Asianet Suvarna News Asianet Suvarna News
breaking news image

ರಣವೀರ್​- ದೀಪಿಕಾ ಬೇರೆಯಾಗಿದ್ದು ನಿಜನಾ? ಉಂಗುರ ತೋರಿಸಿ ನಟ ಡಿವೋರ್ಸ್​ ಕುರಿತು ಹೇಳಿದ್ದೇನು?

ರಣವೀರ್ ಸಿಂಗ್​ ಮತ್ತು​ ದೀಪಿಕಾ ಪಡುಕೋಣೆ ಬೇರೆ ಬೇರೆಯಾಗಿದ್ದು ನಿಜನಾ? ಉಂಗುರ ತೋರಿಸಿ ನಟ ಡಿವೋರ್ಸ್​ ಕುರಿತು ಹೇಳಿದ್ದೇನು ನಟ?
 

Ranveer Singh flaunts wedding ring gifted by Deepika Padukone Very dear to me suc
Author
First Published May 9, 2024, 12:41 PM IST

ಸದ್ಯ ಪಠಾಣ್​ ಬೆಡಗಿ, ಕನ್ನಡತಿ ದೀಪಿಕಾ ಪಡುಕೋಣೆಯ ಗರ್ಭಧಾರಣೆಯ ವಿಷಯ ಹಾಟ್ ವಿಷಯವಾಗಿದೆ. ಇದಕ್ಕೆ ಕಾರಣ,  ಮಗುವಿನ ನಿರೀಕ್ಷೆಯಲ್ಲಿರುವ ಜೋಡಿಯ ಫ್ಯಾನ್ಸ್​ಗೂ ಸಕತ್​ ಆಘಾತಕಾರಿಯಾಗಿರುವ ವಿಷಯವೊಂದು  ನಡೆದಿದೆ. ಅದೇನೆಂದರೆ, ರಣವೀರ್​ ಸಿಂಗ್​ ತಮ್ಮ ಇನ್​ಸ್ಟಾಗ್ರಾಮ್​ನಲ್ಲಿ ಇದ್ದ ಮದುವೆಯ ಫೋಟೋಗಳನ್ನು ರಣವೀರ್​ ಸಿಂಗ್​ ಅವರು ಡಿಲೀಟ್​ ಮಾಡಿದ್ದಾರೆ. ಇದರಿಂದ  ದಂಪತಿ ನಡುವೆ ಕಿರಿಕ್ ಆಗಿರಬಹುದೇ ಎಂಬ ಅನುಮಾನ ಕಾದಿದೆ. ಪದ್ಮಾವತ್ ಸೇರಿದಂತೆ ಹಲವು ಚಿತ್ರಗಳಲ್ಲಿ ಒಟ್ಟಿಗೇ ನಟಿಸಿ ಜನಮೆಚ್ಚುಗೆ ಗಳಸಿದ್ದಾರೆ ನಟ ರಣವೀರ್ ಸಿಂಗ್ ಹಾಗೂ ನಟಿ ದೀಪಿಕಾ ಪಡುಕೋಣೆ.  ಇಬ್ಬರೂ 5 ವರ್ಷಗಳಿಗೂ ಹೆಚ್ಚು ಕಾಲ ಈ ಜೋಡಿ ಹಾಯಾಗಿ ಸಂಸಾರ ಮಾಡಿಕೊಂಡಿದೆ. ಇತ್ತೀಚೆಗೆ ದೀಪಿಕಾ ಪಡುಕೋಣೆ ಗರ್ಭಿಣಿ ಆಗಿದ್ದಾರೆ ಎಂಬ ಸುದ್ದಿ ಸಹ ವೈರಲ್ ಆಗಿದೆ. ಈಗ ಇದ್ದಕ್ಕಿದ್ದಂತೆ ದೀಪಿಕಾ ಪತಿರಾಯ ತಮ್ಮ ಮದುವೆ ಫೋಟೋಗಳನ್ನು ಸೋಷಿಯಲ್ ಮೀಡಿಯಾ ಪೇಜ್‌ಗಳಿಂದ ಕಿತ್ತುಹಾಕಿದ್ದು ಯಾಕೆ? ಎಲ್ಲರಿಗೂ ಸಂಶಯವಂತೂ ಮೂಡಿತ್ತು.

ಇದಾದ ಬೆನ್ನಲ್ಲೇ  ರಣವೀರ್​ ಸಿಂಗ್​ ಟೀಂ ಸ್ಪಷ್ಟನೆ ಕೊಟ್ಟಿತ್ತು. ನಟನ ಇನ್​ಸ್ಟಾಗ್ರಾಮ್​ನಲ್ಲಿ ಹಲವಾರು ಫೋಟೋ, ವಿಡಿಯೋಗಳು ಇದ್ದ ಹಿನ್ನೆಲೆಯಲ್ಲಿ, 2023 ರ ಹಿಂದಿನ ಎಲ್ಲಾ ಫೋಟೊ, ವಿಡಿಯೋಗಳನ್ನು ಆರ್ಕೈವ್ ಮಾಡಲಾಗಿದೆಯೇ ವಿನಾ ಡಿಲೀಟ್​ ಮಾಡಲಾಗಿಲ್ಲ.  ಅದರಲ್ಲಿ ಮದುವೆಯ ಫೋಟೋ, ವಿಡಿಯೋಗಳು ಇವೆಯಷ್ಟೇ. ಅಷ್ಟೇ ಅಲ್ಲದೇ ದೀಪಿಕಾ ಅವರ ಇನ್​ಸ್ಟಾಗ್ರಾಮ್​ನಲ್ಲಿ ಎಲ್ಲವೂ ಇನ್ನೂ ಇದೆ ಎಂದಿದೆ. ಇದನ್ನು ಕೇಳಿ ಸ್ಟಾರ್​ ದಂಪತಿಯ ಅಭಿಮಾನಿಗಳು ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದರು.

ಸಂಪೂರ್ಣ ಬೆತ್ತಲಾದ ರಣಬೀರ್​ ರಾಮನಾದ ಬಳಿಕ ಈಗ ಅರೆಬೆತ್ತಲ ರಾಣಿ ಅಂಜಲಿ ಸೀತಾಮಾತೆ! ಭಾರಿ ಆಕ್ರೋಶ

ಇದೀಗ ಖುದ್ದು ರಣವೀರ್​ ಈ ಸುದ್ದಿಯನ್ನು ಮತ್ತಷ್ಟು ಸ್ಪಷ್ಟಪಡಿಸಿದ್ದಾರೆ.  ಆಭರಣ ಮಳಿಗೆಯೊಂದರ ಉದ್ಘಾಟನೆಯಲ್ಲಿ ಭಾಗಿಯಾಗಿದ್ದ ಅವರು, ತಮಗೆ ಇಷ್ಟವಾದ ಆಭರಣಗಳ ಬಗ್ಗೆಯೂ ಮಾತನಾಡಿದರು. ಈ ವೇಳೆ ಪತ್ನಿ ದೀಪಿಕಾ ಪಡುಕೋಣೆ ಬಗ್ಗೆಯೂ ಹೇಳುತ್ತಾ,  ‘ದೀಪಿಕಾ ನನಗೆ ಮದುವೆ ಹಾಗೂ ನಿಶ್ಚಿತಾರ್ಥದಲ್ಲಿ ಕೊಟ್ಟ ಉಂಗುರ ನನ್ನ ಪಾಲಿನ ಅತ್ಯಂತ ಅಮೂಲ್ಯವಾದ ಆಭರಣ’ ಎಂದರು. ಮಾತ್ರವಲ್ಲದೆ ತಾವು ಮದುವೆಯ ಉಂಗುರವನ್ನು ಸದಾ ಧರಿಸುವುದಾಗಿ ಹೇಳಿ ಉಂಗುರವನ್ನು ತೋರಿಸಿದರು.  ತಮ್ಮ ತಾಯಿಯ ವಜ್ರದ ಕಿವಿಯೋಲೆ ಹಾಗೂ ನನ್ನ ಅಜ್ಜಿಯ ಮುತ್ತಿನ ಹಾರದೊಂದಿಗೆ ಸಹ ನನಗೆ ವಿಶೇಷ ಪ್ರೀತಿಯಿದೆ ಎಂದೂ ಹೇಳಿದರು. ಪತ್ನಿ ಕೊಟ್ಟಿರುವ ಉಂಗುರ ಸೇರಿದಂತೆ ವಿವಿಧ ಆಭರಣದ ಜೊತೆ  ಭಾವನಾತ್ಮಕ ಬಂಧವನ್ನು ಹೊಂದಿರುವುದಾಗಿಯೂ ಹೇಳುವ ಮೂಲಕ ಗಾಳಿಸುದ್ದಿಗೆ ತೆರೆ ಎಳೆದರು.
 
ಸದ್ಯ ರಣವೀರ್​ ಅವರು  47 ಮಿಲಿಯನ್ ಫಾಲೋವರ್ಸ್ ಹೊಂದಿರುವ ರಣವೀರ್ 133 ಪೋಸ್ಟ್‌ಗಳನ್ನು ಹೊಂದಿದ್ದಾರೆ.  ಅವರ ಖಾತೆಯಲ್ಲಿ ಕಾಣಿಸಿಕೊಂಡ ಕೊನೆಯ ಪೋಸ್ಟ್ ಏಪ್ರಿಲ್ 26 ರಂದು ಪೋಸ್ಟ್ ಮಾಡಲಾದ ನಟಿ ಆಲಿಯಾ ಭಟ್ ಅವರ ಜಾಹೀರಾತು. ಆದಾಗ್ಯೂ, ಅವರ ಖಾತೆಯು ಇನ್ನೂ ದಂಪತಿಗಳ ಕೆಲವು ಫೋಟೋಗಳನ್ನು ಒಳಗೊಂಡಿದೆ. ಇದೀಗ ಎಲ್ಲವೂ ಡಿಲೀಟ್​ ಆಗಿದ್ದರಿಂದ ವಿವಿಧ ರೀತಿಯಲ್ಲಿ ಸುದ್ದಿ ಹರಡಿದ್ದವು. 

ಕಮಲ ಹಾಸನ್​ ವಿರುದ್ಧ ವಂಚನೆ ಆರೋಪ: ನಿರ್ಮಾಪಕರಿಂದ ದೂರು ದಾಖಲು: ಆಗಿದ್ದೇನು?
 

Latest Videos
Follow Us:
Download App:
  • android
  • ios