Asianet Suvarna News Asianet Suvarna News

ಅನಾಥಾಶ್ರಮಕ್ಕೆ ಸೇರಿಸ್ತೀರಾ ಎಂದು ತಾತನಿಗೆ ಸಿಹಿ ಪ್ರಶ್ನೆ: ಕಣ್ಣೀರು ತರಿಸಿದೆ ಕಂದಾ ಎನ್ನುತ್ತಿದ್ದಾರೆ ನೆಟ್ಟಿಗರು

ಸಿಹಿಯ ನಟನೆಯನ್ನು ಕಂಡು ಮತ್ತೊಮ್ಮೆ ಕಣ್ಣೀರು ಹಾಕಿದ್ದಾರೆ ಸೀತಾರಾಮ ಫ್ಯಾನ್ಸ್​. ಅಷ್ಟಕ್ಕೂ ಅವರು ಹೇಳ್ತಿರೋದೇನು?
 

Seetarama fans have once again shed tears after seeing Sihis acting suc
Author
First Published May 9, 2024, 4:03 PM IST

ಸೀತಾ ಅಂತೂ ರಾಮ್​  ಮನೆ ಸೇರಿದ್ದಾಳೆ.  ಆಕೆಯನ್ನು ಎಲ್ಲರೂ ಒಪ್ಪಿಕೊಂಡು ಆಗಿದೆ. ಆದರೆ ಭಾರ್ಗವಿ ಮಾತ್ರ ಇದನ್ನು ಒಪ್ಪುತ್ತಿಲ್ಲ. ಹೇಗಾದರೂ ಮಾಡಿ ಈ ಮದುವೆ ತಪ್ಪಿಸಲು ತಂತ್ರ ರೂಪಿಸುತ್ತಲೇ ಇದ್ದಾಳೆ. ಮನೆಯಿಂದ ತಲೆತಲಾಂತರವಾಗಿ ಬಂದಿರುವ ಹಾರ ಸೀತಾಳಿಗೆ ಸೇರುವುದು ಅವಳಿಗೆ ಇಷ್ಟವಿರಲಿಲ್ಲ. ಆದರೂ ಅದು ಸೀತಾಳ ಕೊರಳನ್ನು ಸೇರಿದೆ. ಇದನ್ನು ನೋಡಿ ಹೊಟ್ಟೆ ಉರಿಸಿಕೊಂಡಿದ್ದಾಳೆ ಭಾರ್ಗವಿ. ಇದರ ನಡುವೆಯೇ ಸಿಹಿ ರಾಮ್​ ಮನೆಗೆ ಬಂದಿದ್ದಾಳೆ. ತನ್ನಿಂದಲೇ ರಾಮ್​  ಮತ್ತು ಸೀತಾಳ ಮದುವೆ ಆಗುತ್ತಿಲ್ಲ ಎನ್ನುವುದು ಅವಳ ಅನಿಸಿಕೆ. ಇದೇ ಕಾರಣಕ್ಕೆ ತಾತನ ಬಳಿ ಬಂದು ನಿಮಗೆ ನಾನೆಂದರೆ ಇಷ್ಟ ಇಲ್ಲ ಅಲ್ವಾ? ಎಂದು ಪ್ರಶ್ನಿಸಿದ್ದಾರೆ. ತಾತ ದೇಸಾಯಿ ಹಾಗೇಕಮ್ಮಾ, ಹಾಗೇನೂ ಇಲ್ಲ ಎಂದರೂ ಕೇಳದ ಸಿಹಿ, ಇವರಿಬ್ಬರ ಮದುವೆಗೆ ತಾನೇ ಅಡ್ಡಿಯಾಗುತ್ತಿದ್ದೇನೆ ಎಂದು ನನ್ನನ್ನು ನೀವು ಯಾವುದಾದ್ರೂ ಅನಾಥಾಶ್ರಮಕ್ಕೆ ಹಾಕಬೇಕು ಎಂದುಕೊಂಡಿದ್ರಾ ಎಂದು ಪ್ರಶ್ನಿಸಿದ್ದಾಳೆ.

ಅವಳ ನಟನೆ ನೋಡಿ ತಾತಂಗೆ ಮಾತ್ರವಲ್ಲದೇ ನೆಟ್ಟಿಗರೂ ಕಣ್ಣೀರು ಹಾಕಿದ್ದಾರೆ. ಈಕೆಯ ನಟನೆಗೆ ಇದಾಗಲೇ ಲಕ್ಷಾಂತರ ಮಂದಿ ಭೇಷ್ ಅಂದಿದ್ದಿದೆ. ಆದರೂ ದಿನಗಳೆದಂತೆ ಇನ್ನೂ ಪ್ರಬುದ್ಧ ನಟಿಯಂತೆ ಈಕೆ ಅಭಿನಯ ಮಾಡುತ್ತಿದ್ದಾಳೆ. ಇದೀಗ ಸೀತಮ್ಮ ಮತ್ತು ತನ್ನ ಫ್ರೆಂಡ್​​ ರಾಮನ ಮದುವೆಗೆ ತಾನೇ ಅಡ್ಡಿಯಾಗುತ್ತಿದ್ದೇನೆ ಎಂದು ತಿಳಿದು ಅದನ್ನು ತಾತ ದೇಸಾಯಿ ಬಳಿಗೆ ಅದನ್ನು ಹೇಳುವ ಪರಿ ಕಂಡು ಸೀತಾರಾಮ ಫ್ಯಾನ್ಸ್​, ನಿನ್ನ ನಟನೆಗೆ ನೀನೇ ಸರಿಸಾಟಿ, ಎಷ್ಟು ನೈಜವಾಗಿ ಆ್ಯಕ್ಟಿಂಗ್​ ಮಾಡುತ್ತಿಯಾ ಎಂದೆಲ್ಲಾ ಹೇಳುತ್ತಿದ್ದಾರೆ. 

ಕಮಲ ಹಾಸನ್​ ವಿರುದ್ಧ ವಂಚನೆ ಆರೋಪ: ನಿರ್ಮಾಪಕರಿಂದ ದೂರು ದಾಖಲು: ಆಗಿದ್ದೇನು?
 
ಅಷ್ಟಕ್ಕೂ ಐದು ವರ್ಷದ ಪುಟಾಣಿ, ತನ್ನ ಪಾತ್ರವನ್ನು ಅರಗಿಸಿಕೊಂಡು ನಟನೆ ಮಾಡುವುದು ಸುಲಭದ ಮಾತಲ್ಲ. ನಿಜ ಜೀವನದಲ್ಲಿಯಾದರೆ ನೋವು, ಖುಷಿ, ನಲಿವು, ದುಃಖ, ಅಳು ಎಲ್ಲವೂ ನ್ಯಾಚುರಲ್‌ ಆಗಿ ಬಂದುಬಿಡುತ್ತದೆ. ಆದರೆ ಶೂಟಿಂಗ್‌ ಸಮಯದಲ್ಲಿ ನಟನೆ ಮಾಡುವುದು ಎಂದರೆ ಅದಕ್ಕೆ ಬಹಳ ಟ್ಯಾಲೆಂಟ್‌ ಬೇಕು. ಇದೀಗ ನಟನೆಯ ಮೂಲಕ ಇದಾಗಲೇ ಮನ ಗೆದ್ದಿರುವ ಸಿಹಿ ಅರ್ಥಾತ್‌ ರಿತು ಸಿಂಗ್‌, ಈಗ ಮತ್ತೊಂದು ಹೆಜ್ಜೆ ಮುಂದಕ್ಕೆ ಹೋಗಿದ್ದಾಳೆ. ಈ ಹಿಂದೆ ಆಸ್ಪತ್ರೆಗೆ ಸೇರಿದ್ದ ರಾಮ್‌ನನ್ನು ನೋಡಲು ಆಗದೇ ಆಕೆ ಪರಿತಪಿಸುವ ಪರಿಯನ್ನು ಕಂಡು ನೆಟ್ಟಿಗರು ಕಣ್ಣೀರು ಹಾಕಿದ್ದರು. ಇದು ಸೀರಿಯಲ್‌ ಎಂದು ತಿಳಿದರೂ ನಿನ್ನ ಪಾತ್ರ ನೋಡಿ ಕಣ್ಣೀರು ತಡೆದುಕೊಳ್ಳಲು ಆಗಲಿಲ್ಲ ಎಂದಿದ್ದರು. 

ಅಂದಹಾಗೆ, ಸಿಹಿಯ ನಿಜವಾದ ಹೆಸರು ರೀತು ಸಿಂಗ್​. ಈಕೆ ನೇಪಾಳದವಳು. ನೇಪಾಳ ಮೂಲದ ರಿತು, ತಾಯಿ ಜೊತೆಗೆ ಬೆಂಗಳೂರಿನಲ್ಲಿ ನೆಲೆಸಿದ್ದಾಳೆ. ಸೀತಾರಾಮ ಸೀರಿಯಲ್​ಗೂ ಸಿಹಿ ಬಾಳಿಗೂ ಸಾಮ್ಯತೆ ಇದೆ. ಹೌದು. ಸೀತಾರಾಮ ಸೀರಿಯಲ್​ ರೀತಿಯಲ್ಲಿಯೇ ಈಕೆಯ ನಿಜ ಜೀವನದ ಕೂಡ ಇದೆ. ಸೀತಾರಾಮ ಸೀರಿಯಲ್​ನಲ್ಲಿ ಈಕೆಗೆ ಅಪ್ಪ ಇಲ್ಲ. ಅಮ್ಮನೇ ಸರ್ವಸ್ವ. ಅದೇ ರೀತಿ ರಿತು ರಿಯಲ್​ ಲೈಫ್​ ಸ್ಟೋರಿ ಕೂಡ. ಇದರ ಬಗ್ಗೆ ಖುದ್ದು ಅವರ ಅಮ್ಮನೇ ಹೇಳಿಕೊಂಡಿದ್ದರು. ಅದೇನೆಂದರೆ, ರಿತು ರಿಯಲ್​ ಅಪ್ಪ ದೂರ ಆಗಿದ್ದಾರೆ. ಈಕೆಯ ರಿಯಲ್​ ಲೈಫ್​ನಲ್ಲಿಯೂ ಅಮ್ಮನೇ ಎಲ್ಲಾ. ಪತಿಯಿಂದ ದೂರವಾಗಿರುವ ರಿತು ಅಮ್ಮ, ಒಬ್ಬಂಟಿಯಾಗಿ ಮಗಳನ್ನು ಸಾಕುತ್ತಿದ್ದಾರೆ. 
 

ರಣವೀರ್​- ದೀಪಿಕಾ ಬೇರೆಯಾಗಿದ್ದು ನಿಜನಾ? ಉಂಗುರ ತೋರಿಸಿ ನಟ ಡಿವೋರ್ಸ್​ ಕುರಿತು ಹೇಳಿದ್ದೇನು?

Latest Videos
Follow Us:
Download App:
  • android
  • ios