Asianet Suvarna News Asianet Suvarna News

ಕನ್ನಡದಲ್ಲಿ ಟೊಮ್ಯಾಟೊಗೆ ಏನು ಹೇಳ್ತಾರೆ? ಸೀತಾರಾಮ ಪ್ರಿಯಾಳ ಉತ್ತರಕ್ಕೆ ಫ್ಯಾನ್ಸ್​ ಸುಸ್ತು...!

ಸೀತಾರಾಮ ಸೀರಿಯಲ್​ ಪ್ರಿಯಾ ಅರ್ಥಾತ್​ ಮೇಘನಾ ಶಂಕರಪ್ಪ ಅವರು ಒಂದು ಪ್ರಶ್ನೆ ಹೇಳುತ್ತೇನೆ ಎನ್ನುತ್ತಲೇ ಈ ಪ್ರಶ್ನೆ ಕೇಳಿ  ಎಲ್ಲರೂ ಉಫ್​ ಎನ್ನುವಂತೆ ಮಾಡಿದ್ದಾರೆ. ಅವರು ಕೇಳಿದ ಪ್ರಶ್ನೆ ಏನು? ಉತ್ತರವೇನು?
 

Seetarama serial Priya Meghna Shankarappa asked about tomato in kannada suc
Author
First Published Jun 26, 2024, 3:41 PM IST

ಸೀತಾರಾಮ ಸೀರಿಯಲ್​ ಪ್ರಿಯಾ ಸೋಷಿಯಲ್ ಮೀಡಿಯಾದಲ್ಲಿಯೂ ಸಕತ್​ ಆ್ಯಕ್ಟೀವ್​ ಆಗಿದ್ದಾರೆ. ಇವರ ರಿಯಲ್​ ಹೆಸರು ಮೇಘನಾ ಶಂಕರಪ್ಪ. ತಮ್ಮ ಸೀರಿಯಲ್​ ಶೂಟಿಂಗ್​ನಲ್ಲಿಯೇ ಕೆಲವೊಂದು ರೀಲ್ಸ್​ ಮಾಡಿದರೆ, ಬಿಡುವಿನ ವೇಳೆಯಲ್ಲಿ ಸಕತ್​ ಡ್ಯಾನ್ಸ್ ಸ್ಟೆಪ್​ ಹಾಕಿ ಅಭಿಮಾನಿಗಳ ಮನ ಗೆಲ್ಲುವುದು ಇದೆ. ಇದೀಗ ಮೇಘನಾ ಅವರು ಸೀತಾರಾಮ ಸೀರಿಯಲ್​ ತಂಡದ ಜೊತೆ ಒಂದು ರೀಲ್ಸ್​ ಮಾಡಿದ್ದಾರೆ. ಇದನ್ನು ನೋಡಿ ಅಭಿಮಾನಿಗಳು ಸುಸ್ತಾಗಿದ್ದಾರೆ. ಅಷ್ಟಕ್ಕೂ ಮೇಘನಾ ಅವರು ಕೇಳಿರುವುದು ಟೊಮ್ಯಾಟೊಗೆ ಕನ್ನಡದಲ್ಲಿ ಏನು ಹೇಳುತ್ತಾರೆ ಎಂದು.  

ಅಷ್ಟಕ್ಕೂ ಸೀತಾರಾಮ ಪ್ರಿಯಾ , ಅಲ್ಲಿರುವ ಎಲ್ಲರಿಗೂ ಒಂದು ಪ್ರಶ್ನೆ ಕೇಳುತ್ತೇನೆ, ಉತ್ತರಿಸಿ ಎಂದಿದ್ದಾರೆ. ಟೊಮ್ಯಾಟೊಗೆ ಏನು ಎನ್ನುತ್ತಾರೆ ಎಂದು ಪ್ರಶ್ನಿಸಿದ್ದಾರೆ.  ಆಮೇಲೆ ವಿವಿಧ ಪಾತ್ರಧಾರಿಗಳಾಗಿರುವ ರಾಮ್, ಭಾರ್ಗವಿ ಸೇರಿದಂತೆ ಎಲ್ಲ ಪಾತ್ರಧಾರಿಗಳೂ ಹೇಳಿದ್ದಾರೆ. ಎಲ್ಲರೂ ತಮ್ಮದೇ ಆದ ವಿವಿಧ ಉತ್ತರ ಹೇಳಿದ್ದಾರೆ. ನಂತರ ಮೇಘನಾ ನೀವು ಹೇಳಿದ್ದು ಯಾವುದೂ ಸರಿಯಲ್ಲ, ಟೊಮ್ಯಾಟೊಗೆ ಕನ್ನಡದಲ್ಲಿ ಟೊಮ್ಯಾಟೊ ಎನ್ನುತ್ತಾರೆ ಎಂದಾಗ ಎಲ್ಲರೂ ಉಫ್​ ಎಂದಿದ್ದಾರೆ. ಇನ್ನು ಕಮೆಂಟಿಗರು ಬೇರೆ ಬೇರೆ ರೀತಿಯ ಹೆಸರುಗಳಲ್ಲಿ ಟೊಮ್ಯಾಟೊ ಹಣ್ಣನ್ನು ಕರೆದಿದ್ದಾರೆ. ಚಪ್ಪದ ಬದನೆ, ಗೂರೆ ಹಣ್ಣು, ಗೂದೆ ಹಣ್ಣು... ಹೀಗೆ ಅನೇಕ ಹೆಸರಿನಲ್ಲಿ ಕರೆದಿದ್ದಾರೆ.  

ಸೀತಾಳ ಮನೆಯಲ್ಲಿ ಕೊನೆಯ ದಿನದ ಶೂಟಿಂಗ್​ ಹೀಗಿತ್ತು ನೋಡಿ... ಸೀತಾರಾಮ ವೈಷ್ಣವಿ ಗೌಡ ಮಾಹಿತಿ

ಇನ್ನು ಮೇಘನಾ ಅವರ ಬಣ್ಣದ ಬದುಕಿನ ಕುರಿತು ಹೇಳುವುದಾದರೆ, 'ಸೀತಾರಾಮ' ಸೀರಿಯಲ್​ಗೂ ಮುನ್ನ ಅವರು,  ನಟಿಸಿದ್ದು 'ನಮ್ಮನೆ ಯುವರಾಣಿ' ಧಾರಾವಾಹಿಯಲ್ಲಿ. ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ 'ನಮ್ಮನೆ ಯುವರಾಣಿ' ಧಾರಾವಾಹಿಯಲ್ಲಿ ಖಳನಾಯಕಿ ನೇತ್ರಾ ಪಾತ್ರದ ಮೂಲಕ ಗಮನ ಸೆಳೆದಿದ್ದರು ಮೇಘನಾ ಶಂಕರಪ್ಪ.  ನಿರೂಪಕಿಯಾಗಿ ಕಿರುತೆರೆಯಲ್ಲಿ ಕಾಣಿಸಿಕೊಂಡಿದ್ದ ಮೇಘನಾ ಶಂಕರಪ್ಪ ನಟನೆಗೆ ಕಾಲಿಟ್ಟಿದ್ದು 'ಕಿನ್ನರಿ' ಧಾರಾವಾಹಿಯ ನಂತರ. ಮುಂದೆ 'ಕೃಷ್ಣ ತುಳಸಿ', 'ರತ್ನಗಿರಿ ರಹಸ್ಯ', 'ದೇವಯಾನಿ', 'ಸಿಂಧೂರ' ಹೀಗೆ ಕೆಲವೊಂದು ಧಾರಾವಾಹಿಗಳಲ್ಲಿ ನಟಿಸಿ ಸೈ ಎನಿಸಿಕೊಂಡಿದ್ದ ಮೇಘನಾ ಅವರು ಸದ್ಯ ಪ್ರಿಯಾ ಆಗಿ ಬದಲಾದುದು ಕಿರುತೆರೆ ವೀಕ್ಷಕರಿಗೆ ಖುಷಿ ತಂದಿದೆ. ಪಾಸಿಟಿವ್ ಆಗಿರಲಿ, ನೆಗೆಟಿವ್ ಆಗಿರಲಿ ಯಾವುದೇ ಪಾತ್ರ ನೀಡಿದರೂ ಅಚ್ಚುಕಟ್ಟಾಗಿ ಜೀವ ತುಂಬುವ ಮೇಘನಾ ಎರಡು ಶೇಡ್ ಪಾತ್ರವಿರುವ ಪಾತ್ರದ ಮೂಲಕ ಗುರುತಿಸಿಕೊಂಡಾಕೆ. ಕಿರುತೆರೆ ಅಂಗಳದಲ್ಲಿ ಭಿನ್ನ ಪಾತ್ರಗಳ ಮೂಲಕ ಮೋಡಿ ಮಾಡುತ್ತಿರುವ ಈಕೆಗೆ ಹಿರಿತೆರೆಯಲ್ಲಿ ಕಾಣಿಸಿಕೊಳ್ಳುವ ಆಸೆಯೂ ಇದೆ.

ಅಂದಹಾಗೆ ಈಚೆಗೆ ಮೇಘನಾ ಅವರು, ಈಚೆಗೆ ಹೊಸ ಮನೆಗೆ ಕಾಲಿಟ್ಟಿದ್ದಾರೆ. ಸೋಷಿಯಲ್​ ಮೀಡಿಯಾದಲ್ಲಿಯೂ ಇತ್ತೀಚಿಗೆ ಸಕತ್​ ಆ್ಯಕ್ಟೀವ್​ ಆಗಿರುವ ಅವರು, ಇದಾಗಲೇ ಅಸಂಖ್ಯ ಅಭಿಮಾನಿಗಳನ್ನು ಸೋಷಿಯಲ್ ಮೀಡಿಯಾದಲ್ಲಿ ಪಡೆದುಕೊಂಡಿದ್ದಾರೆ.  ಆಗಾಗ್ಗೆ ರೀಲ್ಸ್​  ಮಾಡುವ ಮೂಲಕ ಅಭಿಮಾನಿಗಳಿಗೆ ಹತ್ತಿರವಾಗುತ್ತಿದ್ದಾರೆ. 

ಅಂತರ್​ಧರ್ಮೀಯ ಪ್ರೇಮಿಗಳ ಕೌತುಕದ ಕಥೆ: ಗಂಟೆಗೊಮ್ಮೆ ಸ್ಮಾರಕಗಳ ಸಮಾಗಮ! ಡಾ.ಬ್ರೋ ಬಾಯಲ್ಲಿ ಕೇಳಿ...

Latest Videos
Follow Us:
Download App:
  • android
  • ios