ವೈಷ್ಣವಿ ಗೌಡ ಬಾಲಿವುಡ್‌ಗೆ ಎಂಟ್ರಿ? ತೂಕ ಇಳಿಸೋ ಟಿಪ್ಸ್‌ ಕೊಡುತ್ತಲೇ ಮನದ ಮಾತು ತೆರೆದಿಟ್ಟ 'ಸೀತಾ'

ಸೀತಾರಾಮ ಸೀತಾ ಅರ್ಥಾತ್‌ ನಟಿ ವೈಷ್ಣವಿ ಗೌಡ ಬಾಲಿವುಡ್‌ಗೆ ಎಂಟ್ರಿ ಕೊಡುವ ಮನಸ್ಸು ಮಾಡಿದ್ದು, ಅದರ ಬಗ್ಗೆ ವಿವರಿಸಿದ್ದಾರೆ ನೋಡಿ!
 

Seetharama Seeta urf  Vaishnavi Gowda  has made up her mind to enter Bollywood suc

ಕಿರುತೆರೆಯಲ್ಲಿ ಮಿಂಚುತ್ತಿರುವ ಹಲವು ನಟಿಯರು ಇದಾಗಲೇ ಬೆಳ್ಳಿ ಪರದೆಯ ಮೇಲೂ ಕಾಣಿಸಿಕೊಂಡಿದ್ದಾರೆ. ಆಯಾ ಭಾಷೆಗಳ ಚಿತ್ರಗಳ ಜೊತೆಗೆ ಪರ ಭಾಷೆಗಳಲ್ಲಿಯೂ ನಟಿಸುವ ಅವಕಾಶ ಕೆಲವರಿಗೆ ಸಿಕ್ಕಿದ್ದೂ ಇದೆ. ಆದರೆ ಹಲವು ನಟಿಯರ ಕನಸು ಬಾಲಿವುಡ್‌ಗೆ ಎಂಟ್ರಿ ಕೊಡಬೇಕು ಎನ್ನುವುದೇ ಆಗಿರುತ್ತದೆ. ಬಾಲಿವುಡ್‌ ಎಂಬ ಸಮುದ್ರದಲ್ಲಿ ಈಜುವ ಬಯಕೆ ಅವರದ್ದಾಗಿರುತ್ತದೆ. ಆದರೆ ಈ ಅದೃಷ್ಟ ಸಿಗುವುದು ಬೆರಳೆಣಿಕೆಯಷ್ಟು ಮಂದಿಗೆ ಮಾತ್ರ. ಯಾವುದೇ ಗಾಡ್‌ ಫಾದರ್‍‌ ಇಲ್ಲದೆಯೇ ಬೇರೆ ಭಾಷೆಗಳ ನಟಿಯರು ಬಾಲಿವುಡ್‌ನಲ್ಲಿ ಎಂಟ್ರಿ ಪಡೆಯುವುದು ಕನಸಿನ ಮಾತೇ ಎಂದರೂ ಪರವಾಗಿಲ್ಲ. ಆದರೂ ಕನಸು ಕಾಣಲು ಹಣ ಕೊಡಬೇಕೆಂದೇನೂ ಇಲ್ಲವಲ್ಲ, ಆದರೆ ಕೆಲವರಿಗೆ ಆ ಕನಸು ನನಸಾಗುವುದೂ ಇದೆ. ಇದೀಗ ಇದೇ ಲೈನ್‌ನಲ್ಲಿ ಇದ್ದಾರೆ ಸೀತಾರಾಮ ಸೀರಿಯಲ್‌ ಸೀತಾ ಅರ್ಥಾತ್‌ ವೈಷ್ಣವಿ ಗೌಡ !

ಇದೀಗ ಅವರ ತಮ್ಮ ವಿಡಿಯೋದಲ್ಲಿ ಬಾಲಿವುಡ್‌ಗೆ ಹೋಗುವ ಕನಸಿನ ಬಗ್ಗೆ ಮಾತನಾಡಿದ್ದಾರೆ. ತಮ್ಮ ಕಾರ್ಯವನ್ನು ಸಿದ್ಧಿಸಿಕೊಳ್ಳಬೇಕು ಎಂದರೆ ಅದಕ್ಕಿರುವ ಹಲವು ವಿಧಾನಗಳ ಬಗ್ಗೆ ಇದಾಗಲೇ ಸಾಕಷ್ಟು ವಿಡಿಯೋ ಶೇರ್ ಮಾಡಿರುವ ನಟಿ, ಇದರಲ್ಲಿ ಕ್ರಿಸ್ಟಲ್‌ ಬಗ್ಗೆ ತಿಳಿಸಿಕೊಟ್ಟಿದ್ದಾರೆ. ಕನಸನ್ನು ನನಸು ಮಾಡಿಕೊಳ್ಳಲು ಇದು ಹೇಗೆ ಸಹಾಯ ಎಂದು ಹೇಳುತ್ತಲೇ, ಕೆಲವರು ಇದರ ಸಹಾಯ ಪಡೆದು ನೀವು ಬಾಲಿವುಡ್‌ಗೆ ಹೋಗಬಹುದಲ್ವಾ ಎನ್ನುವ ಪ್ರಶ್ನೆ ಮಾಡುತ್ತಾರೆ. ಆದರೆ ಆ ಮನಸ್ಸು ನನಗೂ ಇದೆ. ಅಲ್ಲಿಯೂ ನಟಿಯಾಗುವ ಆಸೆ ಇದೆ. ಆದರೆ ಅದು ಅಷ್ಟು ಸುಲಭವಲ್ಲ. ಏನೇ ತಿಪ್ಪರಲಾಗ ಹಾಕಿದರೂ ನಮ್ಮ ಹಣೆಯಲ್ಲಿ ಏನು ಬರೆದಿರುತ್ತದೆಯೋ ಅದೇ ಆಗುವುದು. ಆದರೆ ಕೆಲವು ವಿಧಾನಗಳ ಮೂಲಕ ನನ್ನ ಆಸೆಯನ್ನು ನೆರವೇರಿಸಿಕೊಳ್ಳುತ್ತಿದ್ದೇನೆ ಎಂದಿದ್ದಾರೆ ನಟಿ. ಇದೇ ವಿಧಾನದ ಮೂಲಕ  ಬಾಲಿವುಡ್‌ ಕನಸಿನ ಆಸೆಯನ್ನೂ ಶೀಘ್ರದಲ್ಲಿ ನೆರವೇರಿಸಿಕೊಳ್ಳುತ್ತಾರೆ ಎನ್ನುವ ಆಸೆ ಅವರ ಅಭಿಮಾನಿಗಳಿಗೆ. ಶೀಘ್ರದಲ್ಲಿಯೇ ನಿಮ್ಮ ಆಸೆ ನೆರವೇರಲಿ ಎಂದು ತಿಳಿಸುತ್ತಿದ್ದಾರೆ. 

ಸ್ನಾನದ ವೀಡಿಯೋ ಪೋಸ್ಟ್ ಮಾಡಿದ ಸೀತಾರಾಮ ಸೀತಾಗೆ ಈಗ ಮನೆಯಲ್ಲಿರೋ ಇರುವೆ ಚಿಂತೆ!

ಇದೇ ವಿಡಿಯೋದಲ್ಲಿ ನಟಿ ತೂಕ ಇಳಿಸುವ ಟಿಪ್ಸ್‌ ಕೊಟ್ಟಿದ್ದಾರೆ. ಇಡೀ ದಿನ ತಿಂದಿರೋ ಫ್ಯಾಟ್‌ ಕಂಟ್ರೋಲ್‌ ಮಾಡಲು ಹೆಲ್ಪ್‌ ಮಾಡುತ್ತದೆ ಎನ್ನುತ್ತಲೇ ಕಷಾಯವನ್ನು ತಿಳಿಸಿಕೊಟ್ಟಿದ್ದಾರೆ. ನೀರನ್ನು ಕುದಿಯಲು ಇಟ್ಟು ಅದಕ್ಕೆ ಧನಿಯಾ, ಕಾಳು ಮೆಣಸಿನ ಪೌಡರ್‍, ಹುರಿದಿರುವ ಜೀರಿಗೆ ಪೌಡರ್‍‌, ಚಕ್ಕೆ ಪೌಡರ್‍‌‌ ಹಾಕಬೇಕು. ಚಕ್ಕೆಯ ಪೌಡರ್‍‌ ಸ್ವಲ್ಪ ಹಾಕಬೇಕು. ಸ್ವಲ್ಪ ಅರಿಶಿಣ ಹಾಕಿ ಕುದಿಸಬೇಕು. ನಿಂಬೆ ಹಣ್ಣನ್ನು ಲೋಟದಲ್ಲಿ ಹಿಂಡಿಕೊಂಡು ಸ್ವಲ್ಪ ಉಪ್ಪು ಸೇರಿಸಬೇಕು. ಕಷಾಯವನ್ನು ಸೋಸಿಕೊಂಡು ಕುಡಿಯಬೇಕು. ಇದರಿಂದ ಆರೋಗ್ಯ ಸುಧಾರಿಸುತ್ತದೆ ಎಂದಿದ್ದಾರೆ. 

ಇನ್ನು ವೈಷ್ಣವಿ ಗೌಡ ಕುರಿತು ಹೇಳುವುದಾದರೆ,  ಕನ್ನಡದ ಪ್ರೇಕ್ಷಕರಿಗೆ ಸನ್ನಿಧಿಯಂತಲೇ ಇವರು ಪರಿಚಯವಿದ್ದರು. ಅಗ್ನಿಸಾಕ್ಷಿ ಸೀರಿಯಲ್​ನ ಸನ್ನಿಧಿ ಮೂಲಕ ಸಕತ್​ ಫೇಮಸ್​ ಆಗಿದ್ದ ನಟಿ ಈಗ ಸೀತಾರಾಮದ ಸೀತೆಯಾಗಿ ಮನೆ ಮಾತಾಗಿದ್ದಾರೆ.  ವೈಷ್ಣವಿ ಕನ್ನಡ ಕಿರುತೆರೆಲೋಕದ ಜನಪ್ರಿಯ ನಟಿ. ಅಷ್ಟೇ ಅಲ್ಲದೇ,  ಹಲವು ಉತ್ಪನ್ನಗಳ ರಾಯಭಾರಿಯೂ ಹೌದು.  ಜೀ ಕನ್ನಡದ `ದೇವಿ' ಸೀರಿಯಲ್‌ನಿಂದ ಇವರ ಕಿರುತೆರೆ ಪಯಣ ಆರಂಭವಾಯಿತು.ನಂತರ `ಪುನರ್‌ವಿವಾಹ'ದಲ್ಲಿ ನಟಿಸಿ `ಅಗ್ನಿಸಾಕ್ಷಿ' ಸೀರಿಯಲ್‌ನ ಸನ್ನಿಧಿಯಾಗಿ ಆಯ್ಕೆಗೊಂಡರು. ಈ ಪಾತ್ರದ ಮೂಲಕ ಅಪಾರ ಜನಮನ್ನಣೆ ಪಡೆದಿದ್ದಾರೆ.  `ಗಿರಿಗಿಟ್ಲೆ' ಚಿತ್ರದ ಮೂಲಕ ನಾಯಕಿಯಾಗಿದ್ದಾರೆ.  `ಭರ್ಜರಿ ಕಾಮಿಡಿ' ಎಂಬ ರಿಯಾಲಿಟಿ ಷೋ   ನಿರೂಪಣೆ ಕೂಡ ಮಾಡಿದ್ದಾರೆ.  `ಕುಣಿಯೋಣ ಬಾರ' ಡ್ಯಾನ್ಸ್ ರಿಯಾಲಿಟಿ ಷೋ ಆಗೂ ಬಿಗ್​ಬಾಸ್​ ಸೀಸನ್​ 8ನಲ್ಲಿ ಭಾಗವಹಿಸಿದ್ದಾರೆ.

2 ಪ್ಯಾಂಟ್‌ 4 ಶರ್ಟ್... ಸಿನಿಮಾ ಯಾಕೆ, ಕೂಲಿ ಮಾಡು ಅಂದ್ರು... ನೆನಪಿನ ಅಂಗಳಕ್ಕೆ ಜಾರಿದ ನಟ ಜಗ್ಗೇಶ್‌

Latest Videos
Follow Us:
Download App:
  • android
  • ios