ಗಿಡ ಬೆಳಿಯದೇ ಇರುವ ಕಾಡು ಯಾವುದು ಎಂದು ಪ್ರಶ್ನಿಸಿ ಟ್ರೋಲಾದ ಸೀತಾರಾಮ ಸೀತಾ!
ಸೀತಾ ರಾಮ ಸೀರಿಯಲ್ ಸೀತಾ ವೈಷ್ಣವಿ ಅವರು ಪ್ರಶ್ನೆ ಒಂದನ್ನು ಕೇಳಿ ಸಕತ್ ಟ್ರೋಲ್ ಆಗುತ್ತಿದ್ದಾರೆ. ಅಷ್ಟಕ್ಕೂ ಅವರು ಕೇಳಿದ್ದೇನು?
ಸೀತಾರಾಮ ಸೀರಿಯಲ್ನಲ್ಲಿ ಒಂದೆಡೆ ಸೀತಾ ಮತ್ತು ರಾಮನ ನಿಶ್ಚಿತಾರ್ಥದ ಸಂಭ್ರಮ ಬಲು ಜೋರಾಗಿ ನಡೆಯುತ್ತಿದೆ. ನಿಜ ಜೀವನದಲ್ಲಿ ನಡೆಯುವಂತೆಯೇ ಭರ್ಜರಿ ಸೆಟ್ ಕೂಡ ಹಾಕಲಾಗಿದೆ. ರಾಮ್ ಅಮ್ಮನ ಸೀರೆಯನ್ನು ತೊಟ್ಟ ಸೀತಾ ಬಲು ಮುದ್ದಾಗಿ ಕಾಣುತ್ತಿದ್ದಾರೆ. ಈ ಸಂಭ್ರಮ ಒಂದೆಡೆಯಾದರೆ, ಅದೇ ಸಮಯದಲ್ಲಿ ಸೀತಾ ಪಾತ್ರಧಾರಿ ವೈಷ್ಣವಿ ಗೌಡ ಅವರು ತಮ್ಮ ಸೋಷಿಯಲ್ ಮೀಡಿಯಾದಲ್ಲಿಯೂ ಸಕತ್ ಆ್ಯಕ್ಟೀವ್ ಆಗಿದ್ದಾರೆ. ಆಗಾಗ್ಗೆ ಒಂಟಿಯಾಗಿ ಇಲ್ಲವೇ ಸೀತಾರಾಮ ಟೀಂನ ಪಾತ್ರಧಾರಿಗಳ ಜೊತೆ ವಿವಿಧ ರೀತಿಯ ವಿಡಿಯೋಗಳನ್ನು ಶೇರ್ ಮಾಡಿಕೊಳ್ಳುತ್ತಾರೆ. ಕೆಲ ದಿನಗಳ ಹಿಂದೆ ಪ್ರತಿಯೊಬ್ಬರೂ ಕೆಲವೊಂದು ಪ್ರಶ್ನೆಗಳನ್ನು ಕೇಳುವ ಮೂಲಕ ಎಲ್ಲರನ್ನೂ ರಂಜಿಸಿದ್ದರು.
ಇದೀಗ ರಾಮ್‌ಗೆ ಒಂದು ಪ್ರಶ್ನೆ ಕೇಳಿದ್ದಾರೆ. ಆದರೆ ಇದಕ್ಕೆ ಅವರು ನೀಡಿರುವ ಉತ್ತರದಿಂದ ಮಾತ್ರ ಸಕತ್ ಟ್ರೋಲ್ ಆಗುತ್ತಿದ್ದಾರೆ. ಇದಕ್ಕೆ ಕಾರಣ, ಪ್ರಶ್ನೆಗೂ ಉತ್ತರಕ್ಕೂ ತಾಳಮೇಳ ಇಲ್ಲ ಎನ್ನುವುದು. ಇವೆರಡೂ ಬೇರೆ ಬೇರೆ ಎನ್ನುವುದು ಅಷ್ಟೂ ಗೊತ್ತಾಗುವುದಿಲ್ಲವೇ? ಎಂಥ ಪೆದ್ದು ಪ್ರಶ್ನೋತ್ತರ ಎಂದೆಲ್ಲಾ ಹಲವರು ಪ್ರಶ್ನಿಸುತ್ತಿದ್ದಾರೆ. ಇನ್ನು ಕೆಲವರು ಇದು ತಮಾಷೆಯ ಪ್ರಶ್ನೆ ಅಷ್ಟೇ. ತಮಾಷೆಯಾಗಿಯೇ ತೆಗೆದುಕೊಳ್ಳಬೇಕು, ತುಂಬಾ ಸೀರಿಯಸ್ ಎಲ್ಲಾ ಆಗಬಾರದು ಎಂದಿದ್ದಾರೆ.
ಹೆಣ್ಮಕ್ಳಿಗೆ ಅರ್ಧ ಹೋದ್ರೆ ನೋವಾಗತ್ತೆ, ಪೂರ್ತಿ ಹೋದ್ರೆ ಖುಷಿಯಾಗತ್ತೆ: ಸೀತಾರಾಮ ಟೀಂನಿಂದ ಹೀಗೊಂದು ಪ್ರಶ್ನೆ...
ಅಷ್ಟಕ್ಕೂ ಸೀತಾ ಅರ್ಥಾತ್ ವೈಷ್ಣವಿ ಅವರು ರಾಮ್ ಅಂದರೆ ಗಗನ್ ಅವರಿಗೆ ಕೇಳಿದ ಪ್ರಶ್ನೆ ಏನೆಂದರೆ, ಗಿಡ ಬೆಳೆಯದ ಕಾಡು ಯಾವುದು ಎನ್ನುವುದು. ಇದಕ್ಕೆ ತಲೆ ಕೆಡಿಸಿಕೊಂಡ ರಾಮ್ ಬಾಲ್ಕನಿ ಸೇರಿದಂತೆ ಕೆಲವು ಉತ್ತರ ಕೊಟ್ಟಿದ್ದಾರೆ. ಅಲ್ಲಿದ್ದ ಸೀತಾರಾಮ ಸಿಬ್ಬಂದಿ ಕೂಡ ಇದಕ್ಕೆ ಉತ್ತರ ಹೇಳುವಲ್ಲಿ ವಿಫಲರಾಗಿದ್ದಾರೆ. ಕೊನೆಗೆ ಇದಕ್ಕೆ ಉತ್ತರ ಹೇಳಿದ ಸೀತಾ, ಅದು ಸಿಮ್ ಕಾರ್ಡ್ ಎಂದಿದ್ದಾರೆ. ಇದಕ್ಕೇ ಸಕತ್ ಟ್ರೋಲ್ ಆಗುತ್ತಿರುವುದು. ಉತ್ತರ ಏನೆಂದರೆ ತಲೆ ಕೆಡಿಸಿಕೊಂಡಿದ್ದ ಅಭಿಮಾನಿಗಳು ಉತ್ತರ ಕೇಳಿ ಥೂ ಎಂದಿದ್ದಾರೆ.
ಏಕೆಂದರೆ ಸೀತಾ ಕೇಳಿದ್ದು ಕಾಡು ಎಂದು ಇದು ಸಿಮ್ ಕಾರ್ಡು. ಕಾಡಿಗೂ ಕಾರ್ಡಿಗೂ ವ್ಯತ್ಯಾಸ ಇಲ್ವಾ ಎನ್ನುವುದು ನೆಟ್ಟಿಗರ ಪ್ರಶ್ನೆ. ಎಷ್ಟೊಂದು ಪ್ರಶ್ನೆಗಳು ಇರುವಾಗ ತಾಳಮೇಳ ಇಲ್ಲದ ಪ್ರಶ್ನೆಗಳನ್ನು ಕೇಳುವುದು ಏಕೆ ಎಂದು ಅವರು ಪ್ರಶ್ನಿಸುತ್ತಿದ್ದಾರೆ. ಈ ಹಿಂದೆ ಇಡೀ ಟೀಂ ಹಲವಾರು ಪ್ರಶ್ನೋತ್ತರಗಳನ್ನು ಆಡಿತ್ತು. ಮೊದಲಿಗೆ ಸೀತಾ ಪಾತ್ರಧಾರಿ ವೈಷ್ಣವಿ ಅವರು, ಎರಡು ಮಾವಿನ ಹಣ್ಣನ್ನು ಮೂರು ಮಂದಿ ಸಮನಾಗಿ ತಿನ್ನಬೇಕು ಹೇಗೆ ಎಂದು ಕೇಳಿದ್ದರು. ಅದಕ್ಕೆ ಪ್ರಿಯಾ ಮತ್ತು ರಾಮ್ ಪಾತ್ರಧಾರಿಗಳು ಒಂದಷ್ಟು ಉತ್ತರ ಹೇಳಿದರೂ ಅದ್ಯಾವುದೂ ಸರಿ ಇರುವುದಿಲ್ಲ. ನಂತರ ವೈಷ್ಣವಿ, ಅದು ಹೇಗೆಂದರೆ ಮೂವರು ಜ್ಯೂಸ್ ಮಾಡಿ ಕುಡಿಯುತ್ತಾರೆ ಎಂದಿದ್ದರು. ಇದಾದ ಬಳಿಕ ಪುಟಾಣಿ ಸಿಹಿಗೆ ಸೀತಾ, ಕಾಲಿಲ್ಲದ ಟೇಬಲ್ ಯಾವುದು ಎಂದು ಕೇಳುತ್ತಾರೆ. ಸಿಹಿ ಯಾವ್ಯಾವುದೊ ಉತ್ತರ ಕೊಡುತ್ತಾಳೆ. ಎಲ್ಲ ಉತ್ತರಗಳೂ ತಪ್ಪಾಗಿದ್ದರಿಂದ ಸರಿಯುತ್ತರ ಎಂದರೆ ಟೈಂ ಟೇಬಲ್ ಎಂದು ವೈಷ್ಣವಿ ಹೇಳುತ್ತಾರೆ. ಅದೇ ರೀತಿ, ಮೀನಿಗೆ ಯಾವ ಡೇ ತುಂಬಾ ಕಷ್ಟ ಎಂದರೆ ಫ್ರೈ ಡೇ ಎಂಬ ಉತ್ತರ ಬರುತ್ತದೆ. ಹೀಗೆ ಹಲವಾರು ತಮಾಷೆಯ ಪ್ರಶ್ನೋತ್ತರಗಳನ್ನು ಇದರಲ್ಲಿ ನೋಡಬಹುದು.
400 ರೂಪಾಯಿ ಚಾಲೆಂಜ್ ತೆಗೆದುಕೊಂಡಿರೋ ಸೀತೆಯ ಈ ರಾಮನಿಗೆ ಸಹಾಯ ಮಾಡ್ತೀರಾ?