2 ಪ್ಯಾಂಟ್‌ 4 ಶರ್ಟ್... ಸಿನಿಮಾ ಯಾಕೆ, ಕೂಲಿ ಮಾಡು ಅಂದ್ರು... ನೆನಪಿನ ಅಂಗಳಕ್ಕೆ ಜಾರಿದ ನಟ ಜಗ್ಗೇಶ್‌

ನಟ ಜಗ್ಗೇಶ್‌ ಅವರು, ತಮ್ಮ ಹಿಂದಿನ ದಿನಗಳನ್ನು ಮೆಲುಕು ಹಾಕಿ, ಅದನ್ನು ತಮ್‌ ಇನ್ಸ್‌ಟಾಗ್ರಾಮ್‌ನಲ್ಲಿ ಶೇರ್ ಮಾಡಿಕೊಂಡಿದ್ದಾರೆ. ಅದರಲ್ಲಿ ಏನಿದೆ?
 

Actor Jaggesh reminisced about his past and shared it on his Instagram suc

1987 ಆಗ 24ವರ್ಷ ಪ್ರಾಯ. 18 ವರ್ಷದ ಮಡದಿ ಪರಿಮಳ. 6 ತಿಂಗಳ ಮಗು ಗುರುರಾಜ..15×10 ಮನೆ. 500ರೂ ಬಾಡಿಗೆ. 250ರೂ ಮನೆ ಖರ್ಚು.. 2 ಜೀನ್ಸ್ ಪ್ಯಾಂಟ್ 4 ಶರ್ಟ್ ಧರಿಸಲು..ಇಂಥ ಸ್ಥಿತಿಯಲ್ಲಿ ಗೆದ್ದೆ ಗೆಲ್ಲುವೆ ಒಂದು ದಿನ ಎಂಬ ಛಲ.. ಮನಸ್ಸನ್ನು ರೇಸು ಕುದುರೆಯಂತೆ ತಯಾರು ಮಾಡಿ ಕೆಲಸಕ್ಕೆ ಬರದ ಯಾವ ಚಿಂತೆಯನ್ನೂ ಮಾಡದೆ ಸ್ನಾನ ಪೂಜೆ ಇದ್ದದ್ದು ತಿಂದು ಕೆಲಸ ಹುಡುಕಿ ಗಾಂಧಿನಗರ ಅಲೆಯುವ ಕಾಯಕ...

ಇದು ರಾಜ್ಯಸಭಾ ಸದಸ್ಯ, ನವರಸ ನಾಯಕ ಜಗ್ಗೇಶ್  (Jaggesh) ಅವರು  ಸೋಷಿಯಲ್‌ ಮೀಡಿಯಾದಲ್ಲಿ ಹಂಚಿಕೊಂಡಿರುವ ಮನದದ ಮಾತುಗಳು. ಸೋಷಿಯಲ್‌ ಮೀಡಿಯಾದಲ್ಲಿ ಆಕ್ಟೀವ್‌ ಆಗಿರುವ ಇವರು ಆಗಾಗ್ಗೆ ತಮ್ಮ ಮನದ ಮಾತುಗಳನ್ನು, ಮನ ನೋಯಿಸಿದ ಘಟನೆಗಳನ್ನು, ಖುಷಿಯ ವಿಚಾರಗಳನ್ನು ಹಂಚಿಕೊಳ್ಳುತ್ತಲೇ ಇರುತ್ತಾರೆ. ಇದೀಗ, ದೆಹಲಿಯ ಮನೆಯಲ್ಲಿ ಒಬ್ಬನೆ ಕೂತಾಗ ನೋಡಿ ಮರೆತ ಚಿತ್ರದಂತೆ ನೆನಪಾಯಿತು ನನ್ನ ಬದುಕು ಎಂದು ಹೇಳುತ್ತಲೇ ತಮ್ಮ ಆರಂಭದ ದಿನಗಳನ್ನು ನೆನಪಿಸಿಕೊಂಡಿದ್ದಾರೆ ಅವರು. 

ಸರ್ಕಾರದ ಮಾತು ಮೀರಿ ಬಿಟ್ಟಿದ್ದೇ ಡಾ.ರಾಜ್‌ ಅಪಹರಣಕ್ಕೆ ಕಾರಣವಾಯ್ತು: ಎಸ್‌.ಎಂ.ಕೃಷ್ಣರ ವಿಡಿಯೋ ವೈರಲ್‌

ಅವರು ಬರೆದಿರುವುದು ಹೀಗಿದೆ: ಅಂದಿನ ಕೆಲ ನಿರ್ದೇಶಕ ನಿರ್ಮಾಪಕರಿಗೆ ನನ್ನ ಮೇಲೆ ಕರುಣೆ ತೋರಿ ಅನ್ನ ಹಾಕಿ ಉತ್ಸಾಹ ತುಂಬಿದರೆ, ಅನೇಕರು ಅಪಮಾನ ಮಾಡಿ ಸಿನಿಮಾ ಬಿಟ್ಟು ಕೂಲಿ ಮಾಡು ಎಂದು ಅಟ್ಟುತ್ತಿದ್ದರು. ಆಗ ನನಗೆ ಒಬ್ಬ ಗುರು ಸಿಕ್ಕರು. ಅವರೇ ಕಲಿಯುಗ ಕಲ್ಪತರು ರಾಯರು. ಅವರ ಹಾರೈಕೆಯಿಂದ ನಾನು ಹೇಗೆ ಬೆಳೆದೆ . ಅರಿವಿಲ್ಲಾ... ಮನಸ್ಸಿನ ಬೇಡಿಕೆ ಹೇಗೆ ಈಡೇರಿತು ಅರಿವಿಲ್ಲಾ..ಅಂದಿನ 24ವರ್ಷದವ ಇಂದು 62ವರ್ಷವಾಗಿದೆ ಅರಿವಿಲ್ಲಾ... ಎನ್ನುತ್ತಲೇ ಆ ದಿನಗಳನ್ನು ನಟ ನೆನಪಿಸಿಕೊಂಡಿದ್ದಾರೆ. ಶ್ರೀ ಕೃಷ್ಣ ಎಲ್ಲ ಮನುಕುಲಕ್ಕೆ ಒಂದು ಮಾತು ಕೊಟ್ಟಿದ್ದಾನೆ "ಶ್ರದ್ಧಾವಾನ್ ಲಭತೆ ಜ್ಞಾನಂ" ಅರ್ಥಾತ್ ಸುಂದರವಾಗಿ ಚಿಂತಿಸಿ ಬಾಳು ಮಿಕ್ಕದ್ದು ನನಗೆ ಬಿಡು ಎಂಬ ಅರ್ಥ. ಜ್ಞಾನ  ಕಲಿಸಿದ ಅಮ್ಮ, ಬದುಕು ಕಲಿಸಿದ ಅಪ್ಪ, ನನ್ನ ಸುಖದುಃಖಕ್ಕೆ ಜೊತೆಗಾತಿ ಪರಿಮಳ.. ಅನ್ನ ನೀಡಿದ ಚಿತ್ರರಂಗಕ್ಕೆ ಶರಣು, ಮಿತ್ರರೆ ಶುದ್ಧರಾಗಿ ಶ್ರಮಿಸಿ ಗೆದ್ದ ಮನುಷ್ಯರಾಗಿ... ನನ್ನ ಬದುಕಿನ ನೆನಪಿನ ಅಂಗಳ, ಶುಭ ಮಂಗಳವಾರ ಎಂದು ಅವರು ಬರೆದುಕೊಂಡಿದ್ದಾರೆ. 

ಮಹಿಳೆಯರಿಗೆ ಪ್ರಧಾನಿ ಬಂಪರ್ ಯೋಜನೆ: ಮಾಸಿಕ 7 ಸಾವಿರ-ಉದ್ಯೋಗಕ್ಕೆ ದಾರಿ; ಅರ್ಜಿ ಸಲ್ಲಿಕೆ ಹೀಗಿದೆ

 

Latest Videos
Follow Us:
Download App:
  • android
  • ios