Seetha Raama Serial Episode: ʼಸೀತಾರಾಮʼ ಧಾರಾವಾಹಿಯಲ್ಲಿ ಮನೆಯಲ್ಲಿರೋದು ಸಿಹಿ ಅಲ್ಲ ಅಂತ ಭಾರ್ಗವಿ ಸಾಬೀತುಪಡಿಸಲು ಟ್ರೈ ಮಾಡುತ್ತಿದ್ದಾಳೆ. ಆದರೆ ಅವಳು ತನ್ನ ಗುಂಡಿ ತಾನೇ ತೋಡಿಕೊಂಡಿದ್ದಾಳೆ.  

ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರ ಆಗುತ್ತಲಿರುವ ʼಸೀತಾರಾಮʼ ಧಾರಾವಾಹಿಯಲ್ಲಿ ದೇಸಾಯಿ ಮನೆಯಲ್ಲಿರೋದು ಸಿಹಿನಾ? ಸುಬ್ಬಿನಾ? ಅಂತ ಭಾರ್ಗವಿ ಹುಡುಕಾಟ ಮಾಡುತ್ತಿದ್ದಾಳೆ. ಶ್ರೀರಾಮ್‌ - ಅಶೋಕ್‌ ಸೇರಿಕೊಂಡು ಈ ಸತ್ಯವನ್ನು ಮುಚ್ಚಿಡಲು ಒದ್ದಾಡುತ್ತಿದ್ದಾರೆ. ಈಗ ಸಿಹಿ ಸತ್ಯ ತಿಳಿಯಲು ಹೋಗಿ ಭಾರ್ಗವಿ ತನ್ನ ತಲೆ ಮೇಲೆ ಚಪ್ಪಡಿ ಎಳೆದುಕೊಂಡಿದ್ದಾಳೆ.

ಸುಬ್ಬಿ ತಪ್ಪು ಎತ್ತಿ ಹೇಳ್ತಿರೋ ಭಾರ್ಗವಿ!
ಪ್ರತಿ ಬಾರಿ ಸುಬ್ಬಿ ಬಳಿ ಬಂದು ಸಿಹಿ ತಿಂಡಿ ಕೊಡೋದು, ನಿಜವಾದ ಹೆಸರು ಕೇಳೋದು ಭಾರ್ಗವಿಗೆ ರೂಢಿಯಾಗಿದೆ. ಇಡೀ ಮನೆ ಗಲೀಜಾಗಿದೆ ಎಂದು ಸುಬ್ಬಿಗೆ ಭಾರ್ಗವಿ ಬೈದಿದ್ದಾಳೆ. ಮೊಬೈಲ್‌ ಫೋನ್‌ ಬಳಸೋಕೆ ಬರೋದಿಲ್ಲ, ಇಂಗ್ಲಿಷ್‌ ಮಾತಾಡೋಕೆ ಬರಲ್ಲ, ಸರಿಯಾಗಿ ಬರೆಯೋಕೆ ಬರೋದಿಲ್ಲ ಹೀಗೆ ಸುಬ್ಬಿಯ ಎಲ್ಲ ತಪ್ಪುಗಳನ್ನು ಭಾರ್ಗವಿಯೇ ಹೈಲೈಟ್‌ ಮಾಡಿ ಎಲ್ಲರ ಮುಂದೆ ಹೇಳುತ್ತಿದ್ದಾಳೆ. ಅಷ್ಟೇ ಅಲ್ಲದೆ ಸುಬ್ಬಿಯ ಅಜ್ಜ ಯಾರು ಅಂತ ಕಂಡುಹಿಡಿಯೋಕೆ ಭಾರ್ಗವಿ ತುಂಬ ಪ್ರಯತ್ನಪಟ್ಟಿದ್ದಳು.

ಸೀತಾರಾಮ ಧಾರಾವಾಹಿಗಿಂತ ಜಾಸ್ತಿ ಯೂಟ್ಯೂಬ್‌ನಿಂದ ಹಣ ಮಾಡ್ತಿದ್ದಾರಾ ವೈಷ್ಣವಿ ಗೌಡ

ಭಾರ್ಗವಿ ಸತ್ಯ ಬಯಲು! 
ಭಾರ್ಗವಿ ದಾರಿ ತಪ್ಪಿಸಲು ಅಶೋಕ್‌ ಕೂಡ ಸುಮಾರು ಪ್ರಯತ್ನ ಮಾಡುತ್ತಿದ್ದಾನೆ. ಸಿಹಿ ಜನ್ಮದಿನದಂದು ಭಾರ್ಗವಿ ಏನು ಮಾಡಿದಳು ಎನ್ನೋದು ಈಗ ಈಗ ರಿವೀಲ್‌ ಆಗಲಿದೆ. ಭಾರ್ಗವಿಯ ಹಣೆಬರಹ ಏನು ಎಂದು ಸುಬ್ಬಿಗೆ ಸಿಹಿ ಹೇಳಿದ್ದಾಳೆ. ಈಗ ಎಲ್ಲರಮುಂದೆ ಸುಬ್ಬಿ ಒಂದು ವಿಷಯ ರಿವೀಲ್‌ ಮಾಡಿದ್ದಾಳೆ. ತನ್ನ ಸತ್ಯ ಬಯಲಾಯ್ತು ಅಂತ ಭಾರ್ಗವಿ ನಡುಗಿಹೋಗಿದ್ದಾಳೆ.

ಭಾರ್ಗವಿ ಶಾಕ್!‌ 
ಸೀತಾ ಹಾಗೂ ರಾಮ್‌ ಮದುವೆ ದಿನ ನೆನಪಿದ್ಯಾ ಅಂತ ಭಾರ್ಗವಿ ಪ್ರಶ್ನೆ ಕೇಳಿದಳು. ಆಗ ಸುಬ್ಬಿ, “ನೆನಪಿದೆ, ಸೀತಮ್ಮ-ರಾಮ್‌ ಮದುವೆಯನ್ನು ಹತ್ತಿರದಿಂದ ನೋಡೋಣ ಅಂತಿದ್ದೆ. ಆದರೆ ಭಾರ್ಗವಿ ಆಂಟಿ ನನ್ನ ಕೆಳಗಡೆ ಕೂರಿಸಿದರು. ಅಂದು ಸೀತಮ್ಮನ ಜನ್ಮದಿನದಂದು ನೀವು ಏನು ಮಾತಾಡ್ತಿದ್ರಿ ಅಂತ ಹೇಳಲಾ?” ಎಂದು ಹೇಳಿದ್ದಾಳೆ. ಈ ಮಾತನ್ನು ಕೇಳಿ ಭಾರ್ಗವಿಗೆ ಶಾಕ್‌ ಆಗಿದೆ.

Shrirasthu Shubhamasthu Serial: ಹೊಸ ಪಾತ್ರದ ಎಂಟ್ರಿಯಾಯ್ತು, ಯಾರವರು?

ಕಥೆ ಏನು?
ಸೀತಾ-ರಾಮ್‌ ಪ್ರೀತಿಸಿ ಮದುವೆಯಾಗಿದ್ದಾರೆ. ಹಣದ ಅಗತ್ಯತೆ ಇದ್ದಿದ್ದಕ್ಕೆ ಸೀತಾ ಸರೋಗಸಿ ಮೂಲಕ ಸಿಹಿಗೆ ಜನ್ಮ ನೀಡಿದ್ದಳು. ಶ್ರೀರಾಮ್‌ ಸಿಹಿಯನ್ನು ಮಗಳು ಅಂತ ಒಪ್ಪಿಕೊಂಡಿದ್ದನು. ಆದರೆ ರಾಮ್‌ ಚಿಕ್ಕಮ್ಮ ಭಾರ್ಗವಿಯೇ ಸಿಹಿಯನ್ನು ಸಾಯಿಸಿದ್ದಳು. ಈಗ ಸುಬ್ಬಿ ಎನ್ನುವ ಹುಡುಗಿ ಸಿಹಿ ರೂಪದಲ್ಲಿ ದೇಸಾಯಿ ಮನೆಗೆ ಬಂದಿದ್ದಾಳೆ. ಸುಬ್ಬಿ ಕೂಡ ಸೀತಾಳ ಇನ್ನೋರ್ವ ಮಗಳು ಎನ್ನುವ ವಿಷಯ ರಿವೀಲ್‌ ಆಗಬೇಕಿದೆ. ಇನ್ನು ಸಿಹಿ ಸತ್ತಿರುವ ವಿಷಯ ಸೀತಾಗೆ ಇನ್ನೂ ಅರಿವಿಲ್ಲ. ಒಟ್ಟಿನಲ್ಲಿ ಮುಂದೆ ಏನಾಗುವುದು ಎಂದು ಕಾದು ನೋಡಬೇಕಿದೆ. 

ಮುಂದೆ ಏನಾಗುವುದು? 
ಸುಬ್ಬಿ ಹೇಗೆ ಸಿಹಿಗೆ ಸಂಬಂಧಪಟ್ಟ ವಿಷಯವನ್ನು ಹೇಳುತ್ತಿದ್ದಾಳೆ? ಸಿಹಿ ಥರ ಹೇಗೆ ಆಕ್ಟ್‌ ಮಾಡುತ್ತಿದ್ದಾಳೆ? ಅಂತ ಶ್ರೀರಾಮ್‌, ಅಶೋಕ್‌ಗೆ ಡೌಟ್‌ ಬರುತ್ತಿದೆ. ಅವರು ಯಾರಿಗೂ ಸಿಹಿ ಗಂಧರ್ವ ಕನ್ಯೆ ಆಗಿರೋದು ಗೊತ್ತೇ ಇಲ್ಲ. ಇನ್ನೊಂದು ಕಡೆ ಸೀತಮ್ಮಳ ಜನ್ಮದಿನದಂದು ಸಿಹಿ ಏನೋ ಹೇಳೋಕೆ ಟ್ರೈ ಮಾಡುತ್ತಿದ್ದಳು. ಈ ವಿಷಯ ಸೀತಾಗೂ ಗೊತ್ತು. ಇದೇ ವಿಷಯವನ್ನು ಸೀತಾ ಕೆದಕಿದರೆ ಭಾರ್ಗವಿ ಬಣ್ಣ ಬಯಲಾಗುತ್ತದೆ. ಸಿಹಿ ಕೊಲ್ಲೋಕೆ ಭಾರ್ಗವಿಯೇ ಟ್ರೈ ಮಾಡಿದ್ದು ಎನ್ನೋದು ಶ್ರೀರಾಮ್‌ಗೂ ಕೂಡ ಗೊತ್ತಾಗುವುದು. ಆಗ ಭಾರ್ಗವಿ ಪರಿಸ್ಥಿತಿ ಏನಾಗುವುದೋ ಏನೋ! ಏನಂತೀರಾ? 

ಬಾಲಿವುಡ್ ಅಂಗಳದ 10 ಸೂಪರ್ ಫ್ಲಾಪ್ ಸಿನಿಮಾಗಳ ಪಟ್ಟು; ನಿರೀಕ್ಷೆ 100 ಪರ್ಸೆಂಟ್, ಗೆಲುವ ಶೂನ್ಯ!

ಪಾತ್ರಧಾರಿಗಳು
ಶ್ರೀರಾಮ್‌ ದೇಸಾಯಿ- ಗಗನ್‌ ಚಿನ್ನಪ್ಪ
ಸೀತಾ- ವೈಷ್ಣವಿ ಗೌಡ
ಭಾರ್ಗವಿ- ಪೂಜಾ ಲೋಕೇಶ್‌

View post on Instagram