ಸೀತಾ-ರಾಮ, ಪ್ರಿಯಾ- ಅಶೋಕ್ ಕೂತಲ್ಲೇ ಸಕತ್ ಡ್ಯಾನ್ಸ್: ಸ್ವಲ್ಪ ಕನ್ನಡದ ಕಡೆಗೂ ಗಮನ ಹರಿಸಿ ಎಂದ ಫ್ಯಾನ್ಸ್
ಸೀತಾರಾಮ ಸೀರಿಯಲ್ನ ಸೀತಾ, ರಾಮ, ಪ್ರಿಯಾ ಹಾಗೂ ಅಶೋಕ್ ಪಾತ್ರಧಾರಿಗಳು ರೀಲ್ಸ್ ಮಾಡಿದ್ದು, ಫ್ಯಾನ್ಸ್ ಏನಂದ್ರು ಕೇಳಿ...

ಕನ್ನಡ ಕಿರುತೆರೆಯ ಅತಿ ಹೆಚ್ಚು ಟಿಆರ್‌ಪಿ ಪಡೆದ ಧಾರಾವಾಹಿಗಳಲ್ಲಿ ಒಂದಾಗಿರುವ ಸೀತಾ ರಾಮ ಧಾರಾವಾಹಿ ಜನಮೆಚ್ಚುಗೆಗೆ ಪಾತ್ರವಾಗಿದೆ. ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಸೀತಾರಾಮ ಧಾರಾವಾಹಿ ಸ್ವಲ್ಪ ವಿಭಿನ್ನ ಕಥಾಹಂದರವನ್ನು ಹೊಂದಿದ್ದು, ಪ್ರೇಕ್ಷಕರ ಮೆಚ್ಚುಗೆಗೆ ಕಾರಣವಾಗಿದೆ. ಒಂಟಿಯಾಗಿ ಮಗಳೊಂದಿಗೆ ಸ್ವಾಭಿಮಾನದಿಂದ ಜೀವನ ನಡೆಸ್ತಿರೋ ಸೀತಾ, ಶ್ರೀಮಂತನಾದ್ರೂ ಸರಳ ಬದುಕನ್ನು ಇಷ್ಟಪಡುವ ರಾಮನ ಸ್ಟೋರಿ ಎಲ್ಲರಿಗೂ ಇಷ್ಟವಾಗ್ತಿದೆ. ಮಾತ್ರವಲ್ಲದೆ, ಈ ಧಾರಾವಾಹಿಯಲ್ಲಿ ಸಮಾಜಕ್ಕೆ ಹಲವಾರು ಉತ್ತಮ ಸಂದೇಶಗಳನ್ನು ನೀಡುತ್ತಿರುತ್ತಾರೆ. ಮಾತ್ರವಲ್ಲ ಕೆಲವೊಂದು ಅರ್ಥಗರ್ಭಿತ ಮಾತುಗಳು ಮನಮುಟ್ಟುವಂತಿರುತ್ತದೆ. ಸದ್ಯ ಸೀತಾರಾಮ ಸೀರಿಯಲ್‌ನಲ್ಲಿ ನಾಯಕಿ ಸೀತಾ ಹೆಣ್ಣಿನ ಜೀವನದ ಬಗ್ಗೆ ಹೇಳಿರೋ ಮಾತು ಎಲ್ಲರ ಮನ ಮುಟ್ಟುವಂತಿದೆ.
ಸಿಂಗಲ್ ಪೇರೆಂಟ್ ಆಗಿರುವ ಸೀತಾ, ತನ್ನ ಕಾಯಿಲೆ ಪೀಡಿತ ಮಗಳನ್ನು ಸಾಕುವುದು ಒಂದೆಡೆಯಾದರೆ, ಈಕೆಗೆ ತನ್ನದೇ ಕಂಪೆನಿಯಲ್ಲಿ ಕೆಲಸ ಮಾಡುವ ರಾಮನ ಜೊತೆ ಸ್ನೇಹವಿರುತ್ತದೆ. ರಾಮನಿಗೂ ಸೀತಾಳ ಮಗಳು ಸಿಹಿ ಎಂದರೆ ಅಪಾರ ಪ್ರೀತಿ. ಆದರೆ ರಾಮ ಬಿಲೇನಿಯರ್ ಎನ್ನುವ ಸತ್ಯ ಸೀತಾಗೆ ತಿಳಿದಿಲ್ಲ. ಒಟ್ಟಿನಲ್ಲಿ ಸೀತಾ-ರಾಮ ಮತ್ತು ಸೀತಾಳ ಮಗಳು ಸಿಹಿಯ ನಡುವೆ ಸುತ್ತುವ ಕಥೆ ಪ್ರೇಕ್ಷಕರನ್ನು ಹಿಡಿದಿಟ್ಟುಕೊಂಡಿದೆ. ನಾಯಕಿ ಸೀತಾ ಹಾಗೂ ನಾಯಕ ರಾಮ್ ಜೊತೆಗೆ ಮುದ್ದು ಪುಟಾಣಿ ಸಿಹಿಯೂ ಕೂಡಾ ಕಿರುತೆರೆ ವೀಕ್ಷಕರ ಮನಸ್ಸು ಕದ್ದು ಬಿಟ್ಟಿದ್ದಾಳೆ.
ಅತ್ತ ಸೀತಾಗೆ ಹೆಚ್ಚಾದ ಮದ್ವೆ ಒತ್ತಡ, ಇತ್ತ ಭಾರ್ಗವಿ ಮುಂದೆ ಬಯಲಾಯ್ತು ರಾಮನಾಟ: ಮುಂದೇನು?
ಅದೇ ಇನ್ನೊಂದೆಡೆ ಪ್ರಿಯಾ ಮತ್ತು ಅಶೋಕ್ ಜೋಡಿ. ರಾಮನ ಸ್ನೇಹಿತ ಅಶೋಕ್ ರಾಮನ ಎಲ್ಲಾ ಕಷ್ಟ-ಸುಖಗಳಲ್ಲಿಯೂ ಭಾಗಿಯಾಗುವವ. ಸೀತಾಳ ಮೇಲೆ ಅಶೋಕ್ಗೆ ಲವ್ ಆಗಿದೆ ಎನ್ನೋ ಸುಳಿವು ಸಿಗುತ್ತಲೇ ಭಗ್ನಪ್ರೇಮಿಯಾಗಿರುವ ರಾಮನ ಮನಸ್ಸನ್ನು ಸೀತಾಳ ಕಡೆ ಒಲಿಸಲು ಪ್ರಯತ್ನಿಸುತ್ತಿರುವವ. ಇನ್ನು ಪ್ರಿಯಾ, ಅದೇ ಕಚೇರಿಯಲ್ಲಿ ಕೆಲಸ ಮಾಡುವಾಕೆ. ಶ್ರೀಮಂತೆಯಾಗುವ ಕನಸು ಕಂಡಿರುವ ಈಕೆ ತನ್ನದೇ ಕಂಪೆನಿಯ ಶ್ರೀಮಂತ ಬಾಸ್ ಅಶೋಕ್ ಅನ್ನು ಲವ್ ಮಾಡುತ್ತಿದ್ದಾಳೆ. ಅಸಲಿಗೆ ಕಂಪೆನಿ ಓನರ್ ಆಗಿರುವ ರಾಮನ ಅಣತಿಯಂತೆ ಅಶೋಕ್ ಆ ಸ್ಥಾನದಲ್ಲಿ ನಿಂತು ಕಂಪೆನಿ ನಡೆಸುತ್ತಿದ್ದಾನೆ. ಇವಿಷ್ಟು ಕಥಾ ಹಂದರವನ್ನು ಈ ಧಾರಾವಾಹಿ ಹೊಂದಿದೆ.
ಇದೀಗ, ಈ ಜೋಡಿ ರೀಲ್ಸ್ ಮಾಡಿದ್ದು, ಅದನ್ನು ಸೀತಾ ಪಾತ್ರಧಾರಿ ವೈಷ್ಣವಿ ಅವರು ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಶೇರ್ ಮಾಡಿಕೊಂಡಿದ್ದಾರೆ. Amigo•Drop It Like It's Hot ಹಾಡಿಗೆ ಮೆಟ್ಟಿಲ ಮೇಲೆ ಕುಳಿತಿರುವ ಈ ಎರಡೂ ಜೋಡಿಗಳು ರೀಲ್ಸ್ ಮಾಡಿವೆ. ಎಲ್ಲರೂ ಸಕತ್ ಕ್ಯೂಟಾಗಿ ಕಾಣಿಸುತ್ತಿದ್ದು, ಇವರ ಎನರ್ಜಿಗೆ ಫ್ಯಾನ್ಸ್ ಫಿದಾ ಆಗಿದ್ದಾರೆ. ಅದೇ ಇನ್ನೊಂದೆಡೆ, ಬಹುತೇಕ ನಟ-ನಟಿಯರೂ ರೀಲ್ಸ್ ಮಾಡುವಾಗ ಹಿಂದಿ, ಇಂಗ್ಲಿಷ್ ಹಾಡನ್ನೇ ಬಳಸ್ತೀರಲ್ಲ. ಸ್ವಲ್ಪ ಕನ್ನಡದ ಕಡೆಯೂ ಗಮನ ಕೊಡಿ ಅಂತಿದ್ದಾರೆ ಫ್ಯಾನ್ಸ್.
ಅಂಕಲ್ ನಿಮ್ಗೆ ಯಾವ ಪಟಾಕಿ ಇಷ್ಟ? ಸೀತಾರಾಮ ಪುಟಾಣಿ ಸಿಹಿ ಪ್ರಶ್ನೆಗೆ ಡಿಕೆಶಿ ಹೇಳಿದ್ದೇನು?