ಡಾ.ರಾಜ್​ಕುಮಾರ್​-ಲೀಲಾವತಿ ಅಭಿನಯದ ಬಿಂಕದ ಸಿಂಗಾರಿ ಹಾಡಿಗೆ ಸಿಹಿ, ಅಶೋಕ್​, ಚಾಂದನಿ ಭರ್ಜರಿ ಡ್ಯಾನ್ಸ್​ ಮಾಡಿದ್ದು, ಇದರ ವಿಡಿಯೋ ವೈರಲ್​ ಆಗಿದೆ.  

1963ರಲ್ಲಿ ಬಿಡುಗಡೆಯಾದ ಡಾ.ರಾಜ್​ಕುಮಾರ್​ ಮತ್ತು ಲೀಲಾವತಿ ಅಭಿನಯದ ಕನ್ಯಾರತ್ನ ಚಿತ್ರದ ಬಿಂಕದ ಸಿಂಗಾರಿ... ಮೈ ಡೊಂಕಿನ ವೈಯ್ಯಾರಿ ಹಾಡು 60 ವರ್ಷಗಳ ಬಳಿಕವೂ ಇಂದಿಗೂ ಜನಜನಿತವಾಗಿದೆ. ಡಾ.ರಾಜ್​ಕುಮಾರ್​ ಅವರ ಚಿತ್ರದ ಹಾಡುಗಳೆಂದರೆ ಹಾಗೇ ಅಲ್ಲವೆ? ಶತಮಾನ ಕಳೆದರೂ ನೆನಪಿನಲ್ಲಿ ಇರುವ ಮಧುರ ಗೀತೆಗಳವು. ಇಂದಿನ ಸಿನಿಮಾಗಳ ಬಹುತೇಕ ಹಾಡುಗಳು ಅರ್ಥಹೀನವಾಗಿದ್ದರೆ, ಕೆಲವು ತಿಂಗಳುಗಳು ರೀಲ್ಸ್ ರೂಪದಲ್ಲಿ ಹಿಟ್​ ಆಗುತ್ತಲೇ ಅದೇ ವೇಗದಲ್ಲಿ ಮರೆತೇ ಹೋಗುವಂಥದ್ದು. ಆದರೆ 60-80ರ ದಶಕದ ಹಾಡುಗಳ ಮಾಧುರ್ಯವೇ ಬೇರೆ. ಅದರ ಸೊಗಡು, ಸೊಗಸೇ ಬೇರೆ. ಅವು ಎಂದೆಂದಿಗೂ ಜನಜನಿತವೇ. ಅಂಥವುಗಳಲ್ಲಿ ಒಂದು ಬಿಂಕದ ಸಿಂಗಾರಿ... ಮೈ ಡೊಂಕಿನ ವೈಯ್ಯಾರಿ ಹಾಡು. 60 ವರ್ಷಗಳ ಅಂದಿನ ಹಾಡಿಗೆ ಇದಾಗಲೇ ಹಲವು ಸೀರಿಯಲ್​ ತಾರೆಯರು ರೀಲ್ಸ್​ ಮಾಡಿದ್ದಾರೆ.

ಸೀತಾರಾಮ ಸೀರಿಯಲ್​ನ ಸೀತಾ-ರಾಮ, ಶ್ರೀರಸ್ತು ಶುಭಮಸ್ತು ಸೀರಿಯಲ್​ನ ಪೂರ್ಣಿ ಮತ್ತು ದೀಪಿಕಾ, ಅಮೃತಧಾರೆ ಟೀಂ ಈ ಹಾಡಿಗೆ ಭರ್ಜರಿ ಸ್ಟೆಪ್​ ಹಾಕಿದೆ. ಇದೀಗ ಸೀತಾರಾಮ ಸೀರಿಯಲ್​ನ ಪುಟಾಣಿ ಸಿಹಿ ಸೇರಿದಂತೆ ಅಶೋಕ್​ ಮತ್ತು ಚಾಂದನಿ ಸ್ಟೆಪ್​ ಹಾಕಿದ್ದಾರೆ. 

ಎದೆ ಮೇಲಿಂದ ಜಾರಿ ಬೀಳ್ತಿರೋ ಶೆರ್ಲಿನ್​ ಬಟ್ಟೆ: ವಿಡಿಯೋ ನೋಡಿ ಬಂದು ಸರಿ ಮಾಡ್ಲಾ ಕೇಳ್ತಿದ್ದಾರೆ ಫ್ಯಾನ್ಸ್​!

ಎಲ್ಲರ ಗಮನ ಪುಟಾಣಿ ಸಿಹಿ ಕಡೆ ತಿರುಗಿದೆ. ಅಷ್ಟಕ್ಕೂ ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರ ಆಗ್ತಿರೋ ಸೀತಾರಾಮ ಸೀರಿಯಲ್​ ಟಿಆರ್​ಪಿಯಲ್ಲಿ ಉತ್ತಮ ರೇಟಿಂಗ್​ ಪಡೆದುಕೊಳ್ಳುವುದಕ್ಕೆ ಬಹುಮುಖ್ಯ ಕಾರಣ, ಪುಟಾಣಿ ಸಿಹಿಯ ನಟನೆ ಎಂದರೂ ಸುಳ್ಳಲ್ಲ. ಐದು ವರ್ಷದ ಪುಟಾಣಿ, ತನ್ನ ಪಾತ್ರವನ್ನು ಅರಗಿಸಿಕೊಂಡು ನಟನೆ ಮಾಡುವುದು ಸುಲಭದ ಮಾತಲ್ಲ. ನಿಜ ಜೀವನದಲ್ಲಿಯಾದರೆ ನೋವು, ಖುಷಿ, ನಲಿವು, ದುಃಖ, ಅಳು ಎಲ್ಲವೂ ನ್ಯಾಚುರಲ್‌ ಆಗಿ ಬಂದುಬಿಡುತ್ತದೆ. ಆದರೆ ಶೂಟಿಂಗ್‌ ಸಮಯದಲ್ಲಿ ನಟನೆ ಮಾಡುವುದು ಎಂದರೆ ಅದಕ್ಕೆ ಬಹಳ ಟ್ಯಾಲೆಂಟ್‌ ಬೇಕು. ಇಷ್ಟು ಚಿಕ್ಕ ವಯಸ್ಸಿನಲ್ಲಿ ಎಲ್ಲ ಭಾವನೆಗಳನ್ನೂ ತೋರಿಸುವುದು ಎಂದರೆ ಬಹುಶಃ ಇದು ಹಿಂದಿನ ಜನ್ಮದ ಟ್ಯಾಲೆಂಟೇ ಇರಬೇಕು ಎನ್ನುವಷ್ಟರ ಮಟ್ಟಿಗೆ ಎಲ್ಲರನ್ನೂ ಆವರಿಸಿಕೊಂಡಿದ್ದಾಳೆ ಸಿಹಿ ಅರ್ಥಾತ್‌ ರಿತು ಸಿಂಗ್‌.

 ಇದೀಗ ರಿತು ಸಿಂಗ್​, ಸೀತಾರಾಮ ಸೀರಿಯಲ್​ನ ಅಶೋಕ್​ ಮತ್ತು ಚಾಂದನಿ ಜೊತೆ ಭರ್ಜರಿ ರೀಲ್ಸ್​ ಮಾಡಿದ್ದಾಳೆ. ಇದಕ್ಕೆ ಎಲ್ಲರೂ ಕಮೆಂಟ್​ ಹಾಕುತ್ತಿದ್ದು ಸೂಪರ್​ ಎನ್ನುತ್ತಿದ್ದಾರೆ. ಇದರಲ್ಲಿ ಅಶೋಕ್​ ಜೊತೆ ಚಾಂದನಿ ಕಾಣಿಸಿಕೊಂಡಿರುವುದಕ್ಕೆ ಹಲವರು ತಮಾಷೆ ಮಾಡುತ್ತಿದ್ದಾರೆ. ಮದ್ವೆಯಾಗ್ತಿದ್ದಂತೆಯೇ ಪ್ರಿಯಾಳನ್ನು ಬಿಟ್​ಬಿಟ್ಯಾ ಎಂದು ಕಾಲೆಳೆಯುತ್ತಿದ್ದಾರೆ. 

ಭಾವಿ ಸೊಸೆ ಮುಂದೆ ಅಖಿಲಾಂಡೇಶ್ವರಿ ಸುಸ್ತು! ನಿಜಕ್ಕೂ ಇಂಥವರು ಸಿಕ್ರೆ ಏನಪ್ಪಾ ಅಂತಿದ್ದಾರೆ ಅತ್ತೆಯಂದಿರು!

View post on Instagram