Asianet Suvarna News Asianet Suvarna News

ಸೀತಾ-ರಾಮ ವಿಲನ್​ ಭಾರ್ಗವಿಗೆ ಹುಟ್ಟುಹಬ್ಬದ ಸಂಭ್ರಮ: ನಟನೆಯ ಕುರಿತು ಪೂಜಾ ಲೋಕೇಶ್​ ಹೇಳಿದ್ದೇನು?

ನಟಿ ಪೂಜಾ ಲೋಕೇಶ್​ ಹುಟ್ಟುಹಬ್ಬ ಇಂದು. ಈ ಸಂದರ್ಭದಲ್ಲಿ ಅವರ ಕುರಿತು ಕೆಲವು ಇಂಟರೆಸ್ಟಿಂಗ್​ ವಿಷಯಗಳು ಇಲ್ಲಿವೆ...
 

Seeta Rama serial Bhargavi fame Actress Pooja Lokeshs birthday wish suc
Author
First Published Nov 18, 2023, 3:44 PM IST

ಜನಮನ ಗೆದ್ದಿರುವ ಧಾರಾವಾಹಿಗಳಲ್ಲಿ ಒಂದು ಜೀ ಟಿ.ವಿಯಲ್ಲಿ ಪ್ರಸಾರ ಆಗ್ತಿರೋ ಸೀತಾ ರಾಮ (Seeta Rama Serial). ಧಾರಾವಾಹಿ ಎಂದ ಮೇಲೆ ಅಲ್ಲೊಬ್ಬಳು ಲೇಡಿ ವಿಲನ್​ ಇರಲೇಬೇಕಲ್ಲವೆ? ಹಾಗೆಯೇ ಸೀತಾ ರಾಮ ಧಾರಾವಾಹಿಯ ವಿಲನ್​ ಪೂಜಾ ಲೋಕೇಶ್​.  ಇವರು 'ಸೀತಾ ರಾಮ' ಧಾರಾವಾಹಿಯಲ್ಲಿ ವಿಲನ್ ಆಗಿ ಕಾಣಿಸಿಕೊಂಡಿದ್ದಾರೆ. ಅವರು ನಿರ್ವಹಿಸುತ್ತಿರುವ ಭಾರ್ಗವಿ. ‘ಸೀತಾ ರಾಮ’ ಧಾರಾವಾಹಿಯಲ್ಲಿ ಪೂಜಾ ಲೋಕೇಶ್ ಅವರು ಎರಡು ಶೇಡ್​ನ ಪಾತ್ರ ಮಾಡುತ್ತಿದ್ದಾರೆ. ಒಮ್ಮೆ ಕೆಟ್ಟವರಾಗಿ ಕಾಣಿಸುವ ಅವರು ಮತ್ತೊಮ್ಮೆ ಒಳ್ಳೆಯವರಂತೆ ನಟಿಸುತ್ತಾರೆ. ನೆಗೆಟಿವ್ ಪಾತ್ರಗಳಿಗೆ ಯಾವುದೇ ಸೀಮಾ ರೇಖೆ ಇಲ್ಲ. ಹೇಗೆ ಬೇಕಿದ್ದರೂ ಅದನ್ನು ಮಾಡಬಹುದು. ಕನ್ನಡದಲ್ಲಿ ನಾನು ಈ ರೀತಿ ಪಾತ್ರ ಮಾಡುತ್ತಿರುವುದು ಇದೇ ಮೊದಲು ಎಂದಿರುವ ಪೂಜಾ ಅವರು ಎರಡು ಶೇಡ್‌ನಲ್ಲಿ ಪಾತ್ರ ಮಾಡಲು  ಸಾಕಷ್ಟು ಸಿದ್ಧತೆ ಮಾಡಿಕೊಂಡಿದ್ದಾರೆ. ಎಲ್ಲೂ ಏರುಪೇರು ಆಗದಂತೆ ನೋಡಿಕೊಳ್ಳಬೇಕಿತ್ತು ಎಂದಿರುವ ಅವರು ತಮ್ಮ ಪಾತ್ರಕ್ಕೆ ನ್ಯಾಯ ಒದಗಿಸುತ್ತಿದ್ದು, ಇತ್ತೀಚಿಗೆ ಅವರು ಜೀ ಕುಟುಂಬ  ಅವಾರ್ಡ್ಸ್​ನಲ್ಲಿ  ಬೆಸ್ಟ್​ ವಿಲನ್​ ಪ್ರಶಸ್ತಿ ಪಡೆದುಕೊಂಡಿದ್ದಾರೆ.

ಅಂದ ಹಾಗೆ, ಇಂದು ಪೂಜಾ ಲೋಕೇಶ್​ ಅವರ ಹುಟ್ಟುಹಬ್ಬದ ಸಂಭ್ರಮ. ನಟ ಲೋಕೇಶ್​ ಹಾಗೂ ಗಿರಿಜಾ ಲೋಕೇಶ್​ ಅವರ ಪುತ್ರಿ ಪೂಜಾ ಲೋಕೇಶ್ ಅವರು ಪರಭಾಷೆಯಲ್ಲಿಯೂ ವಿಲನ್​ ರೋಲ್​ಗಳನ್ನೇ ಹೆಚ್ಚು ಮಾಡಿದ್ದಾರೆ.  ನೆಗೆಟಿವ್ ಪಾತ್ರಗಳಿಗೆ ಯಾವುದೇ ಸೀಮಾ ರೇಖೆ ಇಲ್ಲ ಎಂದು ಸಂದರ್ಶನವೊಂದರಲ್ಲಿ ಹೇಳಿಕೊಂಡಿರುವ ಪೂಜಾ ಅವರು,  ಕನ್ನಡದಲ್ಲಿ ನಾನು ನೆಗೆಟಿವ್​ ರೋಲ್​  ಮಾಡುತ್ತಿರುವುದು ಇದೇ ಮೊದಲು ಎಂದಿದ್ದರು. ಅಂದಹಾಗೆ, ಲೋಕೇಶ್​ ಅವರ ಬಗ್ಗೆಯಂತೂ ಸಿನಿ ಪ್ರಿಯರಿಗೆ ಹೇಳುವುದೇ ಬೇಡ. ರಂಗಭೂಮಿ ಕಲಾವಿದನಾಗಿ ನಂತರ ಸ್ಯಾಂಡಲ್​ವುಡ್​​ ಸಿನಿಮಾದಲ್ಲಿ ಇವರ ಮಾಡದ ಪಾತ್ರಗಳೇ ಇಲ್ಲ. ಎಲ್ಲ ಪಾತ್ರಕ್ಕೂ ಸೈ ಎನಿಸಿಕೊಂಡ ಅದ್ಭುತ ನಟ ಅವರು. ಅದೇ ರೀತಿ ಪೂಜಾ ಅವರ ಅಮ್ಮ ಗಿರೀಜಾ ಲೋಕೇಶ್​ ಕೂಡ. ಅವರು ಇಂದಿಗೂ  ಬಣ್ಣದ ಲೋಕದಲ್ಲಿ ಗುರುತಿಸಿಕೊಂಡಿದ್ದಾರೆ. ಸತ್ಯಾ ಸೀರಿಯಲ್​ನಲ್ಲಿ ಸತ್ಯಾಳ ಅಜ್ಜಿಯ ಪಾತ್ರ ಮಾಡುತ್ತಿದ್ದಾರೆ.

ಅವಳ ಡ್ರೆಸ್ಸು, ಆಭರಣ ಇಷ್ಟ ಆಗಲ್ಲ: ಸೀತಾರಾಮದ ವಿಲನ್​ ಭಾರ್ಗವಿಯ ಅಮ್ಮ ಗಿರಿಜಾ ಲೋಕೇಶ್​ ಹೇಳಿದ್ದೇನು?

ಅಷ್ಟಕ್ಕೂ  ಪೂಜಾ ನಟನೆಯನ್ನು ನೋಡಿ ತಂದೆ-ತಾಯಿಗೆ ಹೋಲಿಕೆ ಮಾಡುತ್ತಿದ್ದರೆ ಹಲವರು ತಂದೆ ಪಾತ್ರಕ್ಕೆ ಹೋಲಿಸುತ್ತಾರಂತೆ. ಈ ಕುರಿತು ನಟಿಯೂ ಖುದ್ದು ಒಮ್ಮೆ ಹೇಳಿಕೊಂಡಿದ್ದರು.  ಇದಕ್ಕಿಂತ ಖುಷಿ ಇನ್ನೇನು ಬೇಕು? ನಾನು ಮಾಡುತ್ತಿರುವ ಭಾರ್ಗವಿ ಕ್ಯಾರೆಕ್ಟ್​​ನ ಹೇಟ್ ಮಾಡುವವರೂ ಇದ್ದಾರೆ. ನೆಗೆಟಿವ್ ಪಾತ್ರವನ್ನು ಜನರು ದ್ವೇಷಿಸಿದರೆ ನಾವು ಗೆದ್ದಂತೆ ಎಂದಿದ್ದರು. ಮೊನ್ನೆ ಜೀ ಕುಟುಂಬ ಅವಾರ್ಡ್​ನಲ್ಲಿ ಮಗಳಿಗೆ ಪ್ರಶಸ್ತಿ ಬಂದಾಗಲೂ ಅಮ್ಮ ಗಿರಿಜಾ ಅವರು, ಇದೇ ಮಾತನ್ನು ಹೇಳಿದ್ದರು. ಮಗಳಿಗೆ ಅವಾರ್ಡ್​ ಸಿಕ್ಕಿರುವುದಕ್ಕೆ ಸಂಬಂಧಿಸಿದಂತೆ ಕೇಳಿದ ಪ್ರಶ್ನೆಗೆ ಗಿರಿಜಾ ಲೋಕೇಶ್​ ಅವರು, ಅವಳಿಗಿಂತಲೂ ನನಗೆ ಹೆಚ್ಚು ಖುಷಿಯಾಗುತ್ತಿದೆ. ಈಕೆಯನ್ನು ಕನ್ನಡ ಚಿತ್ರರಂಗವಾಗಲೀ, ಕಿರುತೆರೆಯಾಗಲೀ ಗುರುತಿಸುತ್ತಿರಲಿಲ್ಲ. ಈಗ ಈಕೆಗೆ ಸಿಕ್ಕಿರುವುದು ತುಂಬಾ ಸಂತೋಷವಾಗಿದೆ. ಈಕೆ ಪಾತ್ರ ಮಾಡಿದಾಗ ಅವಳ ತಂದೆ ಲೋಕೇಶ್​ ಅವರನ್ನು ಜನರು ನೆನಪಿಸಿಕೊಳ್ಳುತ್ತಾರೆ. ಅದಕ್ಕಿಂತ ಹೆಚ್ಚಿನ ಪ್ರಶಸ್ತಿ ಏನು ಬೇಕು ಎಂದು ಗಿರಿಜಾ ಲೋಕೇಶ್​ ಕೇಳಿದ್ದಾರೆ. ಪೂಜಾ ನಟಿ ಮಾತ್ರವಲ್ಲ, ಇದಾಗಲೇ ನಿರ್ದೇಶನ ಮಾಡಿದ್ದಾಳೆ, ಸ್ಕ್ರಿಪ್ಟ್​ ರೈಟಿಂಗ್​ ಮಾಡುತ್ತಾಳೆ. ಜೀ ಕನ್ನಡದ ಹಲವು ಸೀರಿಯಲ್​ಗಳಿಗೆ ಸ್ಕ್ರಿಪ್ಟ್​ ಬರೆದಿದ್ದಾಳೆ ಎಂದು ಮಗಳನ್ನು ಕೊಂಡಾಡಿದ್ದರು.
 
ತಮಗೆ ಸಿಗುವ ಪಾತ್ರದ ಬಗ್ಗೆ ಮಾತನಾಡುವ ಪೂಜಾ ಅವರು ಪಾತ್ರ ಯಾವುದು ಎನ್ನುವುದು ಮುಖ್ಯವಲ್ಲ.  ಸಿಕ್ಕ ಪಾತ್ರವನ್ನು  ಕಲಾವಿದ ಹೇಗೆ ನಿರ್ವಹಿಸುತ್ತಾರೆ  ಎಂಬುದು ಮುಖ್ಯವಾಗುತ್ತದೆ. ನನಗೆ ನನ್ನ ತಂದೆ-ತಾಯಿ ಚಿಕ್ಕ ವಯಸ್ಸಿನಿಂದ ಹೇಳಿಕೊಟ್ಟಿದ್ದು ಇದನ್ನೇ. ನಾನು ಯಾವುದೇ ಪಾತ್ರಕ್ಕೆ ಅಟ್ಯಾಚ್ ಆಗಲ್ಲ. ಅದನ್ನು ಕೇವಲ ಪಾತ್ರದ ರೀತಿ ನೋಡುತ್ತೇನೆ. ಇದು ನನ್ನ ತಂದೆಯಿಂದ ನಾನು ಕಲಿತ ವಿಚಾರ ಎನ್ನುತ್ತಾರೆ.

ಕ್ಯೂಟ್‌ ಲೇಡಿ ವಿಲನ್ಸ್‌ ಅಬ್ಬರದ ನಗು ಕೇಳಿದ್ರೆ ನೀವೂ ನಗೋದು ಗ್ಯಾರೆಂಟಿ!

 

 
 
 
 
 
 
 
 
 
 
 
 
 
 
 

A post shared by Zee Kannada (@zeekannada)

Follow Us:
Download App:
  • android
  • ios