ಸೀತಾರಾಮ ಸೀರಿಯಲ್ ಅಶೋಕ್- ಪ್ರಿಯಾ ರೀಲ್ ಮದ್ವೆಗೂ ಇಷ್ಟೊಂದು ಖರ್ಚಾ? ವಿವಾಹದ ಮೇಕಿಂಗ್ ವಿಡಿಯೋ ವೈರಲ್
ಸೀತಾರಾಮ ಸೀರಿಯಲ್ನಲ್ಲಿ ಅಶೋಕ್- ಪ್ರಿಯಾ ಮದುವೆ ರಿಯಲ್ ಮದುವೆಗಿಂತಲೂ ಭರ್ಜರಿಯಾಗಿ ನಡೆಯುತ್ತಿದೆ. ವಿವಾಹದ ಮೇಕಿಂಗ್ ವಿಡಿಯೋ ವೈರಲ್ ಆಗಿದೆ.
ಸೀತಾರಾಮ ಸೀರಿಯಲ್ನಲ್ಲಿ ಅಶೋಕ್ ಮತ್ತು ಪ್ರಿಯಾ ಮದ್ವೆ ಭರ್ಜರಿಯಾಗಿ ನಡೆಯುತ್ತಿದೆ. ಸೀರಿಯಲ್ನಲ್ಲಿ ಪ್ರೀತಿಸಿ ವಿವಾಹ ಆಗಿರೋ ಈ ಜೋಡಿಯ ಮದುವೆ ರಿಯಲ್ ಮದುವೆಗಿಂತಲೂ ಸಂಭ್ರಮದಿಂದಲೇ ನಡೆಯುತ್ತಿದೆ. ಇದರ ಮೇಕಿಂಗ್ ವಿಡಿಯೋಅನ್ನು ಜೀ ಕನ್ನಡ ವಾಹಿನಿ ಬಿಡುಗಡೆ ಮಾಡಿದೆ. ಶೂಟಿಂಗ್ ಸಮಯದಲ್ಲಿ ಏನೆಲ್ಲಾ ಆಯಿತು, ಏನೆಲ್ಲಾ ತಮಾಷೆ ನಡೆಯಿತು ಎನ್ನುವುದನ್ನು ಇದರಲ್ಲಿ ತೋರಿಸಲಾಗಿದೆ. ಅಷ್ಟಕ್ಕೂ, ಇಂದು ಸೀರಿಯಲ್ಗಳು ಎಂದರೆ ಅವು ಕೇವಲ ಸೀರಿಯಲ್ಗಳಾಗಿರಲ್ಲ. ಬದಲಿಗೆ ಅದು ನಿಜ ಜೀವನದ ಕಥೆಯಂತೆ ಇಂದು ಮನೆಮನಗಳನ್ನು ತುಂಬಿಕೊಂಡಿವೆ. ಅದರಲ್ಲಿರುವ ಪಾತ್ರಧಾರಿಗಳೆಲ್ಲರೂ ತಮ್ಮ ಮನೆಯದ್ದೋ ಇಲ್ಲವೇ ನೆರೆಮನೆಯ ಸದಸ್ಯರಂತೆ ಕಾಣುವ ದೊಡ್ಡ ವರ್ಗವೇ ಇದೆ. ಇದೇ ಕಾರಣಕ್ಕೆ ಸೀರಿಯಲ್ಗಳು ಕೂಡ ವೀಕ್ಷಕರನ್ನು ಸೆರೆ ಹಿಡಿಯಲು ದೊಡ್ಡ ತಂತ್ರವನ್ನೇ ರೂಪಿಸುತ್ತಾರೆ. ಹಾಗೆಯೇ ಪ್ರಿಯಾ ಮತ್ತು ಅಶೋಕ್ ಮದುವೆ ಸಂಭ್ರಮ ಜೋರಾಗಿ ನಡೆದಿದೆ. ಸೀರಿಯಲ್ಗಳ ಮದುವೆ ಎಂದರೆ ಅದು ಒಂದೆರಡು ದಿನಗಳ ಮದ್ವೆಯಲ್ಲ. ಇದೀಗ ನಿಜ ಜೀವನದಲ್ಲಿಯೂ ಸೆಲೆಬ್ರಿಟಿ ಮದ್ವೆಗಳು ತಿಂಗಳುಗಳ ಕಾಲ ನಡೆಯುವುದು ಇದೆ. ಇನ್ನು ಧಾರಾವಾಹಿಗಳು ಎಂದ ಮೇಲೆ ಕೇಳಬೇಕೆ. ಒಂದು ಮದುವೆಯ ಸೀನ್ ವರ್ಷಗಟ್ಟಲೆ ಹೋದರೂ ಅಚ್ಚರಿಯಿಲ್ಲ.
ಮೊನ್ನೆಯಷ್ಟೇ ಪ್ರಿಯಾ ರಿಯಲ್ ಮದ್ವೆಯ ರೀತಿಯಲ್ಲಿಯೇ ಪ್ರಿಯಾ ಫೋಟೋಶೂಟ್ ಮಾಡಿಸಿಕೊಂಡಿರುವ ವಿಡಿಯೋ ಶೇರ್ ಮಾಡಿದ್ದರು. ಇತ್ತೀಚೆಗಷ್ಟೇ ಯೂಟ್ಯೂಬ್ ತೆರೆದಿರುವ ಪ್ರಿಯಾ ಅವರು ಮದುವೆ ಫೋಟೋಶೂಟ್ ಹೇಗಿತ್ತು ಎಂಬುದನ್ನು ತಮ್ಮ ಯುಟ್ಯೂಬ್ನಲ್ಲಿ ಶೇರ್ ಮಾಡಿಕೊಂಡಿದ್ದಾರೆ. ಅಷ್ಟಕ್ಕೂ ಪ್ರಿಯಾ ಅವರ ನಿಜವಾದ ಹೆಸರು ಮೇಘನಾ ಶಂಕರಪ್ಪ. ಇವರು ಪ್ರಿಯಾ ಮದುವೆಯ ಫೋಟೋಶೂಟ್ ವಿಡಿಯೋ ಶೇರ್ ಮಾಡಿಕೊಂಡಿದ್ದು, ನಿಜವಾದ ಮದುವೆಯ ರೀತಿಯಲ್ಲಿಯೇ ಇದನ್ನು ಬಿಂಬಿಸಲಾಗಿದೆ.
ಗುಂಡಿನ ದಾಳಿ: ಸಲ್ಮಾನ್ ಖಾನ್ ಫ್ಯಾನ್ಸ್ ಬೆದರಿದ್ರೆ ತಂದೆ ಸಲೀಂ ಖಾನ್ ಹೀಗೆ ಹೇಳೋದಾ?
ಇನ್ನು ಸೀರಿಯಲ್ ವಿಷಯಕ್ಕೆ ಬರುವುದಾದರೆ, ಪ್ರಿಯಾ ಮತ್ತು ಅಶೋಕ್ ಮದ್ವೆ ಅತ್ತ ಭರ್ಜರಿಯಾಗಿ ನಡೆಯುತ್ತಿರುವ ನಡುವೆಯೇ ಇತ್ತ ರಾಮ್‌ನ ಮದುವೆಯನ್ನೂ ನಿರ್ಧಾರ ಮಾಡುವೆ ಎಂದಿದ್ದಾಳೆ ಚಿಕ್ಕಮ್ಮ. ಇದನ್ನು ಕೇಳಿ ಚಾಂದನಿಗೆ ಖುಷಿಯೋ ಖುಷಿ. ಅದೇ ವೇಳೆ ತಾತ ಕೂಡ ನಾನು ರಾಮ್‌ನ ಮದುಮಗಳನ್ನು ನಿರ್ಧಾರ ಮಾಡಿರುವುದಾಗಿ ಹೇಳಿದ್ದಾನೆ. ರಾಮ್ ಮತ್ತು ಸೀತಾ ಇಬ್ಬರೂ ಶಾಕ್ ಆಗಿದ್ದಾರೆ. ಸೀತಾಳನ್ನು ಪ್ರೀತಿ ಮಾಡುವುದಾಗಿ ರಾಮ್ ತಾತನ ಎದುರು ಎಂದಿಗೂ ಬಾಯಿ ಬಿಟ್ಟಿಲ್ಲ. ಇನ್ನು ಚಿಕ್ಕಮ್ಮನೋ ತಾತನ ತಲೆಯನ್ನು ಚಾಂದನಿ ವಿಷಯದಲ್ಲಿ ತುಂಬಿದ್ದಾಳೆ. ಅವಳಿಗೆ ಚಾಂದನಿ ಇಷ್ಟವಿಲ್ಲದಿದ್ದರೂ ಸೀತಾ ಮತ್ತು ರಾಮ್‌ರನ್ನು ದೂರ ಮಾಡುವುದು ಮಾತ್ರ ಬೇಕಿದೆ. ಹಾಗಿದ್ದರೆ ರಾಮ್‌ನ ಮದುಮಗಳ ಹೆಸರು ಯಾರದ್ದು ಹೇಳಲಾಗುತ್ತದೆ? ಸದ್ಯ ಸೀತಾ ಮತ್ತು ರಾಮ್ ಅಡಕತ್ತರಿಯಲ್ಲಿ ಸಿಲುಕಿದ ಅನುಭವ ಪಡುತ್ತಿದ್ದಾರೆ.
ಇದರ ನಡುವೆಯೇ, ಚಾಂದನಿ ಸೀತಾಗೆ ಷರತ್ತು ಕೂಡ ಹಾಕಿದ್ದಾಳೆ. ಸೀತಾ-ರಾಮ ಒಂದಾಗುವುದನ್ನು ಚಾಂದನಿಗೆ ನೋಡಲು ಆಗುತ್ತಿಲ್ಲ. ಸೀತಾ ಸಿಕ್ಕಾಗಲೆಲ್ಲಾ ಪದೇ ಪದೇ ಹಂಗಿಸುತ್ತಲೇ ಇರುತ್ತಾಳೆ. ರಾಮ್ ತನಗೆ ಸಿಗುವುದಿಲ್ಲ ಎಂದು ತಿಳಿದರೂ ಸೀತಾಳನ್ನು ಹೇಗಾದರೂ ಮಾಡಿ ರಾಮ್ನಿಂದ ದೂರ ಮಾಡುವ ಯೋಚನೆ ಅವಳದ್ದು. ಅದಕ್ಕೆ ತಕ್ಕಂತೆ ಚಿಕ್ಕಮ್ಮ ಭಾರ್ಗವಿ ಕುತಂತ್ರ ಬೇರೆ. ಪ್ರಿಯಾ ಮತ್ತು ಅಶೋಕ್ ಮದುವೆ ಮುಗಿಯುವುದರೊಳಗೆ ಅವರಿಬ್ಬರನ್ನೂ ಬೇರೆ ಮಾಡುತ್ತೇನೆ ಎಂದಿದ್ದಾಳೆ ಭಾರ್ಗವಿ. ಇದನದ್ನೇ ನಂಬಿಕೊಂಡಿದ್ದಾಳೆ ಚಾಂದನಿ. ಈ ಮಧ್ಯೆಯೇ ಸೀತಾಳಿಗೆ ರಾಮ್ ಕೊಡಿಸಿರೋ ಸೀರೆ ಮೇಲೆ ಚಾಂದನಿ ಕಣ್ಣು ಬಿದ್ದಿದೆ. ಅದನ್ನು ತನ್ನದು ಮಾಡಿಕೊಳ್ಳಬೇಕು ಎಂದುಕೊಂಡಿದ್ದಳು. ಅದು ಸಾಧ್ಯವಾಗಿರಲಿಲ್ಲ. ಅದಕ್ಕೆ ರಾಮ್ ಕೊಡಿಸಿದ ಸೀರೆ ನಿನಗೆ ಸಿಕ್ಕಿದೆ, ಆದರೆ ರಾಮ್ ಸಿಗಲ್ಲ ಎಂದಿದ್ದಾಳೆ.
ಮುಸ್ಲಿಂ ಯುವಕನನ್ನು ಮದ್ವೆಯಾದ ಕುರಿತು ಪ್ರಿಯಾಮಣಿ ಓಪನ್ ಮಾತು: ನಟಿ ಹೇಳಿದ್ದೇನು?