ಅಮೃತಧಾರೆ ಗೌತಮ್​ ದಿವಾನ್​ ರಿಯಲ್​ ಮನೆ 'ಮ Na' ಹೇಗಿದೆ ಗೊತ್ತಾ? ಇಲ್ಲಿದೆ ನೋಡಿ ವಿಡಿಯೋ...

ಅಮೃತಧಾರೆ ಗೌತಮ್​ ದಿವಾನ್​  ಅಂದ್ರೆ  ರಾಜೇಶ್​ ನಟರಂಗ ಅವರ ರಿಯಲ್​ ಮನೆ 'ಮ Na' ಹೇಗಿದೆ ಗೊತ್ತಾ? ಇಲ್ಲಿದೆ ನೋಡಿ ವಿಡಿಯೋ...
 

Amrutadhare Gautam Dewan urf Rajesh Nataranga's Real House Ma Na home tour here suc

ರಾಜೇಶ್ ನಟರಂಗ ಎನ್ನುವುದಕ್ಕಿಂತಲೂ ಸದ್ಯ ಸಾಕಷ್ಟು ಫೇಮಸ್​ ಆಗಿರೋರುವವರು ಅಮೃತಧಾರೆ ಡುಮ್ಮಾ ಸರ್​ ಉರ್ಫ್​ ಗೌತಮ್​. ಮಿಲೇನಿಯರ್‌ ಬಿಜಿನೆಸ್‌ಮೆನ್‌. ಯಾವುದೇ ವ್ಯವಹಾರವನ್ನು ಫಟಾಫಟ್‌ ಮಾಡಬಲ್ಲ. ಆದರೆ ಪ್ರೀತಿಯ ವಿಷಯ ಬಂದಾಗ ಮಾತ್ರ ಜೀರೋ ಇದ್ದ ಗೌತಮ್​ ಈಗ ಪ್ರೀತಿಯಲ್ಲಿಯೂ ಹೀರೋ ಆಗಿದ್ದಾನೆ. ಗೌತಮ್​ ಮತ್ತು ಭೂಮಿಕಾ ಪ್ರೀತಿಗೆ ಮನಸೋಲದವರೇ ಇಲ್ಲ ಎನ್ನಬಹುದೇನೋ. ಇದ್ದರೆ ಇಂಥ ಕಪಲ್​ ಇರಬೇಕು ಎನ್ನುವವರೇ ಹೆಚ್ಚು. ಅದರಲ್ಲಿಯೂ ಇದ್ದರೆ ಗೌತಮ್​ನಂಥ ಪತಿ ಇರಬೇಕು, ಎಲ್ಲರಿಗೂ ಇಂಥ ಪತಿ ಸಿಗಲಿ ಎಂದೇ ಹಲವು ಹೆಣ್ಣುಮಕ್ಕಳು ಅಂದುಕೊಳ್ಳುವುದು ಉಂಟು. ರಿಯಲ್​ ಲೈಫ್​ನಲ್ಲಿಯೂ ಇಷ್ಟೇ ಬೆಸ್ಟ್​ ದಾಂಪತ್ಯ ನಡೆಸುತ್ತಿದ್ದಾರೆ ಡುಮ್ಮ ಸರ್​ ಅಂದ್ರೆ ರಾಜೇಶ್​ ನಟರಂಗ ಅವರು. ರಿಯಲ್​ ಲೈಫ್​ನಲ್ಲಿ ಚೈತ್ರಾ ಮಡಿಯಾಗಿದ್ದು, ಮಗಳೂ ಇದ್ದಾಳೆ.

ಕೀರ್ತಿ ಎಂಟರ್​ಟೇನ್​ಮೆಂಟ್​ ಕ್ಲಿನಿಕ್​ (keerthientclinic)ಗೆ ನೀಡಿರುವ ಸಂದರ್ಶನದಲ್ಲಿ ರಾಜೇಶ್​ ಅವರು ಇದಾಗಲೇ ಹಲವಾರು ವಿಷಯಗಳನ್ನು ಶೇರ್​ ಮಾಡಿಕೊಂಡಿದ್ದಾರೆ. ಇದೇ ವಿಡಿಯೋದಲ್ಲಿ ಕೀರ್ತಿ ಅವರು ರಾಜೇಶ್​ ನಟರಂಗ ಅವರ ರಿಯಲ್​ ಮನೆಯ ಪರಿಚಯ ಮಾಡಿಸಿದ್ದಾರೆ. ಬೃಹತ್​ ಬಂಗಲೆಯಂತಿರೋ ರಾಜೇಶ್​ ಅವರ ಮನೆಯ ಹೋಮ್​ ಟೂರ್​ ಮಾಡಿಸಿದ್ದಾರೆ ಕೀರ್ತಿ. ಅಲ್ಲಿರುವ ಅಪರೂಪದ, ಅಪೂರ್ವ ವಸ್ತುಗಳ ಪರಿಚಯ ಮಾಡಿಸಿದ್ದಾರೆ. ಜೊತೆಗೆ 80-90ರ ದಶಕದಲ್ಲಿ ಬಳಸುತ್ತಿದ್ದ ರೆಡಿಯೋ, ಸಿಡಿ ಪ್ಲೇಯರ್​ ಸೇರಿದಂತೆ ಹಳೆಯ ಕಾಲವನ್ನು ನೆನಪಿಸುವ ಸಲಕರಣೆಗಳು ಕೂಡ ಇವರ ಮನೆಯಲ್ಲಿ ಇರುವುದು ಕುತೂಹಲದ ವಿಷಯವಾಗಿದೆ. ಇವೆಲ್ಲವನ್ನೂ ಜತನದಿಂದ ಕಾಪಾಡಿದೆ ಈ ಫ್ಯಾಮಿಲಿ.

ನನ್ನ ಮದ್ವೆಯಾಗೋಕೆ ಯಾರೂ ಸಿದ್ಧನೇ ಇರ್ಲಿಲ್ಲ, ಜಿಗುಪ್ಸೆ ಹುಟ್ಟೋಗಿತ್ತು... ನಟ ರಾಜೇಶ್​ ರಿಯಲ್​ ಲೈಫ್​ ಸ್ಟೋರಿ ಕೇಳಿ...

ಅಂದಹಾಗೆ, ರಾಜೇಶ್​ ನಟರಂಗ ಅವರ ಮನೆಯ ಹೆಸರು ಮ Na. ಇದರ ಬಗ್ಗೆ ಮಾಹಿತಿ ನೀಡಿರುವ ರಾಜೇಶ್​ ಅವರು ಇದು ನನ್ನ ಅಪ್ಪನವರ ಜಾಗ. ಅದೇ ಕಾರಣಕ್ಕೆ ಅಪ್ಪ-ಅಮ್ಮನ ಹೆಸರು ಇಟ್ಟಿದ್ದೇವೆ. ಮಂಜುಳಾ ಮತ್ತು ನಾಗರಾಜ್​ ಎನ್ನುವುದು ಇದರ ಅರ್ಥ ಎಂದು ತಿಳಿಸಿದ್ದಾರೆ. ಬೆಂಗಳೂರಿನ ಸೀತಾ ಸರ್ಕಲ್​ ಬಳಿ ತಮ್ಮ ಮನೆ ಇದೆ ಎಂಬ ಗುಟ್ಟನ್ನೂ ಬಿಚ್ಚಿಟ್ಟಿದ್ದಾರೆ ನಟ. ಈ ಮೊದಲು ರಾಜೇಶ್​ ಅವರು ತಮಗೆ ಯಾರೂ ಹೆಣ್ಣು ಕೊಡಲು ಮುಂದೆ ಬರಲಿಲ್ಲ ಎನ್ನುವ ಸ್ಟೋರಿ ಹೇಳಿದ್ದರು.  2005 ಮನೆಯವರಿಂದ, ಗೆಳೆಯರಿಂದ ನನ್ನ ಮದ್ವೆಗೆ ಧರಣಿ ನಡೀತಿದ್ದು.  ಆದ್ರೆ ಊರಿನಲ್ಲಿ ಇರೋ ಯಾವ ಹೆಣ್ಣುಮಕ್ಕಳೂ ನನ್ನನ್ನು ಮದ್ವೆಯಾಗೋಕೆ ರೆಡಿನೇ ಇರಲಿಲ್ಲ. ಜೀವನದಲ್ಲಿ ಜಿಗುಪ್ಸೆ ಹುಟ್ಟಿತ್ತು. ಆಗ ನನ್ನ ಬ್ಯಾಚುಲರ್ಸ್​ ಫ್ರೆಂಡ್ಸ್​ ನನಗೆ ಜತೆಯಾದ್ರು. ಬೇಜಾರು ಮಾಡ್ಕೋಬೇಡ ಕಣೋ. ಯಾಕೆ ಮದುವೆಯಾಗಬೇಕು, ಮದ್ವೆಯಾಗದೇ ಆರಾಮಾಗಿ ಇರಬಹುದು ಎಂದ್ರು. ಆ ಟೈಮ್​ನಲ್ಲಿ ಕರ್ನಾಟಕದ ದಕ್ಷಿಣ ಭಾಗದಿಂದ ಒಂದು ಫೋಟೋ ಬಂತು. ಈ ಹುಡುಗಿಯನ್ನು ಒಮ್ಮೆ ನೋಡಿ ಅಂತ. ಇದೇ ಕೊನೆ ಫೋಟೋ, ಮತ್ತೆ ಮದ್ವೆನೇ ಬೇಡ ಅಂದ್ಕೊಂಡು ಆ ಫೋಟೋ ನೋಡಿದೆ ಎಂದು ಆ ದಿನಗಳನ್ನುನೆನಪಿಸಿಕೊಂಡಿದ್ದರು ರಾಜೇಶ್​ ನಟರಂಗ. ಈಗ ಅದೇ ಹುಡುಗಿಯ ಜೊತೆ ಮದ್ವೆಯಾಗಿ ಸುಖ ಸಂಸಾರ ನಡೆಸುತ್ತಿದ್ದಾರೆ. 

 ಇನ್ನು  ರಾಜೇಶ್ ನಟರಂಗ ಕುರಿತು ಹೇಳುವುದಾದರೆ, ಅವರು 'ಸ್ಮಶಾನ' ಮತ್ತು 'ಕುರುಕ್ಷೇತ್ರ' ಧಾರಾವಾಹಿಯ ಪ್ರೊಡಕ್ಷನ್ ಮ್ಯಾನೇಜರ್ ಆಗಿ ಗುರುತಿಸಿಕೊಳ್ಳುವ ಮೂಲಕ ಕಿರುತೆರೆಗೆ ಕಾಲಿಟ್ಟವರು. 'ಮಾಯಾಮೃಗ' ಧಾರಾವಾಹಿಯಲ್ಲಿ ಮೊದಲ ಬಾರಿ ಬಣ್ಣ ಹಚ್ಚಿದ ರಾಜೇಶ್ ನಟರಂಗ ಮುಂದೆ 'ಮುಕ್ತ', 'ಬದುಕು', 'ಶಕ್ತಿ', 'ಗುಪ್ತಗಾಮಿನಿ', 'ನಾನೂ ನನ್ನ ಕನಸು' ಧಾರಾವಾಹಿಗಳಲ್ಲಿ ನಟಿಸಿದ್ದಾರೆ. ಗೌತಮ್‌ ಪಾತ್ರಕ್ಕೆ ಜೀವ ತುಂಬಿರುವ  ರಾಜೇಶ್‌, ಪೋಷಕನಟನಾಗಿ, ಖಳನಟನಾಗಿ ಕನ್ನಡ ಕಿರುತೆರೆ ಮತ್ತು ಹಿರಿತೆರೆ ಎರಡರಲ್ಲೂ ಕೂಡ ತಮ್ಮದೇ ಆದ ಛಾಪನ್ನ ಮೂಡಿಸಿದ್ದಾರೆ. ಅವರ ಅಭಿನಯಕ್ಕೆ ನಿಬ್ಬೆರಗಾಗದವರೇ ಇಲ್ಲ.  

ಅಮೃತಧಾರೆ ಮೂಡ್​ನಲ್ಲೇ ರಿಯಲ್​ ಹೆಂಡ್ತಿಯನ್ನೂ ಕನ್​ಫ್ಯೂಸ್​ ಮಾಡ್ಕೋತಾರಾ ರಾಜೇಶ್​? ದಂಪತಿ ಹೇಳಿದ್ದು ಕೇಳಿ

Latest Videos
Follow Us:
Download App:
  • android
  • ios