಕೊಡುತ್ತಲೇ ಮನದ ಮಾತು ತೆರೆದಿಟ್ಟ 'ಸೀತಾ'

ಈ ನಡುವೆ ಒಂದಿಷ್ಟು ಘಟನೆಗಳಾಗಿವೆ. ಸದ್ಯ ಸಿಹಿ ಆತ್ಮದ ರೂಪದಲ್ಲಿ ಓಡಾಡ್ತಿದ್ದಾಳೆ. ಅವಳ ಪ್ರತಿರೂಪ ಸುಬ್ಬಿ ಎಪಿಸೋಡ್‌ಗಳು ತೆರೆದುಕೊಳ್ಳಲಿವೆ. ಸಿಹಿ ಜೊತೆ ಎಮೋಶನಲೀ ಕನೆಕ್ಟ್ ಆಗಿದ್ದ ವೀಕ್ಷಕರು ಇದೀಗ ಸುಬ್ಬಿಗೆ ಕನೆಕ್ಟ್ ಆಗ್ತಾರ? ರೀತುನೇ ಮಾಡ್ತಿರೋ ಇನ್ನೊಂದು ಪಾತ್ರವನ್ನೂ ನೋಡ್ತಾರ ಅನ್ನೋದನ್ನು ಕಾದು ನೋಡಬೇಕಿದೆ.

ಸದ್ಯಕ್ಕಂತೂ ಇವಳ ಎಂಟ್ರಿಗೆ ವೀಕ್ಷಕರು ಗರಂ ಆಗಿದ್ದಾರೆ. ಮಕ್ಕಳನ್ನು ಮಕ್ಕಳ ಹಾಗೆ ತೋರಿಸಿ ಅಂತ ಕಿಡಿ ಕಾರುತ್ತಿದ್ದಾರೆ. ಇನ್ನೊಂದಿಷ್ಟು ಜನ ಪುಟಾಣಿಯ ರೀ ಎಂಟ್ರಿಗೆ ಬಹು ಪರಾಕ್ ಅಂದಿದ್ದಾರೆ.

 
 
 
 
 
 
 
 
 
 
 
 
 
 
 

A post shared by Zee Kannada (@zeekannada)

 

Latest Videos
Follow Us:
Download App:
  • android
  • ios