ಸೀತಾರಾಮ ಸೀರಿಯಲ್ ಟೀಮ್ ಸದ್ಯ ಕುಂಭಮೇಳದಲ್ಲಿದೆ. ಆದರೆ ಈ ಸೀರಿಯಲ್‌ನಲ್ಲಿರುವ ದೇವತೆಯಂಥಾ ನಟಿ ಸದ್ಯದಲ್ಲೇ ಹಸೆಮಣೆ ಏರಲಿದ್ದಾರೆ. ಹುಡುಗ ಏರ್‌ಫೋರ್ಸ್‌ನಲ್ಲಿರೋದಂತೆ!
ಸೀತಾರಾಮ ಸೀರಿಯಲ್ ಜೀ ಕನ್ನಡದಲ್ಲಿ ಐದೂವರೆ ಹೊತ್ತಿಗೆ ಪ್ರಸಾರ ಆಗುತ್ತಿದೆ. ಶುರುವಿನಲ್ಲಿ ಸಿಹಿ ಅನ್ನೋ ಪಾತ್ರದ ಮೂಲಕ ಬಹಳ ಮಂದಿ ಸೀರಿಯಲ್ ಪ್ರಿಯರ ಗಮನ ಸೆಳೆದಿದ್ದ ಸೀರಿಯಲ್ ಇದು. ಆಮೇಲೆ ಟ್ವಿಸ್ಟ್ ನೀಡುವ ಭರದಲ್ಲಿ ಎಡವಟ್ಟು ಮಾಡಿಕೊಂಡು, ಅದನ್ನು ಸರಿಪಡಿಸಲಾಗದೇ ಟಿಆರ್‌ಪಿ ಸ್ಪರ್ಧೆಯಲ್ಲಿ ಏಗಲಾರದೇ ಅರ್ಧಕ್ಕೆ ನಿಲ್ಲಿಸಲೂ ಸಾಧ್ಯವಾಗದೇ ಪ್ರೈಮ್ ಟೈಮಿಂದ ಐದೂವರೆಗೆ ದಬ್ಬಿಸಿಕೊಂಡಿತು. ಸದ್ಯಕ್ಕೀಗ ಅಲ್ಲೂ ಸೀರಿಯಲ್ ಟೀಮ್ ಟಿಆರ್‌ಪಿಯಲ್ಲಿ ಮೇಲಕ್ಕೇರುವ ತನ್ನ ಪ್ರಯತ್ನ ಬಿಟ್ಟಿಲ್ಲ. ಈ ಬಾರಿ ಅದಕ್ಕೆ ಅಸ್ತ್ರವಾಗಿ ಸಿಕ್ಕಿದ್ದು ಕುಂಭಮೇಳ. ಕುಂಭಮೇಳದಲ್ಲಿ ಭಾಗವಹಿಸಿದ ಮೊದಲ ಸೀರಿಯಲ್ ಟೀಮ್ ಅನ್ನೋ ಹೆಗ್ಗಳಿಕೆಯನ್ನೂ ಹೆಗಲಿಗೇರಿಸಿಕೊಂಡು ಕುಂಭಮೇಳದ ನೆವದಲ್ಲಾದರೂ ಈ ಸೀರಿಯಲ್ ಒಳ್ಳೆ ಟಿಆರ್‌ಪಿ ಪಡೆಯಲಿ ಅನ್ನೋ ನಿರೀಕ್ಷೆಯಲ್ಲಿ ಇದ್ದಂತಿದೆ.
ಇದು ಸೀರಿಯಲ್ ಕಥೆ ಆಯ್ತು. ಸೀರಿಯಲ್‌ನಲ್ಲಿ ಪಾತ್ರ ಮಾಡೋ ಕಲಾವಿದರಿಗೂ ಕಥೆ ಇರುತ್ತಲ್ವಾ? ಈ ಸೀರಿಯಲ್ ನೋಡೋ ಮಂದಿಗಂತೂ ಅವರ ಪರ್ಸನಲ್ ಮ್ಯಾಟರ್‌ಗಳೆಲ್ಲ ಸಖತ್ ಇಂಟರೆಸ್ಟಿಂಗ್ ಆಗಿರುತ್ತೆ. ಈ ಸೀರಿಯಲ್ ಟೀಮ್‌ನಲ್ಲಿ ಮುಖ್ಯ ಪಾತ್ರದಲ್ಲಿ ನಟಿಸಿದ್ದ ನಟಿ ಮೇಘನಾ ಶಂಕರಪ್ಪ ಮೊನ್ನೆ ಮೊನ್ನೆ ಮದುವೆ ಆದರು. ಆ ಮದುವೆಯಲ್ಲಿ ಸೀರಿಯಲ್ ಟೀಮ್ ಕೂಡ ಜಾಮ್ ಜೂಮ್ ಅಂತ ಭಾಗಿ ಆಯ್ತು. ಇದರಲ್ಲಿ ಒಂದು ಕಡೆ ಮದುಮಗಳು ಹೈಲೈಟ್ ಆದ್ರೆ ಇನ್ನೊಂದು ಕಡೆ ಇನ್ನೊಬ್ಬ ಕ್ಯೂಟ್ ನಟಿ ಎಲ್ಲರ ಕೇಂದ್ರಬಿಂದು ಆಗಿದ್ದರು. 'ಆಕೆ ಮದುವೆ ಆಯ್ತು, ನಿಮ್ಮದ್ಯಾವಾಗ?' ಎಂತ ಎಲ್ಲರೂ ಆಕೆಯ ಬಳಿ ಕೇಳಿ ಕೇಳಿ ಗೋಳಾಡಿಸಿದ್ದೇ ಒಂದು ಗುಡ್ ನ್ಯೂಸ್ ಕೊಡಲು ಆ ನಟಿ ರೆಡಿಯಾಗಿ ನಿಂತಿದ್ದಾರೆ.
ಸೀರಿಯಲ್ ನಟ, ನಟಿಯರು ಎಷ್ಟೋ ಮಂದಿಗೆ ಸಿನಿಮಾ ನಟ, ನಟಿಯರಿಗಿಂತ ಹೆಚ್ಚಿನ ಸ್ಟಾರ್ ವ್ಯಾಲ್ಯೂ ಇದೆ. ಇವರ ಸಣ್ಣ ರೀಲ್ಸ್, ಸಣ್ಣದೊಂದು ಸುದ್ದಿಯೂ ಕ್ಷಣ ಮಾತ್ರದಲ್ಲಿ ಸೋಷಲ್ ಮೀಡಿಯಾದಲ್ಲಿ ವೈರಲ್ ಆಗುತ್ತೆ. ಈಗ ಹೇಳಿರೋ ನಟಿಯೂ ಇದಕ್ಕೆ ಅಪವಾದ ಏನಲ್ಲ. ಈ ಹುಡುಗಿ ರೀಲ್ಸ್ ಮಾಡೋದ್ರಲ್ಲೂ ಎಕ್ಸ್‌ಪರ್ಟ್. ಈಗಾಗಲೇ ತನ್ನ ಸಹನಟನ ಜೊತೆಗೆ ಸಾಕಷ್ಟು ಸಲ ರೀಲ್ಸ್ ಮಾಡಿದ್ದು ನೋಡಿ ಎಷ್ಟೋ ಮಂದಿ ನಿಮ್ಮ ಜೋಡಿ ಸಖತ್ತಾಗಿದೆ, ನೀವ್ಯಾಕೆ ಮದುವೆ ಆಗಬಾರದು ಅನ್ನೂ ಪ್ರಶ್ನೆಯನ್ನು ಈಕೆ ಬಳಿ ಕೇಳ್ತಾನೆ ಇತ್ತು. ಅದಕ್ಕೆ ಈಕೆ ಎಂದೂ ಉತ್ತರಿಸಿದವರಲ್ಲ. ಹಾಗೆ ನೋಡಿದರೆ ಈಕೆಯ ಹಿಂದಿನ ಸೀರಿಯಲ್‌ನಲ್ಲಿ ನಟಿಸುತ್ತಿದ್ದಾಗಲೂ ಅದರ ಸಹ ನಟರ ಜೊತೆ ಈಕೆ ಮದುವೆ ಆಗುವಂತೆ ಅಭಿಮಾನಿಗಳು ದುಂಬಾಲು ಬಿದ್ದಿದ್ದರು. ಆದರೆ ಈ ಮೆಚ್ಯೂರ್ಡ್ ನಟಿ ಅಂಥದ್ದಕ್ಕೆಲ್ಲ ತಲೆ ಕೆಡಿಸಿಕೊಂಡವರಲ್ಲ. ತನಗೆ ನೂರಾರು ಹುಡುಗರು ಬಿದ್ದು ಪ್ರೊಪೋಸ್ ಮಾಡುವ ಪ್ರಯತ್ನದಲ್ಲಿ ವಿಫಲರಾಗಿದ್ದನ್ನ ದೊಡ್ಡ ವೇದಿಕೆಯೊಂದರಲ್ಲಿ ಸ್ಟಾರ್ ನಟನ ಮುಂದೆಯೇ ಹೇಳಿಕೊಂಡಿದ್ದರು. ಆದರೆ ಈಕೆ ತನ್ನ ಹೃದಯವನ್ನು ಯಾರಿಗೂ ಕೊಡದೆ ಚ್ಯೂಸಿಯಾಗಿ ಬಿಟ್ಟರು. ಕೆಲ ಸಮಯದ ಹಿಂದೆ ಇವರ ಬದುಕಿನಲ್ಲಿ ವಿಷಮ ಗಳಿಗೆಯೂ ಬಂದಿತ್ತು.
ಚಿನ್ನುಮರಿ ಬಾಳಿಗೆ ಬೆಳಕಾಗ್ತಾನಾ ಗೆಳೆಯ ವಿಶ್ವ? ಸೈಕೋ ಜಯಂತ್‌ಗೆ ಕಾದಿದೆ ಮಾರಿಹಬ್ಬ!
ಅದನ್ನೆಲ್ಲ ಮರೆತು ಸದ್ಯ ಈ ಗುಳಿಕೆನ್ನೆ ಚೆಲುವೆ ಹೊಸ ಬದುಕಿಗೆ ಕಾಲಿಡಲು ಅಣಿಯಾಗುತ್ತಿದ್ದಾರೆ. ಲೇಟೆಸ್ಟಾಗಿ ಕೇಳಿಬಂದಿರೋ ವಿಷ್ಯ ಅಂದರೆ ಈಕೆ ಕೈ ಹಿಡಿಯುತ್ತಿರುವ ಹುಡುಗ ಏರ್‌ಫೋರ್ಸ್‌ನಲ್ಲಿ ಕೆಲಸ ಮಾಡ್ತಿದ್ದಾರೆ. ಅಪ್ಪ ಅಮ್ಮ ನೋಡಿ ಸಂಪ್ರದಾಯದಂತೆ ಆಗುತ್ತಿರುವ ಮದುವೆಯಂತೆ. ಮದುವೆ ಯಾವಾಗ, ಹುಡುಗನ ಹಿನ್ನೆಲೆ ಏನು ಇತ್ಯಾದಿ ವಿವರಗಳನ್ನ ಈ ಸೀತಾಮಾತೆ ಸದ್ಯದಲ್ಲೇ ಮಹಾಜನತೆಯ ಮುಂದಿಡಲಿದ್ದಾರಂತೆ. ಆ ಅಮೃತ ಘಳಿಗೆಗಾಗಿ ಸದ್ಯ ಜನ ಕಾತರದಿಂದ ಎದುರು ನೋಡುತ್ತಿದ್ದಾರೆ.
ತ್ರಿವಿಕ್ರಮ್ 'ಮುದ್ದು ಸೊಸೆ' ಧಾರಾವಾಹಿಗೋಸ್ಕರ ಯಾವ ಸೀರಿಯಲ್ ಅಂತ್ಯ ಆಗತ್ತೆ?
