ಫ್ರೆಂಡ್ಷಿಪ್ ಡೇಗೆ ಸೀತಾರಾಮ್ ಟೀಮ್ ಫನ್ನಿ ರೀಲ್ಸ್: ಇರೋರನ್ನು ಬಿಟ್ಟು ಅಶೋಕ್ದೇ ಚಿಂತೆ ಅಭಿಮಾನಿಗಳಿಗೆ!
ಫ್ರೆಂಡ್ಷಿಪ್ ಡೇಗೆ ಸೀತಾರಾಮ್ ಟೀಮ್ ಫನ್ನಿ ರೀಲ್ಸ್ ಮಾಡಿದ್ದು, ವೈಷ್ಣವಿ ಗೌಡ ಅದನ್ನು ಶೇರ್ ಮಾಡಿದ್ದಾರೆ. ಆದರೆ ಇಲ್ಲಿ ಅಶೋಕ್ ಕಾಣಿಸ್ತಿಲ್ಲ ಎನ್ನೋ ಚಿಂತೆ ಅಭಿಮಾನಿಗಳಿಗೆ!
ಸೀತಾ ರಾಮ ಕಲ್ಯಾಣ ನಿರ್ವಿಘ್ನವಾಗಿ ನೆರವೇರಿದ್ದು, ಸೀತಾ ಮತ್ತು ರಾಮ ಇಬ್ಬರೂ ಮದುವೆಯನ್ನು ಎಂಜಾಯ್ ಮಾಡುತ್ತಿದ್ದಾರೆ. ಇದೇ ಸಮಯದಲ್ಲಿ ಸೀತಾ ಪಾತ್ರಧಾರಿ ವೈಷ್ಣವಿ ಗೌಡ ಅವರು ತಮ್ಮ ಸೋಷಿಯಲ್ ಮೀಡಿಯಾದಲ್ಲಿಯೂ ಸಕತ್ ಆ್ಯಕ್ಟೀವ್ ಆಗಿದ್ದಾರೆ. ಸೋಷಿಯಲ್ ಮೀಡಿಯಾಗಳಲ್ಲಿ ಹಲವಾರು ವಿಡಿಯೋ ಶೇರ್ ಮಾಡುತ್ತಾರೆ. ಟೈಂ ಸಿಕ್ಕಾಗಲೆಲ್ಲಾ ಸೀತಾರಾಮ ಟೀಂನ ಪಾತ್ರಧಾರಿಗಳ ಜೊತೆ ಎಂಜಾಯ್ ಮಾಡುತ್ತಾರೆ. ಬಿಜಿ ಷೆಡ್ಯೂಲ್ ನಡುವೆ ಒಂದಿಷ್ಟು ರಿಲ್ಯಾಕ್ಸ್ ಮೂಡಿಗೆ ಬರುತ್ತದೆ ಟೀಮ್. ಅದರಲ್ಲಿಯೂ ವೈಷ್ಣವಿ ಗೌಡ ಅವರು ಸೋಷಿಯಲ್ ಮೀಡಿಯಾದಲ್ಲಿ ದಿನಕ್ಕೊಂದರಂತೆ ರೀಲ್ಸ್ ಮಾಡುತ್ತಾ, ಕೆಲವೊಂದು ಟಿಪ್ಸ್ ಹೇಳುತ್ತಾ ಆ್ಯಕ್ಟೀವ್ ಆಗಿರುತ್ತಾರೆ. ಈಗ ಅವರೇ ಫ್ರೆಂಡ್ಷಿಪ್ ಡೇ ನೆಪದಲ್ಲಿ ಒಂದು ರೀಲ್ಸ್ ಮಾಡಿದ್ದು, ಅಭಿಮಾನಿಗಳು ಅದನ್ನು ಸಕತ್ ಇಷ್ಟಪಟ್ಟಿದ್ದಾರೆ.
ತಮಿಳಿನ ಥಿಂಕ್ ಇಂಡೆ ಚಿತ್ರದ ಕಾಠು ಮೇಲಾ ಹಾಡಿಗೆ ಸೀತಾ-ರಾಮ, ಪ್ರಿಯಾ ಹಾಗೂ ಅಶೋಕನ ತಂಗಿ ಅಂಜಲಿ ಅವರು ರೀಲ್ಸ್ ಮಾಡಿದ್ದಾರೆ. ನಿನ್ನೆ ಅಂದರೆ ಭಾನುವಾರ ಆಗಸ್ಟ್ 4ರಂದು ಸ್ನೇಹಿತರ ದಿನದ ಅಂಗವಾಗಿ ಈ ರೀಲ್ಸ್ ಮಾಡಲಾಗಿದ್ದು, ಇದಕ್ಕೆ ಥಹರೇವಾರಿ ಕಮೆಂಟ್ಸ್ ಸುರಿಮಳೆಯಾಗುತ್ತಿದೆ. ಆದರೆ ಇಲ್ಲಿ ಪ್ರಿಯಾ ಇದ್ದರೂ ಪ್ರಿಯಾಳ ಗಂಡ ಅಶೋಕ್ ಇಲ್ಲದೇ ಇರುವುದಕ್ಕೆ ಅಭಿಮಾನಿಗಳು ಬೇಸರ ವ್ಯಕ್ತಪಡಿಸುತ್ತಿದ್ದಾರೆ. ಅಶೋಕ್ ಪಾತ್ರವನ್ನು ಸೀತಾರಾಮ ಸೀರಿಯಲ್ ಪ್ರೇಮಿಗಳು ಬಹಳ ಇಷ್ಟಪಟ್ಟಿದ್ದು, ಅವರೆಲ್ಲಿ ಎಂದು ಕೇಳುತ್ತಿದ್ದಾರೆ. ಏಕೆಂದರೆ ಸೀತಾ-ರಾಮ ಜೋಡಿಯಂತೆಯೇ ಈ ಸೀರಿಯಲ್‌ನಲ್ಲಿ ಫೇಮಸ್ ಆಗಿರುವುದು ಅಶೋಕ್-ಪ್ರಿಯಾ ಜೋಡಿ. ಅಶೋಕ್ ಬದಲು ಅಶೋಕ್ ತಂಗಿ ಅಂಜಲಿ ಕಾಣಿಸಿಕೊಂಡಿರುವುದಕ್ಕೆ ನೆಟ್ಟಿಗರು ಪ್ರಶ್ನೆ ಮಾಡುತ್ತಿದ್ದಾರೆ.
ಒಳಗಡೆ ಷರ್ಟ್ ಇದ್ಯಾ ನಮ್ಗೆ ಕಾಣಿಸ್ಲೇ ಇಲ್ಲ! ಸೀತಾರಾಮ ಸೀತಾಳ ಹೀಗೆ ಕಾಲೆಳೆಯೋದಾ ಟ್ರೋಲಿಗರು?
ಇನ್ನು ಸೀತಾ ಪಾತ್ರಧಾರಿ ಹೆಸರು ವೈಷ್ಣವಿ ಗೌಡ ಆದರೆ, ರಾಮ್ ಪಾತ್ರಧಾರಿ ಗಗನ್ ಚಿನ್ನಪ್ಪ. ಪ್ರಿಯಾ ಪಾತ್ರಧಾರಿಯ ಹೆಸರು ಮೇಘನಾ ಶಂಕರಪ್ಪ ಆದ್ರೆ, ಅಂಜಲಿ ಪಾತ್ರಧಾರಿಯಾದವರು ಅನುಷಾ ಪರಮೇಶ್ವರಪ್ಪ. ವೈಷ್ಣವಿ ಅವರ ಕುರಿತು ಹೇಳುವುದಾದರೆ, ಕನ್ನಡದ ಪ್ರೇಕ್ಷಕರಿಗೆ ಸನ್ನಿಧಿಯಂತಲೇ ಇವರು ಪರಿಚಯವಿದ್ದರು. ಅಗ್ನಿಸಾಕ್ಷಿ ಸೀರಿಯಲ್‌ನ ಸನ್ನಿಧಿ ಮೂಲಕ ಸಕತ್ ಫೇಮಸ್ ಆಗಿದ್ದ ನಟಿ ಈಗ ಸೀತಾರಾಮದ ಸೀತೆಯಾಗಿ ಮನೆ ಮಾತಾಗಿದ್ದಾರೆ. ವೈಷ್ಣವಿ ಕನ್ನಡ ಕಿರುತೆರೆಲೋಕದ ಜನಪ್ರಿಯ ನಟಿ. ಅಷ್ಟೇ ಅಲ್ಲದೇ, ಹಲವು ಉತ್ಪನ್ನಗಳ ರಾಯಭಾರಿಯೂ ಹೌದು. ಜೀ ಕನ್ನಡದ `ದೇವಿ' ಸೀರಿಯಲ್‌ನಿಂದ ಇವರ ಕಿರುತೆರೆ ಪಯಣ ಆರಂಭವಾಯಿತು.ನಂತರ `ಪುನರ್‌ವಿವಾಹ'ದಲ್ಲಿ ನಟಿಸಿ `ಅಗ್ನಸಾಕ್ಷಿ' ಸೀರಿಯಲ್‌ನ ಸನ್ನಿಧಿಯಾಗಿ ಆಯ್ಕೆಗೊಂಡರು. ಈ ಪಾತ್ರದ ಮೂಲಕ ಅಪಾರ ಜನಮನ್ನಣೆ ಪಡೆದಿದ್ದಾರೆ. `ಗಿರಿಗಿಟ್ಲೆ' ಚಿತ್ರದ ಮೂಲಕ ನಾಯಕಿಯಾಗಿದ್ದಾರೆ. `ಭರ್ಜರಿ ಕಾಮಿಡಿ' ಎಂಬ ರಿಯಾಲಿಟಿ ಷೋ ನಿರೂಪಣೆ ಕೂಡ ಮಾಡಿದ್ದಾರೆ. `ಕುಣಿಯೋಣ ಬಾರ' ಡ್ಯಾನ್ಸ್ ರಿಯಾಲಿಟಿ ಷೋ ಆಗೂ ಬಿಗ್ಬಾಸ್ ಸೀಸನ್ 8ನಲ್ಲಿ ಭಾಗವಹಿಸಿದ್ದಾರೆ.
ಇನ್ನು ರಾಮ್ ಪಾತ್ರಧಾರಿ ಗಗನ್ ಚಿನ್ನಪ್ಪ ಕುರಿತು ಹೇಳುವುದಾದರೆ, ಕೊಡಗು ಮೂಲದ ಗಗನ್, ಬಣ್ಣ ಲೋಕಕ್ಕೆ ಎಂಟ್ರಿ ಕೊಡುವ ಮೊದಲದು ಎರಡು ವರ್ಷ ಓಮನ್ ದೇಶದಲ್ಲಿ ಅದಾದ ಬಳಿಕ ಒಂದು ವರ್ಷ ಅಬುದಾಬಿಯಲ್ಲಿ ಕೆಲಸ ಮಾಡಿದ್ದರು. ಶಿಕ್ಷಣ ಮುಗಿಸಿದ ಬಳಿಕ ಕೆಲಸಕ್ಕೆ ಸೇರಿದ್ದವರು. ವಿದೇಶಗಳಲ್ಲಿ ಕೆಲಸ ಮಾಡಿದ ಸಂದರ್ಭದಲ್ಲಿ ಅವರ ಒಂದು ಫೋಟೋಶೂಟ್ ಅವರನ್ನು ಬಣ್ಣದ ಲೋಕಕ್ಕೆ ಬರುವಂತೆ ಮಾಡಿತು. 2014 ರಲ್ಲಿ ಫೋಟೋಶೂಟ್ ಮಾಡಿಸಿ ಸೋಷಿಯಲ್ ಮೀಡಿಯಾದಲ್ಲಿ ಹಾಕಿದ್ದರು. ಆಗ ಅವರಿಗೆ ಚಿತ್ರವೊಂದಕ್ಕೆ ಆಫರ್ ಬಂದಿತ್ತು. ಮಂಗಳಗೌರಿ ಮದುವೆ ಸೀರಿಯಲ್‌ನಲ್ಲಿ ಅವಕಾಶ ಸಿಕ್ಕಿತು. ಈ ಧಾರಾವಾಹಿಯಲ್ಲಿ ಅವರು ಪೊಲೀಸ್ ಅಧಿಕಾರಿಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ಮಿನಿ ಬಿಗ್ ಬಾಸ್ಗೂ ಎಂಟ್ರಿ ಕೊಟ್ಟು ಈಗ ಸೀತಾರಾಮ ಸೀರಿಯಲ್ ಮೂಲಕ ಕನ್ನಡ ಧಾರಾವಾಹಿ ಲೋಕದಲ್ಲಿ ಪೂರ್ಣಪ್ರಮಾಣದ ನಾಯಕರಾಗಿ ಮಿಂಚುತ್ತಿದ್ದಾರೆ. ತೆಲುಗು ಕಿರುತೆರೆಗೂ ಕಾಲಿಟ್ಟಿರೋ ಗಗನ್ ಅವರು, ‘ಕೃಷ್ಣ ಮುಕುಂದ ಮುರಾರಿ’ ಸೀರಿಯಲ್‌ನಲ್ಲಿ ನಟಿಸುತ್ತಿದ್ದಾರೆ. ಇದರಲ್ಲಿ ಅವವರು ಮುರಾರಿ ಹೆಸರಿನ ಪಾತ್ರ ಮಾಡುತ್ತಿದ್ದಾರೆ. ಪ್ರೇರಣಾ ಕಂಬಮ್, ಯಶ್ಮಿ ಗೌಡ ಮೊದಲಾದವರು ಈ ಧಾರಾವಾಹಿಯಲ್ಲಿ ನಟಿಸುತ್ತಿದ್ದಾರೆ.
ಹಿಟ್ಲರ್ ಕಲ್ಯಾಣದ ಅಂತರಾ ಪಾತ್ರಧಾರಿ ರಜನಿ WANTED! ಅಭಿಮಾನಿಗಳಿಗೆ ಶಾಕ್ ಕೊಟ್ಟ ನಟಿ