ʼಸೀತಾರಾಮʼ ಧಾರಾವಾಹಿ ನಟಿ ವೈಷ್ಣವಿ ಗೌಡ ಅವರು ವಿವಾದಾತ್ಮಕ ವಿಚಾರವೊಂದನ್ನು ಪ್ರಚಾರ ಮಾಡಿದ್ದಾರೆ. ಅಷ್ಟೇ ಅಲ್ಲದೆ ಈ ವಿಡಿಯೋದ ಕಾಮೆಂಟ್ ಸೆಕ್ಷನ್ ಆಫ್ ಮಾಡಿದ್ದಾರೆ.
ಈಗಾಗಲೇ ʼದೇವಿʼ, ʼಶುಭ ವಿವಾಹʼ, ʼಅಗ್ನಿಸಾಕ್ಷಿʼ ‘ಸೀತಾರಾಮ’ ಧಾರಾವಾಹಿ ಮೂಲಕ ಜನಪ್ರಿಯತೆ ಗಳಿಸಿರುವ ನಟಿ ವೈಷ್ಣವಿ ಗೌಡಗೆ ದೊಡ್ಡ ಮಟ್ಟದ ಅಭಿಮಾನಿ ಬಳಗವಿದೆ. ಹೀಗಿದ್ದಾಗ್ಯೂ ಅವರು ಈ ಹಿಂದೆ ಕೆಲ ವಿಚಾರಗಳಿಗೆ ಜನರಿಂದ ನೆಗೆಟಿವ್ ಕಾಮೆಂಟ್ ಪಡೆದಿದ್ದರು. ಈಗ ಅವರು ಸೋಶಿಯಲ್ ಮೀಡಿಯಾದಲ್ಲಿ ವಿವಾದಾತ್ಮಕ ವಿಚಾರವೊಂದನ್ನು ಹಂಚಿಕೊಂಡಿದ್ದಲ್ಲದೆ ಉದ್ದೇಶಪೂರ್ವಕವಾಗಿ ಕಾಮೆಂಟ್ ಸೆಕ್ಷನ್ ಆಫ್ ಮಾಡಿದ್ದಾರೆ ಎಂಬ ಮಾತು ಕೇಳಿ ಬಂದಿದೆ.
ಜಂಗ್ಲಿ ರಮ್ಮಿ ಆಪ್!
ಹೌದು, ಜಂಗ್ಲಿ ರಮ್ಮಿ ಗೇಮ್ ಆಡುವ ವಿಚಾರದ ಬಗ್ಗೆ ವೈಷ್ಣವಿ ಗೌಡ ಅವರು ವಿಡಿಯೋ ಶೇರ್ ಮಾಡಿದ್ದಾರೆ. ಜಂಗ್ಲಿ ರಮ್ಮ ಪ್ರಚಾರ ಮಾಡುವ ವಿಡಿಯೋ ಇದಾಗಿದೆ. ಇನ್ನು ಈ ವಿಡಿಯೋಕ್ಕೆ ಮಾತ್ರ ವೈಷ್ಣವಿ ಗೌಡ ಅವರು ಕಾಮೆಂಟ್ ಸೆಕ್ಷನ್ ಆಫ್ ಮಾಡಿದ್ದಾರೆ. ನೆಗೆಟಿವ್ ಪ್ರತಿಕ್ರಿಯೆ ಬರುತ್ತದೆ ಎಂದು ಗೊತ್ತಿದ್ದಕ್ಕೆ ವೈಷ್ಣವಿ ಗೌಡ ಅವರು ಕಾಮೆಂಟ್ ಸೆಕ್ಷನ್ ಆಪ್ ಮಾಡಿದ್ದಾರೆ. ಈಗಾಗಲೇ ಕನ್ನಡದಲ್ಲಿ ಸಾಕಷ್ಟು ಸ್ಟಾರ್ ನಟರು ಕೂಡ ರಮ್ಮಿ ಆಪ್‌ಗಳನ್ನು ಪ್ರಚಾರ ಮಾಡಿ, ಜನರಿಂದ ನಿಂದನೆಗೊಳಗಾದ ಮೇಲೆ ಅದರಿಂದ ದೂರ ಆಗಿದ್ದುಂಟು, ಕ್ಷಮೆ ಕೇಳಿದ್ದೂ ಇದೆ.

ಆಗಿರುವ ಅನಾಹುತಗಳು ಏನು?
ರಮ್ಮಿ ಆಪ್‌ಗಳು, ವಿಮಲ್ ಪಾನ್ ಮಸಾಲ ಮುಂತಾದವುಗಳನ್ನು ಪ್ರಚಾರ ಮಾಡಿ ಅಜಯ್ ದೇವ್ಗನ್, ಶಾರುಖ್ ಖಾನ್, ಅಕ್ಷಯ್ ಕುಮಾರ್ ಅವರು ತುಂಬ ಟ್ರೋಲ್ ಆಗಿದ್ದರು. ಆಮೇಲೆ ಅಕ್ಷಯ್ ಕುಮಾರ್ ಅವರು ಕ್ಷಮೆ ಕೇಳಿದ್ದುಂಟು. ರಮ್ಮಿ ಆಪ್‌ಗಳಿಂದ ಹಣ ಕಳೆದುಕೊಂಡವರು ತುಂಬ ಜನರಿದ್ದಾರೆ. ಇನ್ನು ಈ ರೀತಿ ಆಟಗಳಿಂದ ಆರ್ಥಿಕ ನಷ್ಟ ಉಂಟಾಗಿ ಆತ್ಮಹತ್ಯೆ ಮಾಡಿಕೊಂಡವರೂ ಇದ್ದಾರೆ. ಕಳೆದ ಎರಡು ವಾರಗಳ ಹಿಂದೆ ಮಹಾರಾಷ್ಟ್ರದಲ್ಲಿ ಜಂಗ್ಲಿ ರಮ್ಮಿ ವ್ಯಸನಕ್ಕೆ ಒಳಗಾಗಿ ಓರ್ವ ವ್ಯಕ್ತಿ ಕಳ್ಳನಾಗಿ ಬದಲಾಗಿದ್ದಾನೆ. ಅಷ್ಟೇ ಅಲ್ಲದೆ ಏಳು ಲಕ್ಷ ರೂಪಾಯಿ ಮೌಲ್ಯದ ವಸ್ತು ಕಳವು ಮಾಡಿ ಪೊಲೀಸರ ಅತಿಥಿಯಾಗಿರೋದು ವರದಿಯಾಗಿದೆ. ಯುವಜನತೆಯ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತಿದೆ ಎಂದು ರಮ್ಮಿ ಆಪ್‌ಗಳ ಬ್ಯಾನ್ ಮಾಡಬೇಕು ಎಂದು ಗಣೇಶ್ ರಾನು ನಾನಾವರೆ ಅವರು ಮುಂಬೈ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು.
ಸುಂದರ ಸೀರೆಗಳಿಗೆ ಚೈತ್ರಾ ಕುಂದಾಪುರ ಮಾಡೆಲ್, ಸಿಂಪಲ್ ಆಗಿ ಸಂಸ್ಕೃತಿ ಉಳಿಸ್ತಿರುವ ಬಿಗ್ ಬಾಸ್ ಸ್ಪರ್ಧಿ
ʼಸೀತಾರಾಮʼ ಧಾರಾವಾಹಿ ಸೀತಾ!
ವೈಷ್ಣವಿ ಗೌಡ ಅವರು ʼಸೀತಾರಾಮʼ ಧಾರಾವಾಹಿಯಲ್ಲಿ ಸೀತಾ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಸೀತಾ ಪಾತ್ರವನ್ನು ಅನೇಕರು ಇಷ್ಟಪಟ್ಟಿದ್ದಾರೆ. ಇನ್‌ಸ್ಟಾಗ್ರಾಮ್‌ನಲ್ಲಿ ಒಂದು ಮಿಲಿಯನ್ ಫಾಲೋವರ್ಸ್ ಹೊಂದಿರುವ ಇವರು ಯುಟ್ಯೂಬ್ ಚಾನೆಲ್ ಕೂಡ ಹೊಂದಿದ್ದಾರೆ. ಯುಟ್ಯೂಬ್ ಚಾನೆಲ್‌ನಲ್ಲಿ ಸಾಕಷ್ಟು ವಿಷಯಗಳನ್ನು ಹಂಚಿಕೊಂಡಿರುವ ಇವರು ಅನೇಕ ಬ್ರ್ಯಾಂಡ್‌ಗಳ ಪ್ರಚಾರ ಕೂಡ ಮಾಡೋದುಂಟು.
ʼಬಿಗ್ ಬಾಸ್ʼ ಜನಪ್ರಿಯತೆ!
ವೈಷ್ಣವಿ ಗೌಡ ಅವರು ʼಬಿಗ್ ಬಾಸ್ ಕನ್ನಡ ಸೀಸನ್ 8ʼ ಸ್ಪರ್ಧಿ ಕೂಡ ಹೌದು. ದೊಡ್ಮನೆಯಲ್ಲಿ ಅಷ್ಟಾಗಿ ಜಗಳ ಆಡದೆ, ಕಾಂಟ್ರವರ್ಸಿ ಮಾಡಿಕೊಳ್ಳದೆ, ತಾಳ್ಮೆಯಿಂದ ಇರೋದು ಕೂಡ ನಮ್ಮ ವ್ಯಕ್ತಿತ್ವ ಎಂದು ಸಾಬೀತುಪಡಿಸಿದ್ದರು. ಈ ಮೂಲಕ ಅವರು ಬಿಗ್ ಬಾಸ್ ಫಿನಾಲೆ ತಲುಪಿದ್ದರು. ವೈಷ್ಣವಿ ಗೌಡ ಅವರ ಗುಣ ಅನೇಕರಿಗೆ ಇಷ್ಟ ಆಗಿತ್ತು.
ಬೇಸರ ಮಾಡಿಕೊಂಡಿದ್ದ ವೀಕ್ಷಕರಿಗೆ ಭರ್ಜರಿ ಗುಡ್‌ನ್ಯೂಸ್ ಕೊಟ್ಟ Seetha Raama Serial; ಏನದು?
ಫಿಟ್‌ನೆಸ್
ವೈಷ್ಣವಿ ಗೌಡ ಅವರು ಚಿಕ್ಕ ವಯಸ್ಸಿನಲ್ಲಿ ತುಂಬ ದಪ್ಪಗಿದ್ದರಂತೆ. ಬಾಡಿ ಶೇಮಿಂಗ್‌ಗೆ ಒಳಗಾಗಿದ್ದ ಅವರು ಆಮೇಲೆ ಯೋಗ, ಫಿಟ್‌ನೆಸ್ ಕಡೆಗೆ ತುಂಬ ಗಮನಕೊಡಲು ಆರಂಭಿಸಿದರು. ಡ್ಯಾನ್ಸ್, ಯೋಗ ಎಂದು ವೈಷ್ಣವಿ ಗೌಡ ಅವರು ಸದಾ ಆಕ್ಟಿವ್ ಆಗಿರುತ್ತಾರೆ.
