ನಾನು ಮಾಡುವ ಡ್ಯಾನ್ಸ್​ ಯಾವುದು ಅಂತ ಗೆಸ್​ ಮಾಡ್ತೀರಾ? ಚಾಲೆಂಜ್​ ಕೊಟ್ಟ ಸೀತಾರಾಮ ಸಿಹಿ

ಡ್ಯಾನ್ಸ್​ ಒಂದನ್ನು ಮಾಡುವ ಮೂಲಕ ಅದನ್ನು ಗೆಸ್​ ಮಾಡಿ ಎಂದು ಸೀತಾರಾಮ ಸಿಹಿ ಚಾಲೆಂಜ್​ ಕೊಟ್ಟಿದ್ದಾಳೆ. ನೀವು ಗೆಸ್ ಮಾಡಬಲ್ಲಿರಾ?
 

Seeta Rama Serial Sihi Ritu Singhs dance guessing challenge can you guess it suc

ಸಿಹಿ ಎಂದರೆ ಸಾಕು ಸೀರಿಯಲ್​ ಪ್ರಿಯರ ಕಣ್ಣ ಮುಂದೆ ಬರುವುದು ಸೀತಾರಾಮ ಧಾರಾವಾಹಿಯ ಪುಟಾಣಿ. ಮುದ್ದು ಮುದ್ದು ಮಾತುಗಳಿಂದ ಪಟಪಟ ಎನ್ನುತ್ತ ಎಲ್ಲರನ್ನೂ ಮರಳುಮಾಡುವ ಸೀತಾರಾಮ ಸೀರಿಯಲ್​ ಸಿಹಿಗೆ ಇಂದು ಹುಟ್ಟುಹಬ್ಬದ ಸಂಭ್ರಮ. ಈಕೆಯ ನಿಜವಾದ ಹೆಸರು ರಿತು ಸಿಂಗ್​. ಡ್ರಾಮಾ ಜ್ಯೂನಿಯರ್ಸ್ ಸೀಸನ್ 4 ಶೋ ಮೂಲಕ ಕಿರುತೆರೆ ಜನರಿಗೆ ಪರಿಚಿತರಾದ ರಿತು ಸಿಂಗ್ ಕ್ರೇಜಿಸ್ಟಾರ್​  ರವಿಚಂದ್ರನ್ ಅವರ ಫೇವರೆಟ್​ ನಟಿ. ಡ್ರಾಮಾ ಜ್ಯೂನಿಯರ್ಸ್ ಶೋನಲ್ಲಿ ಮುದ್ದು ಮುದ್ದಾಗಿ ಮಾತನಾಡುತ್ತ, ಸದಾ ರವಿಚಂದ್ರನ್ ಗರ್ಲ್‌ಫ್ರೆಂಡ್ ನಾನು ಎಂದು ಹೇಳುತ್ತಿದ್ದ ಈ ಪುಟ್ಟ ಪೋರಿ ಈಗ ಸೀರಿಯಲ್‌ನ ಕೇಂದ್ರ ಬಿಂದು ಆಗಿದ್ದಾಳೆ. ಐದು ವರ್ಷದ ಪೋರಿ ನಟನೆಗೆ, ಮುದ್ದು ಮುದ್ದಾದ ಮಾತಿಗೆ ವೀಕ್ಷಕರು ಮನ ಸೋತಿದ್ದಾರೆ.  ನೇಪಾಳ ಮೂಲದ ಪುಟಾಣಿ ಈಗ ಕನ್ನಡಿಗರ ಕಣ್ಮಣಿ. ಆದರೂ ಈಕೆಯನ್ನು ಸೀರಿಯಲ್​ನಲ್ಲಿ ವಯಸ್ಸಿಗಿಂತಲೂ ಹೆಚ್ಚಾಗಿ ಬಳಸಿಕೊಳ್ತಿದ್ದಾರೆ ಎನ್ನುವ ಅಸಮಾಧಾನವೂ ಹಲವರನ್ನು ಕಾಡುತ್ತಿದೆ. 

ಖುದ್ದು ಇನ್​ಸ್ಟಾಗ್ರಾಮ್​ ಖಾತೆ ಹೊಂದಿರುವ ರಿತು ಸಿಂಗ್​ ಇದರಲ್ಲಿ ಸೀತಾರಾಮ ಸೀರಿಯಲ್​ ನಟರ ಜೊತೆ ಡ್ಯಾನ್ಸ್​ ಚಾಲೆಂಜ್​ ಮಾಡಿದ್ದಾಳೆ. ಮೊದಲಿಗೆ ಅಶೋಕ್​ ಪಾತ್ರಧಾರಿ ಅಶೋಕ್​ ಅವರ ಬಳಿ ಕಿವಿಯಲ್ಲಿ ತಾನು ಮಾಡುವ ಡ್ಯಾನ್ಸ್​ ಬಗ್ಗೆ ಹೇಳಿರುವ ಸಿಹಿ, ನಂತರ ಉಳಿದವರಿಗೆ ತಾನು ಯಾವ ಡ್ಯಾನ್ಸ್​ ಮಾಡುತ್ತಿದ್ದೇನೆ ಎಂದು ಗೆಸ್​  ಮಾಡಿ ಎಂದಿದ್ದಾಳೆ. ಸಿಹಿಯ ನಟನೆ ಎಂದ ಮೇಲೆ ಕೇಳಬೇಕೆ? ಡ್ಯಾನ್ಸ್​ನಲ್ಲಿಯೂ ಮುಂದು ಈ ಪುಟಾಣಿ. ಅಲ್ಲಿದ್ದವರು ಸರಿಯಾಗಿ ಗೆಸ್​ ಮಾಡಿದಾಗ, ಈಕೆಗೆ ಖುಷಿಯೋ ಖುಷಿ. ಇದರ ವಿಡಿಯೋ ಈಗ ರಿಲೀಸ್​ ಆಗಿದೆ. ಈಕೆ ಮಾಡಿರುವ ಡ್ಯಾನ್ಸ್​ ಜಿಂಗಿ ಚೆಕ್ಕ ಜಿಂಗಿ ಚೆಕ್ಕ ಹಾಡೆಂದು ಹೇಳಿದ್ದಾಳೆ. 

ಮುದ್ದು ಸಿಹಿಯ ಆ್ಯಕ್ಟಿಂಗ್​ಗೆ ಮನಸೋತವರೇ ಈಗ ಉಲ್ಟಾ ಹೊಡೀತಿದ್ದಾರೆ! ಇವಳನ್ನು ಹೀಗೆ ಬಿಟ್ರೆ...

ಅಂದಹಾಗೆ, ರೀತು ನೇಪಾಳದವಳು. ನೇಪಾಳ ಮೂಲದ ರಿತು ತಾಯಿ ಜೊತೆಗೆ ಬೆಂಗಳೂರಿನಲ್ಲಿ ನೆಲೆಸಿದ್ದಾಳೆ. ಸೀತಾರಾಮ ಸೀರಿಯಲ್​ಗೂ ಸಿಹಿ ಬಾಳಿಗೂ ಸಾಮ್ಯತೆ ಇದೆ. ಹೌದು. ಸೀತಾರಾಮ ಸೀರಿಯಲ್​ ರೀತಿಯಲ್ಲಿಯೇ ಈಕೆಯ ನಿಜ ಜೀವನದ ಕೂಡ ಇದೆ. ಸೀತಾರಾಮ ಸೀರಿಯಲ್​ನಲ್ಲಿ ಈಕೆಗೆ ಅಪ್ಪ ಇಲ್ಲ. ಅಮ್ಮನೇ ಸರ್ವಸ್ವ. ಅದೇ ರೀತಿ ರಿತು ರಿಯಲ್​ ಲೈಫ್​ ಸ್ಟೋರಿ ಕೂಡ. ಇದರ ಬಗ್ಗೆ ಖುದ್ದು ಅವರ ಅಮ್ಮನೇ ಹೇಳಿಕೊಂಡಿದ್ದರು. ಅದೇನೆಂದರೆ, ರಿತು ರಿಯಲ್​ ಅಪ್ಪ ದೂರ ಆಗಿದ್ದಾರೆ. ಈಕೆಯ ರಿಯಲ್​ ಲೈಫ್​ನಲ್ಲಿಯೂ ಅಮ್ಮನೇ ಎಲ್ಲಾ. 

ಪತಿಯಿಂದ ದೂರವಾಗಿರುವ ರಿತು ಅಪ್ಪ, ಒಬ್ಬಂಟಿಯಾಗಿ ಮಗಳನ್ನು ಸಾಕುತ್ತಿದ್ದಾಳೆ. ರಿಯಾಲಿಟಿ ಷೋನಲ್ಲಿ ಈ ಬಗ್ಗೆ  ರವಿಚಂದ್ರನ್ ಕೂಡ ಮಾತನಾಡಿದ್ದರು. ಹೋದವರು ಹೋಗಲಿ ಬಿಟ್ಟೋದವನು ಬಿಟ್ಟೋದ. ಗಂಡ ಇಲ್ಲ ಅಂತ ಅಳಬಾರದು. ಗಂಡ ಬಿಟ್ಟು ಹೋಗಿದ್ದಕ್ಕೆ ಇವತ್ತು ನಿಮ್ಮ ಮಗು ಇಷ್ಟೊಂದು ಪ್ರತಿಭಾವಂತೆ ಆಗಿರೋದು. ರಿತು ತುಂಬ ಪ್ರೌಢಿಮೆ ಇರುವ ಗೊಂಬೆ. ಯಾರೇ ಚಾಕಲೇಟ್ ಕೊಟ್ರೂ, ಎಷ್ಟೇ ಒತ್ತಾಯ ಮಾಡಿದ್ರೂ ಅವಳು ಚಾಕೋಲೇಟ್ ತಿನ್ನಲ್ಲ. ತುಂಬ ಒತ್ತಾಯ ಮಾಡಿದ್ರೆ ಮೊದಲು ನಮಗೆ ಚಾಕೋಲೇಟ್ ತಿನಿಸಿ ಆಮೇಲೆ ಅವಳು ತಿಂತಾಳೆ ಎಂದು ರವಿಚಂದ್ರನ್​ ಹೇಳಿದ್ದರು. ಅಷ್ಟಕ್ಕೂ ಈ ಪೋರಿ ಈ ಸೀರಿಯಲ್‌ಗೆ ಆಯ್ಕೆ ಆದದ್ದು ಹೇಗೆ ಅನ್ನೋ ಪ್ರಶ್ನೆ ಕೆಲವರದು. ಡ್ರಾಮಾ ಜ್ಯೂನಿಯರ್ಸ್‌ನಲ್ಲಿ ಈಕೆಯ ಪರ್ಫಾಮೆನ್ಸ್‌ ನೋಡಿ ಈಕೆಗೆ ಸೀತಾರಾಮದಲ್ಲಿ ಸಿಹಿ ಪಾತ್ರ ಸಿಕ್ಕಿದೆ.  ಸಿಕ್ಕ ಅವಕಾಶವನ್ನು ಮಾತ್ರ ಈ ಪುಟಾಣಿ ಚೆನ್ನಾಗಿ ಬಳಸಿಕೊಂಡಿದ್ದಾಳೆ. ಪಾತ್ರಕ್ಕೆ ಜೀವ ತುಂಬಿದ್ದು ಮಾತ್ರ ಅಲ್ಲ ಆಕೆಯಿಂದಲೇ ಸೀರಿಯಲ್ ಗೆಲ್ಲುತ್ತಿದೆ ಅನ್ನುವಷ್ಟರ ಮಟ್ಟಿಗೆ ಕನ್ನಡಿಗರಿಗೆ ಮೋಡಿ ಮಾಡಿದ್ದಾಳೆ.

ಬಿಂಕದ ಸಿಂಗಾರಿಗೆ ಸಿಹಿಯ ಭರ್ಜರಿ ಸ್ಟೆಪ್​: ಅಶೋಕ್​ ಜತೆ ಪ್ರಿಯಾ ಬದ್ಲು ಚಾಂದನಿ ಯಾಕೆ ಅಂತಿದ್ದಾರೆ ನೆಟ್ಟಿಗರು!

Latest Videos
Follow Us:
Download App:
  • android
  • ios