ನಿಮ್ಗೆ ಖುಷಿಯಾಗೋದಾದ್ರೆ ಸಾಯಿಸಿಬಿಡಿ... ಇಷ್ಟು ಹಿಂಸೆ ಕೊಡ್ಬೇಡಿ... ನಿರ್ದೇಶಕರ ವಿರುದ್ಧ ನೆಟ್ಟಿಗರು ಗರಂ
ಸೀತಾರಾಮ ಸೀರಿಯಲ್ನಲ್ಲಿ ಸಿಹಿಯನ್ನು ಬಲವಂತದಿಂದ ಮೇಘಶ್ಯಾಮ್ ಮತ್ತು ಶಾಲಿನಿಂದ ಕರೆದುಕೊಂಡು ಹೋಗುವ ಪ್ರೊಮೋ ನೆಟ್ಟಿಗರನ್ನು ಕೆರಳಿಸಿದೆ. ಏನಂತಿದ್ದಾರೆ ನೋಡಿ...
ಸೀತಾ ಸಿಹಿಯನ್ನು ಕರೆದುಕೊಂಡು ಹೋಗುವ ಸಮಯದಲ್ಲಿ ಕಿಡ್ನ್ಯಾಪ್ ಆಗಿದ್ದಾಕೆ ಮನೆಗೆ ಸೇರಿದ್ದಾಳೆ. ಅಪಹರಣ ಮಾಡಿರುವುದು ಚಾಂದನಿ ಎನ್ನುವುದು ತಿಳಿದಿದೆ. ಇತ್ತ ಸಿಹಿಗಾಗಿ ಸೀತಾ ಮತ್ತು ರಾಮ್ ಹುಡುಕಾಟ ನಡೆಸಿದ್ದರೆ, ಅತ್ತ ಶಾಲಿನಿ ಮತ್ತು ಮೇಘಶ್ಯಾಮ್ ಸಿಹಿಯನ್ನು ಕರೆದುಕೊಂಡು ಹೋಗಲು ಬಂದಿದ್ದಾರೆ. ಸಿಹಿ ಜಪ್ಪಯ್ಯ ಎಂದರೂ ಹೋಗಲು ಒಪ್ಪುತ್ತಿಲ್ಲ. ಸಿಹಿ ತಾತನನ್ನು ತಬ್ಬಿಕೊಂಡಿದ್ದಾಳೆ. ಅತ್ತ ಅತ್ತಿಗೆ ಸೀತಾಳಿಗೆ ಕಾಲ್ ಮಾಡಿ ಸಿಹಿಗೆ ಹೀಗೆ ಆಗ್ತಿರೋದನ್ನು ಹೇಳಿದ್ದಾರೆ. ಅವರಿಬ್ಬರೂ ಮನೆಗೆ ಬಂದಿದ್ದಾರೆ. ಅಷ್ಟರಲ್ಲಿಯೂ ಮೇಘಶ್ಯಾಮ್ ಸಿಹಿಯನ್ನು ಬಲವಂತದಿಂದ ಎತ್ತಿಕೊಂಡು ಹೋಗಲು ನೋಡುತ್ತಿದ್ದಾನೆ. ಸಿಹಿ ಗೋಳಾಡುತ್ತಿದ್ದಾಳೆ.
ಇದರ ಪ್ರೊಮೋ ಬಿಡುಗಡೆಯಾಗುತ್ತಲೇ ನೆಟ್ಟಿಗರಿಂದ ಇನ್ನಿಲ್ಲದ ಆಕ್ರೋಶ ವ್ಯಕ್ತವಾಗಿದೆ. ಮಗು ಸತ್ತಳೆಂದು ಸುಳ್ಳು ಹೇಳಿದ್ದ ಶಾಲಿನಿ ಒಂದೆಡೆಯಾದರೆ, ಸೀತಾ ಮತ್ತು ರಾಮ್ ಸಿಹಿಯನ್ನು ಎಷ್ಟು ಪ್ರೀತಿ ಮಾಡುತ್ತಾರೆ ಎಂದು ಗೊತ್ತಿದ್ದರೂ, ತನ್ನ ಪತ್ನಿ ಮಾಡಿದ ತಪ್ಪಿನಿಂದ ಮಗಳು ಕೈತಪ್ಪಿ ಹೋಗಿದ್ದಾಳೆ ಎನ್ನುವ ಸತ್ಯ ತಿಳಿದಿದ್ದರೂ, ಸಿಹಿ ಸೀತಾ ಮತ್ತು ರಾಮ್ನನ್ನು ಬಿಟ್ಟು ಬರಲು ಒಲ್ಲಳು ಎನ್ನುವ ಅರಿವಿದ್ದರೂ ಮೇಘಶ್ಯಾಮ್ ಈ ರೀತಿ ಬಲವಂತ ಮಾಡಿ ಆಕೆಯನ್ನು ಕರೆದುಕೊಂಡು ಹೋಗುವುದು ಯಾಕೋ ವೀಕ್ಷಕರಿಗೆ ಸರಿ ಕಾಣುತ್ತಿಲ್ಲ. ಇದೊಂದು ಅಸಹ್ಯ, ಅಸಭ್ಯದ ಪರಮಾವಧಿ ಎನ್ನುತ್ತಿದ್ದಾರೆ. ನೀವು ಏನು ತೋರಿಸಿದರೂ ನಾವು ನೋಡುತ್ತೇವೆ ಎಂದುಕೊಂಡು ಹೀಗೆಲ್ಲಾ ಮಾಡಬೇಡಿ ಎಂದು ಒಂದೇ ಸಮನೆ ಕಮೆಂಟ್ಗಳ ಸುರಿಮಳೆಗೈಯುತ್ತಿದ್ದಾರೆ.
ಅಮೃತಧಾರೆ ಗೌತಮ್ ದಿವಾನ್ ರಿಯಲ್ ಮನೆ 'ಮ Na' ಹೇಗಿದೆ ಗೊತ್ತಾ? ಇಲ್ಲಿದೆ ನೋಡಿ ವಿಡಿಯೋ...
ಅಷ್ಟಕ್ಕೂ ಹಿಂದಿನ ಪ್ರೊಮೋದಲ್ಲಿ ಸಿಹಿ ಅಪಘಾತದಲ್ಲಿ ಸತ್ತಳು ಎನ್ನುವಂತೆ ತೋರಿಸಲಾಗಿತ್ತು. ಅದರ ಕುರಿತು ಈಗ ಮಾತನಾಡುತ್ತಿರುವ ನೆಟ್ಟಿಗರು, ನಿಮಗೆ ಸಿಹಿ ಮೇಲೆ ಸಿಟ್ಟಿದ್ದರೆ ಆಕೆಯನ್ನು ಸೀರಿಯಲ್ನಲ್ಲಿ ಸಾಯಿಸಿಬಿಡಿ, ಆದರೆ ಆ ಮಗುವಿನ ನೋವು ನೋಡಲು ಆಗುತ್ತಿಲ್ಲ. ಇದು ಸೀರಿಯಲ್ ಆಗಿದ್ದರೂ ಇಂಥ ದೃಶ್ಯವನ್ನು ನೋಡುವುದು ತುಂಬಾ ಹಿಂಸೆ ಅನ್ನಿಸುತ್ತದೆ ಎಂದೆಲ್ಲಾ ಹೇಳುತ್ತಿದ್ದಾರೆ. ಇದಾಗಲೇ ಪುಟ್ಟಕ್ಕನ ಮಕ್ಕಳು ಸೀರಿಯಲ್ನಲ್ಲಿ ಸ್ನೇಹಾ ಪಾತ್ರವನ್ನು ಸಾಯಿಸಿರುವುದಕ್ಕೆ ಒಂದೆಡೆ ಭಾರಿ ಟೀಕೆ ವ್ಯಕ್ತವಾಗುತ್ತಿರುವ ಬೆನ್ನಲ್ಲೇ ಈಗ ಸಿಹಿ ಬದುಕಿದ್ದಾಳೆ ಎನ್ನುವ ಖುಷಿಯಲ್ಲಿ ಇರುವ ಪ್ರೇಕ್ಷಕರಿಗೆ ಈ ದೃಶ್ಯ ಯಾಕೋ ನೋಡಲು ಅಸಹನೀಯ ಆಗುತ್ತಿದೆ.
ಅದೇ ಇನ್ನೊಂದೆಡೆ, ಸಿಹಿ ಪಾತ್ರಧಾರಿ ರಿತು ಸಿಂಗ್ ಮಾತ್ರ ಎಂದಿನಂತೆ ತನ್ನ ಪಾತ್ರಕ್ಕೆ ನ್ಯಾಯ ಒದಗಿಸಿದ್ದಾಳೆ. ಈಕೆ ಮಾಡುವ ಪ್ರತಿ ದೃಶ್ಯಕ್ಕೂ ನ್ಯಾಯ ಒದಗಿಸುತ್ತಲೇ ಬಂದಿದ್ದಾಳೆ. ಇದೀಗ ಅಪ್ಪ- ಅಮ್ಮನಿಂದ ದೂರವಾಗ್ತಿರೋ ಕಂದನ ಪಾತ್ರವನ್ನು ಅದ್ಭುತವಾಗಿ ಮಾಡಿದ್ದಾಳೆ. ಇದು ನಿಜ ಜೀವನದಲ್ಲಿ ನಡೆಯುತ್ತಿರುವ ಕಥೆಯೋ ಎನ್ನಿಸುವಷ್ಟರ ಮಟ್ಟಿಗೆ ಅವಳ ಅಭಿನಯವಿದ್ದು, ಈ ಅಭಿನಯ ಕೂಡ ವೀಕ್ಷಕರನ್ನು ಇಷ್ಟೆಲ್ಲಾ ನೋವಿನಲ್ಲಿ ದೂಡುತ್ತಿದೆ. ಮತ್ತೊಂದೆಡೆ, ಕಾನೂನು ಸಮರಕ್ಕೆ ಮೇಘಶ್ಯಾಮ್ ಮುಂದಾಗಿದ್ದಾನೆ. ಮಗುವಿನ ಭವಿಷ್ಯ ಯಾವ ರೀತಿ ಟರ್ನ್ ತೆಗೆದುಕೊಳ್ಳುತ್ತದೋ ಕಾದು ನೋಡಬೇಕಿದೆ.
ಒಂದು ವರ್ಷ ಬೇರೆಯವರ ಮನೆಯಲ್ಲಿ ಮುಸುರೆ ತಿಕ್ಕುತ್ತಿದ್ದೆ: ಬಿಗ್ಬಾಸ್ನಲ್ಲಿ ಚೈತ್ರಾ ಕುಂದಾಪುರ ಕಣ್ಣೀರು