ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್​ ಅವರಿಗೆ ಯಾವ ಪಟಾಕಿ ಇಷ್ಟ? ಸೀತಾರಾಮ ಸೀರಿಯಲ್​ ಪುಟಾಣಿ ಸಿಹಿ ಪ್ರಶ್ನೆಗೆ ಅವರು ಕೊಟ್ಟ ಉತ್ತರವೇನು? 

ಜೀ ಕನ್ನಡ ವಾಹಿನಿ ನವೆಂಬರ್​ 10 ಮತ್ತು 11ರಂದು ನಡೆಸಿದ್ದ ಜೀ ಕುಟುಂಬ ಅವಾರ್ಡ್​ ಪ್ರಶಸ್ತಿ ಪ್ರದಾನ ಸಮಾರಂಭ ನಡೆಸಿತು. ಇದರಲ್ಲಿ ಜೀ ವಾಹಿನಿಯ ಸೀರಿಯಲ್​ ನಟ-ನಟಿಯರು ಹಾಗೂ ತಂತ್ರಜ್ಞರು ಸೇರಿದಂತೆ ಧಾರಾವಾಹಿಯ ತೆರೆ ಮರೆಯಲ್ಲಿ ಶ್ರಮಿಸಿರುವವರಿಗೆ ಪ್ರಶಸ್ತಿ ಪ್ರದಾನ ಮಾಡಲಾಯಿತು. ಈ ಸಂದರ್ಭದಲ್ಲಿ ಪ್ರಶಸ್ತಿ ಪ್ರದಾನ ಮಾಡಲು ಸಿನಿ ಕ್ಷೇತ್ರದ ದಿಗ್ಗಜರು ಸೇರಿದಂತೆ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್​ ಅವರನ್ನೂ ಕರೆಸಲಾಗಿತ್ತು. ಅವರಿಗೆ ಕಾರ್ಯಕ್ರಮದಲ್ಲಿ ಕೆಲವು ಪ್ರಶ್ನೆಗಳನ್ನು ಕೇಳಲಾಯಿತು. ಅದರಲ್ಲಿ ಗಮನ ಸೆಳೆದದ್ದು ಸೀತಾರಾಮ ಸೀರಿಯಲ್​ ಪುಟಾಣಿ ಸಿಹಿ ಕೇಳಿದ ಪ್ರಶ್ನೆ. 

ಅಂಕಲ್​ ನೀವು ದೀಪಾವಳಿಯಲ್ಲಿ ಪಟಾಕಿ ಹೊಡೆದಿದ್ದೀರಾ? ನಿಮ್ಗೆ ಯಾವ ಪಟಾಕಿ ಇಷ್ಟ ಎಂದು ಮುದ್ದುಮುದ್ದಾದ ಮಾತಿನಲ್ಲಿ ಕೇಳಿದಾಗ, ಡಿ.ಕೆ.ಶಿವಕುಮಾರ್​ ಮೊಗದಲ್ಲಿ ನಗುವಿನ ಅಲೆ ಕಾಣಬಹುದು. ನಂತರ ಅವರು, ನಾನು ಜಾಸ್ತಿ ಪಟಾಕಿ ಹೊಡೆದಿಲ್ಲ. ಎಲ್ಲೋ ಕೆಲವು ಹೊಡೆದಿದ್ದೆ. ಆದರೆ ಮಕ್ಕಳ ಕೈಯಲ್ಲಿ ಪಟಾಕಿ ಹೊಡೆಸಿದ್ದೇನೆ. ಅವ್ರು ಚಿಕ್ಕವರಿದ್ದಾಗ ಒಂದ್ಹತ್ತು ವರ್ಷ ಕಂಟಿನ್ಯೂಸ್ ಆಗಿ ಪಟಾಕಿ ಹೊಡೆಸಿದ್ದೇನೆ. ಅದೇ ಒಂದು ಸಂತೋಷದ ಕ್ಷಣ. ಜನ ಡೇಲಿ ನಮಗೆ ಪಟಾಕಿ ಹೊಡೀತಾನೇ ಇರ್ತಾರೆ, ನಾವು ಪಟಾಕಿ ಹೊಡೆಸಿಕೊಳ್ತಾನೇ ಇರ್ತೀವಿ ಎಂದಾಗ ಎಲ್ಲರೂ ಗೊಳ್ಳೆಂದು ನಕ್ಕರು. ನಂತರ ಆ್ಯಂಕರ್​ ಅನುಶ್ರೀ ಅವರು, ನೀವು ಹೊಡೆದಿರೋ ಪಟಾಕಿಯಲ್ಲಿ ಯಾವುದು ತುಂಬಾ ಇಷ್ಟ ಎಂದು ಕೇಳಿದರು. ಆಗ ಡಿ.ಕೆ.ಶಿವಕುಮಾರ್​ ಅವರು, ಫ್ಲವರ್​ ಪಾಟ್​ ತುಂಬಾ ಇಷ್ಟ ಎಂದರು.

ಗನ್​ಗಿಂತ ಹೆಚ್ಚು ಜನ್ರನ್ನ ಕಣ್ಣಲ್ಲೇ ಹೆದ್ರಿಸಿದ್ದೀನಿ ಅನ್ನುತ್ತಲೇ ಭರ್ಜರಿ ಎಂಟ್ರಿ ಕೊಟ್ಟ ಶಿವಣ್ಣ- ಸ್ಟೇಜಲ್ಲಿ ಮಿಂಚು

ಇದೇ ವೇಳೆ ಪಟಾಕಿ ಹಾರಿಸುವವರಿಗೆ ಎಚ್ಚರಿಕೆಯನ್ನೂ ಕೊಟ್ಟರು. ಗ್ರೀನ್​ ಪಟಾಕಿಯನ್ನೇ ಹೊಡೆಯಿರಿ. ಏಕೆಂದರೆ ಇತ್ತೀಚಿನ ದಿನಗಳಲ್ಲಿ ಪಟಾಕಿಯಿಂದ ಮಕ್ಕಳ ಕಣ್ಣುಗಳಿಗೆ ಹಾನಿಯಾಗ್ತಿವೆ. ಇದರಿಂದ ತುಂಬಾ ತೊಂದರೆ ಅನುಭವಿಸಬೇಕಾಗುತ್ತದೆ. ಆದ್ದರಿಂದ ಎಲ್ಲರೂ ಹಸಿರು ಪಟಾಕಿ ಹೊಡೆದು ಸಂತೋಷಿಸಿ ಎಂದು ಹೇಳುತ್ತಿದ್ದೇನೆ ಎಂದರು. 

ಇದೇ ವೇದಿಕೆಯಲ್ಲಿ ಸೆಂಚುರಿ ಸ್ಟಾರ್​ ಶಿವರಾಜ್​ ಕುಮಾರ್​ ಅವರ ಭರ್ಜರಿ ಡ್ಯಾನ್ಸ್​ ಕೂಡ ನಡೆಯಿತು. ನೀವ್​ ಗನ್​ನಲ್ಲಿ ಎಷ್ಟು ಜನರನ್ನು ಹೆದರಿಸಿದ್ದೀರೋ, ಅದಕ್ಕಿಂತ ಹೆಚ್ಚಿನ ಜನರನ್ನು ನಾನು ಕಣ್ಣಲ್ಲಿ ಹೆದರಿಸಿದ್ದೇನೆ ಎನ್ನುತ್ತಲೇ ಜೀ ಕುಟುಂಬ ಅವಾರ್ಡ್​ ವೇದಿಕೆ ಮೇಲೆ ಭರ್ಜರಿ ಎಂಟ್ರಿ ಕೊಟ್ಟರು ನಟ ಶಿವರಾಜ್​ ಕುಮಾರ್. ಘೋಸ್ಟ್​ ಚಿತ್ರದ ಡೈಲಾಗ್​ಗೆ ಅಲ್ಲಿದ್ದ ಪ್ರೇಕ್ಷಕರು ಜೋರಾಳಿ ಶಿಳ್ಳೆ ಹಾಕಿದ್ದಾರೆ. ದೆ ಕಾಲ್​ ಮಿ ಓ.ಜಿ ಅಂದ್ರೆ ಒರಿಜಿನಲ್​ ಗ್ಯಾಂಗ್​ಸ್ಟರ್​ ಎನ್ನುವ ಹಾಡಿನ ಹಿನ್ನೆಲೆಯಲ್ಲಿ ಶಿವಣ್ಣ ಭರ್ಜರಿ ಸ್ಟೆಪ್​ ಹಾಕುತ್ತಿದ್ದಂತೆಯೇ ವೇದಿಕೆ ಮೇಲೆ ಮಿಂಚು ಸೃಷ್ಟಿಯಾಗಿದೆ. ಈ ಕಾರ್ಯಕ್ರಮದ ಪ್ರಸಾರ ನವೆಂಬರ್​ 11ರಂದು ನಡೆದಿದ್ದು, ಅದರ ಪ್ರೊಮೋ ಸಕತ್​ ವೈರಲ್​ ಆಗುತ್ತಿದೆ. 

ಅತ್ತೆಯನ್ನು ಸಕತ್​ ಇಂಪ್ರೆಸ್​ ಮಾಡೋದು ಹೇಗೆ? ಶ್ರೀಮಸ್ತು ಶುಭಮಸ್ತು ಸೊಸೆ ಸಿರಿ ಹೇಳಿದ್ದಾರೆ ಕೇಳಿ...

View post on Instagram