ಸೀತಾರಾಮ ಸೀರಿಯಲ್‌ ಸಿಹಿ ಅರ್ಥಾತ್‌ ರೀತು ಸಿಂಗ್‌ ಮೊದಲ ದಿನ ಸೀರಿಯಲ್‌ ಸೆಟ್‌ಗೆ ಬಂದಾಗ ಹೇಗಿದ್ದಳು? ಅದರ ವಿಡಿಯೋ ವೈರಲ್‌ ಆಗಿದೆ.  

ಸಿಹಿ ಎಂದರೆ ಸಾಕು, ಸೀರಿಯಲ್‌ ಪ್ರಿಯರ ಗಮನಕ್ಕೆ ಹೋಗುವುದು ಜೀ ಕನ್ನಡದಲ್ಲಿ ಪ್ರಸಾರ ಆಗ್ತಿರೋ ಸೀತಾರಾಮ ಸೀರಿಯಲ್‌ ಪುಟಾಣಿ. ವಯಸ್ಸಿಗಿಂತಲೂ ಹೆಚ್ಚಿರುವ ಪ್ರತಿಭೆ, ಪ್ರತಿಯೊಂದು ದೃಶ್ಯಗಳನ್ನೂ ಬಾಲಕಿ ಗ್ರಹಿಸುವ ರೀತಿ, ದೃಶ್ಯಗಳಿಗೆ ತಕ್ಕಂತೆ ಮನೋಜ್ಞ ಅಭಿನಯ... ಇವೆಲ್ಲವುಗಳಿಂದ ಈ ಪುಟಾಣಿ ಸೀರಿಯಲ್‌ ಪ್ರೇಮಿಗಳ ಹೃದಯ ಗೆಲ್ಲುತ್ತಿದ್ದಾಳೆ, ಹೃದಯ ಕದಿಯುತ್ತಿದ್ದಾಳೆ. ಕೆಲವೊಮ್ಮೆ ವಯಸ್ಸಿಗೆ ಮಿತಿ ಮೀರಿದ ಡೈಲಾಗ್‌ಗಳನ್ನು ಈಕೆ ಹೇಳುವ ಕಾರಣ, ಸೀರಿಯಲ್‌ ನಿರ್ದೇಶಕರ ವಿರುದ್ಧ ಸೋಷಿಯಲ್‌ ಮೀಡಿಯಾದಲ್ಲಿ ಅನೇಕ ಕಮೆಂಟ್‌ಗಳು ಬರುತ್ತಿದ್ದರೂ, ಸಿಹಿಯ ಅಭಿನಯಕ್ಕೆ ಮಾತ್ರ ಮನಸೋಲುವವರೇ ಎಲ್ಲ. ಅಷ್ಟಕ್ಕೂ ಸೀತಾರಾಮ ಸೀರಿಯಲ್​ ಟಿಆರ್​ಪಿಯಲ್ಲಿ ಉತ್ತಮ ರೇಟಿಂಗ್​ ಪಡೆದುಕೊಳ್ಳುವುದಕ್ಕೆ ಬಹುಮುಖ್ಯ ಕಾರಣನೇ ಈಕೆ ಎನ್ನುವುದೂ ಸುಳ್ಳಲ್ಲ.

Add Asianetnews Kannada as a Preferred SourcegooglePreferred

 ಐದು ವರ್ಷದ ಬಾಲಕಿಯ ರಿಯಲ್‌ ಹೆಸರು ರೀತು ಸಿಂಗ್‌. ಇಷ್ಟು ಚಿಕ್ಕ ವಯಸ್ಸಿನಲ್ಲಿ ತನ್ನ ಪಾತ್ರವನ್ನು ಅರಗಿಸಿಕೊಂಡು ನಟನೆ ಮಾಡುವುದು ಸುಲಭದ ಮಾತಲ್ಲ. ನಿಜ ಜೀವನದಲ್ಲಿಯಾದರೆ ನೋವು, ಖುಷಿ, ನಲಿವು, ದುಃಖ, ಅಳು ಎಲ್ಲವೂ ನ್ಯಾಚುರಲ್‌ ಆಗಿ ಬಂದುಬಿಡುತ್ತದೆ. ಆದರೆ ಶೂಟಿಂಗ್‌ ಸಮಯದಲ್ಲಿ ನಟನೆ ಮಾಡುವುದು ಎಂದರೆ ಅದಕ್ಕೆ ಬಹಳ ಟ್ಯಾಲೆಂಟ್‌ ಬೇಕು. ಇಷ್ಟು ಚಿಕ್ಕ ವಯಸ್ಸಿನಲ್ಲಿ ಎಲ್ಲ ಭಾವನೆಗಳನ್ನೂ ತೋರಿಸುವುದು ಎಂದರೆ ಬಹುಶಃ ಇದು ಹಿಂದಿನ ಜನ್ಮದ ಟ್ಯಾಲೆಂಟೇ ಇರಬೇಕು ಎನ್ನುವಷ್ಟರ ಮಟ್ಟಿಗೆ ಎಲ್ಲರನ್ನೂ ಆವರಿಸಿಕೊಂಡಿದ್ದಾಳೆ ಸಿಹಿ ಅರ್ಥಾತ್‌ ರಿತು ಸಿಂಗ್‌. ಇದೀಗ ಸೀರಿಯಲ್‌ ಸೆಟ್‌ಗೆ ಅಮ್ಮನ ಜೊತೆ ಬಂದಾಗ ಮೊದಲ ದಿನ ಈಕೆಯ ಕಾನ್ಫಿಡೆನ್ಸ್‌ ಹೇಗಿತ್ತು ಎಂಬ ಬಗೆಗಿನ ವಿಡಿಯೋ ಒಂದು ವೈರಲ್‌ ಆಗಿದೆ.

ಸಿಹಿಯ ಮುದ್ದು ಮುದ್ದು ಸ್ಟೆಪ್​ಗೆ ಅಭಿಮಾನಿಗಳು ಫಿದಾ: ಆ್ಯಕ್ಟಿಂಗ್​ನಲ್ಲಿ ನಿನಗೆ ನೀನೇ ಸಾಟಿ ಎಂದ ಫ್ಯಾನ್ಸ್​

ರೀತು ಸಿಂಗ್‌, ಈ ಸೀರಿಯಲ್‌ಗೂ ಮುನ್ನ ರಿಯಾಲಿಟಿ ಷೋನಲ್ಲಿ ಕಾಣಿಸಿಕೊಂಡಿದ್ದರೂ, ಸೀರಿಯಲ್‌ ಒಂದರಲ್ಲಿ ನಟಿಸುವುದು ಎಂದರೆ ಅದಕ್ಕೆ ಸಾಕಷ್ಟು ಧೈರ್‍ಯವೂ ಬೇಕು. ಆದರೆ ಈ ಬಾಲ ಕಲಾವಿದೆ ಮೊದಲ ದಿನದಿಂದಲೂ ಅದೇ ಆತ್ಮವಿಶ್ವಾಸ ಇಟ್ಟುಕೊಂಡಿರುವುದನ್ನು ಈ ವಿಡಿಯೋದಲ್ಲಿ ಕಾಣಬಹುದು. ಈ ಸೀರಿಯಲ್‌ನಲ್ಲಿ ಸದ್ಯ ಅಮ್ಮನ ಆಸರೆಯಲ್ಲಿದ್ದ ಸಿಹಿಗೆ ಅಪ್ಪನ ಪ್ರೀತಿಯೂ ಸಿಕ್ಕಿದೆ. ಆದರೆ ಈಕೆ ನಿಜ ಜೀವನವೂ ನೋವಿನಿಂದಲೇ ಕೂಡಿದೆ.

ಹೌದು. ರೀತು ಸಿಂಗ್​ ನೇಪಾಳ ಮೂಲದವಳು. ತಾಯಿ ಜೊತೆಗೆ ಬೆಂಗಳೂರಿನಲ್ಲಿ ನೆಲೆಸಿದ್ದಾಳೆ. ಸೀತಾರಾಮ ಸೀರಿಯಲ್​ಗೂ ಸಿಹಿ ಬಾಳಿಗೂ ಸಾಮ್ಯತೆ ಇದೆ. ಹೌದು. ಸೀತಾರಾಮ ಸೀರಿಯಲ್​ ರೀತಿಯಲ್ಲಿಯೇ ಈಕೆಯ ನಿಜ ಜೀವನದ ಕೂಡ ಇದೆ. ಸೀತಾರಾಮ ಸೀರಿಯಲ್​ನಲ್ಲಿ ಈಕೆಗೆ ಅಪ್ಪ ಇಲ್ಲ. ಅಮ್ಮನೇ ಸರ್ವಸ್ವ. ಅದೇ ರೀತಿ ರಿತು ರಿಯಲ್​ ಲೈಫ್​ ಸ್ಟೋರಿ ಕೂಡ. ಇದರ ಬಗ್ಗೆ ಖುದ್ದು ಅವರ ಅಮ್ಮನೇ ಹೇಳಿಕೊಂಡಿದ್ದರು. ಅದೇನೆಂದರೆ, ರಿತು ರಿಯಲ್​ ಅಪ್ಪ ದೂರ ಆಗಿದ್ದಾರೆ. ಈಕೆಯ ರಿಯಲ್​ ಲೈಫ್​ನಲ್ಲಿಯೂ ಅಮ್ಮನೇ ಎಲ್ಲಾ. ಪತಿಯಿಂದ ದೂರವಾಗಿರುವ ರಿತು ಅಮ್ಮ, ಒಬ್ಬಂಟಿಯಾಗಿ ಮಗಳನ್ನು ಸಾಕುತ್ತಿದ್ದಾರೆ. 

ಮುದ್ದು ಸಿಹಿಯ ಆ್ಯಕ್ಟಿಂಗ್​ಗೆ ಮನಸೋತವರೇ ಈಗ ಉಲ್ಟಾ ಹೊಡೀತಿದ್ದಾರೆ! ಇವಳನ್ನು ಹೀಗೆ ಬಿಟ್ರೆ...

View post on Instagram