Asianet Suvarna News Asianet Suvarna News
breaking news image

ಸಿಹಿಯ ಮುದ್ದು ಮುದ್ದು ಸ್ಟೆಪ್​ಗೆ ಅಭಿಮಾನಿಗಳು ಫಿದಾ: ಆ್ಯಕ್ಟಿಂಗ್​ನಲ್ಲಿ ನಿನಗೆ ನೀನೇ ಸಾಟಿ ಎಂದ ಫ್ಯಾನ್ಸ್​

ಸೀತಾರಾಮ ಸೀರಿಯಲ್​ ಸೀತಾ, ಪ್ರಿಯಾ ಜೊತೆ ಸಿಹಿ ಪಾತ್ರಧಾರಿ ರಿತು ಸಿಂಗ್​ ರೀಲ್ಸ್​ ಮಾಡಿದ್ದು, ಇವರ ರೀಲ್ಸ್​ಗೆ ಫ್ಯಾನ್ಸ್​ ಫಿದಾ ಆಗಿದ್ದಾರೆ. 
 

Seetaram serial Seeta and Priya with Sihi character Ritu Singh has made reels suc
Author
First Published Apr 27, 2024, 12:50 PM IST

ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರ ಆಗ್ತಿರೋ ಸೀತಾರಾಮ ಸೀರಿಯಲ್​ ಟಿಆರ್​ಪಿಯಲ್ಲಿ ಉತ್ತಮ ರೇಟಿಂಗ್​ ಪಡೆದುಕೊಳ್ಳುವುದಕ್ಕೆ ಬಹುಮುಖ್ಯ ಕಾರಣ, ಪುಟಾಣಿ ಸಿಹಿಯ ನಟನೆ ಎಂದರೂ ಸುಳ್ಳಲ್ಲ. ಐದು ವರ್ಷದ ಪುಟಾಣಿ, ತನ್ನ ಪಾತ್ರವನ್ನು ಅರಗಿಸಿಕೊಂಡು ನಟನೆ ಮಾಡುವುದು ಸುಲಭದ ಮಾತಲ್ಲ. ನಿಜ ಜೀವನದಲ್ಲಿಯಾದರೆ ನೋವು, ಖುಷಿ, ನಲಿವು, ದುಃಖ, ಅಳು ಎಲ್ಲವೂ ನ್ಯಾಚುರಲ್‌ ಆಗಿ ಬಂದುಬಿಡುತ್ತದೆ. ಆದರೆ ಶೂಟಿಂಗ್‌ ಸಮಯದಲ್ಲಿ ನಟನೆ ಮಾಡುವುದು ಎಂದರೆ ಅದಕ್ಕೆ ಬಹಳ ಟ್ಯಾಲೆಂಟ್‌ ಬೇಕು. ಇಷ್ಟು ಚಿಕ್ಕ ವಯಸ್ಸಿನಲ್ಲಿ ಎಲ್ಲ ಭಾವನೆಗಳನ್ನೂ ತೋರಿಸುವುದು ಎಂದರೆ ಬಹುಶಃ ಇದು ಹಿಂದಿನ ಜನ್ಮದ ಟ್ಯಾಲೆಂಟೇ ಇರಬೇಕು ಎನ್ನುವಷ್ಟರ ಮಟ್ಟಿಗೆ ಎಲ್ಲರನ್ನೂ ಆವರಿಸಿಕೊಂಡಿದ್ದಾಳೆ ಸಿಹಿ  ಅರ್ಥಾತ್‌ ರಿತು ಸಿಂಗ್‌. ಸೀತಾರಾಮ ಸೀರಿಯಲ್​ನಲ್ಲಿ ರಾಮ್​ ಆಸ್ಪತ್ರೆಗೆ ಸೇರಿದ್ದ ಸಂದರ್ಭದಲ್ಲಿ ಆತನನ್ನು ನೋಡಲು ಆಗದೇ ಆಕೆ ಪರಿತಪಿಸಿದ್ದ  ಪರಿ ಕಂಡು ವೀಕ್ಷಕರೇ ಕಣ್ಣೀರಾಗಿದ್ದರು.  ಇದು ಸೀರಿಯಲ್‌ ಎಂದು ತಿಳಿದರೂ ನಿನ್ನ ಪಾತ್ರ ನೋಡಿ ಕಣ್ಣೀರು ತಡೆದುಕೊಳ್ಳಲು ಆಗಲಿಲ್ಲ ಎಂದು ಸಾಮಾಜಿಕ ಜಾಲತಾಣದಲ್ಲಿ ಹಲವರು ಕಮೆಂಟ್​ ಹಾಕಿದ್ದರು, ಅಷ್ಟು ನೈಜ ಅಭಿನಯ ಈಕೆಯದ್ದು.

 ಇದೀಗ ರಿತು ಸಿಂಗ್​, ಸೀತಾರಾಮ ಸೀರಿಯಲ್​ನ ಸೀತಮ್ಮ ಮತ್ತು ಪ್ರಿಯಾ ಜೊತೆ ಭರ್ಜರಿ ರೀಲ್ಸ್​ ಮಾಡಿದ್ದಾಳೆ. ಹಿಂದಿನ ಬಾದಲ್​ ಬರಸಾ... ಹಾಡಿಗೆ ಸ್ಟೆಪ್​ ಹಾಕಿದ್ದಾಳೆ. ಸೀತಾ ಪಾತ್ರಧಾರಿ ವೈಷ್ಣವಿ ಗೌಡ ಅವರು ಸೋಷಿಯಲ್​ ಮೀಡಿಯಾದಲ್ಲಿಯೂ ಸಕತ್​ ಆ್ಯಕ್ಟೀವ್​ ಇದ್ದು, ಆಗಾಗ್ಗೆ ವಿಡಿಯೋ, ರೀಲ್ಸ್​ಗಳನ್ನು ಶೇರ್ ಮಾಡಿಕೊಳ್ಳುತ್ತಲೇ ಇರುತ್ತಾರೆ. ಕೆಲ ದಿನಗಳ ಹಿಂದಷ್ಟೇ ರಾಮ್​ ಜೊತೆ ಡ್ಯಾನ್ಸ್​ ಮಾಡಿ ರೀಲ್ಸ್​ ಶೇರ್​ ಮಾಡಿಕೊಂಡಿದ್ದರು. ಇವರಿಬ್ಬರೂ ಒಂದು ತಮಾಷೆಯ ರೀಲ್ಸ್ ಮಾಡಿದ್ದರು. ಅದರಲ್ಲಿ 20,60 ಟೇಕ್ ಎಂದು ಹೇಳಲಾಗಿದೆ. ಅಷ್ಟಾದರೂ ರಾಮ್​ಗೆ ಸೀತಾಳ ಜೊತೆ ಡ್ಯಾನ್ಸ್​ ಮಾಡಲು ಸಾಧ್ಯವಾಗಲೇ ಪರದಾಡಿದ್ದರು. ಇದು ತಮಾಷೆಗಾಗಿ ಮಾಡಿದ ವಿಡಿಯೋ ಆದರೂ ಇದನ್ನು ನೋಡಿದ ವೀಕ್ಷಕರು ನಕ್ಕೂ ನಕ್ಕು ಸುಸ್ತಾಗಿದ್ದರು.

ಬಿಗ್​ಬಾಸ್​​ ನಮ್ರತಾ ಗೌಡ್​ ಹುಟ್ಟುಹಬ್ಬದ ಸಡಗರ ಹೇಗಿತ್ತು? ವಿಡಿಯೋದಲ್ಲಿದೆ ಫುಲ್​ ಡಿಟೇಲ್ಸ್​

ಇದೀಗ ಪ್ರಿಯಾ ಮತ್ತು ಸೀತಾ ಜೊತೆ ರೀಲ್ಸ್​ ಮಾಡಿರುವ ವಿಡಿಯೋ ಅನ್ನು ವೈಷ್ಣವಿ ಅವರು ಶೇರ್​ ಮಾಡಿದ್ದಾರೆ. ಚಿಕ್ಕ ಮಕ್ಕಳು ಹೇಗೆ ಡ್ಯಾನ್ಸ್​ ಮಾಡಿದರೂ ಚೆಂದನೇ. ಅದರಲ್ಲಿ ಎರಡು ಮಾತೇ ಇಲ್ಲ. ಆದರೆ ಸಿಹಿಯ ಪಾತ್ರದ ಮೂಲಕ ಸೀರಿಯಲ್​ ಪ್ರಿಯರ ಮನೆಮಗಳಾಗಿರುವ ಪುಟಾಣಿ ಎಂದ ಮೇಲೆ ಕೇಳಬೇಕೆ? ಈಕೆಯ ಮುದ್ದಾದ ರೀಲ್ಸ್​ಗೆ ನೆಟ್ಟಿಗರು ಮನ ಸೋತಿದ್ದು ಥರಹೇವಾರಿ ಕಮೆಂಟ್​ಗಳ ಸುರಿಮಳೆಯಾಗುತ್ತಿದೆ. 

ಅಂದಹಾಗೆ, ಸಿಹಿಯ ನಿಜವಾದ ಹೆಸರು ರೀತು ಸಿಂಗ್​. ಈಕೆ ನೇಪಾಳದವಳು. ನೇಪಾಳ ಮೂಲದ ರಿತು, ತಾಯಿ ಜೊತೆಗೆ ಬೆಂಗಳೂರಿನಲ್ಲಿ ನೆಲೆಸಿದ್ದಾಳೆ. ಸೀತಾರಾಮ ಸೀರಿಯಲ್​ಗೂ ಸಿಹಿ ಬಾಳಿಗೂ ಸಾಮ್ಯತೆ ಇದೆ. ಹೌದು. ಸೀತಾರಾಮ ಸೀರಿಯಲ್​ ರೀತಿಯಲ್ಲಿಯೇ ಈಕೆಯ ನಿಜ ಜೀವನದ ಕೂಡ ಇದೆ. ಸೀತಾರಾಮ ಸೀರಿಯಲ್​ನಲ್ಲಿ ಈಕೆಗೆ ಅಪ್ಪ ಇಲ್ಲ. ಅಮ್ಮನೇ ಸರ್ವಸ್ವ. ಅದೇ ರೀತಿ ರಿತು ರಿಯಲ್​ ಲೈಫ್​ ಸ್ಟೋರಿ ಕೂಡ. ಇದರ ಬಗ್ಗೆ ಖುದ್ದು ಅವರ ಅಮ್ಮನೇ ಹೇಳಿಕೊಂಡಿದ್ದರು. ಅದೇನೆಂದರೆ, ರಿತು ರಿಯಲ್​ ಅಪ್ಪ ದೂರ ಆಗಿದ್ದಾರೆ. ಈಕೆಯ ರಿಯಲ್​ ಲೈಫ್​ನಲ್ಲಿಯೂ ಅಮ್ಮನೇ ಎಲ್ಲಾ. ಪತಿಯಿಂದ ದೂರವಾಗಿರುವ ರಿತು ಅಮ್ಮ, ಒಬ್ಬಂಟಿಯಾಗಿ ಮಗಳನ್ನು ಸಾಕುತ್ತಿದ್ದಾರೆ. 

ಟವಲಲ್ಲಿ ಸುತ್ತಿ ಹೊಡೆಯೋದು ಅಂದ್ರೆ ಇದೇ ಅಲ್ವಾ? ಭೂಮಿಕಾಗೊಂದು ದೊಡ್ಡ ಸಲಾಂ ಅಂತಿದ್ದಾರೆ ಫ್ಯಾನ್ಸ್​


Latest Videos
Follow Us:
Download App:
  • android
  • ios