ಅಂದು ಕಂಡ ಕನಸು ನನಸು ಮಾಡ್ತಿರೋ ʼಸೀತಾರಾಮʼ ನಟಿ ಪದ್ಮಕಲಾ; ಈ ವಯಸ್ಸಲ್ಲೂ ಇಷ್ಟು ಆಕ್ಟಿವ್!‌

ʼಸೀತಾರಾಮʼ ಧಾರಾವಾಹಿಯಲ್ಲಿ ನಟಿಸುತ್ತಿರುವ ಪದ್ಮಕಲಾ ಅವರು ʼಸಂಕೀರ್ತನʼ ಸಿನಿಮಾ ನಿರ್ಮಾಣ ಮಾಡಿದ್ದಾರೆ. ಈ ಸಿನಿಮಾ ಬಗ್ಗೆ ಇನ್ನಷ್ಟು ಮಾಹಿತಿ ಇಲ್ಲಿದೆ.

seetha raama kannada serial actress padmakala is the producer of sankeerthana movie

‘ಸೀತಾರಾಮ’ ಧಾರಾವಾಹಿಯಲ್ಲಿ ಶಾಂತಮ್ಮ ಪಾತ್ರ ಮಾಡ್ತಿರುವ ನಟಿ ಪದ್ಮಕಲಾ ಅವರು ಈಗಾಗಲೇ ಐಟಿಐ ಸಂಸ್ಥೆ ಕಟ್ಟಿ ರಾಷ್ಟ್ರ ಪ್ರಶಸ್ತಿ ಪಡೆದಿರೋದು ಅನೇಕರಿಗೆ ತಿಳಿದಿರಬಹುದು. ಧಾರಾವಾಹಿಯಲ್ಲಿ ನಟಿಸುತ್ತ, ಕಾಸ್ಟ್ಯೂಮ್‌ ಡಿಸೈನ್‌ ಮಾಡುತ್ತ ಸಿಕ್ಕಾಪಟ್ಟೆ ಆಕ್ಟಿವ್‌ ಆಗಿರೋ ಪದ್ಮಕಲಾ, ʼಸಂಕೀರ್ತನʼ ಎನ್ನುವ ಸಿನಿಮಾ ನಿರ್ಮಾಣ ಮಾಡಿದ್ದಾರೆ. ಈ ಈ ವಯಸ್ಸಿನಲ್ಲಿಯೂ ಇಷ್ಟೊಂದು ಆಕ್ಟಿವ್‌ ಆಗಿರುವ ಪದ್ಮಕಲಾರಿಗೆ ಯಾವುದೇ ಕೆಟ್ಟ ದೃಷ್ಟಿ ಬೀಳದೇ ಇರಲಿ. 

ದಾಸ ಸಾಹಿತ್ಯ ಅಂದ್ರೆ ಇಷ್ಟ! 
ಪದ್ಮಕಲಾ ಅವರಿಗೆ ದಾಸ ಸಾಹಿತ್ಯ ಎಂದರೆ ತುಂಬ ಇಷ್ಟ. ಚಿಕ್ಕ ವಯಸ್ಸಿನಿಂದಲೂ ಅವರು ದಾಸ ಸಾಹಿತ್ಯದ ಕಡೆಗೆ ಒಲವು ಹೊಂದಿದ್ದರು. ದಾಸರ ಬಗ್ಗೆ ಸಿನಿಮಾ ಮಾಡಬೇಕು ಎಂದು ಅವರು ಕನಸು ಕಂಡಿದ್ದರು. ತಾಯಿಯ ಆಸೆಯಂತೆ ಅವರ ಮಗಳು ದಿವ್ಯಾ ರಮೇಶ್‌ ಕೂಡ ದಾಸ ಸಾಹಿತ್ಯವನ್ನು ಪ್ರೀತಿಸುತ್ತಾರೆ, ಆರಾಧಿಸುತ್ತಾರೆ. ಅಮೆರಿಕದಲ್ಲಿರುವ ದಿವ್ಯಾ ರಮೇಶ್‌ ಅವರು ಈಗಾಗಲೇ ಸಾವಿರಾರು ವಿದ್ಯಾರ್ಥಿಗಳಿಗೆ ಸಂಗೀತ ಪಾಠ ಮಾಡಿದ್ದಾರೆ. ಅಷ್ಟೇ ಅಲ್ಲದೆ ದಾಸರ ಪದ್ಯಗಳನ್ನು ಅವರು ಹಾಡುತ್ತಾರೆ. ಈಗಾಗಲೇ ದಿವ್ಯಾ ರಮೇಶ್‌ ಅವರು ದಾಸರ ಹಾಡುಗಳನ್ನು CD ಮಾಡಿ ರಿಲೀಸ್‌ ಮಾಡಿದ್ದಾರೆ.

Seetha Raama Serial: ದುಷ್ಟೆ ಭಾರ್ಗವಿ ಸೊಕ್ಕು ಅಡಗಿಸಲು ಸುಬ್ಬಿಯೇ ಸಾಕು! ರೋಚಕ ಎಪಿಸೋಡ್‌ನಲ್ಲಿ ಏನಾಗತ್ತೆ?

ʼಸಂಕೀರ್ತನʼ ಸಿನಿಮಾ! 
ಪದ್ಮಕಲಾ ಅವರ ಆಶಯದಂತೆ ಸಿನಿಮಾ ನಿರ್ಮಾಣವಾಗಿದೆ. ಬಹುತೇಕ ಈ ಸಿನಿಮಾದ ಕೆಲಸಗಳು ಮುಗಿದಿವೆ. ಈ ಸಿನಿಮಾದ ಟೈಟಲ್‌ ಸಾಂಗ್‌ನ್ನು ದಿವ್ಯಾ ಅವರೇ ಹಾಡಿದ್ದಾರೆ. ಈ ಚಿತ್ರಕ್ಕೆ ಕಲಾಗಂಗೋತ್ರಿ ಮಂಜು ಅವರು ನಿರ್ದೇಶನ ಮಾಡಿದ್ದಾರೆ. ಈ ಚಿತ್ರದಲ್ಲಿ ನೀರ್ನಳ್ಳಿ ರಮೇಶ್‌, ಪದ್ಮಕಲಾ, ಅಜಯ್‌ ರಾಜ್‌ ಸೇರಿದಂತೆ ಸಾಕಷ್ಟು ಕಲಾವಿದರು ನಟಿಸಿದ್ದಾರೆ. ಈ ಸಿನಿಮಾದ ಟೀಸರ್‌ಗೆ ಒಳ್ಳೆಯ ಪ್ರತಿಕ್ರಿಯೆ ಬಂದಿದ್ದು, ಸಿನಿಮಾ ಕೂಡ ಜನರಿಗೆ ಇಷ್ಟವಾಗಲಿದೆ ಎಂಬ ನಂಬಿಕೆ ಚಿತ್ರತಂಡಕ್ಕಿದೆ.

ಇನ್ನು ಕುಂಭಮೇಳದಲ್ಲಿ ಕೂಡ ʼಸಂಕೀರ್ತನʼ ಸಿನಿಮಾದ ಪೋಸ್ಟರ್‌ ರಾರಾಜಿಸುತ್ತಿದೆ. ಈ ಚಿತ್ರದ ಬಗ್ಗೆ ಪುತ್ತಿಗೆ ಮಠಾಧೀಶರು ಕೂಡ ಮಾತನಾಡಿ, ಪ್ರಶಂಸೆ ಹೊರಹಾಕಿದ್ದಾರೆ.

Aero India ಶೋನಲ್ಲಿ ಭಾಗಿಯಾಗಿ ವಿಶೇಷ ಥ್ಯಾಂಕ್ಸ್‌ ಹೇಳಿದ Seetha Raama Serial ವೈಷ್ಣವಿ ಗೌಡ; ಆ A ಯಾರು?

ಪದ್ಮಕಲಾ ಹೇಳಿದ್ದೇನು? 
ಈ ಬಗ್ಗೆ Asianet Suvarna ಜೊತೆಗೆ ಮಾತನಾಡಿದ ಪದ್ಮಕಲಾ ಅವರು “ನನಗೆ ದಾಸ ಸಾಹಿತ್ಯ ಕಂಡ್ರೆ ತುಂಬ ಇಷ್ಟ. ನಮ್ಮ ಸಮಾಜಕ್ಕೆ ದಾಸಸಾಹಿತ್ಯದ ಕೊಡುಗೆ ಸಾಕಷ್ಟಿದೆ. ದಾಸಸಾಹಿತ್ಯ ನಮ್ಮ ಜೀವನಕ್ಕೆ ದಾರಿದೀಪ ಇದ್ದಂತೆ. ಪ್ರತಿ ಪೀಳಿಗೆಯು ಕೂಡ ಇದರ ಬಗ್ಗೆ ತಿಳಿದುಕೊಳ್ಳಬೇಕು. ನಾವು ತುಂಬ ಪ್ರೀತಿಯಿಂದ ಈ ಸಿನಿಮಾ ಮಾಡಿದ್ದೇವೆ. ನಮ್ಮ ಸಿನಿಮಾಕ್ಕೆ ರಾಯರು, ದಾಸರ ಆಶೀರ್ವಾದ ಇದೆ ಎಂಬ ನಂಬಿಕೆ ಇದೆ. ಈ ಸಿನಿಮಾವನ್ನು ಜನರು ಗೆಲ್ಲಿಸುತ್ತಾರೆ ಎಂದು ಭಾವಿಸಿದ್ದೇವೆ. ಎಲ್ಲೇ ಹೋದರೂ ನಮ್ಮ ಸಿನಿಮಾ ಕೆಲಸ ಎಲ್ಲಿಗೆ ಬಂತು ಅಂತ ಕೇಳುತ್ತಿದ್ದಾರೆ. ಆದಷ್ಟು ಬೇಗ ಈ ಸಿನಿಮಾವನ್ನು ಜನರ ಮುಂದೆ ತರ್ತೀವಿ” ಎಂದು ಹೇಳಿದ್ದಾರೆ.

ʼಸೀತಾರಾಮʼ ಧಾರಾವಾಹಿ ಶಾಂತಮ್ಮ! 
ಪದ್ಮಕಲಾ ಅವರು ʼಸೀತಾರಾಮʼ ಧಾರಾವಾಹಿಯಲ್ಲಿ ಅಜ್ಜಿ ಪಾತ್ರ ಮಾಡುತ್ತಿದ್ದಾರೆ. ಈ ಪಾತ್ರ ವೀಕ್ಷಕರಿಗೆ ತುಂಬ ಇಷ್ಟ ಆಗಿದೆ. ಅನೇಕರು ನಮಗೆ ಇಂಥ ಅಜ್ಜಿ ಇರಬೇಕಿತ್ತು ಅಂತ ಹೇಳುತ್ತಿದ್ದಾರೆ. ಪದ್ಮಕಲಾ ಅವರು ಹೋದಲ್ಲಿ ಬಂದಲ್ಲಿ ಎಲ್ಲರೂ ಅವರ ಬಳಿ ಸೆಲ್ಫಿ ಕೇಳುತ್ತಾರಂತೆ. 


 

Latest Videos
Follow Us:
Download App:
  • android
  • ios